ದುಬಾರಿ ''7777'' ನಂಬರ್‌ ಪ್ಲೇಟ್‌ ಹರಾಜು... ಈ ಹಣಕ್ಕೆ ಹೊಸ ಕಾರೇ ಖರೀದಿಸಬಹುದು!

ಶ್ರೀಮಂತರು ತಮ್ಮ ವಾಹನಗಳಿಗೆ ಫ್ಯಾನ್ಸಿ ನಂಬರ್‌ಗಳನ್ನು ಖರೀದಿಸುವುದು ಹೊಸ ವಿದ್ಯಮಾನವೇನಲ್ಲ. ಕೆಲವರು ಸಂಖ್ಯಾಶಾಸ್ತ್ರದ ಆಧಾರದ ಮೇಲೆ ಸಂಖ್ಯೆಗಳನ್ನು ಆಯ್ಕೆ ಮಾಡುತ್ತಾರೆ. ಇನ್ನೂ ಕೆಲವರು ಕ್ರೇಜ್‌ಗಾಗಿ ಆಯ್ಕೆ ಮಾಡುತ್ತಾರೆ. ಇಲ್ಲೂ ಕೇರಳದ BMW i7 ಮಾಲೀಕರೊಬ್ಬರು ಫ್ಯಾನ್ಸಿ ನಂಬರ್ ''7777'' ಅನ್ನು ಹರಾಜಿನಲ್ಲಿ ಪಡೆದುಕೊಂಡಿದ್ದಾರೆ.

ಎರ್ನಾಕುಲಂ ಜಿಲ್ಲೆಯ ತೇವಾರ ಮೂಲದ ಶ್ರೀರಾಜ್ ಅವರು ಇತ್ತೀಚೆಗೆ ಐಷಾರಾಮಿ ಎಲೆಕ್ಟ್ರಿಕ್ ಸೆಡಾನ್ ಖರೀದಿಸಿದ್ದಾರೆ. ಈ BMW i7 ಎಲೆಕ್ಟ್ರಿಕ್ ಸೆಡಾನ್, BMW ನ ಜನಪ್ರಿಯ 7-ಸಿರೀಸ್ ಐಷಾರಾಮಿ ಆವೃತ್ತಿಯಾಗಿದೆ. ಜರ್ಮನ್ ಕಾರು ತಯಾರಕರ ಅತ್ಯಂತ ದುಬಾರಿ ಐಷಾರಾಮಿ ಎಲೆಕ್ಟ್ರಿಕ್ ಸೆಡಾನ್‌ಗಳಲ್ಲಿ ಒಂದಾಗಿರುವ BMW i7 ಬೆಲೆಯು ರೂ. 2.03 ಕೋಟಿ (ಎಕ್ಸ್-ಶೋರೂಂ) ಗಳಿಂದ ಪ್ರಾರಂಭವಾಗಿ ರೂ. 2.50 ಕೋಟಿವರೆಗೆ ಇದೆ.

expensive-7777-number-plate-auction-this-money-can-buy-a-new-car

ಇದು ಭಾರತೀಯ ಸೆಲೆಬ್ರಿಟಿಗಳಲ್ಲಿ ಜನಪ್ರಿಯ ಕಾರಾಗಿದ್ದು, ನಟಿಯರಾದ ಜಾಕ್ವೆಲಿನ್ ಫರ್ನಾಂಡೀಸ್, ಕಿಮ್ ಶರ್ಮಾ, ನಟ ಅಜಯ್ ದೇವಗನ್‌ನಂತಹ ಟಾಪ್ ಸೆಲಬ್ರಿಟಿಗಳು BMW i7 ಹೊಂದಿದ್ದಾರೆ. ಇಂತಹ ದುಬಾರಿ ಕಾರಿಗೆ ಒಂದು ಫ್ಯಾನ್ಸಿ ನಂಬರ್ ಬೇಕೆಂದುಕೊಂಡಿದ್ದ ಕೇರಳದ ಉದ್ಯಮಿ ಶ್ರೀರಾಜ್, 50,000 ಮೂಲ ಮೊತ್ತ ಪಾವತಿಸಿ ಹರಾಜಿನಲ್ಲಿ ಭಾಗವಹಿಸಿದ್ದರು. ಹರಾಜಿನಲ್ಲಿ ಬರೋಬ್ಬರಿ 7.7 ಲಕ್ಷ ಮೊತ್ತವನ್ನು ಈ ಫ್ಯಾನ್ಸಿ ನಂಬರ್‌ಗಾಗಿ ಪಾವತಿಸಿದ್ದಾರೆ.

ಸಂಖ್ಯೆಯನ್ನು ಹರಾಜಿಗೆ ಹಾಕಿದಾಗ ಒಟ್ಟು ಏಳು ಜನರು ಭಾಗವಹಿಸಿದ್ದರು. ಎಲ್ಲರೂ 7777 ಸಂಖ್ಯೆಗೆ ಹರಾಜು ಹಾಕಿದರು. ಅಂತಿಮವಾಗಿ ಫೇರ್‌ಫ್ಯೂಚರ್ ಶಿಕ್ಷಣ ಕನ್ಸಲ್ಟೆನ್ಸಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀರಾಜ್ ಅವರು ರೂ. 7.70 ಲಕ್ಷಕ್ಕೆ ಸಂಖ್ಯೆಯನ್ನು ಖರೀದಿಸಿದರು ಎಂದು ವರದಿಯಾಗಿದೆ. ಜೊತೆಗೆ ಇವರಿಗೆ BMW i7 ಅವರ ಏಳನೇ ಕಾರಾಗಿದೆ.

expensive-7777-number-plate-auction-this-money-can-buy-a-new-car

BMW i7 ವಿಶೇಷತೆಗಳು: BMW i7 ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಯಿತು. ಇದು 101.7 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದ್ದು, ಒಮ್ಮೆ ಚಾರ್ಜ್‌ ಮಾಡಿದ್ರೆ 591 km ನಿಂದ 625 km ವರೆಗಿನ ರೇಂಜ್ ನೀಡುತ್ತದೆ. BMW i7 ಎಸಿ ಮತ್ತು ಡಿಸಿ ವೇಗದ ಚಾರ್ಜಿಂಗ್ ಎರಡಲ್ಲೂ ಚಾರ್ಜ್ ಮಾಡಬಹುದು.

195 kW DC ಚಾರ್ಜರ್ ಬಳಸಿ, ಕಾರನ್ನು ಕೇವಲ 34 ನಿಮಿಷಗಳಲ್ಲಿ ಶೇ80 ರಷ್ಟು ಚಾರ್ಜ್ ಮಾಡಬಹುದು. ಇದರಲ್ಲಿ ಇನ್ಫೋಟೈನ್‌ಮೆಂಟ್ ಮತ್ತು ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಬಾಗಿದ ಡಿಸ್‌ಪ್ಲೇಯನ್ನು ನೀಡಲಾಗಿದೆ. ಹಾಗೆಯೇ ಕಾರಿನ ರೂಫ್ ಮೇಲೆ 31.3-ಇಂಚಿನ 8K ಸಿನಿಮಾ ಸ್ಕ್ರೀನ್ ನೀಡಲಾಗಿದ್ದು, ಅದನ್ನು ಮಡಚಬಹುದಾಗಿದೆ.

expensive-7777-number-plate-auction-this-money-can-buy-a-new-car

ಹೆಚ್ಚುವರಿಯಾಗಿ, ಹಿಂಬದಿಯ ಡೋರ್‌ಗಳು ಇನ್ಫೋಟೈನ್‌ಮೆಂಟ್, ಕ್ಲೈಮೇಟ್ ಕಂಟ್ರೋಲ್ ಮತ್ತು ಸೀಟ್‌ಗಳನ್ನು ನಿಯಂತ್ರಿಸಲು 5.5-ಇಂಚಿನ ಟಚ್‌ಸ್ಕ್ರೀನ್ ಅನ್ನು ಒಳಗೊಂಡಿರುತ್ತವೆ. ಮಲ್ಟಿ-ಜೋನ್ ಕ್ಲೈಮೆಟ್ ಕಂಟ್ರೋಲ್, ಲೆದರ್ ಸೀಟ್‌ಗಳು, ಮೆಮೊರಿ ಮತ್ತು ಮಸಾಜ್ ಕಾರ್ಯಗಳೊಂದಿಗೆ ಪವರ್ಡ್ ಸೀಟ್‌ಗಳಂತಹ ಆಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. BMW i7 ಒಂದು ರೂಪಾಂತರದಲ್ಲಿ ಮಾತ್ರ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Article Published On: Sunday, January 14, 2024, 3:00 [IST]
English summary
Expensive 7777 number plate auction this money can buy a new car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+