ವಿದೇಶಗಳಲ್ಲಿ ಈ ಕಾರಿಗಾಗಿ ಕನಸು ಕಾಣುತ್ತಾರೆ... ಆದ್ರೆ ಭಾರತದಲ್ಲಿ ಇದರ ಪರಿಸ್ಥಿತಿ ನೋಡಿ!

ಭಾರತದ ವಿವಿಧ ಭಾಗಗಳಲ್ಲಿ ಸೂಪರ್ ಕಾರ್‌ಗಳನ್ನು ಹೊಂದಿರುವ ಶ್ರೀಮಂತರಿದ್ದಾರೆ. ಹಲವರು ಇವುಗಳನ್ನು ಉತ್ತಮವಾಗಿ ಮೇಂಟೇನ್ ಮಾಡಿದರೇ, ಕೆಲವರು ಮೂಲೆಗೆ ಬಿಟ್ಟಿರುತ್ತಾರೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಕಾನೂನು ಸಮಸ್ಯೆಗಳಲ್ಲಿ ಸಿಲುಕಿ ಸರ್ಕಾರಿ ಸಂಸ್ಥೆಗಳಿಂದ ವಶಪಡಿಸಿಕೊಳ್ಳಲ್ಪಟ್ಟಿರುತ್ತವೆ. ಆದ್ರೆ ಇಲ್ಲೊಂದು ಕಾರು ಕಾರಣ ತಿಳಿಯದೇ ಹಲವು ವರ್ಷಗಳಿಂದ ಮೂಲೆಗೆ ಬಿದ್ದಿದೆ.

ನಾವು ಹೇಳಲು ಹೊರಟಿರುವುದು ಅಂತರಾಷ್ಟ್ರೀಯವಾಗಿ ಭಾರೀ ಜನಪ್ರಿಯತೆ ಪಡೆದಿರುವ ಆಸ್ಟನ್ ಮಾರ್ಟಿನ್ ರಾಪಿಡ್ ಸ್ಪೋರ್ಟ್ಸ್ ಕಾರಿನ ಬಗ್ಗೆ. ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಭಾರೀ ಬೇಡಿಕೆ ಇರುವ ಆಸ್ಟನ್ ಮಾರ್ಟಿನ್ ಬ್ರಾಂಡ್‌ ಬಗ್ಗೆ ಹಲವರಿಗೆ ತಿಳಿದೇ ಇರುತ್ತೆ. ಈ ಬ್ರಾಂಡ್‌ನ ಕಾರುಗಳಿಗೆ ಭಾರತದಲ್ಲೂ ತುಂಬಾ ಕ್ರೇಜ್ ಇದೆ. ಅದರಲ್ಲೂ ಆಸ್ಟನ್ ಮಾರ್ಟಿನ್ ರಾಪಿಡ್ ಸ್ಪೋರ್ಟ್ಸ್ ಕಾರಿಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ.

expensive-aston-martin-rapide-sports-car-car-abandoned

ಅಂತಹ ಕಾರನ್ನು ಮುಂಬೈನಲ್ಲಿ ಮಾಲೀಕರೊಬ್ಬರು ವರ್ಷಾನುಗಟ್ಟಲೇ ಬಳಸದೇ ಮೂಲೆಗೆ ಬಿಟ್ಟಿದ್ದಾರೆ. ಈ ಆಸ್ಟನ್ ಮಾರ್ಟಿನ್ ರಾಪಿಡ್ ಸ್ಪೋರ್ಟ್ಸ್ ಕಾರಿನ ಬೆಲೆ ಬರೋಬ್ಬರಿ 4 ಕೋಟಿ ರೂ. (ಎಕ್ಸ್‌ ಶೋ ರೂಂ) ಇದೆ. ರಾಪಿಡ್ ಸ್ಪೋರ್ಟ್ಸ್ ಕಾರು, ಇದು ಹಲವು ವರ್ಷಗಳಿಂದ ಮುಂಬೈನ ಕಟ್ಟಡವೊಂದರ ನೆಲಮಾಳಿಗೆಯಲ್ಲಿ ಮೂಲೆಗುಂಪಾಗಿದೆ.

ಈ ಕಾರಿನ ಮಾಲೀಕರಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಇಲ್ಲ, ಕಾರಿನ ನೋಂದಣಿ ಸಂಖ್ಯೆಯೂ ಚಿತ್ರಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿಲ್ಲ. ಇದನ್ನು ನೆಲಮಾಳಿಗೆಯಲ್ಲಿ ನಿಲ್ಲಿಸಿರುವುದರಿಂದ, ಕಾರಿನ ನಿಖರವಾದ ಬಣ್ಣ ಕೂಡ ಸ್ಪಷ್ಟವಾಗಿಲ್ಲ. ಕಾರು ಕಪ್ಪು ಬಣ್ಣದಲ್ಲಿದೆ ಎಂದು ತೋರುತ್ತದೆ. ಒಳಾಂಗಣವು ಕಂದು ಮತ್ತು ಕಪ್ಪು ಡ್ಯುಯಲ್ - ಟೋನ್ ನಲ್ಲಿ ಇದೆ. ಧೂಳನ್ನು ಹೊರತುಪಡಿಸಿ, ಉಳಿದೆಲ್ಲವೂ ಉತ್ತಮ ಸ್ಥಿತಿಯಲ್ಲಿ ಕಾಣುತ್ತಿವೆ.

expensive-aston-martin-rapide-sports-car-car-abandoned

ಕಾರು ಯಾವುದಾದರೂ ಅಪರಾದ ಪ್ರಕರಣದಲ್ಲಿ ಭಾಗಿಯಾಗಿದೆಯೇ ಅಥವಾ ಅದರ ಮಾಲೀಕರು ಬೇಕಂತಲೇ ಬಿಟ್ಟುಹೋದರೇ ಎಂಬುದು ಸ್ಪಷ್ಟವಾಗಿಲ್ಲ. ಈ ಕೈಬಿಡಲಾದ ಆಸ್ಟನ್ ಮಾರ್ಟಿನ್ ರಾಪಿಡ್‌ನ ಚಿತ್ರಗಳನ್ನು ಆಟೋಮೊಬಿಲಿ ಅರ್ಡೆಂಟ್ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಇಂತಹ ಕಾರುಗಳನ್ನು ಏಕೆ ಕೈಬಿಡಲಾಗಿದೆ ಎಂಬುದು ನಿಗೂಢವಾಗಿಯೇ ಉಳಿದಿರುತ್ತದೆ.

ಆಸ್ಟನ್ ಮಾರ್ಟಿನ್ ರ್ಯಾಪಿಡ್: ಶ್ರೀಮಂತ ಭಾರತೀಯರಲ್ಲಿ ಸಾಕಷ್ಟು ಜನಪ್ರಿಯವಾದ ಈ ಕಾರು, 6.0 ಲೀಟರ್‌ ವಿ12 ಎಂಜಿನ್ ಹೊಂದಿದೆ. ಈ ಪವರ್‌ಫುಲ್ ಎಂಜಿನ್ 470 ಬಿಹೆಚ್‌ಪಿ ಪವರ್ ಹಾಗೂ 600 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್ ಅನ್ನು ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‌ಗೆ ಜೋಡಿಸಲಾಗಿದೆ, ಇದರ ಪವರ್ ರಿಯರ್ ವೀಲ್‌ಗಳಿಗೆ ಕಳುಹಿಸಲಾಗುತ್ತದೆ.

expensive-aston-martin-rapide-sports-car-car-abandoned

ಎಲ್ಲಾ ಸೂಪರ್‌ ಕಾರುಗಳಂತೆಯೇ ಆಸ್ಟನ್ ಮಾರ್ಟಿನ್ ರ‌್ಯಾಪಿಡ್ ಕೂಡ ಹೆಚ್ಚಿನ ಆಧುನಿಕ ವೈಶಿಷ್ಟ್ಯಗಳು, ಸೌಕರ್ಯಯುತ ಒಳಾಂಗಣದೊಂದಿಗೆ ನಾಲ್ಕು ಸೀಟ್ ಇಂಟಿರಿಯರ್ ಹಾಗೂ ಐಷಾರಾಮಿ ಫೀಚರ್‌ಗಳೊಂದಿಗೆ ಬರುತ್ತದೆ. 0 ಯಿಂದ 100 ಕೀ.ಮೀ ವೇಗವನ್ನು ಕೇವಲ 4.7 ಸೆಕೆಂಡುಗಳಲ್ಲಿ ಸಾಧಿಸಬಲ್ಲದು. ಟಾಪ್‌ ಸ್ಪೀಡ್ 300 ಕಿ.ಮೀಗೂ ಹೆಚ್ಚಿದೆ. ಈ ಕಾರಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, March 30, 2024, 12:59 [IST]
English summary
Expensive aston martin rapide sports car car abandoned
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+