ಬಹುಕೋಟಿ ಬೆಲೆಯ BMW ಕಾರು ಖರೀದಿಸಿದ 'Bangalore Days' ಚಿತ್ರದ ನಟ, ನಟಿ

ಫಹಾದ್ ಫಾಸಿಲ್ (Fahad Faasil) ಸದ್ಯ ಸೌತ್ ಇಂಡಿಯಾ ಸಿನಿಮಾಗಳಲ್ಲಿ ಮಿಂಚುತ್ತಿರುವ ಜನಪ್ರಿಯ ನಟ. ಸಾಧಾರಣ ಪ್ರಾದೇಶಿಕ ಸಿನಿಮಾ ನಾಯಕನಾಗಿ ಅಭಿಯನ ರಂಗಕ್ಕೆ ಕಾಲಿಟ್ಟ ಫಹಾದ್'ಗೆ ಈಗ ಕಾಲಿವುಡ್, ಟಾಲಿವುಡ್ ಸೇರಿದಂತೆ ಎಲ್ಲೆಡೆಯಿಂದ ಉತ್ತಮ ಆಫರ್​ಗಳು ಬರುತ್ತಿವೆ. ನಟ ಫಹಾದ್ ಫಾಸಿಲ್ ಪತ್ನಿ ನಜ್ರಿಯಾ ಕೂಡ ಜನಪ್ರಿಯ ದಕ್ಷಿಣ ಭಾರತದ ನಟಿ.

ದೊಡ್ಡ ಅಭಿಮಾನಿಗಳ ಬಳಗ ಹೊಂದಿರುವ ಈ ತಾರಾ ಜೋಡಿಗಳ ನಡುವೆ ಜೀವನದಲ್ಲಿ ಹೊಸ ಸಂತಸ ಮೂಡಿದೆ. ಇವರು ಹೊಸ BMW ಕಂಪನಿಯ ಐಷಾರಾಮಿ ಸೆಡಾನ್ 740i ಅನ್ನು ಖರೀದಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ತಮಿಳಿನ ಮಾಮನ್ನನ್ ಚಿತ್ರದಲ್ಲಿ ಖಳನಾಯಕನ ಪಾತ್ರದ ಮೂಲಕ ದೊಡ್ಡ ಯಶಸ್ಸು ಮತ್ತು ಮೆಚ್ಚುಗೆಗೆ ನಟ ಫಹಾದ್ ಫಾಸಿಲ್ ಪಾತ್ರವಾಗಿದ್ದಾರೆ.

Fahad Faasil Nazriya Buys New BMW

ನಟ ಫಹಾದ್ ಅವರು ಹೆಚ್ಚು ಕಾರು ಕ್ರೇಜ್ ಅನ್ನು ಹೊಂದಿದ್ದಾರೆ. ಇವರು ಪೈಥಾನ್ ಗ್ರೀನ್ ಪೋರ್ಷೆ 911 ಕ್ಯಾರೆರಾ ಎಸ್, ಐಷಾರಾಮಿ ಟೊಯೊಟಾ ವೆಲ್‌ಫೈರ, ಲ್ಯಾಂಬೋರ್ಗಿನಿ ಉರಸ್ ಮತ್ತು ರೇಂಜ್ ರೋವರ್ ನಂತಹ ಕಾರುಗಳಿವೆ. ಇದೀಗ ಅವರ ಗ್ಯಾರೇಜ್‌ಗೆ ಹೊಸ BMW 740i ಕಾರು ಸೇರಿಕೊಂಡಿದೆ. ಈ ಹೊಚ್ಚಹೊಸ ಅಲ್ಟ್ರಾ ಐಷಾರಾಮಿ ಕಾರನ್ನು ಫಹಾದ್ ಮತ್ತು ಪತ್ಮಿ ನಜ್ರಿಯಾ ಡೆಲಿವರಿ ತೆಗೆದುಕೊಳ್ಳುತ್ತಿರುವ ಚಿತ್ರಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.

ಇನ್ನು ನಟ ಫಹಾದ್ ಫಾಸಿಲ್ ಬಗ್ಗೆ ಹೇಳುವುದಾದರೆ, ಇವರು ಚಾಕ್ಲೆಟ್ ಹೀರೋ ಆಗಿ ಸಿನಿಮಾ ರಂಗಕ್ಕೆ ಕಾಲಿಟ್ಟ ಫಹಾದ್ ಸಿನಿಮಾಗಳು ತಕ್ಕಮಟ್ಟಿಗೆ ಹಿಟ್ ಆದರೂ ನಟನ ಈಗಿನ ಸಿನಿಮಾ ಪ್ರಸಿದ್ಧಿಗೆ ಹೋಲಿಸಿದರೆ ಹಿಂದಿನ ಸಿನಿಮಾಗಳು ಏನೇನು ಆಗಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಫಹಾದ್​ಗೆ ಅತ್ಯುತ್ತಮ ಸಿನಿಮಾ ಆಫರ್​ಗಳು ಬರುತ್ತಿವೆ.

ಬಹಳ ಸ್ಪೆಷಲ್ ಎನ್ನುವ ಪಾತ್ರಗಳನ್ನು ಮಾಡಿ ನಟ ಈಗ ಸೌತ್ ಮತ್ತು ನಾರ್ತ್ ನಲ್ಲಿಯೂ ಪ್ರಸಿದ್ಧಿ ಗಳಿಸುತ್ತಿದ್ದಾರೆ. ತೆಲುಗಿನ ಪುಷ್ಪ ಸಿನಿಮಾ ಹಾಗೂ ಕಾಲಿವುಡ್​ನ ವಿಕ್ರಮ್ ಸಿನಿಮಾದಲ್ಲಂತೂ ಫಹಾದ್ ನಟನೆಗೆ ಸಾಟಿಯೇ ಇಲ್ಲ. ಮೊದಲು ಬೆಂಗಳೂರು ಡೇಸ್ ಸಿನಿಮಾ ಬರುವ ತನಕ ಬಹಳಷ್ಟು ಜನರಿಗೆ ಫಹಾದ್ ಪರಿಚಯವೇ ಇರಲಿಲ್ಲ. ಆದರೆ ಆ ಸಿನಿಮಾದಿಂದ ನಟನ ಎರಡನೇ ಇನ್ನಿಂಗ್ಸ್ ಶುರುವಾಯಿತು.

ನಂತರದಲ್ಲಿ ಜೋಜಿ, ಕುಂಬಳಂಗಿ ನೈಟ್ಸ್, ಸಿ ಯೂ ಸೂನ್, ತೊಂಡಿಮುದಲುಂ ದೃಕ್ಷಾಕ್ಷಿಯುಂ ಸೇರಿ ಹಲವು ಸಿನಿಮಾಗಳ ಮೂಲಕ ಫಹಾದ್ ಹೆಚ್ಚಿನ ಜನಪ್ರಿಯತೆ ಗಳಿಸಿದರು. ನಂತರದಲ್ಲಿ ನಟನಿಗೆ ಪುಷ್ಪಾ, ವಿಕ್ರಮ್​ನಂತಹ ದೊಡ್ಡ ದೊಡ್ಡ ಪ್ರಾಜೆಕ್ಟ್​ಗಳು ಲಭಿಸಿದವು. ಇನ್ನು ಈ ತಾರಾ ಜೋಡಿ ಖರೀದಿಸಿದ BMW 740 ಕಾರಿನ ಬೆಲೆಯು ರೂ.2.14 ಕೋಟಿಯಾಗಿದೆ.

ಈ BMW 7 ಸೀರಿಸ್ ಹೊಸ ಮಾದರಿಯು ಈ ವರ್ಷದ ಜನವರಿಯಲ್ಲಿ ಭಾರತದಲ್ಲಿ ಬಿಡುಗಡೆಗೊಂಡಿತು. ಐಷಾರಾಮಿ ಸೆಡಾನ್ ಅನ್ನು ಚೆನ್ನೈನಲ್ಲಿರುವ BMW ಗ್ರೂಪ್ ಪ್ಲಾಂಟ್‌ನಲ್ಲಿ ಸ್ಥಳೀಯವಾಗಿ ತಯಾರಿಸಲಾಗುತ್ತಿದೆ. ಇದು ಸಾಗರೋತ್ತರ ಮಾರುಕಟ್ಟೆಗಳಲ್ಲಿ ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ, ಭಾರತದಲ್ಲಿ 740i M ಸ್ಪೋರ್ಟ್ ರೂಪಾಂತರವು 3.0-ಲೀಟರ್, ಇನ್ ಲ್ಲೈನ್-ಆರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಮಾತ್ರ ಪಡೆಯುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, July 7, 2023, 11:57 [IST]
English summary
Fahadh faasil and nazriya buys new bmw 740i sedan details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+