FAME ನಿಯಮಗಳನ್ನು ಉಲ್ಲಂಘಿಸಿ ಸಿಕ್ಕಿಬಿದ್ದ ಇವಿ ಕಂಪನಿಗೆ ಬಡ್ಡಿ ಸಮೇತ ಹಣ ಹಿಂದಿರುಗಿಸಲು ಸರ್ಕಾರ ಆದೇಶ
ಜನಪ್ರಿಯ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ, ಕೇಂದ್ರ ಸರ್ಕಾರದ ಫೇಮ್(FAME) ಯೋಜನೆಯ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಪ್ರಯೋಜನಗಳನ್ನು ಪಡೆದಿದೆ ಎನ್ನಲಾಗಿದೆ. ಈ ಸಂಬಂಧ ಕೇಂದ್ರ ಬೃಹತ್ ಕೈಗಾರಿಕಾ ಸಚಿವಾಲಯ ಕ್ರಮಕ್ಕೆ ಮುಂದಾಗಿದ್ದು, ಬಡ್ಡಿ ಸಮೇತ 124 ಕೋಟಿ ರೂ. ಹಿಂದಿರುಗಿಸುವಂತೆ ಆದೇಶಿಸಿದೆ.
ವಿವರವಾಗಿ ಹೇಳುವುದಾದರೆ ದೇಶದಲ್ಲಿ ಎಲ್ಲರಿಗೂ ಎಲೆಕ್ಟ್ರಿಕ್ ವಾಹನಗಳು ಕೈಗೆಟುಕುವ ದರದಲ್ಲಿ ಸಿಗಲು ಹಾಗೂ ಅವುಗಳ ಬಳಕೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಇವಿ ವಾಹನಗಳ ಮೇಲೆ ಸಬ್ಸಿಡಿ ನೀಡುತ್ತಿದೆ. ಒಂದು ವೇಳೆ ಸಬ್ಸಿಡಿ ಇಲ್ಲದಿದ್ದರೇ ಈಗಿರುವ ಬೆಲೆಗಿಂತ ಹೆಚ್ಚಿನ ಬೆಲೆ ಇರುತ್ತಿತ್ತು. ದೇಶದಲ್ಲಿ ಈ ಪರಿಸ್ಥಿತಿ ಬರಬಾರದೆಂದು ಸರ್ಕಾರವು FAM 2 ಯೋಜನೆಯನ್ನು ಪರಿಚಯಿಸಿದೆ.

ಈ ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್ ವಾಹನಕ್ಕೆ ಸಬ್ಸಿಡಿ ಸಿಗಬೇಕಾದರೆ, ವಾಹನ ತಯಾರಕಾ ಕಂಪನಿಗಳು ಕೆಲವು ಮಾನದಂಡಗಳಿಗೆ ಒಳಪಟ್ಟಿರಬೇಕು. ಆದರೆ ಕೆಲವರು ವಾಹನ ತಯಾರಕರು ಈ ಯೋಜನೆಯನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳಿವೆ. ಇದೀಗ ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಕೂಡ ಇಂತಹದ್ದೇ ಆರೋಪಕ್ಕೆ ಸಿಲುಕಿ ಕೇಂದ್ರ ಬೃಹತ್ ಕೈಗಾರಿಕಾ ಸಚಿವಾಲಯದ ಆಕ್ರೋಶಕ್ಕೆ ಕಾರಣವಾಗಿದೆ.
ಹಂತ ಹಂತದ ಉತ್ಪಾದನಾ ಕಾರ್ಯಕ್ರಮ (phased manufacturing programme) ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿರುವ ಕಾರಣ, ಈ ವೆರೆಗೆ ಯೋಜನೆಯಡಿ ಪಡೆದಿರುವ ಪ್ರಯೋಜನಗಳಿಗೆ ಬಡ್ಡಿ ಸಮೇತ ಸುಮಾರು 124 ಕೋಟಿ ರೂ. ಹಿಂದಿರುಗಿಸುವಂತೆ ಸರ್ಕಾರ ಆದೇಶಿಸಿದೆ. ಅಲ್ಲದೇ ಮಾರ್ಗಸೂಚಿಗಳನ್ನು ಅನುಸರಿಸಲು ವಿಫಲವಾದ ಕಾರಣ ಕಂಪನಿಯನ್ನು FAME-II ನೀತಿಯಿಂದ ತೆಗೆದುಹಾಕಲು ಪ್ರಸ್ತಾಪಿಸಲಾಗಿದೆ.

ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಆಂಪಿಯರ್ ಬ್ರಾಂಡ್ ಹೆಸರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಇದು ಎಲೆಕ್ಟ್ರಿಕ್ ಸ್ಕೂಟರ್ ಸೆಗ್‌ಮೆಂಟಿನಲ್ಲಿ ಗುರ್ತಿಸಿಕೊಂಡಿರುವ ಕಂಪನಿಯಾಗಿದ್ದರೂ, ನಿಯಮಗಳನ್ನು ಪಾಲಿಸದೆ FAME-II ಯೋಜನೆಯ ಲಾಭವನ್ನು ಅನುಭವಿಸುತ್ತಿದೆ. ಈ ಕಾರಣಕ್ಕಾಗಿಯೇ ಬೃಹತ್ ಕೈಗಾರಿಕೆಗಳ ಸಚಿವಾಲಯದ ಮೂಲಕ ಕಂಪನಿಗೆ ಲಿಖಿತ ಪತ್ರ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ, FAME-II ಯೋಜನೆಗಾಗಿ ಸಲ್ಲಿಸಿದ್ದ ಕಂಪನಿಯ ನೋಂದಣಿಯನ್ನು ರದ್ದುಗೊಳಿಸಲು ಸಚಿವಾಲಯವು ಪ್ರಸ್ತಾಪಿಸಿದೆ. ಆದ್ದರಿಂದ, ಕಂಪನಿಯು ಇನ್ನು ಮುಂದೆ FAM 2 ಯೋಜನೆಯ ಯಾವುದೇ ಪ್ರಯೋಜನಗಳನ್ನು ಪಡೆಯುವುದಿಲ್ಲ. ಇದು ಹೀಗಿದ್ದರೇ ಆರೋಪವನ್ನು ಅಲ್ಲಗಳೆದಿರುವ ಕಂಪನಿಯು, ನಾವು ಸ್ಥಳೀಯ ಉತ್ಪಾದಕರು ಮತ್ತು ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚು ಬೆಲೆ ನೀಡುತ್ತೇವೆ ಎಂದು ಹೇಳಿದೆ.
"ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ (GEM) ಒಂದು ಹೆಮ್ಮೆಯ ಭಾರತೀಯ ಕಂಪನಿಯಾಗಿದ್ದು, ವೇಗವಾಗಿ ವಿಸ್ತರಿಸುತ್ತಿರುವ EV ವಲಯದಲ್ಲಿ ಮುಂಚೂಣಿಯಲ್ಲಿದೆ. ಸರ್ಕಾರದ ಸ್ಥಳೀಕರಣದ ದೃಷ್ಟಿಕೋನವನ್ನು ಉತ್ಸಾಹದಿಂದ ಬೆಂಬಲಿಸಲು ಮತ್ತು ತಲುಪಿಸುವಲ್ಲಿ ನಮ್ಮ ಕಂಪನಿ ಮೊದಲ ಸಾಲಿನಲ್ಲಿದೆ. ಆಪಾದಿತ ಉಲ್ಲಂಘನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಈ ಉದ್ಯಮದಲ್ಲಿ ಯಾವುದೇ ಅನುಸರಣೆ ಕಾಳಜಿಯನ್ನು ಪರಿಹರಿಸಲು ಸರ್ಕಾರದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದೆ.
ಪ್ರೈಮಸ್, ಮ್ಯಾಗ್ನಸ್ ಇಎಕ್ಸ್, ರಿಯೊ ಪ್ಲಸ್‌ನಂತಹ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಒಳಗೊಂಡಂತೆ ಆಂಪಿಯರ್ ಬ್ರಾಂಡ್‌ನ ಅಡಿಯಲ್ಲಿ ಮಾಡೆಲ್‌ಗಳನ್ನು ಮಾರಾಟ ಮಾಡುತ್ತಿದೆ. ಆಂಪಿಯರ್ ಪ್ರೈಮಸ್ ತಯಾರಕರ ಪ್ರಮುಖ ಕೊಡುಗೆಯಾಗಿದ್ದು, ಮ್ಯಾಗ್ನಸ್ ಇಎಕ್ಸ್ ಅದರ ಅತ್ಯಂತ ಜನಪ್ರಿಯ ಉತ್ಪನ್ನವಾಗಿದೆ. EVಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡುವ ಗುರಿಯನ್ನು ಹೊಂದಿರುವ FAME II ಸಬ್ಸಿಡಿ ಅಡಿಯಲ್ಲಿ ಈ ಎಲ್ಲಾ ಮಾದರಿಗಳು ಪ್ರಯೋಜನ ಪಡೆದಿವೆ.


Click it and Unblock the Notifications