ರೂ.3.5 ಲಕ್ಷ ಡಿಸ್ಕೌಂಟ್‌ನೊಂದಿಗೆ ಹೊಸ ಮಾರುತಿ ಜಿಮ್ನಿ ವಿತರಣೆ ಪಡೆದ ಕುಟುಂಬ... ಇದು ಸಾಧ್ಯವೇ?
ಮಾರುತಿ ಸುಜುಕಿ (Maruti Suzuki) ಮಾರಾಟಗೊಳಿಸುವ ಜಿಮ್ನಿ (Jimny) ಪ್ರಮುಖ ಆಫ್-ರೋಡ್ ಎಸ್‌ಯುವಿಯಾಗಿದೆ. ಆದಾಗ್ಯೂ ಕೆಲವು ತಿಂಗಳಿನಿಂದ ಮಾರಾಟ ಪ್ರಮಾಣ ಒಂದಷ್ಟು ಕುಸಿತ ಕಂಡಿದೆ. ಹಲವು ರಾಜ್ಯಗಳಲ್ಲಿರುವ ಕಂಪನಿಯ ನೆಕ್ಸಾ ಡೀಲರ್‌ಶಿಪ್‌ಗಳು ಮಾರಾಟವನ್ನು ಹೆಚ್ಚಿಸಲು ದೊಡ್ಡಮಟ್ಟದಲ್ಲಿ ರಿಯಾಯಿತಿ (Discount) ನೀಡುತ್ತವೆ. ಕೆಲವೆಡೆಗಳಲ್ಲಿ ಸರಿ ಸುಮಾರು ರೂ.3.5 ಲಕ್ಷದವರೆಗೂ ಆಫರ್‌ಗಳಿವೆ. ಇಲ್ಲೊಂದು ಕುಟುಂಬ ಭಾರೀ ರಿಯಾಯಿತಿಯೊಂದಿಗೆ ಹೊಚ್ಚ ಹೊಸ ಜಿಮ್ನಿಯನ್ನು ಮನೆಗೆ ತಂದಿದೆ. ಆ ಕುರಿತು ಲೆಕ್ಕಾಚಾರ ಹೇಗೆ ಎಂಬ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದೆ.
ಟೀನ್ ಹರ್ಯಾನ್ವಿ (Teen Haryanvi) ಎಂಬ ಯೂಟ್ಯೂಬ್ ವಾಹಿನಿಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ದಂಪತಿ ಹಾಗೂ ಅವರ ಪುತ್ರ ನೆಕ್ಸಾ ಡೀಲರ್‌ಶಿಪ್‌ಗೆ ತೆರಳಿ, ಅಲ್ಲಿ ನೂತನ 'ಜಿಮ್ನಿ' ಎಸ್‌ಯುವಿಯನ್ನು ವಿತರಣೆ ಪಡೆಯುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಜೊತೆಗೆ ಈ ಕಾರಿಗೆ ಲಭ್ಯವಿರುವ ರಿಯಾಯಿತಿ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ.

ಯೂಟ್ಯೂಬರ್ ತಮ್ಮ ಕುಟುಂಬಕ್ಕಾಗಿ 'ಜಿಮ್ನಿ ಆಲ್ಫಾ ಎಟಿ ಸಿಂಗಲ್ ಟೋನ್' ರೂಪಾಂತರ (ವೇರಿಯೆಂಟ್)ವನ್ನು ಖರೀದಿ ಮಾಡಿದ್ದಾರೆ. ಇದರ ಎಕ್ಸ್ ಶೋರೂಂ ಬೆಲೆ ರೂ.14.79 ಲಕ್ಷವಿದ್ದು, ವಿಮೆ ಮೊತ್ತ ರೂ.43,200, ಆರ್‌ಟಿಒ ಶುಲ್ಕ ರೂ.1,22,975, ವಿಸ್ತೃತ ವಾರಂಟಿ ರೂ.35,129, ಟಿಸಿಎಸ್ ಶೇಕಡ 1% (ರೂ.14,790) ಹಾಗೂ ಎಂಎಸ್ಆರ್ ಮೊತ್ತ ರೂ.885 ಸೇರಿ ಒಟ್ಟಾರೆ ರೂ.16.95 ಲಕ್ಷ ಆನ್-ರೋಡ್ ಬೆಲೆಯಾಗುತ್ತದೆ ಎಂದು ಯೂಟ್ಯೂಬರ್ ವಿವರಿಸುತ್ತಾರೆ.
ಜುಲೈ (2024)ನಲ್ಲಿ ಜಿಮ್ನಿ ಭಾರೀ ರಿಯಾಯಿತಿಯನ್ನು ಪಡೆದಿದ್ದು, ಆ ಮೊತ್ತವೇ ರೂ.2.25 ಲಕ್ಷವಿದೆ. ಮಾರುತಿ ಸುಜುಕಿ ಫೈನಾನ್ಸ್ ಸೇವೆ ಬಳಸಿಕೊಂಡರೆ, ರೂ.1 ಲಕ್ಷ ಹೆಚ್ಚುವರಿ ರಿಯಾಯಿತಿ ಸಿಗಲಿದೆ. ಡೀಲರ್‌ಶಿಪ್ ಆಫರ್ ರೂ.25,000 ಇದ್ದು, ವಿಮೆಯ ಕೆಲವು ಪ್ರಯೋಜನಗಳನ್ನು ಕೈಬಿಟ್ಟರೆ ರೂ.6,000 ಮತ್ತು ವಿಸ್ತೃತ ವಾರಂಟಿ ತೆಗೆದುಕೊಳ್ಳದೆ ಸಹ ರೂ.35,129 ಉಳಿಸಬಹುದು. ಈ ಮೂಲಕ ಹೊಸ ಜಿಮ್ನಿಯನ್ನು ರೂ.13.04 ಲಕ್ಷಕ್ಕೆ ಖರೀದಿ ಮಾಡಿದೆ ಎಂದು ಯೂಟ್ಯೂಬರ್ ಹೇಳುತ್ತಾರೆ.

ಆಗೊಮ್ಮೆ ಇದೇ ಮಾರುತಿ ಜಿಮ್ನಿ (Maruti Jimny) ಡುಯಲ್ ಟೋನ್ ರೂಪಾಂತರವನ್ನು ತೆಗೆದುಕೊಳ್ಳಲು ಬಯಸಿದರೆ, ರೂ.20,000 ಹೆಚ್ಚುವರಿಯಾಗಿ ಪಾವತಿಸಬೇಕು. ಈ ಬೆಲೆ ಹರಿಯಾಣ (Haryana) ರಾಜ್ಯಕ್ಕೆ ಸಂಬಂಧಿಸಿದೆ. ಬೇರೆ ರಾಜ್ಯಗಳಲ್ಲಿ ಆರ್‌ಟಿಒ ಶುಲ್ಕ ಅವಲಂಭಿಸಿ, ಆನ್-ರೋಡ್ ದರಗಳು ಕೊಂಚ ವ್ಯತ್ಯಾಸವಾಗಬಹುದು ಎಂದು ಯೂಟ್ಯೂಬರ್ ತಿಳಿಸುತ್ತಾರೆ.
ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಮಾರುತಿ ಸುಜುಕಿ ಜಿಮ್ನಿ, 1.5 ಲೀಟರ್ ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 104.8 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 134.2 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5-ಸ್ಪೀಡ್ ಮ್ಯಾನುವಲ್/ 4-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದಿದೆ. 16.39 ರಿಂದ 16.94 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಈ ಜಿಮ್ನಿ 5 ಡೋರ್ (ಬಾಗಿಲು) ಆಯ್ಕೆಯಲ್ಲಿ ಸಿಗುತ್ತದೆ. 9 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications