ಮೂರು ರೋಲ್ಸ್ ರಾಯ್ಸ್ ಕಾರುಗಳನ್ನು ಹೊಂದಿರುವ ಅಪರೂಪದ ಕುಟುಂಬವಿದು

ರೋಲ್ಸ್ ರಾಯ್ಸ್ ಕಾರುಗಳಲ್ಲಿರುವ ಐಷಾರಾಮಿ ಅಂಶಗಳು ಬೇರೆ ಯಾವುದೇ ಕಾರಿನಲ್ಲಿ ಇಲ್ಲ. ಈ ಕಾರಣಕ್ಕೆ ಕಾರುಗಳಲ್ಲಿ ಹೆಚ್ಚು ಐಷಾರಾಮಿತನವನ್ನು ಬಯಸುವವರು ರೋಲ್ಸ್ ರಾಯ್ಸ್ ಕಾರುಗಳನ್ನು ಖರೀದಿಸುತ್ತಾರೆ.

ಮೂರು ರೋಲ್ಸ್ ರಾಯ್ಸ್ ಕಾರುಗಳನ್ನು ಹೊಂದಿರುವ ಅಪರೂಪದ ಕುಟುಂಬವಿದು

ರೋಲ್ಸ್ ರಾಯ್ಸ್ ಕಾರು ಹೊಂದುವುದು ಪ್ರತಿಷ್ಟೆಯ ಸಂಕೇತವಾಗಿದೆ. ತಮ್ಮದೇ ಆದ ರೋಲ್ಸ್ ರಾಯ್ಸ್ ಕಾರನ್ನು ಖರೀದಿಸುವ ಕನಸನ್ನು ಹೊಂದಿರುವ ಹಲವಾರು ಜನರಿದ್ದಾರೆ. ಆದರೆ ರೋಲ್ಸ್ ರಾಯ್ಸ್ ಕಾರುಗಳು ತುಂಬಾ ದುಬಾರಿಯಾಗಿರುವುದರಿಂದ ಕೆಲವೇ ಕೆಲವರು ಮಾತ್ರ ಆ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ದೇಶಿಯ ಮಾರುಕಟ್ಟೆಯಲ್ಲಿರುವ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನ ಆರಂಭಿಕ ಬೆಲೆ ರೂ.5.25 ಕೋಟಿಗಳಾಗಿದೆ.

ಮೂರು ರೋಲ್ಸ್ ರಾಯ್ಸ್ ಕಾರುಗಳನ್ನು ಹೊಂದಿರುವ ಅಪರೂಪದ ಕುಟುಂಬವಿದು

ಈ ಬೆಲೆ ಎಕ್ಸ್ ಶೋರೂಂ ದರವಾಗಿದೆ. ಇಷ್ಟು ದೊಡ್ಡ ಮೊತ್ತವನ್ನು ಖರ್ಚು ಮಾಡಿದರೆ ಮಾತ್ರ ಹೊಸ ರೋಲ್ಸ್ ರಾಯ್ಸ್ ಕಾರನ್ನು ಖರೀದಿಸಬಹುದು. ದುಬಾರಿ ಬೆಲೆಯನ್ನು ಹೊಂದಿರುವ ಕಾರಣಕ್ಕೆ ರೋಲ್ಸ್ ರಾಯ್ಸ್ ಕಾರುಗಳನ್ನು ಭಾರತದಲ್ಲಿ ಕಾಣುವುದು ಬಹಳ ಅಪರೂಪ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಮೂರು ರೋಲ್ಸ್ ರಾಯ್ಸ್ ಕಾರುಗಳನ್ನು ಹೊಂದಿರುವ ಅಪರೂಪದ ಕುಟುಂಬವಿದು

ಅನೇಕ ಜನರಿಗೆ ಒಂದು ರೋಲ್ಸ್ ರಾಯ್ಸ್ ಕಾರನ್ನು ಖರೀದಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಇನ್ನೂ ಕೆಲವರು ಒಂದಕ್ಕಿಂತ ಹೆಚ್ಚು ರೋಲ್ಸ್ ರಾಯ್ಸ್ ಕಾರುಗಳನ್ನು ಹೊಂದಿದ್ದಾರೆ. ಕೇರಳದಲ್ಲಿರುವ ಕುಟುಂಬವೊಂದು ಮೂರು ರೋಲ್ಸ್ ರಾಯ್ಸ್ ಕಾರುಗಳನ್ನು ಮೂರು ವಿಭಿನ್ನ ಬಣ್ಣಗಳಲ್ಲಿ ಹೊಂದಿದೆ.

ಮೂರು ರೋಲ್ಸ್ ರಾಯ್ಸ್ ಕಾರುಗಳನ್ನು ಹೊಂದಿರುವ ಅಪರೂಪದ ಕುಟುಂಬವಿದು

ಈ ಮೂರು ರೋಲ್ಸ್ ರಾಯ್ಸ್ ಕಾರುಗಳು ಕಲ್ಯಾಣ್ ಜ್ಯುವೆಲ್ಲರ್ಸ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಕಲ್ಯಾಣರಾಮನ್ ಹಾಗೂ ಅವರ ಪುತ್ರರಾದ ರಮೇಶ್ ಮತ್ತು ರಾಜೇಶ್ ಅವರಿಗೆ ಸೇರಿವೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಮೂರು ರೋಲ್ಸ್ ರಾಯ್ಸ್ ಕಾರುಗಳನ್ನು ಹೊಂದಿರುವ ಅಪರೂಪದ ಕುಟುಂಬವಿದು

ಈ ಮೂವರೂ ತಮ್ಮ ರೋಲ್ಸ್ ರಾಯ್ಸ್ ಕಾರುಗಳನ್ನು ದಿನ ನಿತ್ಯದ ಓಡಾಟಕ್ಕೆ ಬಳಸುತ್ತಾರೆ. ಕಲ್ಯಾಣರಾಮನ್ ರವರು ರೋಲ್ಸ್ ರಾಯ್ಸ್ ಫ್ಯಾಂಟಮ್ ಸೀರಿಸ್ 2 ಕಾರನ್ನು ಬಳಸುತ್ತಾರೆ. ಈ ಕಾರಿನ ಬೆಲೆ 10 ಕೋಟಿ ರೂಪಾಯಿಗಳಾಗಿದೆ. ಅವರ ಕಾರು ಕಪ್ಪು ಬಣ್ಣವನ್ನು ಹೊಂದಿದೆ.

ಮೂರು ರೋಲ್ಸ್ ರಾಯ್ಸ್ ಕಾರುಗಳನ್ನು ಹೊಂದಿರುವ ಅಪರೂಪದ ಕುಟುಂಬವಿದು

ಇನ್ನು ಅವರ ಇಬ್ಬರು ಮಕ್ಕಳು ಸಹ ರೋಲ್ಸ್ ರಾಯ್ಸ್ ಫ್ಯಾಂಟಮ್ ಸೀರಿಸ್ 2 ಕಾರುಗಳನ್ನು ಬಳಸುತ್ತಾರೆ. ಒಂದು ಕಾರು ಸಿಲ್ವರ್ ಬಣ್ಣದ್ದಲ್ಲಿದ್ದರೆ, ಇನ್ನೊಂದು ಕಾರು ಬಿಳಿ ಬಣ್ಣವನ್ನು ಹೊಂದಿದೆ. ಕಲ್ಯಾಣರಾಮನ್ ರವರ ಕುಟುಂಬವು 3 ರೋಲ್ಸ್ ರಾಯ್ಸ್ ಫ್ಯಾಂಟಮ್ ಸೀರಿಸ್ 2 ಕಾರುಗಳನ್ನು ಹೊಂದಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಮೂರು ರೋಲ್ಸ್ ರಾಯ್ಸ್ ಕಾರುಗಳನ್ನು ಹೊಂದಿರುವ ಅಪರೂಪದ ಕುಟುಂಬವಿದು

ಈ ಮೂರು ಕಾರುಗಳನ್ನು ಒಟ್ಟಿಗೆ ಗ್ಯಾರೇಜ್‌ನಲ್ಲಿ ನಿಲ್ಲಿಸಿರುವ ಅನೇಕ ವೀಡಿಯೊಗಳು ಇಂಟರ್ ನೆಟ್ ನಲ್ಲಿವೆ. ಈ ಮೂವರೂ ಹೊರಗೆ ಹೋದಾಗೆಲ್ಲಾ ರೋಲ್ಸ್ ರಾಯ್ಸ್ ಕಾರುಗಳನ್ನು ಬಳಸುತ್ತಾರೆ. ಭಾರತದಲ್ಲಿ ಒಂದೇ ಕುಟುಂಬದವರು ಮೂರು ರೋಲ್ಸ್ ರಾಯ್ಸ್ ಕಾರುಗಳನ್ನು ಹೊಂದಿರುವುದು ತೀರಾ ಅಪರೂಪ.

ಮೂರು ರೋಲ್ಸ್ ರಾಯ್ಸ್ ಕಾರುಗಳನ್ನು ಹೊಂದಿರುವ ಅಪರೂಪದ ಕುಟುಂಬವಿದು

ಭಾರತದ ಅತ್ಯಂತ ಶ್ರೀಮಂತ ಕುಟುಂಬವಾದ ಅಂಬಾನಿ ಕುಟುಂಬದವರು ಸಹ ಹಲವಾರು ರೋಲ್ಸ್ ರಾಯ್ಸ್ ಕಾರುಗಳನ್ನು ಹೊಂದಿದ್ದಾರೆ. ಅಂಬಾನಿ ಕುಟುಂಬವು ರೋಲ್ಸ್ ರಾಯ್ಸ್ ಕಲಿನನ್, ರೋಲ್ಸ್ ರಾಯ್ಸ್ ಫ್ಯಾಂಟಮ್ ಡಿಹೆಚ್‌ಸಿ ಹಾಗೂ ರೋಲ್ಸ್ ರಾಯ್ಸ್ ಫ್ಯಾಂಟಮ್ 8 ಕಾರುಗಳನ್ನು ಹೊಂದಿದೆ.

Most Read Articles

Kannada
English summary
Family in kerala has 3 Rolls Royce cars. Read in Kannada.
Story first published: Thursday, September 3, 2020, 13:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X