Suniel Shetty: ಎಲೆಕ್ಟ್ರಿಕ್ ಕಾರು ಪ್ರೀತಿ.. ಕುಡ್ಲ ಮೂಲದ ನಟ ಸುನೀಲ್ ಶೆಟ್ಟಿರಿಂದ ಅಗ್ಗದ ಎಂಜಿ ಕಾಮೆಟ್ ಖರೀದಿ

ಮಂಗಳೂರು ಮೂಲದ ಬಾಲಿವುಡ್ ನಟ ಸುನೀಲ್ ಶೆಟ್ಟಿ (Suniel Shetty) ತಮ್ಮ ಅದ್ಭುತ ನಟನೆಯ ಮೂಲಕ ದೊಡ್ಡಮಟ್ಟದಲ್ಲಿ ಖ್ಯಾತಿಗಳಿಸಿದ್ದಾರೆ. ಅವರಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಬಳಗವೂ ಇದೆ. ಸುನೀಲ್ ಶೆಟ್ಟಿ ಕೇವಲ ನಟನಾಗಿ ಮಾತ್ರವಲ್ಲ ಯಶಸ್ವಿ ಉದ್ಯಮಿಯಾಗಿಯೂ ಸಾಕಷ್ಟು ಜನಪ್ರಿಯರಾಗಿದ್ದಾರೆ.

ಸುನೀಲ್ ಶೆಟ್ಟಿ ಅವರಿಗೆ ಕಾರುಗಳ ವಿಶೇಷ ಪ್ರೀತಿಯಿದ್ದು, ಅವರ ಗ್ಯಾರೇಜ್ ನಲ್ಲಿ ದುಬಾರಿ ಬೆಲೆಯ ಐಷಾರಾಮಿ ಮರ್ಸಿಡಿಸ್ ಬೆಂಜ್ ಜಿಎಲ್ಎಸ್ 350, ಹಮ್ಮರ್ ಹೆಚ್2, ಬಿಎಂಡಬ್ಲ್ಯೂ ಎಕ್ಸ್5, ಜಾಗ್ವಾರ್ ಎಕ್ಸ್ಎಫ್ ಹಾಗೂ ಜೀಪ್ ರಾಂಗ್ಲರ್ ಸೇರಿದಂತೆ ಹಲವು ಕಾರುಗಳ ಸಂಗ್ರಹವಿದೆ. ನಿನ್ನೆಯಷ್ಟೇ ಕಡಿಮೆ ಬೆಲೆಯ ಹೊಚ್ಚ ಹೊಸ ಎಂಜಿ ಕಾಮೆಟ್ ಇವಿ (MG Comet EV)ಯನ್ನು ಕೊಂಡುಕೊಂಡಿದ್ದಾರೆ ಎಂದು ವರದಿಯಾಗಿದೆ.

Suniel Shetty: ಎಲೆಕ್ಟ್ರಿಕ್ ಕಾರು ಪ್ರೀತಿ.. ಕುಡ್ಲ ಮೂಲದ ನಟ ಸುನೀಲ್ ಶೆಟ್ಟಿರಿಂದ ಅಗ್ಗದ ಎಂಜಿ ಕಾಮೆಟ್ ಖರೀದಿ

ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಪೋಸ್ಟ್ ಮಾಡಿರುವ ನಟ ಸುನೀಲ್ ಶೆಟ್ಟಿ ಅವರು, 'ನನ್ನ ಮೊದಲ ಇವಿ 'ಎಂಜಿ ಕಾಮೆಟ್... ಲವ್ ಇಟ್' ಎಂದು ಶೀರ್ಷಿಕೆ ಬರೆದಿದ್ದಾರೆ. ಅವರಿಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭಕೋರಿದ್ದಾರೆ. ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಎಂಜಿ ಕಾಮೆಟ್ ಇವಿ, ರೂ.7.98 ಲಕ್ಷದಿಂದ ರೂ.9.98 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

2 ಡೋರ್ ಆಯ್ಕೆಯಲ್ಲಿ ಸಿಗುವ ಈ ಕಾರಿನಲ್ಲಿ 4 ಜನ ಆರಾಮದಾಯಕವಾಗಿ ಕುಳಿತುಕೊಂಡು ಹೋಗಬಹುದು. ಈ ಎಂಜಿ ಕಾಮೆಟ್ ಇವಿ, ಪೇಸ್ (Pace), ​​ಪ್ಲೇ (Play), ಪ್ಲಶ್ (Plush) ಎಂಬ ರೂಪಾಂತರ, ಕ್ಯಾಂಡಿ ವೈಟ್, ಅರೋರಾ ಸಿಲ್ವರ್, ಕ್ಯಾಂಡಿ ವೈಟ್ ಸೇರಿದಂತೆ 2 ಡುಯಲ್-ಟೋನ್ ಮತ್ತು 3 ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ.

Suniel Shetty: ಎಲೆಕ್ಟ್ರಿಕ್ ಕಾರು ಪ್ರೀತಿ.. ಕುಡ್ಲ ಮೂಲದ ನಟ ಸುನೀಲ್ ಶೆಟ್ಟಿರಿಂದ ಅಗ್ಗದ ಎಂಜಿ ಕಾಮೆಟ್ ಖರೀದಿ

ಎಂಜಿ ಕಾಮೆಟ್ ಇವಿ 17.3 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದ್ದು, ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್ 42 PS ಗರಿಷ್ಠ ಪವರ್ ಹಾಗೂ 110 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್ ನಲ್ಲಿ 230 km ರೇಂಜ್ ನೀಡುತ್ತದೆ. 3.3kW ಚಾರ್ಜರ್ ಬಳಕೆಯಲ್ಲಿ ಕೇವಲ 7 ಗಂಟೆಯಲ್ಲಿ ಈ ಕಾರಿನ ಬ್ಯಾಟರಿ ಪ್ಯಾಕ್ ಚಾರ್ಜ್ ಆಗುತ್ತದೆ.

ವೈಶಿಷ್ಟ್ಯ ವಿಚಾರವಾಗಿ ಮಾತನಾಡುವುದಾದರೆ, ಈ ಕಾರು, ಎಲ್ಇಡಿ ಹೆಡ್‌ಲೈಟ್‌, ಟೈಲ್‌ಲೈಟ್‌, ಇನ್ಫೋಟೈನ್‌ಮೆಂಟ್ & ಇನ್‌ಸ್ಟ್ರುಮೆಂಟೇಶನ್‌ ಕ್ಲಸ್ಟರ್ ಗಾಗಿ ಡುಯಲ್ 10.25 - ಇಂಚಿನ ಇಂಟಿಗ್ರೇಟೆಡ್ ಡಿಜಿಟಲ್ ಸ್ಕ್ರೀನ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 55 ಕನೆಕ್ಟ್ದ್ ಕಾರ್ ಫೀಚರ್ಸ್ ಹಾಗೂ ಕೀಲೆಸ್ ಎಂಟ್ರಿಯನ್ನು ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಎಂಜಿ ಕಾಮೆಟ್ ಇವಿ ಸುರಕ್ಷತೆಯ ದೃಷ್ಟಿಯಿಂದಲೂ ಅತ್ಯುತ್ತಮವಾಗಿದ್ದು, ಡುಯಲ್ ಫ್ರಂಟ್ ಏರ್‌ಬ್ಯಾಗ್‌, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ISOFIX ಚೈಲ್ಡ್ ಸೀಟ್ ಆಂಕರ್ಸ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ರೇರ್ ಪಾರ್ಕಿಂಗ್ ಸೆನ್ಸರ್ಸ್ ಅನ್ನು ಪಡೆದಿದೆ. ಈ ಕಾರಿಗೆ ಟಾಟಾ ಟಿಯಾಗೊ ಇವಿ, ಸಿಟ್ರಸ್ ಇಸಿ3 ಪ್ರಬಲ ಪ್ರತಿಸ್ಪರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, December 26, 2023, 11:49 [IST]
English summary
Famous actor suniel shetty buy low price mg comet ev as his first electric car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+