ಶ್ರೀಸಾಮಾನ್ಯರ ಐರಾವತ.. ಈ ಜನಪ್ರಿಯ TVS ಸ್ಕೂಟರ್ ಖರೀದಿಸಿದ ಖ್ಯಾತ ಯೂಟ್ಯೂಬರ್, ಲಕ್ಷಗಟ್ಟಲೇ ಫಾಲೋವರ್ಸ್!
ವಿಶ್ವಾದ್ಯಂತ ಸ್ಮಾರ್ಟ್‌ಫೋನ್ ಇರುವ ಪ್ರತಿಯೊಬ್ಬರು ಯೂಟ್ಯೂಬ್ (YouTube) ವೀಕ್ಷಿಸುತ್ತಾರೆ. ಇಂದು ಎಲ್ಲ ಭಾಷೆಯಲ್ಲಿಯೂ 'ಕಂಟೆಂಟ್ ಕ್ರಿಯೆಟರ್'ಗಳು ಇದ್ದು, ಪ್ರವಾಸ, ಆಹಾರ, ಉದ್ಯೋಗ, ಸಿನಿಮಾ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಅಂತಹವರಲ್ಲಿ ಮೊಹಮದ್ ಇರ್ಫಾನ್ ಕೂಡ ಒಬ್ಬರಾಗಿದ್ದು, ತಮಿಳಿನ ಪ್ರಖ್ಯಾತ ಫುಡ್ ಬ್ಲಾಗರ್ ಆಗಿದ್ದಾರೆ. ಅವರ 'ಇರ್ಫಾನ್ಸ್ ವ್ಯೂ' ಯೂಟ್ಯೂಬ್ ಚಾನೆಲ್‌ನ್ನು 44 ಲಕ್ಷಗೂ ಹೆಚ್ಚಿನ ಜನರು ಸಬ್‌ಸ್ಕ್ರೈಬ್ ಮಾಡಿದ್ದಾರೆ. ಎರಡು ಇನ್‌ಸ್ಟಾಗ್ರಾಮ್ ಖಾತೆಗಳನ್ನು ಹೊಂದಿದ್ದು, ಲಕ್ಷಗಟ್ಟಲೇ ಫಾಲೋವರ್ಸ್ ಇದ್ದಾರೆ.
ಇತ್ತೀಚೆಗೆ, ಇರ್ಫಾನ್ ಹೊಚ್ಚ ಹೊಸ ಟಿವಿಎಸ್ ಜುಪಿಟರ್ 125 (TVS Jupiter 125) ಸ್ಕೂಟರ್ ಖರೀದಿಸಿದ್ದಾರೆ. ಈ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದು, 3 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ವಿಡಿಯೋದಲ್ಲಿ ನೂತನ ಟಿವಿಎಸ್ ಜುಪಿಟರ್ ಸ್ಕೂಟರ್ ತೆಗೆದುಕೊಳ್ಳಲು ಕಾರಣವೇನು ಎಂಬುದನ್ನು ತಿಳಿಸಿದ್ದಾರೆ. ಈ ಹಿಂದೆ, ಅವರು ದುಬೈನ ಆಸ್ಪತ್ರೆಯೊಂದರಲ್ಲಿ ಸ್ಕ್ಯಾನಿಂಗ್ ವೇಳೆ ತಮಗೆ ಹುಟ್ಟಲಿರುವ ಮಗುವಿನ ಲಿಂಗವನ್ನು ಬಹಿರಂಗಪಡಿಸಿ, ವಿವಾದಕ್ಕೂ ಒಳಗಾಗಿದ್ದರು.

ಸದ್ಯ, ಇರ್ಫಾನ್ ತೆಗೆದುಕೊಂಡಿರುವ ಟಿವಿಎಸ್ ಜುಪಿಟರ್ 125 ಸ್ಕೂಟರ್ ರೂ.89,155 ದಿಂದ ರೂ.99,805 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಡ್ರಮ್, ಡಿಸ್ಕ್ ಮತ್ತು ಸ್ಮಾರ್ಟ್‌ಕನೆಕ್ಟ್ ಎಂಬ ರೂಪಾಂತರ (ವೇರಿಯೆಂಟ್)ಗಳ ಆಯ್ಕೆಯನ್ನು ಹೊಂದಿದೆ. ಪ್ರಿಸ್ಟಿನ್ ವೈಟ್, ಇಂಡಿಬ್ಲೂ, ಡಾನ್ ಆರೆಂಜ್ ಒಳಗೊಂಡಂತೆ ಹಲವು ಬಣ್ಣಗಳೊಂದಿಗೂ ಲಭ್ಯವಿದೆ.
ಈ ಸ್ಕೂಟರ್ ಶಕ್ತಿಯುತ ಪವರ್‌ಟ್ರೇನ್ ಪಡೆದಿದೆ. 124.8 ಸಿಸಿ ಸಿಂಗಲ್-ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 8.2 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 10.5 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 57.27 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ಹೊಸ ಟಿವಿಎಸ್ ಜುಪಿಟರ್ 125 ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಯುಎಸ್‌ಬಿ ಚಾರ್ಜಿಂಗ್ ಸಾಕೆಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಸ್ಕೂಟರ್ 108 ಕೆಜಿ ತೂಕವಿದ್ದು, 5.1 ಲೀಟರ್ ಸಾಮರ್ಥ್ಯದ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಹೊಂದಿದೆ. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 33 ಲೀಟರ್ ಸಾಮರ್ಥ್ಯದ ಸ್ಟೋರೇಜ್ ಅನ್ನು ಪಡೆದಿದೆ.
ನೂತನ ಜುಪಿಟರ್ 125 ಸ್ಕೂಟರ್ ಸವಾರರಿಗೆ ಗರಿಷ್ಠ ರಕ್ಷಣೆ ಒದಗಿಸಲು ಡಿಸ್ಕ್ ಮತ್ತು ಡ್ರಮ್ ಬ್ರೇಕ್‌ನ್ನು ಒಳಗೊಂಡಿದೆ. ಮುಂಭಾಗ (ಫ್ರಂಟ್) ಹಾಗೂ ಹಿಂಭಾಗ (ರೇರ್) 12-ಇಂಚಿನ ಅಲಾಯ್ ವೀಲ್‌ಗಳು ಮತ್ತು 90/90-12 ಅಳತೆಯ ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆದಿದೆ. ಟಿವಿಎಸ್ ಜುಪಿಟರ್ 110 ಸ್ಕೂಟರ್ ಕೂಡ ಲಭ್ಯವಿದೆ. ಇದು ರೂ.77,431 ದಿಂದ ರೂ.93,026 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.
ಈ ಟಿವಿಎಸ್ ಜುಪಿಟರ್ 110 109.7 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 7.88 ಪಿಎಸ್ ಗರಿಷ್ಠ ಶಕ್ತಿ ಹಾಗೂ 8.8 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 50 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಡ್ರಮ್ ಬ್ರೇಕ್‌ನ್ನು ಹೊಂದಿದೆ. ಜೊತೆಗೆ 109 ಕೆಜಿ ತೂಕವಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








