ರೂ.75 ಲಕ್ಷ ವ್ಯಯಿಸಿ ಮನೆ ಬಣ್ಣಕ್ಕೆ ಹೊಂದಿಕೆಯಾಗುವಂತೆ ಕಾರುಗಳ ಬಣ್ಣ ಬದಲಾವಣೆ ಮಾಡಿಸಿದ ರೂಪದರ್ಶಿ
ಕಾರು ಕ್ರೇಜ್ ಅನ್ನೋದು ಯಾರಿಗೆ ಇರಲ್ಲ ಹೇಳಿ, ಅದರಲ್ಲಿಯು ಸಿನಿಮಾ ರಂಗದ ಸೆಲಬ್ರಿಟಿಗಳಿಗೆ ಈ ಕ್ರೇಜ್ ಸ್ವಲ್ಪ ಹೆಚ್ಚೇ ಇರುತ್ತೆ. ಸಿನಿಮಾ ತಾರೆಯರು ತಾವು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ಮಾರುಕಟ್ಟೆಗೆ ಲಗ್ಗೆ ಇಟ್ಟ ಐಷಾರಾಮಿ ಕಾರುಗಳನ್ನು ಖರೀದಿಸುವುದು ಸಿನಿಮಾ ಸೆಲಬ್ರಿಟಿಗಳಿಗೆ ಒಂದು ಟ್ರೆಂಡ್ ಆಗಿದೆ.

ಇನ್ನು ಹೆಚ್ಚು ಕಾರು ಕ್ರೇಜ್ ಇದ್ದರೆ ಕಾರುಗಳನ್ನು ಮಾಡಿಫೈಗೊಳಿಸುತ್ತಾರೆ. ಆದರೆ ನಟಿಯೊಬ್ಬರು ತಮ್ಮ ಮನೆಯ ಬಣ್ಣಕ್ಕೆ ಹೊಂದಿಕೆಯಾಗುವಂತೆ ತಮ್ಮ ಮೂರು ಕಾರುಗಳ ಬಣ್ಣ ಬದಲಾಯಿಸಿದ್ದಾರೆ. ಇದಕ್ಕಾಗಿ ಅವರು ಬರೋಬ್ಬರಿ ರೂ.75 ಲಕ್ಷ ವೆಚ್ಚ ಮಾಡಿದ್ದಾರೆ. ಅಮೆರಿಕದ ರಿಯಾಲಿಟಿ ಸ್ಟಾರ್ ಕಿಮ್ ಕಾರ್ಡಶಿಯನ್ ಯಾವಾಗಲೂ ತನ್ನ ವಿಶೇಷ ಅಭ್ಯಾಸಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಜನರು ಆಕೆ ಬಗ್ಗೆ ಸಾಕಷ್ಟು ಟೀಕಿಸಿದರೂ, ಆಕೆ ಮಾತ್ರ ಎಲ್ಲದರಲ್ಲೂ ತನ್ನ ವಿಭಿನ್ನ ಅಭಿರುಚಿಗೆ ಆಕೆ ಹೆಸರುವಾಸಿ.

ಆಕೆ ಐಷಾರಾಮಿ ಮತ್ತು ಕ್ರೀಡಾ ಕಾರುಗಳ ಆಯ್ಕೆಗೆ ವಿಸ್ತರಣೆಯಾಗಿದೆ. ಇತ್ತೀಚೆಗೆ, ಅವರ ಕಾರುಗಳ ವೈಯಕ್ತೀಕರಣದ ಸುದ್ದಿ ಭಾರಿ ವೈರಲ್ ಆಗಿತ್ತು.ಅಮೆರಿಕದ ಪ್ರಸಿದ್ಧ ಫ್ಯಾಷನ್ ಮತ್ತು ಜೀವನಶೈಲಿ ನಿಯತಕಾಲಿಕೆ 'ವೋಗ್' (Vogue) ತನ್ನ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ವೀಡಿಯೊವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಕಿಮ್ ತಮ್ಮ ಬಂಗಲೆ ಮತ್ತು ಅವರ ಮೂರು ಕಾರುಗಳನ್ನು ತೋರಿಸುತ್ತಿರುವ ಚಿತ್ರಣವಿದೆ.

ವಿಶೇಷ ಅಂಶವೆಂದರೆ, ಈ ಮೂರು ಕಾರುಗಳು ಐಷಾರಾಮಿ ಕಾರುಗಳು. ಲ್ಯಾಂಬೋರ್ಗಿನಿ ಉರುಸ್, ಮರ್ಸಿಡಿಸ್ ಮೇಬ್ಯಾಕ್ S600 ಮತ್ತು ರೋಲ್ಸ್ ರಾಯ್ಸ್ ಘೋಸ್ಟ್ ಆಗಿದೆ. ಈ ಎಲ್ಲಾ ಕಾರುಗಳನ್ನು ಕಿಮ್ ತಮ್ಮ ಬಂಗಲೆಯ ಬಣ್ಣಕ್ಕೆ ಹೊಂದಿಕೆಯಾಗುವಂತೆ ಬೂದು ಬಣ್ಣದಲ್ಲಿ ಪೇಂಟ್ ಮಾಡಿಸಿದ್ದಾರೆ.

ಇದಕ್ಕಾಗಿ ಕಿಮ್ ಕಾರ್ಡಶಿಯಾನ್ 1 ಲಕ್ಷ ಡಾಲರ್ ವೆಚ್ಚ ಮಾಡಿದ್ದಾರೆ. ಇದನ್ನು ಲಾಸ್ ಏಂಜಲೀಸ್ ಮೂಲದ ಪ್ಲಾಟಿನಂ ಮೋಟಾರ್‌ಸ್ಪೋರ್ಟ್ಸ್ ಈ ಪೇಂಟಿಂಗ್ ಅನ್ನು ಮಾಡಿದ್ದಾರೆ. ಈ ಮೂರು ಕಾರುಗಳಿಗೆ ಬಣ್ಣ ಬಳಿಯಲು ಪ್ಲಾಟಿನಂ ಮೋಟಾರ್ ಸ್ಪೋರ್ಟ್ಸ್ ತೆಗೆದುಕೊಂಡ ಸಮಯ ಒಂದು ತಿಂಗಳು ಆಗಿದೆ.

ಮೂಲವೊಂದರ ಪ್ರಕಾರ, ಕಿಮ್ ಕಾರ್ಡಶಿಯಾನ್ ಅವರು ವೈಯಕ್ತಿಕವಾಗಿ ಪೇಂಟ್ ಕೆಲಸದ ನಿಗಾ ವಹಿಸಿದ್ದಾರೆ. ಏಕೆಂದರೆ, ಈ ಕಾರುಗಳು ಅವರ ಇಷ್ಟದ ಕಾರುಗಳಲ್ಲಿ ಕೆಲವು ಎಂದು ಹೇಳಲಾಗುತ್ತಿದೆ. ಏಕೆಂದರೆ ಅವರು ಬಯಸಿದಂತೆ ಅವುಗಳನ್ನು ಮಾಡಲು ಬಯಸಿದ್ದರು. ಕಿಮ್ ಪ್ಲಾಟಿನಂ ಮೋಟಾರ್‌ಸ್ಪೋರ್ಟ್ಸ್‌ನ ಅತ್ಯಂತ ನಿಷ್ಠಾವಂತ ಗ್ರಾಹಕರಲ್ಲಿ ಒಬ್ಬರು ಮತ್ತು ತನ್ನ ಕಾರುಗಳನ್ನು ಕಸ್ಟಮೈಸ್ ಮಾಡಲು ಮಾರ್ಪಾಡು ತಜ್ಞರನ್ನು ಯಾವಾಗಲೂ ನಂಬುತ್ತಾರೆ.

ಈ ಕಸ್ಟಮ್ ಗ್ರೇ ಬಣ್ಣದಿಂದ ಕೂಡಿರುವ ಎಲ್ಲಾ ಮೂರು ಕಾರುಗಳು ತಮ್ಮದೇ ಆದ ಪ್ರತ್ಯೇಕವಾಗಿರುತ್ತವೆ. ಮೂರರಲ್ಲಿ ಲ್ಯಾಂಬೋರ್ಗಿನಿ ಉರುಸ್ ಎಸ್‍ಯುವಿ ಹೆಚ್ಚು ಆಕರ್ಷಣೆ ಪಡೆದುಕೊಳ್ಳುತ್ತದೆ. 2.18 ಲಕ್ಷ ಡಾಲರ್ ಮೌಲ್ಯದ ಈ ಕಾರು ಎಸ್‌ಯುವಿಗಳಲ್ಲಿ ಅತ್ಯಂತ ದುಬಾರಿ ಕಾರು ಎಂದು ಗುರುತಿಸಿಕೊಂಡಿದೆ.

ಇಲ್ಲಿರುವ ಉರುಸ್ ಅನ್ನು ಅದರ ಮುಂಭಾಗದಲ್ಲಿ ವಿಶೇಷ ಬಾಡಿಯೊಂದಿಗೆ ಈಗಾಗಲೇ ಕಸ್ಟಮೈಸ್ ಮಾಡಲಾಗಿದೆ. ಉರುಸ್ ಈಗಾಗಲೇ ಖರೀದಿಸಬಹುದಾದ ಅತ್ಯಂತ ದುಬಾರಿ ಎಸ್‍ಯುವಿಗಳಲ್ಲಿ ಒಂದಾಗಿದೆ.ಇಲ್ಲಿರುವ ಉರುಸ್ ಅನ್ನು ಅದರ ಮುಂಭಾಗದಲ್ಲಿ ವಿಶೇಷ ಸಂಕೀರ್ಣವಾದ ಬಾಡಿ ಕಿಟ್‌ನೊಂದಿಗೆ ಈಗಾಗಲೇ ಕಸ್ಟಮೈಸ್ ಮಾಡಲಾಗಿದೆ, ಇದು ಎಸ್‍ಯುವಿಯನ್ನು ಅದಕ್ಕಿಂತ ಹೆಚ್ಚು ಅಗ್ರೇಸಿ ಕಾಣುವಂತೆ ಮಾಡುತ್ತದೆ.

ಉರುಸ್ ಎಸ್‍ಯುವಿಯನ್ನು ಹೊರತಾಗಿ, ರೋಲ್ಸ್ ರಾಯ್ಸ್ ಘೋಸ್ಟ್‌ಗೆ ವಿಶಿಷ್ಟವಾದ ಸ್ಪಿರಿಟ್ ಆಫ್ ಎಕ್ಸ್ಟಸಿಯನ್ನು ನೀಡಲಾಗಿದೆ. ಇಲ್ಲಿ ಮೂರನೇ ಕಾರು ಆದ ಮರ್ಸಿಡಿಸ್ ಮೇಬ್ಯಾಕ್ S600 ಸಹ ವಿಭಿನ್ನವಾಗಿ ಕಾಣುತ್ತದೆ, ಇದರಲ್ಲಿ ಅದೇ ಗ್ರೇ ಛಾಯೆಯಲ್ಲಿ ಚಿತ್ರಿಸಲಾಗಿದೆ.

ವೋಗ್ ಹಂಚಿಕೊಂಡ ವೀಡಿಯೊ ಕ್ಲಿಪ್‌ನಲ್ಲಿ, ಕಿಮ್ ಕಾರ್ಡಶಿಯಾನ್ ಅವರು ಸ್ಪೋರ್ಟಿ ಕಾರುಗಳ ಮೇಲಿನ ಪ್ರೀತಿಯನ್ನು ವಿವರಿಸಿದ್ದಾರೆ. ಈ ಹೊಸ ಮತ್ತು ವಿಶೇಷ ಪೇಂಟ್ ಸ್ಕೀಮ್‌ನೊಂದಿಗೆ, ಕಿಮ್ ಅವರು ತಮ್ಮ ಬೂದು-ಬಣ್ಣದ ಭವನದೊಂದಿಗೆ ವಿಭಿನ್ನವಾಗಿ ಕಾಣುವಂತೆ ಮಾಡಲು ಬಯಸಿದ್ದರು. ಇದಕ್ಕಾಗಿಯೇ ಅವರು ತನ್ನ ನೆಚ್ಚಿನ ಬೂದು ಬಣ್ಣದ ಹೊಸ ಛಾಯೆಯನ್ನು ಆರಿಸಿಕೊಂಡಳು.

ಭಾರತದಲ್ಲಿ ಕೂಡ ಈ ದುಬಾರಿ ಕಾರುಗಳನ್ನು ಕೆಲವೇ ಕೆಲವು ಜನರು ಮಾತ್ರ ಹೊಂದಿದ್ದಾರೆ. ಅದರಲ್ಲೂ ಲ್ಯಾಂಬೋರ್ಗಿನಿ ಕಾರನ್ನು ಶ್ರೀಮಂತ ಉದ್ಯಮಿಗಳು ಮತ್ತು ಚಿತ್ರನಟರು ಹೊಂದಿದ್ದಾರೆ. ಅದರಲ್ಲಿ ಲ್ಯಾಂಬೋರ್ಗಿನಿ ಸುಫರ್ ಕಾರುಗಳು ನಮ್ಮ ಬಂಗಳೂರಿನಲ್ಲಿ ಹೆಚ್ಚು ಮಾರಾಟವಾಗುತ್ತಿವೆ. ಇನ್ನು ವಿಶ್ವದ ಕಾರು ತಯಾರಕರ ದೊಡ್ಡ ಮಾರುಕಟ್ಟೆಯಲ್ಲಿ ಭಾರತದ ವಾಹನ ಮಾರುಕಟ್ಟೆಯು ಕೂಡ ಒಂದಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರುಗಳು ಮಾರಾಟವಾಗುತ್ತಿವೆ. ಕೈಗೆಟುಕುವ ಬೆಲೆಯ ಕಾರುಗಳಿಂದ ಬಹುಕೋಟಿ ಮೌಲ್ಯದ ಐಷಾರಾಮಿ ಸೂಪರ್ ಕಾರುಗಳು ಕೂಡ ಮಾರಾಟವಾಗುತ್ತಿವೆ.

ಭಾರತದಲ್ಲಿ ನಮ್ಮ ದೇಶೀಯ ಕಾರುಗಳನ್ನು ಹೊರತುಪಡಿಸಿ, ಸಾಕಷ್ಟು ವಿದೇಶಿ ಮೂಲದ ಕಾರುಗಳನ್ನು ನೋಡಬಹುದು. ಭಾರತದಲ್ಲಿರುವ ಕೆಲವೊಂದು ಶ್ರೀಮಂತರು ಮತ್ತು ಸೆಲಬ್ರಿಟಿಗಳ ಬಳಿ ನಾವು ಹೆಚ್ಚಾಗಿ ಈ ರೀತಿಯ ಕಾರುಗಳನ್ನು ನೋಡಬಹುದಾಗಿದೆ. ಭಾರತದಲ್ಲಿರುವ ಕೆಲವೊಂದು ಶ್ರೀಮಂತರು ಮತ್ತು ಸೆಲಬ್ರಿಟಿಗಳ ಬಳಿ ನಾವು ಹೆಚ್ಚಾಗಿ ಈ ರೀತಿಯ ಕಾರುಗಳನ್ನು ನೋಡಬಹುದಾಗಿದೆ.


Click it and Unblock the Notifications