ನೆಲ, ವಾಯು, ಜಲದ 10 ಅತಿ ವೇಗದ ವಾಹನಗಳು
ವೇಗವನ್ನು ಎಲ್ಲರೂ ಇಷ್ಟಪಡುತ್ತಾರೆ. ಯಾವುದೇ ಕ್ಷೇತ್ರವನ್ನು ಪರಿಗಣಿಸಿದರೂ ತಾವು ಮುಂದು ತಾವು ಮುಂದು ಎಂಬ ಸ್ಪರ್ಧೆ ಕಂಡುಬರುತ್ತದೆ. ಇದೇ ಕಾರಣಕ್ಕಾಗಿ ಎಲ್ಲಿ ಹೋದರೂ ಮೊದಲಿಗರಿಗೆ ಗೌರವ, ಮನ್ನಣೆ ಮಣೆ ಹಾಕಲಾಕುತ್ತದೆ.
ಹಾಗೆಯೇ ನಿಮ್ಮ ಡ್ರೈವ್ ಸ್ಪಾರ್ಕ್ ಕೂಡಾ ಸಾಮಾನ್ಯ ಲೇಖನಗಿಂತ ವಿಭಿನ್ನವಾಗಿ ಇಂದು ನೆಲ, ವಾಯು, ಜಲದ ಕೆಲವು ಪ್ರಥಮಗಳ ಬಗ್ಗೆ ಮಾತನಾಡಲಿದ್ದೇವೆ. ಉಹಾಹರಣೆಗೆ ಅತ್ಯಂತ ವೇಗದಲ್ಲಿ ಚಲಿಸುವ ಬೈಕ್ ಯಾವುದು? ಕಾರು ಯಾವುದು? ಹೀಗೆ ಹತ್ತು ವಿಶಿಷ್ಟ ವಾಹನಗಳ ಪಟ್ಟಿಯೊಂದಿಗೆ ಕನ್ನಡ ಡ್ರೈವ್ ಸ್ಪಾರ್ಕ್ ನಿಮ್ಮ ಮುಂದೆ ಬರುತ್ತಿದೆ.

ಜಗತ್ತಿನ ಅತಿ ವೇಗದ ಮೋಟಾರುಸೈಕಲ್ ?
ಸ್ಪಷ್ಟವಾಗಿ ಗಮನಿಸಿ ಜಗತ್ತಿನ ಅತಿ ವೇಗದ ಮೋಟಾರುಸೈಕಲ್ ಎಂಬ ಗೌರವಕ್ಕೆ ಎಂವಿ ಆಗಸ್ಟಾ ಎಫ್4 ಆರ್ 312 ಎಂಬ ಬೈಕ್ ಪಾತ್ರವಾಗಿದೆ. ಅಷ್ಟಕ್ಕೂ ಇದು ಚಲಿಸುವ ವೇಗವೆಷ್ಟು ಗೊತ್ತೇನು? ಹೌದು ಗಂಟೆಗೆ 312 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಹಾಗಿದ್ದರೆ ಒಮ್ಮೆ ಊರಿಗೆ ಹೋಗ್ಬಿಟ್ಟು ಬರೋಣವೇ?
ಇಟಲಿಯ ಈ ಐಕಾನಿಕ್ ಸಂಸ್ಥೆಯು ಇದರಲ್ಲಿ ಆಳವಡಿಸಿರುವ 1 ಲೀಟರ್ ಎಂಜಿನ್ ಬರೋಬ್ಬರಿ 183 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಜಗತ್ತಿನ ಅತಿ ವೇಗದ ಕಾರು?
ದಾಖಲೆ ಯಾವತ್ತೂ ಸ್ಥಿರವಲ್ಲ. ಒಂದಲ್ಲ ಒಂದು ದಿನ ಇದನ್ನು ಮೀರಿ ನಿಲ್ಲುವವರು ಭೂಮಿಯಲ್ಲಿ ಸೃಷ್ಟಿಯಾಗುತ್ತಾರೆ. ಹೌದು ಜಗತ್ತಿನ ಅತಿ ವೇಗದ ಕಾರೆಂಬ ಖ್ಯಾತಿಗೆ ಹೆನ್ನೆಸ್ಸಿ ವೆನೊಮ್ ಜಿಟಿ ಪಾತ್ರವಾಗಿದೆ. ಯಾಕೆಂದರೆ ಇದು ಗಂಟೆಗೆ 435.31 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ ಅಂದರೆ ನಂಬಲಾರ್ಹವೇ? ಆದರೆ ಇದು ಅಧಿಕೃತ ಮಾನ್ಯತೆ ಪಡೆದುಕೊಂಡಿಲ್ಲ. ಹಾಗಾಗಿ ಸದ್ಯಕ್ಕೆ ಈ ಗೌರವಕ್ಕೆ ಬುಗಾಟಿಯ ಸೂಪರ್ ಕಾರು ಪಾತ್ರವಾಗಿದೆ. ಪ್ರಸ್ತುತ ಕಾರು ಗಂಟೆಗೆ 431.072 ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಜಗತ್ತಿನ ಅತಿ ವೇಗದ ಯುದ್ಧ ಟ್ಯಾಂಕರ್ ಯಾವುದು?
ಸರ್ವ ಶಸ್ತ್ರ ಸಜ್ಜಿತ ಸಾಮಾಗ್ರಿಗಳೊಂದಿಗೆ ಗಂಟೆಗೆ 82.23 ಕೀ.ಮೀ. ವೇಗದಲ್ಲಿ ಸಾಗುವ ಯುದ್ಧ ಟ್ಯಾಂಕರ್ ವೊಂದು ನಿಮ್ಮ ದೇಶದ ಗಡಿ ಪ್ರದೇಶದೊಳಗೆ ನುಗ್ಗುವ ಟ್ಯಾಂಕರ್ ವೊಂದನ್ನು ನಿಮ್ಮಿಂದ ಊಹಿಸಲು ಸಾಧ್ಯವೇ?. ಹೌದು, ಜಗತ್ತಿನ ಅತಿ ವೇಗದ ಯುದ್ಧ ಟ್ಯಾಂಕರ್ ಪಟ್ಟವನ್ನು ಎಫ್ ವಿ101 ಸ್ಕಾರ್ಪಿಯನ್ ಕಟ್ಟಿಕೊಂಡಿದೆ. ಇದರ ಒಡೆತನವನ್ನು ಬ್ರಿಟನ್ ಹೊಂದಿದೆ.

ಜಗತ್ತಿನ ಅತಿ ವೇಗದ ರೈಲು
ನಾವು ಈಗಾಗಲೇ ವರದಿ ಮಾಡಿರುವಂತೆಯೇ ಜಗತ್ತಿನ ಅತಿ ವೇಗದ ರೈಲು ಎಂಬ ಗೌರವಕ್ಕೆ ಜಪಾನ್ ನ ಮ್ಯಾಗ್ಲೆವ್ ರೈಲು ಪಾತ್ರವಾಗಿದೆ. ಆಯಸ್ಕಾಂತೀಯ ತೇಲುವಿಕೆ ಸಿದ್ಧಾಂತದಲ್ಲಿ ಮುನ್ನುಗ್ಗುವ ಮ್ಯಾಗ್ಲೆವ್ ರೈಲು ಗಂಟೆಗೆ 603 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಜಗತ್ತಿನ ಅತಿ ವೇಗದ ಹೋವರ್ ಕ್ರಾಫ್ಟ್
ಏರೋನಾಟಿಕಲ್ ಎಂಜಿನಿಯರ್ ಬಾಬ್ ವಿಂನ್ಡ್ಟ್ ಜಗತ್ತಿನ ಅತಿ ವೇಗದ ಹೋವರ್ ಕ್ರಾಫ್ಟ್ (ಏರ್ ಕುಶನ್ ವೆಹಿಕಲ್) ರೂವಾರಿಯಾಗಿದ್ದಾರೆ. 1995ನೇ ಇಸವಿಯಲ್ಲಿ ಪೋರ್ಚುಗಳ್ ನಲ್ಲಿ ನಡೆದ ಚಾಂಪಿಯನ್ ಶಿಪ್ ನಲ್ಲಿ ಪ್ರಸ್ತುತ ಹೋವರ್ ಕ್ರಾಫ್ಟ್ ಗಂಟೆಗೆ 137.4 ಕೀ.ಮೀ. ವೇಗದಲ್ಲಿ ಸಂಚರಿಸುವ ಮೂಲಕ ನೂತನ ದಾಖಲೆಗೆ ಪಾತ್ರವಾಗಿತ್ತು.

ಜಗತ್ತಿನ ಅತಿ ವೇಗದ ಸ್ಪೀಡ್ ಬೋಟ್
ಹೆಸರಲ್ಲೇ ದೇಶ ಪ್ರೇಮವನ್ನು ಉಕ್ಕೇರಿಸಿರುವ ಸ್ಪಿರಿಟ್ ಆಫ್ ಆಸ್ಟ್ರೇಲಿಯಾ ಜಗತ್ತಿನ ಅತಿ ವೇಗದ ಸ್ಪೀಡ್ ಬೋಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಗಂಟೆಗೆ 511.11 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಇದಕ್ಕೆ ಕೆನ್ ವಾರ್ಬಿ (Ken Warby) ವಿನ್ಯಾಸ ಕಲ್ಪಿಸಿದ್ದಾರೆ.

ಜಗತ್ತಿನ ಅತಿ ವೇಗದ ಹಡಗು
ಅತಿ ವೇಗದಲ್ಲಿ ಸಂಚರಿಸುವ ಹಡಗು ಯಾವುದು? ಸಾರರೋದ್ಯಮದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಫ್ರಾನ್ಸಿಸ್ಕೊ ಇಂತಹದೊಂದು ದಾಖಲೆಗೆ ಪಾತ್ರವಾಗಿದೆ. ಇದು ತೇಲಾಡುವ ಅಲೆಯ ಮೇಲೂ ಗಂಟೆಗೆ 108 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವುದು ರೋಚಕತೆ ಮೂಡಿಸುತ್ತದೆ.

ಪ್ರಪಂಚದ ಅತಿ ವೇಗದ ವಿಮಾನ?
ನೆಲ, ಜಲವನ್ನು ಹೋಲಿಸಿದಾಗ ತಡೆರಹಿತ ಗಾಳಿಯ ಮೇಲೆ ಅತ್ಯಂತ ವೇಗವಾಗಿ ಚಲಿಸಲು ಸಾಧ್ಯವಾಗುತ್ತದೆ. ಇದಕ್ಕೆ ಪೂರಕವಾಗಿ ಅತಿ ವೇಗದಲ್ಲಿ ಚಲಿಸುವ ವಿಮಾನ ಎಂಬ ಪಟ್ಟವನ್ನು ನಾರ್ಥ್ ಅಮೆರಿಕನ್ ಎಕ್ಸ್-15 ಕಟ್ಟಿಕೊಂಡಿದೆ. ಇದು ಗಂಟೆಗೆ 7,200 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

09. ಜಗತ್ತಿನ ಅತಿ ವೇಗದ ಹೆಲಿಕಾಪ್ಟರ್ ಯಾವುದು?
ವಿಮಾನವಾಯ್ತು ಹಾಗಿದ್ದಲ್ಲಿ ಜಗತ್ತಿನ ಅತಿ ವೇಗದ ಹೆಲಿಕಾಪ್ಟರ್ ಯಾವುದು? ಇದಕ್ಕೂ ಇಲ್ಲಿದೆ ಉತ್ತರ. ಯುರೋಕಾಪ್ಟರ್ ಎಕ್ಸ್3 ಜಗತ್ತಿನ ಅತಿ ವೇಗದ ವಿಮಾನವಾಗಿದ್ದು, ಗಂಟೆಗೆ 472 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

10. ಜಗತ್ತಿನ ಅತಿ ವೇಗದ ಬಾಹ್ಯಾಕಾಶ ನೌಕೆ ಯಾವುದು?
ಹೌದು ವಿಜ್ಞಾನಿಗಳು ಗಗನಕ್ಕೆ ಉಪಗ್ರಹಗಳನ್ನು ಉಡಾಯಿಸುವುದರಲ್ಲಿ ಕಾರ್ಯ ಮಗ್ನವಾಗಿದ್ದಾರೆ. ಅಷ್ಟಕ್ಕೂ ಜಗತ್ತಿನ ಅತಿ ವೇಗದ ಬಾಹ್ಯಾಕಾಶ ನೌಕೆ ಯಾವುದೆಂಬುದು ಗೊತ್ತೇ? ಇದನ್ನು ನಿಮ್ಮಿಂದ ಊಹಿಸಲಸಾದ್ಯ ? ಯಾಕೆ ಗೊತ್ತೇ? ಜಗತ್ತಿನ ಅತಿ ವೇಗದ ಬಾಹ್ಯಾಕಾಶ ನೌಕೆಯಾಗಿರುವ ಅಪೊಲೊ 10 ಗಂಟೆಗೆ 39,897 ಕೀ.ಮೀ. (24,791 ಮೈಲು) ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಹಾಗಿದ್ದರೆ ಚಂದ್ರನಲ್ಲಿಗೆ ಒಮ್ಮೆ ಹೋಗಿ ಬರೋಣವೇ?


Click it and Unblock the Notifications








