ಮದುವೆ ಸಮಾರಂಭವನ್ನು ಸ್ಮರಣೀಯವಾಗಿಸಿ ಕೊಳ್ಳುವ ಭರದಲ್ಲಿ ಎಡವಟ್ಟು ಮಾಡಿಕೊಂಡ ವಧು

ಮದುವೆಯನ್ನು ಸ್ಮರಣೀಯವಾಗಿಸಿ ಕೊಳ್ಳಬೇಕೆಂಬುದು ಪ್ರತಿ ವಧು ವರರ ಕನಸಾಗಿರುತ್ತದೆ. ತಮ್ಮ ಮದುವೆ ಸಮಾರಂಭವನ್ನು ಸ್ಮರಣೀಯವಾಗಿಸಿಕೊಳ್ಳಲು ಮುಂದಾಗಿದ್ದ ಪುಣೆ ಮೂಲದ ವಧು ಒಬ್ಬರ ಮೇಲೆ ಎಫ್‌ಐ‌ಆರ್ ದಾಖಲಾಗಿದೆ.

ಮದುವೆ ಸಮಾರಂಭವನ್ನು ಸ್ಮರಣೀಯವಾಗಿಸಿ ಕೊಳ್ಳುವ ಭರದಲ್ಲಿ ಎಡವಟ್ಟು ಮಾಡಿಕೊಂಡ ವಧು

ಶುಭಾಂಗಿ ಸಂತಾರಾಮ್ ಜರಾಂಡೆ ಮಹಾರಾಷ್ಟ್ರದ ಪುಣೆಯ ಪೊಶಾರಿ ಮೂಲದವರು. 23 ವರ್ಷದ ಆಕೆ ಇತ್ತೀಚೆಗೆ ವಿವಾಹವಾದಳು. ವಿವಾಹ ಸಮಾರಂಭಕ್ಕೆ ವಧು ವರರು ಕಾರಿನೊಳಗೆ ಕುಳಿತು ಚಲಿಸುತ್ತಾರೆ. ಆದರೆ ಶುಭಾಂಗಿ ಮಾತ್ರ ಕಾರಿನ ಮೇಲೆ ಕುಳಿತು ಎಡವಟ್ಟು ಮಾಡಿಕೊಂಡಿದ್ದಾಳೆ.

ಮದುವೆ ಸಮಾರಂಭವನ್ನು ಸ್ಮರಣೀಯವಾಗಿಸಿ ಕೊಳ್ಳುವ ಭರದಲ್ಲಿ ಎಡವಟ್ಟು ಮಾಡಿಕೊಂಡ ವಧು

ಆಕೆ ಪ್ರಯಾಣಿಸುತ್ತಿದ್ದ ಸ್ಕಾರ್ಪಿಯೋ ಕಾರು ಮದುವೆ ಸಮಾರಂಭ ನಡೆಯುತ್ತಿದ್ದ ಸಾಸ್ವಾದ್‌ಗೆ ಹೋಗುತ್ತಿತ್ತು. ಪುಣೆ-ಸಾಸ್ವಾದ್ ಮಾರ್ಗದಲ್ಲಿರುವ ಘಾಟ್‌ ಸೆಕ್ಷನ್'ನಲ್ಲಿ ಪ್ರಯಾಣಿಸುತ್ತಿದ್ದಾಗ ಶುಂಭಾಗಿ ಕಾರಿನ ಬಾನೆಟ್ ಮೇಲೆ ಕುಳಿತಿದ್ದಾಳೆ.

ಮದುವೆ ಸಮಾರಂಭವನ್ನು ಸ್ಮರಣೀಯವಾಗಿಸಿ ಕೊಳ್ಳುವ ಭರದಲ್ಲಿ ಎಡವಟ್ಟು ಮಾಡಿಕೊಂಡ ವಧು

ಆಕೆ ಮಧುವಿನ ಧಿರಿಸಿನಲ್ಲಿ ಚಲಿಸುತ್ತಿರುವ ಕಾರಿನ ಬಾನೆಟ್‌ ಮೇಲೆ ಕುಳಿತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆ ಕಾರಿನ ಬಾನೆಟ್ಮೇಲೆ ಕುಳಿತಿರುವ ದೃಶ್ಯವನ್ನು ಬೈಕಿನಲ್ಲಿದ್ದ ವ್ಯಕ್ತಿಯೊಬ್ಬ ಚಿತ್ರೀಕರಿಸಿದ್ದಾನೆ.

ಮದುವೆ ಸಮಾರಂಭವನ್ನು ಸ್ಮರಣೀಯವಾಗಿಸಿ ಕೊಳ್ಳುವ ಭರದಲ್ಲಿ ಎಡವಟ್ಟು ಮಾಡಿಕೊಂಡ ವಧು

ಈ ವೀಡಿಯೊ ವೈರಲ್ ಆದ ಕೂಡಲೇ ಪುಣೆ ಪೊಲೀಸರು ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿದ್ದಕ್ಕಾಗಿ ವಧು ಹಾಗೂ ಆಕೆಯ ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮದುವೆ ಸಮಾರಂಭವನ್ನು ಸ್ಮರಣೀಯವಾಗಿಸಿ ಕೊಳ್ಳುವ ಭರದಲ್ಲಿ ಎಡವಟ್ಟು ಮಾಡಿಕೊಂಡ ವಧು

ವಧು ಸೇರಿದಂತೆ ಸ್ಥಳದಲ್ಲಿದ್ದ ಯಾರೂ ಫೇಸ್ ಮಾಸ್ಕ್ ಧರಿಸದೇ ಇದ್ದ ಕಾರಣ ಕೋವಿಡ್ ನಿಯಮಗಳ ಉಲ್ಲಂಘನೆ ಪ್ರಕರಣವನ್ನು ಸಹ ದಾಖಲಿಸಲಾಗಿದೆ. ತನ್ನ ಮದುವೆ ಸಮಾರಂಭವನ್ನು ಸ್ಮರಣೀಯವಾಗಿಸಿಕೊಳ್ಳಲು ಮುಂದಾಗಿದ್ದ ವಧು ಕೊನೆಗೆ ಕಾನೂನು ಕುಣಿಕೆಯಲ್ಲಿ ಸಿಕ್ಕಿ ಬಿದ್ದಿದ್ದಾಳೆ.

ಮದುವೆ ಸಮಾರಂಭವನ್ನು ಸ್ಮರಣೀಯವಾಗಿಸಿ ಕೊಳ್ಳುವ ಭರದಲ್ಲಿ ಎಡವಟ್ಟು ಮಾಡಿಕೊಂಡ ವಧು

ವಿಪರ್ಯಾಸವೆಂದರೆ ಈ ಘಟನೆಯು ಸಹ ಆಕೆಯ ಜೀವನದ ಅವಿಸ್ಮರಣೀಯ ದಿನವಾಗಿದೆ. ಬೈಕಿನಲ್ಲಿ ಕುಳಿತು ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದ ವ್ಯಕ್ತಿಯ ವಿರುದ್ಧವೂ ಪುಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಪುಣೆಯ ಲೋನಿ ಕಲ್ಪೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್, ವಿಪತ್ತು ನಿರ್ವಹಣಾ ಕಾಯ್ದೆ ಸೆಕ್ಷನ್ 269 (ರೋಗ ಹರಡುವ ಅಪಾಯ), ಸೆಕ್ಷನ್ 188 (ಸಾಂಕ್ರಾಮಿಕ ಸಮಯದಲ್ಲಿ ಸರ್ಕಾರ ಘೋಷಿಸಿದ ನಿಯಮಗಳಿಗೆ ಅವಿಧೇಯತೆ), ಸೆಕ್ಷನ್ 279 (ವಾಹನ ಸ್ಟಂಟ್), ಸೆಕ್ಷನ್ 107 ( ಅಪರಾಧ ಮಾಡಲು ಪ್ರಚೋದನೆ), ಸೆಕ್ಷನ್ 336 (ಅಪಾಯ) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಮದುವೆ ಸಮಾರಂಭವನ್ನು ಸ್ಮರಣೀಯವಾಗಿಸಿ ಕೊಳ್ಳುವ ಭರದಲ್ಲಿ ಎಡವಟ್ಟು ಮಾಡಿಕೊಂಡ ವಧು

ಪ್ರಕರಣ ದಾಖಲಿಸಲಾಗಿದ್ದರೂ ಪೊಲೀಸರು ಇದುವರೆಗೂ ಯಾರನ್ನೂ ಬಂಧಿಸಿಲ್ಲ. ಆದರೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಭಾರತದಲ್ಲಿ ವಾಹನಗಳ ಸ್ಟಂಟ್‌ನಲ್ಲಿ ತೊಡಗುವುದು ಅಪರಾಧ. ಅಪಾಯಕಾರಿಯಾಗಿ ವಾಹನ ಚಾಲನೆ ಮಾಡುವುದು ಹಾಗೂ ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.

Most Read Articles

Kannada
English summary
FIR filed against bride for sitting on car bonnet. Read in Kannada.
Story first published: Wednesday, July 14, 2021, 17:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X