ನಟ ರಜನಿಕಾಂತ್, ಸಚಿನ್ ತೆಂಡೂಲ್ಕರ್ ಮೊದಲ ಕಾರುಗಳು ಇವೆ: ನೋಡಿದ್ರೆ ಆಶ್ಚರ್ಯವಾಗುತ್ತೆ!

ಎಷ್ಟೇ ಹೊಸ ಕಾರುಗಳನ್ನು ಖರೀದಿಸಿದರೂ ಮೊದಲ ಕಾರಿಗೆ ನಮ್ಮ ಹೃದಯದಲ್ಲಿ ವಿಶೇಷ ಸ್ಥಾನವಿರುತ್ತದೆ. ಸಿನಿಮಾ ಹಾಗೂ ಕ್ರಿಕೆಟ್ ತಾರೆಯರು ಅದಕ್ಕೆ ಹೊರತಲ್ಲ. ಕೆಲವು ಸೆಲೆಬ್ರಿಟಿಗಳ ಬಳಿಯಿದ್ದ ಕಾರುಗಳನ್ನು ನೋಡಿದರೆ ಖಂಡಿತ ಆಶ್ಚರ್ಯವಾಗುತ್ತದೆ. ನಟ ರಜನಿಕಾಂತ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಇತರೆ ತಾರೆಯರ ಫಸ್ಟ್ ಕಾರು ಯಾವುದೆಂದು ತಿಳಿಯೋಣ.

ಮೊದಲನೆಯದಾಗಿ ಕ್ರಿಕೆಟ್ ದೇವರು ಎಂದೇ ಖ್ಯಾತಿಗಳಿಸುವ ಸಚಿನ್ ತೆಂಡೂಲ್ಕರ್, ಮುಂಬೈನಲ್ಲಿ ಬಿಎಂಡಬ್ಲ್ಯೂ ಒಳಗೊಂಡಂತೆ ವಿವಿಧ ಐಷಾರಾಮಿ ಕಾರುಗಳಲ್ಲಿ ಸಂಚರಿಸುವಾಗ ಕಾಣಿಸಿಕೊಂಡಿದ್ದಾರೆ. ಆದರೆ ದಶಕಗಳ ಹಿಂದೆ ಸಚಿನ್, ತಮ್ಮ ಮೊದಲ ಕಾರಾಗಿ ಮಾರುತಿ 800 ಖರೀದಿಸಿದ್ದರು. ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ಇದನ್ನೇ ಬಳಕೆ ಮಾಡುತ್ತಿದ್ದರು. ಸ್ವಲ್ಪ ದಿನದ ಬಳಿಕ, ಮಾರಾಟ ಮಾಡಿದ್ದರು. ಸದ್ಯ, ಆ ಮಾರುತಿ 800ನ್ನು ಪುನಃ ಪಡೆಯಲು ಹಲವು ವರ್ಷಗಳಿಂದ ಯತ್ನಿಸುತ್ತಿದ್ದು, ಫಲಪ್ರದವಾಗಿಲ್ಲ.

ನಟ ರಜನಿಕಾಂತ್, ಸಚಿನ್ ತೆಂಡೂಲ್ಕರ್ ಮೊದಲ ಕಾರುಗಳು ಇವೆ: ನೋಡಿದ್ರೆ ಆಶ್ಚರ್ಯವಾಗುತ್ತೆ!

ಮಾರುತಿ 800 ಬಗ್ಗೆ ಒಂದಷ್ಟು ವಿಚಾರಗಳನ್ನು ಹೇಳುವುದಾದರೆ, ಇದು ದೇಶದ ಮಧ್ಯಮ ವರ್ಗದ ಜನರ ಕನಸಿನ ಕಾರಾಗಿತ್ತು. 1983ರಲ್ಲಿ ಬಿಡುಗಡೆಯಾದ ಈ ಕಾರು, 2014ರವರೆಗೆ ರಾಜನಾಗಿ ಅಬ್ಬರಿಸಿತ್ತು. ಅತ್ಯಂತ ಕಡಿಮೆ ಬೆಲೆಯನ್ನು ಪಡೆದಿದ್ದರಿಂದ ಎಲ್ಲರೂ ಇಷ್ಟಪಡುತ್ತಿದ್ದರು. ಮಾರಾಟ ಸ್ಥಗಿತಗೊಂಡಾಗ ಮಾರುತಿ 800 ರೂ.2.06 ರಿಂದ ರೂ.2.38 ಲಕ್ಷ ಬೆಲೆಯನ್ನು ಹೊಂದಿತ್ತು. 796 ಸಿಸಿ ಎಂಜಿನ್ ಹೊಂದಿದ್ದ ಈ ಕಾರು, 14.0 - 16.1 kmpl ಮೈಲೇಜ್ ನೀಡುತ್ತಿತ್ತು.

ಸರಳ ಜೀವನಶೈಲಿ ಹಾಗೂ ತಮ್ಮ ಅದ್ಬುತ ನಟನೆಯಿಂದ ಸೂಪರ್ ಸ್ಟಾರ್ ರಜನಿಕಾಂತ್ ಅವರು ವಿಶ್ವಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇತ್ತೀಚಿಗಷ್ಟೇ ಬಹುಕಾಲದಿಂದ ಬಳಕೆ ಮಾಡುತ್ತಿದ್ದ ಟೊಯೊಟಾ ಇನ್ನೋವಾಕ್ಕೆ ಗುಡ್ ಬೈ ಹೇಳಿ, ಐಷಾರಾಮಿ ಎಸ್‌ಯುವಿಯೊಂದನ್ನು ಉಪಯೋಗಿಸುತ್ತಿದ್ದಾರೆ. ರಜನಿಕಾಂತ್ ತಮ್ಮ ನಿವಾಸದಲ್ಲಿ ಮೊದಲ ಕಾರದ 'ಪ್ರೀಮಿಯರ್ ಪದ್ಮಿನಿ' ಜೊತೆಗೆ ನಿಂತಿರುವ ಫೋಟೋವನ್ನು ಕುಟುಂಬಸ್ಥರು ಪೋಸ್ಟ್ ಮಾಡಿದ್ದರು.

ನಟ ರಜನಿಕಾಂತ್, ಸಚಿನ್ ತೆಂಡೂಲ್ಕರ್ ಮೊದಲ ಕಾರುಗಳು ಇವೆ: ನೋಡಿದ್ರೆ ಆಶ್ಚರ್ಯವಾಗುತ್ತೆ!

ಈ ಕಾರು, ಈಗಲೂ ಸುಸ್ಥಿತಿಯಲ್ಲಿದೆ. ಪ್ರೀಮಿಯರ್ ಪದ್ಮಿನಿಯನ್ನು ಫಿಯೆಟ್ 1100 ಎಂದು ಸಹ ಕರೆಯಲಾಗುತ್ತದೆ. ಇಟಲಿ ದೇಶದ ಕಂಪನಿ 1953ರಲ್ಲಿ ಭಾರತ ಸೇರಿ ಪ್ರಪಂಚದ ದೊಡ್ಡ ದೇಶಗಳಲ್ಲಿ ಫಿಯೆಟ್ ಕಾರನ್ನು ಬಿಡುಗಡೆ ಮಾಡಿತ್ತು. ಇದು ಹಲವು ದಶಕಗಳ ಪ್ರತಿಯೊಬ್ಬರ ಹಾಟ್ ಫೆವರೇಟ್ ಆಗಿತ್ತು. ಆ ಕಾಲದಲ್ಲಿಯೇ ರೂ.10 ಲಕ್ಷ ಬೆಲೆಯನ್ನು ಹೊಂದಿತ್ತು. ಜೊತೆಗೆ ಇದರ 1100 ಸಿಸಿ ಎಂಜಿನ್, 14.6 kmpl ಮೈಲೇಜ್ ನೀಡುತ್ತಿತ್ತು.

ಬಾಲಿವುಡ್ ಚಿತ್ರರಂಗದ ಒಂದು ಕಾಲದ ಖ್ಯಾತ ನಟಿ ಕಾಜಲ್, ಬಿಎಂಡಬ್ಲ್ಯೂ ಎಕ್ಸ್7 ಕಾರಿನಲ್ಲಿ ಆಗಾಗ ತಮ್ಮ ಕುಟುಂಬದೊಂದಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಆಕೆಯ ಮೊದಲ ಕಾರು ಯಾವುದೆಂದು ತಿಳಿದುಕೊಳ್ಳುವ ಕುತೂಹಲ ಹಲವರಲ್ಲಿ ಇರುತ್ತದೆ. 'ಮಾರುತಿ 1000' ಕಾಜಲ್ ರ ಫಸ್ಟ್ ಕಾರು. 90ರ ದಶಕದಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದ ಈ ಕಾರು, ರೂ.4 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿತ್ತು. ಇದು ಮಾರುತಿ ಕಂಪನಿಯ ಪ್ರಥಮ ಪ್ರೀಮಿಯಂ ಸೆಡಾನ್ ಆಗಿತ್ತು.

ನಟ ರಜನಿಕಾಂತ್, ಸಚಿನ್ ತೆಂಡೂಲ್ಕರ್ ಮೊದಲ ಕಾರುಗಳು ಇವೆ: ನೋಡಿದ್ರೆ ಆಶ್ಚರ್ಯವಾಗುತ್ತೆ!

ಕರಾವಳಿ ಮೂಲದ ಬಹುಭಾಷಾ ನಟಿ ದೀಪಿಕಾ ಪಡುಕೋಣೆ ಮರ್ಸಿಡಿಸ್ ಮೇಬ್ಯಾಕ್ ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ದೀಪಿಕಾ, ತಮ್ಮ ಮೊದಲ ಕಾರಾಗಿ ದುಬಾರಿ ಬೆಲೆಯ ಆಡಿ Q7 ಕಾರನ್ನು ಖರೀದಿ ಮಾಡಿದ್ದರು. ಇದು, ಹಳೆಯ ಜನರೇಷನ್ ಕಾರಾಗಿದ್ದು, 3.0 ಲೀಟರ್ V6 ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ ಹೊಂದಿದ್ದು, 240 bhp ಪವರ್ ಹಾಗೂ 550 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿತ್ತು.

ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ, ಬಾಲಿವುಡ್ ನಟಿಯರಲ್ಲೇ 'ರೋಲ್ಸ್ ರಾಯ್ಸ್ ಘೋಸ್ಟ್' ಕೊಂಡುಕೊಂಡ ಮೊದಲಿಗರು. ನಿಕ್ ಜಾನ್ಸ್ ಅವರನ್ನು ವಿವಾಹವಾದ ಬಳಿಕ ಅಮೆರಿಕದಲ್ಲಿ ನೆಲೆಸಿದ್ದಾರೆ. ಅಲ್ಲಿ ಮರ್ಸಿಡಿಸ್ ಮೇಬ್ಯಾಕ್ S600 ಲಿಮೋಸಿನ್ ಕಾರಿನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಆಕೆಯು ತನ್ನ ಫಸ್ಟ್ ಕಾರಾಗಿ, ಮರ್ಸಿಡಿಸ್-ಬೆನ್ಜ್ ಎಸ್ ಕ್ಲಾಸ್ ಸೆಡಾನ್ ಖರೀದಿಸಿದ್ದರು ಎಂಬುದು ವಿಶೇಷ. ಈ ಕಾರನ್ನು ಮುಂಬೈನಲ್ಲಿ ಹಲವು ವರ್ಷಗಳ ಕಾಲ ತಮ್ಮ ಸಂಚಾರಕ್ಕೆ ಬಳಕೆ ಮಾಡಿದ್ದರು.

More from DriveSpark

Article Published On: Wednesday, April 5, 2023, 15:43 [IST]
English summary
First cars famous indian celebrities details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+