Driverless Metro: ಚೀನಾದಿಂದ ಬೆಂಗಳೂರಿಗೆ ಬಂದ ಮೊದಲ ಚಾಲಕ ರಹಿತ ಮೆಟ್ರೋ.. ಸಂಚಾರ ಯಾವಾಗ?

ಬೆಂಗಳೂರು ಶೀಘ್ರದಲ್ಲಿಯೇ ಚಾಲಕ ರಹಿತ ಮೆಟ್ರೋಗೆ ಸಾಕ್ಷಿಯಾಗಲಿದೆ. ಚೀನಾದಿಂದ ಬೆಂಗಳೂರಿನ ಹೆಬ್ಬಗೋಡಿಯ ನಮ್ಮ ಮೆಟ್ರೋ (Namma Metro) ಡಿಪೋಗೆ ಮೊದಲ ಚಾಲಕ ರಹಿತ ಮೆಟ್ರೋ ರೈಲು ಬುಧವಾರ ಬೆಳಗ್ಗೆ ಆಗಮಿಸಿದೆ. ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಮಾಹಿತಿ ನೀಡಿದೆ.

ಆರ್‌ವಿ ರಸ್ತೆ ಮತ್ತು ಬೊಮ್ಮಸಂದ್ರವನ್ನು ಸಂಪರ್ಕಿಸುವ 19.15 ಕಿಲೋಮೀಟರ್ ಉದ್ದದ ಹಳದಿ ಮಾರ್ಗ (Yellow Line)ದಲ್ಲಿ 6 ಬೋಗಿಗಳನ್ನು ಒಳಗೊಂಡ ಈ ಚಾಲಕ ರಹಿತ ಮೆಟ್ರೋ ರೈಲನ್ನು ಪ್ರಾಯೋಗಿಕ ಸಂಚಾರಕ್ಕೆ ಬಳಕೆ ಮಾಡಲಾಗುತ್ತದೆ. ಚೀನಾದ ಸರ್ಕಾರಿ ಸ್ವಾಮ್ಯದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋ ಲಿಮಿಟೆಡ್ ಇದನ್ನು ತಯಾರಿಸಿದ್ದು, ಬಿಎಂಆರ್‌ಸಿಎಲ್‌ಗೆ 216 ಬೋಗಿ (ಕೋಚ್‌)ಗಳನ್ನು ಪೂರೈಸಲು 2019ರಲ್ಲಿ ರೂ.1,578 ಕೋಟಿ ಮೊತ್ತದ ಬೃಹತ್ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು.

First driverless, China Metro Train Arrives in Bengaluru: Runs In Yellow Line

ಈ ರೈಲನ್ನು ಹೊತ್ತ ಹಡುಗು ಜನವರಿ 24ರಂದು ಚೀನಾದಿಂದ ಹೊರಟು, ಫೆಬ್ರವರಿ 6ರಂದು ಚೆನ್ನೈ ಬಂದರಿಗೆ ಬಂದು ತಲುಪಿತ್ತು. ಆದರೆ, ಕಸ್ಟಮ್ಸ್ ಅಧಿಕಾರಿಗಳು ಅನುಮತಿ ನೀಡಲು ಕೆಲವು ದಿನಗಳ ಸಮಯಾವಕಾಶ ತೆಗೆದುಕೊಂಡು ಕಾರಣ, ಬೆಂಗಳೂರಿಗೆ ತಲುಪುವುದು ಸ್ವಲ್ಪ ತಡವಾಯಿತು. ಹೆಬ್ಬಗೋಡಿಯ ನಮ್ಮ ಮೆಟ್ರೋ ಡಿಪೋದಲ್ಲಿ ಚೀನಾ ಎಂಜಿನಿಯರ್‌ಗಳ ಮಾರ್ಗದರ್ಶನದಲ್ಲಿ ಈ ರೈಲಿನ ಬೋಗಿಗಳನ್ನು ಜೋಡಿಸಲಾಗುತ್ತದೆ.

ಆ ಬಳಿಕ, 32 ವಿವಿಧ ಪರೀಕ್ಷೆ (ಟೆಸ್ಟ್)ಗಳಿಗೆ ಒಳಪಡಿಸಲಾಗುತ್ತದೆ. 8 - 10 ಸ್ಟಾಟಿಕ್ ಟೆಸ್ಟ್, 7 - 8 ಇಂಟರ್ಫೇಸ್ ಟೆಸ್ಟ್ ಜೊತೆಗೆ ಹಲವು ಡೈನಾಮಿಕ್ ಟೆಸ್ಟ್ ನಡೆಸಿ, ಲಕ್ನೋ ಮೂಲದ ರಿಸರ್ಚ್ ಡಿಸೈನ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (RDSO) ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮೇನ್‌ಲೈನ್‌ (ಮುಖ್ಯ ಮಾರ್ಗ)ನಲ್ಲಿ ಪರೀಕ್ಷೆಯನ್ನು ಜರುಗಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಹೇಳಿದ್ದಾರೆ.

ಚಾಲಕ ರಹಿತ ಮೆಟ್ರೋ ರೈಲಿನ ಪ್ರಾಯೋಗಿಕ ಓಡಾಟದ ಪರೀಕ್ಷಾ ಫಲಿತಾಂಶವನ್ನು ರೈಲ್ವೆ ಸುರಕ್ಷತೆ ವಿಭಾಗದ ಮುಖ್ಯ ಆಯುಕ್ತರಿಗೆ (Chief Commissioner of Railway Safety - CCRS) ವರದಿ ಮಾಡಲಾಗುವುದು. ನಂತರ ತಾಂತ್ರಿಕ ಅನುಮತಿಗೆ ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇಡೀ ಪ್ರಕ್ರಿಯೆ ಮುಗಿಯಲು 5 - 6 ತಿಂಗಳು ಹಿಡಿಯುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ

5 ಮಂದಿ ಚೀನಿ ತಂತ್ರಜ್ಞರು, ಚಾಲಕ ರಹಿತ ಮೆಟ್ರೋ ರೈಲಿನ ಜೋಡಣೆ ಹಾಗೂ ಪರೀಕ್ಷೆಗಳ ಕುರಿತು ಮಾರ್ಗದರ್ಶನ ನೀಡಲು ಈಗಾಗಲೇ ಭಾರತದ ವೀಸಾವನ್ನು ಪಡೆದಿದ್ದಾರೆ. ಇನ್ನೂ 10 ಜನ ತಾಂತ್ರಿಕ ನಿಪುಣರು ಫೆಬ್ರವರಿ ಅಂತ್ಯದೊಳಗೆ ವೀಸಾ ಪಡೆಯುವ ನೀರಿಕ್ಷೆಯಿದ್ದು, ಉಳಿದ ಕಾರ್ಯಗಳಲ್ಲಿ ಭಾಗವಹಿಸಲಿದ್ದಾರೆ. ಹಳದಿ ಮಾರ್ಗದಲ್ಲಿ ಹಳಿ ನಿರ್ಮಾಣ ಸೇರಿದಂತೆ ಇತರೆ ಕಾಮಗಾರಿಗಳು ಬಹಳ ಹಿಂದೆಯೇ ಮುಕ್ತವಾಗಿದ್ದು, ಪ್ರಾಯೋಗಿಕ ಸಂಚಾರ ಆರಂಭಿಸಲು ರೈಲು ಲಭ್ಯವಿರಲಿಲ್ಲ.

ಬಿಇಎಂಎಲ್ (BEML) ಬೋಗಿ (ಕೋಚ್)ವೊಂದಕ್ಕೆ ರೂ.9.28 ಕೋಟಿ ವೆಚ್ಚದಲ್ಲಿ ಬಿಡ್‌ (ಹರಾಜು) ಆಹ್ವಾನಿಸಿತ್ತು. ಚೀನಾದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋ ಲಿಮಿಟೆಡ್ ಪ್ರತಿ ಜೋಗಿಯನ್ನು ರೂ.7.31 ಕೋಟಿ ವೆಚ್ಚದಲ್ಲಿ ತಯಾರಿಸಿಕೊಡುವುದಾಗಿ ಹೇಳಿ ಬಿಡ್‌ನ್ನು ಗೆದ್ದುಕೊಂಡಿತ್ತು. ರೈಲಿನ ಬೋಗಿಗಳು ಹೆಚ್ಚು ಅತ್ಯಾಧುನಿಕವಾಗಿವುದರಿಂದ ಈ ಕಂಪನಿಯನ್ನು ಆಯ್ಕೆ ಮಾಡಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಚೀನಾದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋ ಲಿಮಿಟೆಡ್ ಒಪ್ಪಂದದ ಭಾಗವಾಗಿ 208 ಬೋಗಿಗಳನ್ನು ಉತ್ಪಾದಿಸಲು ಸ್ಥಳೀಯ ಪಾಲುದಾರ ಕಂಪನಿಯನ್ನು ಹುಡುಕಲು ಸಾಕಷ್ಟು ಕಷ್ಟಪಟ್ಟಿತು. ಅಂತಿಮವಾಗಿ ಪಶ್ಚಿಮ ಬಂಗಾಳ ಮೂಲದ ಟಿಟಾಗರ್ ವ್ಯಾಗನ್ಸ್ ಲಿಮಿಟೆಡ್‌ ಜೊತೆಯಾಯಿತು. ಆದರೆ, ಭಾರತ ಹಾಗೂ ಚೀನಾ ನಡುವೆ ಹದಗೆಟ್ಟ ಸಂಬಂಧಗಳ ಪರಿಣಾಮ ಯೋಜನೆಯು ಮತ್ತಷ್ಟು ವಿಳಂಬವಾಯಿತು.

ಬಿಎಂಆರ್‌ಸಿಎಲ್‌ ಮೇ ವೇಳೆಗೆ ಇನ್ನೂ 2 ಚಾಲಕ ರಹಿತ ಮೆಟ್ರೋ ರೈಲುಗಳನ್ನು ಪಡೆಯಲಿದೆ. ಆ ನಂತರ ಪ್ರತಿ ತಿಂಗಳು 2 ರೈಲುಗಳು ಸೇರ್ಪಡೆಯಾಗಲಿದೆ. ಹಳದಿ ಮಾರ್ಗದಲ್ಲಿ ದೈನಂದಿನ ಸಂಚಾರವನ್ನು ಶುರು ಮಾಡಲು 8 ರೈಲುಗಳ ಅಗತ್ಯವಿದೆ. ಬಹುತೇಕ 2024ರ ಮೂರನೇ ತ್ರೈಮಾಸಿಕದ ವೇಳೆಗೆ ಓಡಾಟ ಆರಂಭವಾಗಬಹುದು. ಇದರಿಂದ ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಬಹೆಗರಿಯುತ್ತದೆ.

Article Published On: Thursday, February 15, 2024, 12:37 [IST]
English summary
First driverless china metro train arrives in bengaluru runs in yellow line
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+