ವಿಮೆ ಸಂಸ್ಥೆಗಳನ್ನು ನಷ್ಟಕ್ಕೆ ಸಿಲುಕಿಸಿದ 5 ಭೀಕರ ಅಪಘಾತಗಳು
ನಿಮ್ಮ ಕಾರಿಗೂ ವಿಮೆ ಇದೆಯೇ ? ಇಲ್ಲವಾದ್ದಲ್ಲಿ ಈಗಲೇ ಮಾಡಿಸಿಕೊಳ್ಳಿರಿ. ಯಾಕೆಂದರೆ ಗಾಡಿಗೆ ವಿಮೆಯಿದ್ದಲ್ಲಿ ಅಪಘಾತವಾದಂತಹ ಸಂದರ್ಭದಲ್ಲಿ ಪರಿಪೂರ್ಣ ರಕ್ಷಣೆ ಒದಗಿಸಲಿದೆ. ಹಾಗೊಂದು ವೇಳೆ ಕೋಟಿ ಗಟ್ಟಲೆ ಖರ್ಚು ಮಾಡಿದ ಸೂಪರ್ ಕಾರುಗಳಿಗೆ ಇಂತಹ ದುರ್ಗತಿ ಎದುರಾದ್ದಲ್ಲಿ ಪರಿಸ್ಥಿತಿ ಹೇಗಿರಬಹುದು ?
Also Read: ಸೇಲ್ಸ್ ಮ್ಯಾನ್ ಎಡವಟ್ಟು; ಶೋ ರೂಂ ಒಳನುಗ್ಗಿದ ಕಾರು
ಇಂತಹ ಆಕಸ್ಮಿಕ ದುರಂತಗಳಿಂದಾಗಿ ವಿಮೆ ಸಂಸ್ಥೆಗಳು ಕೋಟಿಗಟ್ಟಲೆ ರುಪಾಯಿಗಳ ನಷ್ಟವನ್ನು ಎದುರಿಸಬೇಕಾಗುತ್ತದೆ. ಇಂತಹ ಕೆಲವು ಮಹತ್ವದ ಅಪಘಾತ ಘಟನೆಗಳ ಬಗ್ಗೆ ನಾವಿಲ್ಲಿ ಚರ್ಚಿಸಲಿದ್ದೇವೆ.

ಫೆರಾರಿ 488 ಜಿಟಿಬಿ
ಅಂದೊಂದು ದಿನ ಫ್ಲೋರಿಡಾದಲ್ಲಿ ಭಾರಿ ಮಳೆ ಸುರಿಯುತ್ತಿದ್ದ ವೇಳೆ ಕೋಟಿ ಬೆಲೆ ಬಾಳುವ ಫೆರಾರಿ 488 ಜಿಟಿಬಿ ಕಾರು ಅವಘಡಕ್ಕೀಡಾಗಿತ್ತು. ಆದರೆ ಅದೃಷ್ಟವಶಾತ್ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದರು.

ಫೆರಾರಿ 488 ಜಿಟಿಬಿ
ಇಲ್ಲಿ ಸಂಭವಿಸಿದ ಅಪಘಾತದಿಂದಾಗಿ ಫೆರಾರಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿತ್ತು. ಇದರಿಂದಾಗಿ ವಿಮೆ ಸಂಸ್ಥೆಯು ರಿಪೇರಿ ಕೆಲಸಕ್ಕಾಗಿ ಭಾರಿ ಮೊತ್ತವನ್ನು ವ್ಯಯಿಸಿತ್ತು.

ಆಸ್ಟನ್ ಮಾರ್ಟಿನ್
ಕ್ಲಾಸಿಕ್ ರೇಸ್ ರೇಸ್ ವೊಂದರಲ್ಲಿ ಆಸ್ಟನ್ ಮಾರ್ಟಿನ್ ಗಳಂತಹ ಬೆಲೆ ಬಾಳುವ ಕಾರುಗಳು ಹಾನಿಯಾನಿದ್ದವು.

ಆಸ್ಟನ್ ಮಾರ್ಟಿನ್
ಇಲ್ಲಿ ವಿಮೆ ಸಂಸ್ಥೆ ಎಷ್ಟು ನಷ್ಟ ಭರಿಸಿದೆ ಎಂಬುದಕ್ಕೆ ಮಾಹಿತಿಗಳಿಲ್ಲ. ಆದರೆ ನಡೆದಿರುವ ಘಟನೆ ಮಾತ್ರ ತುಂಬಾನೇ ಬೇಸರದಾಯಕವಾಗಿದೆ.

ಲಾಫೆರಾರಿ
ಇದು ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಅಪಘಾತ ಪ್ರಕರಣಗಳಲ್ಲಿ ಒಂದಾಗಿದೆ. ಹಂಗೇರಿಯಿಂದ ಈ ಸುದ್ದಿ ವರದಿಯಾಗಿದೆ.

ಲಾಫೆರಾರಿ
963 ಅಶ್ವಶಕ್ತಿ ಉತ್ಪಾದಿಸುವ ಈ ಹೈಬ್ರಿಡ್ ಹೈಪರ್ ಕಾರು ನಿಯಂತ್ರಣ ತಪ್ಪಿ ನೇರವಾಗಿ ವಾಹನ ನಿಲುಗಡೆಯ ಪ್ರದೇಶಕ್ಕೆ ನುಗಿತ್ತು.

ಲಂಬೋರ್ಗಿನಿ ಅವೆಂಟಡೊರ್
ಇದಕ್ಕೆ ಸಮಾನವಾದ ಸುದ್ದಿ ಚೀನಾದಿಂದ ವರದಿಯಾಗಿದ್ದು, ಚಲಿಸುವ ಟ್ರಕ್ ಗೆ ಢಿಕ್ಕಿಯಾಗಿತ್ತು ಎಂಬುದು ತಿಳಿದು ಬಂದಿದೆ.

ಲಂಬೋರ್ಗಿನಿ ಅವೆಂಟಡೊರ್
ಈ ಘಟನೆಯಲ್ಲೂ ಅದೃಷ್ಟ ಸಾಥ್ ಕೊಟ್ಟಿದ್ದರಿಂದ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದರು.

ಫೆರಾರಿ ಎಫ್‌ಎಕ್ಸ್‌ಎಕ್ಸ್
ಪ್ರಸ್ತುತ ಅಪಘಾತವು ಇತ್ತೀಚೆಗಷ್ಟೇ ಫೆರಾರಿ ಮೊನ್ಜಾ ಟ್ರ್ಕಾಕ್ ನಲ್ಲಿ ನಡದೆ ಕಾರ್ಯಕ್ರಮದಲ್ಲಿ ಸಂಭವಿಸಿತ್ತು.

ಫೆರಾರಿ ಎಫ್‌ಎಕ್ಸ್‌ಎಕ್ಸ್
ಇಲ್ಲೂ ವಿಮೆ ನೆರವು ಇದ್ದಿದ್ದರಿಂದ ಫೆರಾರಿ ಚಾಲಕ ಭಾರಿ ನಷ್ಟದಿಂದ ಪಾರಾಗಿದ್ದಾರೆ.

ಮಲೇಷ್ಯಾ ಬೈಕ್ ಅವಘಡ ಬೆಂಗಳೂರಿಗೆ ಲಿಂಕ್; ವಾಟ್ಸಪ್‌ನಲ್ಲಿ ತಪ್ಪು ಸಂದೇಶ ಮುಂದಕ್ಕೆ ಓದಿ


Click it and Unblock the Notifications








