ಫ್ಯಾನ್ಸಿ ನಂಬರ್‌ಗಾಗಿ ರೂ. 28 ಲಕ್ಷ ಖರ್ಚು ಮಾಡಿದ ಖ್ಯಾತ ಗಾಯಕ...ಹಾಗಾದ್ರೆ ಕಾರ್ ಬೆಲೆ ಎಷ್ಟು?

ಭಾರತದ ಜನಪ್ರಿಯ ಗಾಯಕ 'ಯೋ ಯೋ ಹನಿ ಸಿಂಗ್' ಬಗ್ಗೆ ಸಂಗೀತ ಪ್ರಿಯರಿಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ಈತ ಭಾರತದ ಪ್ರಸಿದ್ಧ ರಾಪರ್‌ಗಳಲ್ಲಿ ಒಬ್ಬರು. ಉತ್ತಮ ಗಾಯಕ, ರಾಪರ್, ಗೀತರಚನೆಕಾರ ಮಾತ್ರವಲ್ಲದೆ ನಟ ಕೂಡ. ಇತ್ತೀಚೆಗೆ ಹನಿ ಸಿಂಗ್ ರೂ. 28 ಲಕ್ಷ ನೀಡಿ ಫ್ಯಾನ್ಸಿ ನಂಬರ್ ಪ್ಲೇಟ್ ಖರೀದಿಸಿದ್ದಾರೆ.

ವರದಿಗಳ ಪ್ರಕಾರ, ಹನಿ ಸಿಂಗ್ ಅವರ ಆಡಿ ಆರ್ 8 ಸೂಪರ್ ಕಾರನ್ನು ಎಂಎಚ್ 04 ಎಆರ್ 8 ನೋಂದಣಿ ಸಂಖ್ಯೆಗಾಗಿ ಬರೋಬ್ಬರಿ ರೂ. 28 ಲಕ್ಷವನ್ನು ಪಾವತಿಸಿದ್ದಾರೆ. ಇದು ಮಹಾರಾಷ್ಟ್ರದಲ್ಲಿ ನೋಂದಾಯಿಸಲ್ಪಟ್ಟಿದೆ ಎಂಬುದು ನಮಗೆ ಸ್ಪಷ್ಟವಾಗಿದೆ. ಈ ಕುರಿತು ವಿಡಿಯೋವೊಂದರಲ್ಲಿ ಮಾತನಾಡಿರುವ ಅವರು ತಮ್ಮ ಸೂಪರ್ ಕಾರಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಿರುವುದಾಗಿ ಹೇಳಿದ್ದಾರೆ. ಇದೇ ಲೇಖನದಲ್ಲಿ ಈ ಕುರಿತ ವೀಡಿಯೊವನ್ನು ಸಹ ನೋಡಬಹುದು.

ಫ್ಯಾನ್ಸಿ ನಂಬರ್‌ಗಾಗಿ ರೂ. 28 ಲಕ್ಷ ಖರ್ಚು ಮಾಡಿದ ಖ್ಯಾತ ಗಾಯಕ...ಹಾಗಾದ್ರೆ ಕಾರ್ ಬೆಲೆ ಎಷ್ಟು?

ಹನಿ ಸಿಂಗ್ ಅವರ ಗ್ಯಾರೇಜ್ ಅನೇಕ ದುಬಾರಿ ಕಾರುಗಳನ್ನು ಹೊಂದಿದೆ. ಆಡಿ ಕ್ಯೂ5, ಕ್ಯೂ7, ಜಾಗ್ವಾರ್ ಎಕ್ಸ್ ಎಫ್ ನಂತಹ ಅತ್ಯಂತ ದುಬಾರಿ ಕಾರುಗಳನ್ನು ಅವರ ಗ್ಯಾರೇಜ್‌ನಲ್ಲಿ ನೋಡಬಹುದು. ಹನಿಸಿಂಗ್ ಅವರ ಗ್ಯಾರೇಜ್‌ನಲ್ಲಿರುವ ಅತ್ಯಂತ ದುಬಾರಿ ಕಾರುಗಳಲ್ಲಿ 'ಆಡಿ ಆರ್8' ಕೂಡ ಒಂದಾಗಿದೆ. ಪ್ರಸ್ತುತ ಕಂಪನಿಯು ಈ ಮಾದರಿಯ ಉತ್ಪಾದನೆಯನ್ನು ಸ್ಥಗಿತಗೊಳಿಸಿದ್ದರೂ ಇದು ಇನ್ನೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೆಚ್ಚಿನ ಸೆಲೆಬ್ರಿಟಿಗಳು ಬಯಸುವ ಅತ್ಯಂತ ದುಬಾರಿ ಮತ್ತು ಸೂಪರ್ ಕಾರು ಇದಾಗಿದೆ.

ಕಪ್ಪು ಬಣ್ಣದಲ್ಲಿರುವ ಹನಿ ಸಿಂಗ್ ಅವರ ಆಡಿ ಆರ್8 ನೋಡಲು ತುಂಬಾ ಆಕರ್ಷಕವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ಸುಮಾರು 2.30 ಕೋಟಿ ರೂ. (ಎಕ್ಸ್ ಶೋ ರೂಂ) ಆಗಿದೆ. ಈ ಸೂಪರ್ ಕಾರು ಅತ್ಯುತ್ತಮ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, ಇದು ಆಸನಗಳ ಮುಂದೆ ಮತ್ತು ಹಿಂದೆ ಶೇಖರಣಾ ವಿಭಾಗಗಳನ್ನು ಹೊಂದಿದೆ. ಆಡಿ R8 2 ಬಾಗಿಲು ನಾಲ್ಕು ಆಸನಗಳ ಕಾರಾಗಿದ್ದು, ಇದರಲ್ಲಿ ನಾಲ್ಕು ಜನ ಮಾತ್ರ ಪ್ರಯಾಣಿಸಬಹುದು.

ಫ್ಯಾನ್ಸಿ ನಂಬರ್‌ಗಾಗಿ ರೂ. 28 ಲಕ್ಷ ಖರ್ಚು ಮಾಡಿದ ಖ್ಯಾತ ಗಾಯಕ...ಹಾಗಾದ್ರೆ ಕಾರ್ ಬೆಲೆ ಎಷ್ಟು?

ಈ ಕಾರು ಅತ್ಯಾಕರ್ಷಕ ವಿನ್ಯಾಸವನ್ನು ಮಾತ್ರವಲ್ಲದೆ ಹಲವು ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿದೆ. ಉತ್ತಮ ಕಾರ್ಯಕ್ಷಮತೆಯನ್ನು ಒದಗಿಸಲು ಇದನ್ನು ಸ್ಪೋರ್ಟಿಯಾಗಿ ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ ಕಾರ್ಯಕ್ಷಮತೆಯ ದೃಷ್ಟಿಯಿಂದ ಇದನ್ನು ವಿಮರ್ಶಿಸುವುದು ಅಸಾಧ್ಯ. ಹಾಗಾಗಿಯೇ ಶ್ರೀಮಂತರು ಇಂತಹ ಕಾರುಗಳನ್ನು ಮುಗಿಬಿದ್ದು ಕೊಳ್ಳುತ್ತಾರೆ. ಅದರಲ್ಲೂ ಆಡಿ ಆರ್8 ಕಾರಿಗೆ ತುಂಬಾ ಕ್ರೇಜ್ ಇದೆ. ಇದರ ಬೆಲೆಯೇ ಕೋಟಿಗಟ್ಟಲೇ ಇದ್ದರೆ ಇದರ ಫ್ಯಾನ್ಸಿ ನಂಬರ್‌ಗಳಿಗೆ ವ್ಯಯಿಸುವ ಹಣ ಸಾಮಾನ್ಯರನ್ನು ಹೆಬ್ಬೇರಿಸುವಂತೆ ಮಾಡುತ್ತಿದೆ.

ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ ಹನಿ ಸಿಂಗ್, ಒಂದು ಕಾಲದಲ್ಲಿ ದುಬಾರಿ ಕಾರುಗಳನ್ನು ಖರೀದಿಸಲು ಇಷ್ಟವಿತ್ತು. ಆದರೆ ನಂತರ ಈ ಆಸಕ್ತಿ ಕ್ರಮೇಣ ಕಡಿಮೆಯಾಯಿತು. ಕಾರುಗಳನ್ನು ಕೊಳ್ಳುವುದರಲ್ಲಿ ಎಷ್ಟು ಆಸಕ್ತಿ ಇದೆಯೋ ಅಷ್ಟೇ ಆಸಕ್ತಿ ಆ ಕಾರುಗಳಿಗೆ ನಂಬರ್ ಪ್ಲೇಟ್ ಆಯ್ಕೆ ಮಾಡಿಕೊಳ್ಳುವುದರಲ್ಲಿಯೂ ಇದೆ. ಈ ಕಾರಣಕ್ಕಾಗಿಯೇ ಅವರು ತಮ್ಮ ಆಡಿ R8 ಕಾರಿಗೆ ಬರೋಬ್ಬರಿ 28 ಲಕ್ಷ ರೂ. ಖರ್ಚು ಮಾಡಲಾಗಿದೆ.

ಕೆಲವು ದಿನಗಳಿಂದ ಅನಾರೋಗ್ಯದ ಕಾರಣ ಈಗ ಕಾರುಗಳನ್ನು ಖರೀದಿಸುತ್ತಿಲ್ಲ. ಈಗಾಗಲೇ ತಮ್ಮ ಗ್ಯಾರೇಜ್‌ನಲ್ಲಿದ್ದ ಹಲವು ಕಾರುಗಳನ್ನು ಮಾರಾಟ ಮಾಡಿರುವುದಾಗಿ ಹನಿ ಸಿಂಗ್ ಹೇಳಿದ್ದಾರೆ. ಈಗ ಡ್ರೈವಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಸೆಲೆಬ್ರಿಟಿಗಳು ತಮ್ಮ ಕಾರುಗಳ ಫ್ಯಾನ್ಸಿ ನಂಬರ್‌ಗಳಿಗಾಗಿ ದೊಡ್ಡ ಮೊತ್ತದ ಹಣ ವ್ಯಯಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ಕಥೆಗಳನ್ನು ನಾವು ಹಲವು ಬಾರಿ ಕೇಳಿದ್ದೇವೆ. ಈ ಹಿಂದೆ, ಜೂನಿಯರ್ ಎನ್‌ಟಿಆರ್ ಅವರು ತಮ್ಮ ಲ್ಯಾಂಬೋರ್ಗಿನಿ ಉರಸ್ ಕಾರಿನ ಫ್ಯಾನ್ಸಿ ನಂಬರ್‌ಗಾಗಿ ರೂ. 17 ಲಕ್ಷ ಖರ್ಚು ಮಾಡಿದ್ದರು.

ಇದಲ್ಲದೆ, ಖ್ಯಾತ ಮಲಯಾಳಿ ನಟ ಮಮ್ಮುಟ್ಟಿ ತುಂಬಾ ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಆದರೆ ಅವರ ಎಲ್ಲಾ ಕಾರುಗಳ ಸಂಖ್ಯೆಗಳು 369 ಆಗಿರುವುದು ಗಮನಾರ್ಹವಾಗಿದೆ. ಹಾಗಾಗಿ ಮಮ್ಮುಟ್ಟಿ ಕಾರ್ ಕಲೆಕ್ಷನ್ ನಲ್ಲಿ ವಿಶೇಷತೆ ಇದೆ. ಅದರ ಹೊರತಾಗಿ ಕೆಲವರು ತಮ್ಮ ನೆಚ್ಚಿನ ಸಂಖ್ಯೆಗಳನ್ನು ಖರೀದಿಸಲು ಹೆಚ್ಚು ಖರ್ಚು ಮಾಡಲು ಹಿಂಜರಿಯುವುದಿಲ್ಲ. ಇವು ಕೆಲವರಿಗೆ ನೆಚ್ಚಿನ ನಂಬರ್‌ಗಳಾದರೆ ಇನ್ನೂ ಕೆಲವರಿಗೆ ಸೆಂಟಿಮೆಂಟ್ ಹಾಗೂ ಅದೃಷ್ಟದ ನಂಬರ್‌ಗಳಾಗಿರುತ್ತವೆ. ಇದೇ ಕಾರಣದಿಂದ ಲಕ್ಷಗಟ್ಟಲೇ ಖರ್ಚು ಮಾಡುತ್ತಾರೆ.

Most Read Articles

Kannada
English summary
For fancy number a famous singer who spent 28 lakhs
Story first published: Saturday, January 7, 2023, 15:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X