ತುರ್ತು ವಾಹನವಾಗಿ ಬದಲಾದ ಫೋರ್ಡ್ ಇಕೋಸ್ಪೋರ್ಟ್

ಕರೋನಾ ಎರಡನೇ ವೈರಸ್ ಅಲೆಯಲ್ಲಿ ದೇಶಾದ್ಯಂತ ಆಂಬ್ಯುಲೆನ್ಸ್‌ಗಳ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಹಲವಾರು ಜನರು ಕೋವಿಡ್ 19 ಸೋಂಕಿತರಿಗೆ ನೆರವಾಗಲು ತಮ್ಮ ವಾಹನಗಳನ್ನು ಬಳಸುತ್ತಿದ್ದಾರೆ.

ತುರ್ತು ವಾಹನವಾಗಿ ಬದಲಾದ ಫೋರ್ಡ್ ಇಕೋಸ್ಪೋರ್ಟ್

ಕೋವಿಡ್‌ನಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯೂ ಸಹ ತತ್ತರಿಸಿ ಹೋಗಿತ್ತು. ದೆಹಲಿ ನಿವಾಸಿಯಾದ ಹಿಮಾಂಶು ನಾಗಿಯಾ ಎಂಬುವವರು ತಮ್ಮ ಫೋರ್ಡ್ ಇಕೋಸ್ಪೋರ್ಟ್ ಕಾರ್ ಅನ್ನು ತುರ್ತು ವಾಹನವನ್ನಾಗಿ ಬದಲಿಸಿದ್ದಾರೆ. ಈ ತುರ್ತು ವಾಹನದಲ್ಲಿ ಆಕ್ಸಿಜನ್ ಸಿಲಿಂಡರ್, ಔಷಧಿ, ಆಕ್ಸಿಮೀಟರ್, ಆಹಾರ, ನೀರು ಒದಗಿಸಲಾಗಿದೆ.

ತುರ್ತು ವಾಹನವಾಗಿ ಬದಲಾದ ಫೋರ್ಡ್ ಇಕೋಸ್ಪೋರ್ಟ್

ನೋಯ್ಡಾ ಮೂಲದ ಐಟಿ ಕಂಪನಿಯ ಉದ್ಯೋಗಿಯಾದ ಇವರು ಕಳೆದ ಒಂದು ತಿಂಗಳಿನಿಂದ ಕೋವಿಡ್ 19 ಸೋಂಕಿತರಿಗೆ ನೆರವಾಗುತ್ತಿದ್ದಾರೆ. ತಮ್ಮ ನೆರೆ ಹೊರೆಯವರಿಗೆ ಆಕ್ಸಿಜನ್ ಅಗತ್ಯವಿದ್ದ ಕಾರಣ ಈ ಸೇವೆಯನ್ನು ಆರಂಭಿಸಿದ್ದಾಗಿ ಅವರು ತಿಳಿಸಿದ್ದಾರೆ.

MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ತುರ್ತು ವಾಹನವಾಗಿ ಬದಲಾದ ಫೋರ್ಡ್ ಇಕೋಸ್ಪೋರ್ಟ್

ಆ ಸಮಯದಲ್ಲಿ ಸೋಂಕಿತರು ಆಕ್ಸಿಜನ್ ಸಿಗದೇ ಪರದಾಡುತ್ತಿದ್ದರು. ತಮ್ಮ ಈ ತುರ್ತು ವಾಹನದ ಮೂಲಕ ಅವರು ಹಲವಾರು ಜನರಿಗೆ ಸಹಾಯ ಮಾಡಿದ್ದಾರೆ. ಈವರೆಗೆ ಅವರು 23 ಜನರನ್ನು ತಮ್ಮ ಕಾರಿನ ಮೂಲಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ತುರ್ತು ವಾಹನವಾಗಿ ಬದಲಾದ ಫೋರ್ಡ್ ಇಕೋಸ್ಪೋರ್ಟ್

ದೆಹಲಿಯಲ್ಲಿ ಆಕ್ಸಿಜನ್ ಸಿಲಿಂಡರ್‌ ಸೇರಿದಂತೆ ಇತರ ವೈದ್ಯಕೀಯ ಉಪಕರಣಗಳ ಕೊರತೆ ಎದುರಾದ ಕಾರಣ ಕಾರಿನಲ್ಲಿಯೇ ವೈದ್ಯಕೀಯ ಉಪಕರಣಗಳನ್ನು ಅಳವಡಿಸಿ ಜನರಿಗೆ ನೆರವಾಗುತ್ತಿದ್ದಾರೆ.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ತುರ್ತು ವಾಹನವಾಗಿ ಬದಲಾದ ಫೋರ್ಡ್ ಇಕೋಸ್ಪೋರ್ಟ್

ಇಂತಹ ವಾಹನಗಳು ದೇಶದಲ್ಲಿ ಆಂಬುಲೆನ್ಸ್‌ಗಳ ಕೊರತೆಯನ್ನು ನೀಗಿಸುತ್ತಿವೆ. ಹಿಮಾಂಶು ನಾಗಿಯಾರವರು ಈ ವಾಹನದ ಸಂಪೂರ್ಣ ವೆಚ್ಚಕ್ಕೆ ತಮ್ಮ ಸ್ವಂತ ಹಣವನ್ನು ಬಳಸುತ್ತಿದ್ದಾರೆ.

ತುರ್ತು ವಾಹನವಾಗಿ ಬದಲಾದ ಫೋರ್ಡ್ ಇಕೋಸ್ಪೋರ್ಟ್

ಇತ್ತೀಚೆಗೆ ದೆಹಲಿಯಲ್ಲಿ ಮೊದಲ ವ್ಯಾಕ್ಸಿನೇಷನ್ ಡ್ರೈವ್ ಆರಂಭಿಸಲಾಗಿದೆ. ಈ ಡ್ರೈವ್'ಗೆ ಆಗಮಿಸುವವರು ತಮ್ಮ ಕಾರಿನಲ್ಲಿಯೇ ಇರುತ್ತಾರೆ. ಆರೋಗ್ಯ ಕಾರ್ಯಕರ್ತರು ಅವರ ಬಳಿ ತೆರಳಿ ಲಸಿಕೆ ನೀಡುತ್ತಾರೆ.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ತುರ್ತು ವಾಹನವಾಗಿ ಬದಲಾದ ಫೋರ್ಡ್ ಇಕೋಸ್ಪೋರ್ಟ್

ಈ ಪ್ರಕ್ರಿಯೆಯಲ್ಲಿ ಜನರು ತಮ್ಮ ಕಾರಿನಿಂದ ಹೊರಬರಬೇಕಾಗಿಲ್ಲ. ಈ ವ್ಯಾಕ್ಸಿನೇಷನ್ ಡ್ರೈವ್'ಗೆ ಗುರುಗ್ರಾಮ ಹಾಗೂ ನೋಯ್ಡಾದಲ್ಲಿ ಹೆಚ್ಚು ಆದ್ಯತೆ ನೀಡಲಾಗಿದೆ. ಈ ಅಭಿಯಾನದ ಯಶಸ್ಸಿನ ನಂತರ ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅಲ್ಲಿನ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತುರ್ತು ವಾಹನವಾಗಿ ಬದಲಾದ ಫೋರ್ಡ್ ಇಕೋಸ್ಪೋರ್ಟ್

ಈ ಪ್ರಕ್ರಿಯೆಯಲ್ಲಿ ಜನರು ಗುಂಪುಗೂಡುವುದು ತಪ್ಪಲಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಲಸಿಕೆ ಪಡೆಯಬಹುದು. ಜನರು ಹಲವು ಕಾರಣಕ್ಕೆ ಲಸಿಕೆ ಕೇಂದ್ರಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

MOST READ: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ತುರ್ತು ವಾಹನವಾಗಿ ಬದಲಾದ ಫೋರ್ಡ್ ಇಕೋಸ್ಪೋರ್ಟ್

ಅಂತಹ ಜನರಿಗೆ ಈ ಅಭಿಯಾನವು ಸೂಕ್ತವಾಗಿದೆ. ಲಸಿಕೆ ಪಡೆಯಲು ದೀರ್ಘ ಸರತಿ ಸಾಲಿನಲ್ಲಿ ನಿಲ್ಲಲು ಸಾಧ್ಯವಾಗದ ವೃದ್ಧರಿಗೆ, ವಿಶೇಷ ಚೇತನರಿಗೆ ಈ ಡ್ರೈವ್ ಇನ್ ವ್ಯಾಕ್ಸಿನೇಷನ್ ಅಭಿಯಾನವು ವರದಾನವಾಗಿದೆ.

ತುರ್ತು ವಾಹನವಾಗಿ ಬದಲಾದ ಫೋರ್ಡ್ ಇಕೋಸ್ಪೋರ್ಟ್

ಸದ್ಯಕ್ಕೆ 45 ವರ್ಷ ಮೇಲ್ಪಟ್ಟ ಜನರಿಗೆ ಈ ಸೌಲಭ್ಯವನ್ನು ನೀಡಲಾಗುತ್ತದೆ. ಮೊದಲೇ ತಿಳಿಸಿದಂತೆ ಡ್ರೈವ್ ಇನ್ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಕಾರಿನೊಳಗೆ ಲಸಿಕೆ ನೀಡಲಾಗುತ್ತದೆ.

Most Read Articles

Kannada
English summary
Ford Ecosport car turned into emergency vehicle. Read in Kannada.
Story first published: Tuesday, June 1, 2021, 15:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X