ಮಾಜಿ ಡಾನ್ ಮುತ್ತಪ್ಪ ರೈ ಬಳಸುತ್ತಿದ್ದ ಐಷಾರಾಮಿ ಕಾರುಗಳಿವು...!

ಭೂಗತ ಜಗತ್ತಿನ ಮಾಜಿ ಡಾನ್ ಹಾಗೂ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಎನ್.ಮುತ್ತಪ್ಪ ರೈ ಅವರು ಗುರುವಾರ ತಡರಾತ್ರಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಮಾಜಿ ಡಾನ್ ಮುತ್ತಪ್ಪ ರೈ ಬಳಸುತ್ತಿದ್ದ ಐಷಾರಾಮಿ ಕಾರುಗಳಿವು

ಭೂಗತ ಜಗತ್ತಿಗೆ ಕಾಲಿಟ್ಟು ಸಮಾಜ ಸೇವಕರಾಗಿ ಪರಿವರ್ತನೆಗೊಂಡು ಜನಸೇವೆಯಲ್ಲಿ ನಿರತರಾಗಿದ್ದ ಮುತ್ತಪ್ಪ ರೈ ಅವರ ಇತಿಹಾಸವೇ ರೋಚಕ. ಪುತ್ತೂರಿನಲ್ಲಿ ಸುಸಂಸ್ಕ್ರತ ಕುಟುಂಬದಲ್ಲಿ ಜನಿಸಿದ್ದ ಮುತ್ತಪ್ಪ ರೈ ಅವರು ಬ್ಯಾಂಕ್ ಉದ್ಯೋಗಿಯಾಗಿದ್ದರೂ ದುರದೃಷ್ಟವಶಾತ್ ಅಪರಾಧ ಜಗತ್ತಿಗೆ ಕಾಲಿಡುವ ಸನ್ನಿವೇಶ ಎದುರಾಗಿತ್ತು. ವಿಜಯ ಬ್ಯಾಂಕ್ ನಲ್ಲಿ ಸಾಮಾನ್ಯ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ ನೆಟ್ಟಾಲ ಮುತ್ತಪ್ಪ ರೈ 1980 ರಲ್ಲಿ ಭೂಗತ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು.

ಮಾಜಿ ಡಾನ್ ಮುತ್ತಪ್ಪ ರೈ ಬಳಸುತ್ತಿದ್ದ ಐಷಾರಾಮಿ ಕಾರುಗಳಿವು

ಅದರಲ್ಲಿಯೂ ಬೆಂಗಳೂರು ಭೂಗತ ಜಗತ್ತಿನ ಅನಭಿಷಿಕ್ತ ದೊರೆಯೊಬ್ಬನ ಬರ್ಬರ ಹತ್ಯೆ ನಡೆಸಿದ ಬಳಿಕ ರಕ್ತಸಿಕ್ತ ಭೂಗತಲೋಕದಲ್ಲಿ ಮುತ್ತಪ್ಪ ರೈ ಎಂಬ ಹೆಸರು ಗುಂಡಿನ ಮೊರೆತದ ಹಾಗೆ ಭಾರೀ ಸದ್ದು ಮಾಡಿತು.ಅದಾದ ನಂತರ ಬೆಂಗಳೂರು, ದುಬೈ, ಮುಂಬೈ ಗಳಲ್ಲಿ ಅನೇಕ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದ್ದರು.

MOST READ: ಸಿನಿಮಾ ಶೈಲಿಯಲ್ಲಿ ಸ್ಟಂಟ್ ಮಾಡಿ ದಂಡ ತೆತ್ತ ಪೊಲೀಸ್ ಅಧಿಕಾರಿ..!

ಮಾಜಿ ಡಾನ್ ಮುತ್ತಪ್ಪ ರೈ ಬಳಸುತ್ತಿದ್ದ ಐಷಾರಾಮಿ ಕಾರುಗಳಿವು

ಅಂತಾರಾಷ್ಟ್ರೀಯ ಭಯೋತ್ಪಾದಕ ದಾವೂದ್‌ ಇಬ್ರಾಹಿಂ, ಚೋಟಾ ಶಕೀಲ್ ಜೊತೆಗೂ ಮುತ್ತಪ್ಪ ರೈ ಅವರಿಗೆ ನಂಟು ಇತ್ತು. ಹೀಗೆ ಭೂಗತ ದೊರೆಯಾಗಿ ಮೆರೆಯುತ್ತಿದ್ದರೂ ತವರಿನ ನಂಟನ್ನು ಮರೆತಿರಲಿಲ್ಲ. ತಮ್ಮ ಮನೆ ದೇವರು ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯ ಮತ್ತು ಅಲ್ಲಿ ನಡೆಯುವ ಕಂಬಳಕ್ಕಾಗಿ ವರ್ಷಕ್ಕೊಮ್ಮೆ ತವರಿಗೆ ಭೇಟಿ ನೀಡುತ್ತಿದ್ದರು. ಅಪರಾಧ ಜಗತ್ತನ್ನು 15 ವರ್ಷಗಳ ಹಿಂದೆ ತೊರೆದ ರೈ,ಕಂಬಳ ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದರು.

ಭೂಗತ ಪಾತಕಿ ಅನ್ನೋ ಹೆಸರು ಇದ್ದಿದ್ದರಿಂದ ಮುತ್ತಪ್ಪ ರೈ ಬಗ್ಗೆ ತಿಳಿಯೋ ಆಸಕ್ತಿ ಅನೇಕರಿಗಿದೆ. ಅವರು ಅಂಡರ್ ವರ್ಲ್ಡ್ ಅನ್ನು ಒಂದು ಕಾಲದಲ್ಲಿ ಆಳಿದ್ದು ಹೇಗೆ ಅನ್ನೋದನ್ನ ನೋಡೊ ಆಸೆ ಆನೇಕರಿಗಿದೆ. ಇಂತಹ ಸಂದರ್ಭದಲ್ಲಿ ತೆಲಗು ಚಿತ್ರರಂಗದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಜೀವನಧಾರಿತ ಸಿನಿಮಾ ನಿರ್ಮಿಸಲು ಮುಂದಾಗಿದ್ದರು. ಆದರೆ ಆ ಸಿನಿಮಾ ಕೆಲವು ಕಾರಣಗಳಿಂದ ರದ್ದುಗೊಂಡಿತು.

MOST READ: ವಿಶ್ವದ ಅತಿ ದೊಡ್ಡ ಮಾಲ್ ಮಾಲೀಕನ ಬಳಿಯಿರುವ ಕಾರುಗಳಿವು..!

ಮಾಜಿ ಡಾನ್ ಮುತ್ತಪ್ಪ ರೈ ಬಳಸುತ್ತಿದ್ದ ಐಷಾರಾಮಿ ಕಾರುಗಳಿವು

ಮುತ್ತಪ್ಪ ರೈ ಭೂಗತ ಜಗತ್ತಿಗೆ ಗುಡ್ ಬೈ ಹೇಳಿದರು ಅವರ ಜೀವನಶೈಲಿಯು ಮಾತ್ರ ಫಿಲ್ಮಿ ಶೈಲಿಯಲ್ಲಿತ್ತು. ಅವರಿಗೆ ಐಷಾರಾಮಿ ಕಾರುಗಳ ಬಗ್ಗೆ ಹೆಚ್ಚು ಕ್ರೇಜ್ ಅನ್ನು ಹೊಂದಿದ್ದರು. ಮುತ್ತಪ್ಪ ರೈ ಅವರ ಬಳಿ ಇದ್ದ ಐಷಾರಾಮಿ ಕಾರುಗಳ ಮಾಹಿತಿ ಇಲ್ಲಿದೆ.

ಮಾಜಿ ಡಾನ್ ಮುತ್ತಪ್ಪ ರೈ ಬಳಸುತ್ತಿದ್ದ ಐಷಾರಾಮಿ ಕಾರುಗಳಿವು

ಟೊಯೊಟಾ ಲ್ಯಾಂಡ್ ಕ್ರೂಸರ್

ಆಫ್ಟರ್ ಮಾರ್ಕೆಟ್ ಮಾಡಿಫೈಗೊಳಿಸಿದ ಕಪ್ಪು ಬಣ್ಣದ ಈ ಲ್ಯಾಂಡ್ ಕ್ರೂಸರ್ ಎಸ್‍ಯುವಿಯನ್ನು ಹೊಂದಿದ್ದರು. ಇವರು ಎಲ್ಲಿಗಾದರೂ ತೆರಳಬೇಕಾದರೆ ಹೆಚ್ಚಾಗಿ ಈ ಮಾಡಿಫೈಗೊಳಿಸಿದ ಎಸ್‍ಯುವಿಯನ್ನು ಹೆಚ್ಚಾಗಿ ಬಳಸುತ್ತಿದ್ದರು. ಫುಲ್ ಬ್ಲ್ಯಾಕ್ ವಿಂಡೋ, ಅಲಾಯ್ ವ್ಹೀಲ್ ಗಳೊಂದಿಗೆ ಈ ಲ್ಯಾಂಡ್ ಕ್ರೂಸರ್ ಆಕರ್ಷಕ ಲುಕ್ ಅನ್ನು ಹೊಂದಿದೆ.

MOST READ: ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ ಮಾದಕ ನಟಿ..!

ಮಾಜಿ ಡಾನ್ ಮುತ್ತಪ್ಪ ರೈ ಬಳಸುತ್ತಿದ್ದ ಐಷಾರಾಮಿ ಕಾರುಗಳಿವು

ಲ್ಯಾಂಡ್ ರೋವರ್ ರೇಂಜ್ ರೋವರ್

ಇವರ ಬಳಿ ಬಿಳಿ ಬಣ್ಣದ ಹಳೆಯ ತಲೆಮಾರಿನ ಲ್ಯಾಂಡ್ ರೋವರ್ ರೇಂಜ್ ರೋವರ್ ಅನ್ನು ಹೊಂದಿದ್ದರು. ಹಲವಾರು ಜನಪ್ರಿಯ ಸೆಲೆಬ್ರಿಟಿಗಳ ಮೆಚ್ಚಿನ ಆಯ್ಕೆಯಾಗಿದೆ ಈ ಲ್ಯಾಂಡ್ ರೋವರ್ ರೇಂಜ್ ರೋವರ್ ಎಸ್‍ಯುವಿ. ಆಕರ್ಷಕ ಲುಕ್, ಐಷಾರಾಮಿ ಕ್ಯಾಬಿನ್ ಮತ್ತು ಪ್ರಯಾಣಿಸಲು ಆರಾಮದಾಯಕವಾದ ಎಸ್‍ಯುವಿಯಾಗಿದೆ.

ಮಾಜಿ ಡಾನ್ ಮುತ್ತಪ್ಪ ರೈ ಬಳಸುತ್ತಿದ್ದ ಐಷಾರಾಮಿ ಕಾರುಗಳಿವು

ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಮತ್ತು ಎಸ್‌ಎಲ್‌ಕೆ ಕೂಪೆ

ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಹಲವಾರು ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿರುವ ಸೆಡಾನ್ ಆಗಿದೆ. ಆಫ್ಟರ್ ಮಾರ್ಕೆಟ್ ಪೈ-ಸ್ಪೋಕ್ ಅಲಾಯ್ ವ್ಹೀಲ್ ಹೊಂದಿರುವ ಕಪ್ಪು ಬಣ್ಣದ ಕಾರು ಮಾಫಿಯ ಲುಕ್ ಅನ್ನು ಹೊಂದಿದೆ. ಇದರೊಂದಿಗೆ ಮರ್ಸಿಡಿಸ್ ಬೆಂಝ್ ಬ್ರ್ಯಾಂಡ್ ನ 2005ರ ಎಸ್‌ಎಲ್‌ಕೆ ಕಾರನ್ನು ಕೂಡ ಹೊಂದಿದ್ದರು. ಈ ಎಸ್‌ಎಲ್‌ಕೆ ಮಧ್ಯಮ ಗಾತ್ರದ ಸ್ಪೋರ್ಟ್ಸ್ ಕಾರ್ ಆಗಿದ್ದು ವಿಶ್ವದಾದ್ಯಂತ ಬಹಳ ಜನಪ್ರಿಯವಾಗಿತ್ತು.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಮಾಜಿ ಡಾನ್ ಮುತ್ತಪ್ಪ ರೈ ಬಳಸುತ್ತಿದ್ದ ಐಷಾರಾಮಿ ಕಾರುಗಳಿವು

ಪೋಲಾರಿಸ್ ಸ್ಪೋರ್ಟ್ಸ್ ಮ್ಯಾನ್

ಎಟಿವಿ ವಾಹನಗಳ ತಯಾರಿಕೆಯಲ್ಲಿ ಪೋಲಾರಿಸ್ ಜಾಗತಿಕವಾಗಿ ಅಗ್ರಸ್ಥಾನದಲ್ಲಿದೆ. ಒಂದು ದಶಕದ ಹಿಂದೆಯೇ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿದರು. ಈ ಪೋಲಾರಿಸ್ ಸ್ಪೋರ್ಟ್ಸ್ ಮ್ಯಾನ್ ಎಟಿವಿ ವಾಹನವನ್ನು ಮುತ್ತಪ್ಪ ರೈ ಅವರು ಹೊಂದಿದ್ದರು. ಆದರೆ ಪೋಲಾರಿಸ್ ಎಟಿವಿಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ಓಡಿಸಲು ಅವಕಾಶವಿಲ್ಲ. ಇದನ್ನು ಅವರು ತಮ್ಮ ಮನೆ ಸುತ್ತಮುತ್ತದಲ್ಲಿ ಓಡಿಸಲು ಬಳಸುತ್ತಿದ್ದರು.

ಮಾಜಿ ಡಾನ್ ಮುತ್ತಪ್ಪ ರೈ ಬಳಸುತ್ತಿದ್ದ ಐಷಾರಾಮಿ ಕಾರುಗಳಿವು

ಆಡಿ ಕ್ಯೂ5

ಈ ಐಷಾರಾಮಿ ಆಡಿ ಕಾರುಗಳು ಹೆಚ್ಚಾಗಿ ಉದ್ಯಮಿಗಳು ಹೊಂದಿರುತ್ತಾರೆ. ಈ ಕ್ಯೂ5 ಮಾಧ್ಯಮ ಗಾತ್ರದ ಎಸ್‍ಯುವಿಯನ್ನು ಅವರು ಹೊಂದಿದ್ದರು. ಇವರು ದೂರ ಪ್ರಯಾಣಗಳಿಗೆ ಮತ್ತು ಕಾರ್ಯಕ್ರಮಗಳಿಗೆ ಈ ಎಸ್‍ಯುವಿಯನ್ನು ಬಳಸುತ್ತಿದ್ದರು.

ಮಾಜಿ ಡಾನ್ ಮುತ್ತಪ್ಪ ರೈ ಬಳಸುತ್ತಿದ್ದ ಐಷಾರಾಮಿ ಕಾರುಗಳಿವು

ಟೊಯೊಟಾ ಫಾರ್ಚೂನರ್

ಹಳೆಯ ಟೊಯೊಟಾ ಫಾರ್ಚೂನರ್ ಹೆಚ್ಚು ಗಟ್ಟಿಮುಟ್ಟಾಗಿರುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚೂನರ್ ಹೆಚ್ಚು ಜನಪ್ರಿಯ ಎಸ್‍ಯುವಿಯಾಗಿದೆ. ಅವರು ಭದ್ರತೆಯ ದೃಷ್ಟಿಯಿಂದ ಬೆಂಗಾವಲಿಗೆ ಈ ಎಸ್‍ಯುವಿಯನ್ನು ಹೆಚ್ಚು ಬಳಸುತ್ತಿದ್ದರು.

Most Read Articles

Kannada
English summary
Billionaire Underworld don Muthappa Rai & his fleet of exotic cars. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more