ಜೀವನದಲ್ಲಿ ಸೇಫ್ ಡ್ರೈವಿಂಗ್ ಇಚ್ಛಿಸುವುದಾದ್ದಲ್ಲಿ ತಪ್ಪದೇ ಓದಿ!

Written By:

ಭಾರತಕ್ಕೆ ಭೇಟಿ ಕೊಡುವ ಪ್ರತಿಯೊಬ್ಬ ವಿದೇಶಿಯರೂ 'ಇನ್ ಕ್ರೆಡಿಬಲ್ ಇಂಡಿಯಾ' ಎಂದು ಹೊಗಳುತ್ತಾರೆ. ಅವರು ಮಾಡುವ ಪ್ರಂಶಸೆಯ ಹಿಂದೆ ಭವ್ಯ ಭಾರತದ ದರ್ಶನವಾಯಿತೇ ಅಥವಾ ಇಂಗು ಗುಂಡಿಗಳಿಂದ ಕೂಡಿರುವ ನೈಜ ದೇಶದ ರಸ್ತೆಗಳ ಅನುಭವಾಗಿರಬಹುದೇ ಎಂಬುದು ನಿಗೂಢ.

Also Read: ನಿಮ್ಮಲ್ಲಿ ನಗೆ ಹುಟ್ಟಿಸುವ ಸೂಚನಾ ಫಲಕಗಳು

ವಿದೇಶವನ್ನು ಹೋಲಿಸಿದಾಗ ರಸ್ತೆ ನಿರ್ಮಾಣದಲ್ಲಿ ದೇಶದಲ್ಲಿ ಭಾರಿ ಪ್ರಮಾಣದ ನೈಸರ್ಗಿಕ ಸವಾಲು ಎದುರಾಗುತ್ತಿದೆ. ಇನ್ನೊಂದೆಡೆ ಕಳಪೆ ಮಟ್ಟದ ರಸ್ತೆಗಳೂ ಅತಿ ಹೆಚ್ಚು ಅವಘಡವನ್ನು ಆಹ್ವಾನಿಸುತ್ತಿದೆ. ಹಾಗಿರುವಾಗ ರಸ್ತೆ ಸಂಚಾರ ಸೂಚಕ ಚಿಹ್ನೆಗಳ ಪಾತ್ರ ನಿರ್ಣಾಯಕವೆನಿಸುತ್ತದೆ. ಜೀವನದಲ್ಲಿ ನೀವು ಸಹ ಸೇಫ್ ಡ್ರೈವಿಂಗ್ ಇಚ್ಚಿಸುವುದಾದ್ದಲ್ಲಿ ಭವ್ಯ ಭಾರತದ ಹಿಮಾಲಯನ್ ಕಣಿವೆಗಳಲ್ಲಿ ಕಂಡುಬಂದಿರುವ ವಿಚಿತ್ರ ಚಿಹ್ನೆಗಳನ್ನು ತಪ್ಪದೇ ಓದಲು ಮರೆಯರಿದಿ.

ನಿಧಾನವಾಗಿ ಚಲಿಸಿ

ನಿಧಾನವಾಗಿ ಚಲಿಸಿ

ಬಾರ್ಡರ್ ರೋಡ್ ವಿಭಾಗ ಇಂತಹದೊಂದು ವಿಶಿಷ್ಟ ರಸ್ತೆ ಸಂಚಾರ ಸೂಚನಾ ಫಲಕವನ್ನು ಲಗತ್ತಿಸಿದೆ. ಕಡಿದಾದ ತಿರುವುಗಳಲ್ಲಿ ನಿಧಾನವಾಗಿ ಚಲಿಸಲು ನಿಟ್ಟಿನಲ್ಲಿ ಎಚ್ಚರಿಸಲಾಗಿದೆ.

ಸೇಫ್ ಟೀ

ಸೇಫ್ ಟೀ

ರಸ್ತೆಯಲ್ಲಿ ಸುರಕ್ಷಿತ ಚಾಲನೆಯನ್ನು ಪಾಲಿಸಿದ್ದಲ್ಲಿ ಮನೆಯಲ್ಲಿ ಸುರಕ್ಷಿತ ಚಹಾ ಮಜಾ ಸವಿಯಬಹುದಾಗಿದೆ.

ವೇಗಕ್ಕೆ ಮಿತಿಯಿರಲಿ

ವೇಗಕ್ಕೆ ಮಿತಿಯಿರಲಿ

ಮಿತಿ ಮೀರಿದರೆ ಅಮೃತವೂ ವಿಷ ಎಂಬ ಗಾದೆ ಮಾತಿನಂತೆ ಅಮಿತ ವೇಗದಲ್ಲಿ ಚಲಿಸಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

ಹಾರ್ಸ್ ಪವರ್

ಹಾರ್ಸ್ ಪವರ್

ರಮ್ ಪವರ್ ಅಲ್ಲ ಬದಲಾಗಿ ಕಾರಿನ ಹಾರ್ಸ್ ಪವರ್ ನಲ್ಲಿ ಚಲಿಸಿ

ವಿಸ್ಕಿ ರಿಸ್ಕಿ

ವಿಸ್ಕಿ ರಿಸ್ಕಿ

ವಿಸ್ಕಿ ಹೊಡೆದರೆ ಡ್ರೈವಿಂಗ್ ರಿಸ್ಕಿ ಎಂಬುದು ನೆನಪಿಡಿ

ಸ್ಪೀಡ್ ಕಿಲ್ಸ್

ಸ್ಪೀಡ್ ಕಿಲ್ಸ್

ಮೊದಲು ವೇಗ ಥ್ರಿಲ್ ನೀಡುವುದಾದರೂ ಕೊನೆಗೆ ಪ್ರಾಣಕ್ಕೆ ಅಪಾಯ.

ಆಪ್ತಮಿತ್ರನಿಗೊಂದು ಸಲಹೆ

ಆಪ್ತಮಿತ್ರನಿಗೊಂದು ಸಲಹೆ

ಗೆಳೆಯ, ಕಡಿದಾದ ತಿರುವುಗಳಲ್ಲಿ ನಿಧಾನವಾಗಿ ಚಲಿಸು

 ಜೀವನ ಅಮೂಲ್ಯ

ಜೀವನ ಅಮೂಲ್ಯ

ಸಮಯವೆಂಬುದು ದುಡ್ಡಿದ್ದಂತೆ. ಆದರೆ ಜೀವನ ಅದಕ್ಕಿಂತಲೂ ಅಮೂಲ್ಯವಾದುದು.

ಪರಸ್ಪರ ಪ್ರೀತಿಸಿ

ಪರಸ್ಪರ ಪ್ರೀತಿಸಿ

ಯುದ್ಧದ ಬದಲು ಪರಸ್ಪರ ಪ್ರೀತಿಸಲು ಕಲಿಯಿರಿ ಆದರೆ ಡ್ರೈವಿಂಗ್ ಸಮಯದಲ್ಲಲ್ಲ.

 ಅಪಘಾತ ತಪ್ಪಿಸಿ

ಅಪಘಾತ ತಪ್ಪಿಸಿ

ಅಪಘಾತದಲ್ಲಿ ಗಾಯಾಳುವಾದ ಬಳಿಕ ಆಸ್ಪತ್ರೆ ಸೀಲಿಂಗ್ ನೋಡಲು ಬೋರ್ ಆಗುವುದಾದ್ದಲ್ಲಿ ಅಪಘಾತವನ್ನು ತಪ್ಪಿಸುವುದು ಒಳಿತು.

ಚಿರನಿದ್ರೆ

ಚಿರನಿದ್ರೆ

ನೀವು ಚಿರಕಾಲ ನಿದ್ರೆಗೆ ಜಾರಲಿದ್ದಾರೆ. ಆದರೆ ನಿಮ್ಮ ಇಡೀ ಕುಟುಂಬ ರೋಧಿಸಲಿದೆ. ಹಾಗೆಯೇ ಯಾವತ್ತೂ ಚಾಲನೆ ವೇಳೆ ಮತ್ತೊಂದು ತುದಿಯಲ್ಲಿ ಪ್ರೀತಿಯ ಕುಟಂಬ ಸದಸ್ಯರೂ ನಿಮ್ಮ ಆಗಮನಕ್ಕಾಗಿ ಕಾಯುತ್ತಿದ್ದಾರೆ ಎಂಬುದನ್ನು ಮರೆಯದಿರಿ.

ಇರುವುದೊಂದೇ ಜೀವನ

ಇರುವುದೊಂದೇ ಜೀವನ

ಬೆಕ್ಕಿಗೆ ಒಂಬತ್ತು ಜೀವನ ಇರುತ್ತಂತೆ. ಆದರೆ ಗಾಡಿ ಓಡಿಸುವವನಿಗೆ ಇರವುದೊಂದೇ ಜೀವನ.

ನೆರೆಹೊರೆಯವರನ್ನು ಪ್ರೀತಿಸಿ

ನೆರೆಹೊರೆಯವರನ್ನು ಪ್ರೀತಿಸಿ

ನೆರೆಹೊರೆಯವರನ್ನು ಪ್ರೀತಿಸಿ ಆದರೆ ಡ್ರೈವಿಂಗ್ ವೇಳೆಯಲ್ಲಲ್ಲ.

ಹಾರಾಡುವುದು ಬೇಡ

ಹಾರಾಡುವುದು ಬೇಡ

ರಸ್ತೆ ಇರುವುದು ಡ್ರೈವಿಂಗ್ ಮಾಡಲು ಹಕ್ಕಿಯಂತೆ ಹಾರಾಡುವುದು ಬೇಡ.

ಮೂವರು ಶತ್ರುಗಳು

ಮೂವರು ಶತ್ರುಗಳು

ಇವರೇ ರಸ್ತೆಯಲ್ಲಿರುವ ಮೂವರು ಶತ್ರುಗಳು - ಮದ್ಯ, ವೇಗ ಮತ್ತು ಅಮಿತ ಭಾರ

ಕಣಿವೆ ಆನಂದಿಸಿ

ಕಣಿವೆ ಆನಂದಿಸಿ

ಇದು ರಾಲಿ ನಡೆಸುವ ರೇಸ್ ಟ್ರ್ಯಾಕ್ ಅಲ್ಲ ಬದಲಾಗಿ ನಿಧಾನವಾಗಿ ಚಲಿಸಿ ಕಣಿವೆಯ ಸೌಂದರ್ಯವನ್ನು ಸವಿಯಿರಿ.

ನಿಧಾನ ನಿಧಾನ...

ನಿಧಾನ ನಿಧಾನ...

ನಿಮ್ಮ ಹೆಸರಿನ ಪ್ರಾರಂಭದಲ್ಲಿ 'ಮಿಸ್ಟರ್' ಬೇಕೋ ಅಥವಾ 'ಲೇಟ್ ಮಿಸ್ಟರ್' ಬೇಕೋ ಎಂಬುದನ್ನು ನೀವೇ ನಿರ್ಧರಿಸಿ.

ಡೈವೋರ್ಸ್ ಕೊಟ್ಟುಬಿಡಿ

ಡೈವೋರ್ಸ್ ಕೊಟ್ಟುಬಿಡಿ

ನಿಮ್ಮ ಪ್ರೇಯಸಿಯನ್ನು ಅಷ್ಟೊಂದು ಪ್ರೀತಿಸುವುದಾದ್ದಲ್ಲಿ ವೇಗಕ್ಕೆ ಡೈವೋರ್ಸ್ ಕೊಟ್ಟುಬಿಡಿ.

ಪತ್ನಿಗೆ ಸಲಹೆ

ಪತ್ನಿಗೆ ಸಲಹೆ

ಹೆಂಡತಿಯರೇ ಪಕ್ಕದ ಸೀಟಿನಲ್ಲಿ ಕುಳಿತುಕೊಂಡು ಗಾಸಿಪ್ ಹೊಡೆಯದಿರಿ ಪಾಪ ಪತಿರಾಯ ಡ್ರೈವ್ ಮಾಡಲಿ

ಚಿಕ್ಕ ಜೀವನ

ಚಿಕ್ಕ ಜೀವನ

ಜೀವನ ಚಿಕ್ಕದಾಗಿದ್ದು, ಮತ್ತಷ್ಟು ಸಣ್ಣದು ಮಾಡದಿರಿ

ಅತಿ ಎತ್ತರದ ಶಿಖರ

ಅತಿ ಎತ್ತರದ ಶಿಖರ

ನೀವು ಮೋಟಾರು ವಾಹನಗಳು ಸಂಚರಿಸಬಹುದಾದ ವಿಶ್ವದ ಅತಿ ಎತ್ತರದ ಪರ್ವತ ಶಿಖರದಲ್ಲಿ ಸಂಚರಿಸುತ್ತಿದ್ದು, ಬದಲಾಗಿ ಪರಲೋಕಕ್ಕೆ ಶಾರ್ಟ್ ಕಟ್ ಹುಡುಕುತ್ತಿಲ್ಲ ಎಂಬುದನ್ನು ನೆನಪಿಡಿ.

ತುರ್ತು ನೆರವು

ತುರ್ತು ನೆರವು

ತುರ್ತು ನೆರವನ್ನು ಅರಿಯಿರಿ ಬದಲಾಗಿ ಏಡ್ಸ್ ಅಲ್ಲ.

ಪರೀಕ್ಷೆ ಬೇಡ

ಪರೀಕ್ಷೆ ಬೇಡ

ಕಡಿದಾದ ತಿರುವನ್ನು ಅನುಭವಿಸಿ ಆದರೆ ಅದರ ಪರೀಕ್ಷೆ ಬೇಡ

ಜೀವನದಲ್ಲಿ ಸೇಫ್ ಡ್ರೈವಿಂಗ್ ಇಚ್ಛಿಸುವುದಾದ್ದಲ್ಲಿ ತಪ್ಪದೇ ಓದಿ!

ಅರ್ಥವತ್ತಾದ ಹೇಳಿಕೆಯಿದು

ಹಾರ್ನ್ ಹೊಡೆಯಿರಿ

ಹಾರ್ನ್ ಹೊಡೆಯಿರಿ

ಪೀಪ್ ಪೀಪ್ ಹಾರ್ನ್ ಹೊಡೆಯುತ್ತಿರಿ. ಆದರೆ ನಿದ್ರೆಗೆ ಜಾರದಿರಿ.

ಓವರ್ ಸ್ಪೀಡ್

ಓವರ್ ಸ್ಪೀಡ್

ಓವರ್ ಸ್ಪೀಡ್ ಎಂಬ ಚಾಕು, ಜೀವನವನ್ನೇ ತುಂಡರಿಸುವಷ್ಟು ಅಪಾಯಕಾರಿಯಾಗಿದೆ.

 ಪಾರ್ಟಿಗೆ ಹೋಗುವೀರಾ?

ಪಾರ್ಟಿಗೆ ಹೋಗುವೀರಾ?

ನೀವು ಆನಂದಿಸಲು ಮಾಡಲು ಬಂದಿರುವೀರಾ? ಹಾಗಿದ್ದರೆ ವೇಗಕ್ಕೆ ಕಡಿವಾಣ ಹಾಕಿ.

ವಿಮೆ ಪಕ್ವತೆ

ವಿಮೆ ಪಕ್ವತೆ

ಯಾವುದಕ್ಕೂ ಮೊದಲು ವಿಮೆ ಪಕ್ವತೆಗೆ ಬರಲಿ ಬಿಡಿ....

ಅಪಘಾತ ಕಟ್ಟಿಟ್ಟ ಬುತ್ತಿ

ಅಪಘಾತ ಕಟ್ಟಿಟ್ಟ ಬುತ್ತಿ

ಹ್ಹ..ಹ್ಹ..ಹ್ಹ.. ಸ್ವಲ್ಪನೂ ಎಡವಟ್ಟು ಸಂಭವಿಸಿದ್ದಲ್ಲಿ ಅಪಘಾತ ಕಟ್ಟಿಟ್ಟ ಬುತ್ತಿ

ಜೀವನದಲ್ಲಿ ಸೇಫ್ ಡ್ರೈವಿಂಗ್ ಇಚ್ಛಿಸುವುದಾದ್ದಲ್ಲಿ ತಪ್ಪದೇ ಓದಿ!

ಮಗದೊಂದು ಮನ ತಟ್ಟುವ ಸಂಚಾರ ಸೂಚನಾ ಫಲಕ.

ರಕ್ತದಾನ

ರಕ್ತದಾನ

ಇಲ್ಲಲ್ಲ...ಬ್ಲಡ್ ಬ್ಯಾಂಕ್ ಗೆ ತೆರಳಿ ರಕ್ತದಾನ ಮಾಡಿ.

ಇವನ್ನೂ ಓದಿ

ಇಂತಹ ಸೂಚನಾ ಫಲಕ ಎಲ್ಲಾದರೂ ನೋಡಿದ್ದೀರಾ?

English summary
Funny Road Signs: Incredible India Or Creative India?
Story first published: Wednesday, March 23, 2016, 10:39 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more