ಜಸ್ಟ್ ಅಮೇಜಿಂಗ್ 'ಫ್ಯೂರಿಯಸ್ 7'
2015ನೇ ಸಾಲಿನ ಬಹುನಿರೀಕ್ಷಿತ ಹಾಲಿವುಡ್ ಚಲನಚಿತ್ರಗಳಲ್ಲಿ 'ಫ್ಯೂರಿಯಸ್ 7' ಅತಿ ಹೆಚ್ಚು ಕುತೂಹಲಕ್ಕೆ ಕಾರಣವಾಗಿದೆ. ಫಾಸ್ಟ್ ಆಂಡ್ ಫ್ಯೂರಿಯಸ್ ಕಥಾ ಸರಣಿಯ ಏಳನೇ ಭಾಗದಲ್ಲೂ ಅದ್ಭುತ ಮೇಕಿಂಗ್‌ಗೆ ಆದ್ಯತೆ ಕೊಡಲಾಗಿದೆ.
2015 ಎಪ್ರಿಲ್ 3ರಂದು ಬಿಡುಗಡೆಯಾಗಲಿರುವ ಚಿತ್ರದಲ್ಲಿ ಕಳೆದ ವರ್ಷ ಕಾರು ಅಪಘಾತದಲ್ಲಿ ಮೃತಪಟ್ಟಿದ್ದ ಪಾಲ್ ವಾಕರ್ ಪ್ರಮುಖ ಕಥಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಪಾಲ್ ವಾಕರ್ ಅವರ ಸ್ಮರಣೆಯ ಚಿತ್ರ ಕೂಡಾ ಆಗಿರಲಿದೆ.

ಎಂದಿನಂತೆ ಫ್ಯೂರಿಯಸ್ 7 ಚಿತ್ರದಲ್ಲೂ ಸಸ್ಫೆನ್ಸ್ ಕಾಯ್ದುಕೊಳ್ಳುವಲ್ಲಿ ಚಿತ್ರಕಥೆಗಾರ ಕ್ರಿಸ್ ಮಾರ್ಗನ್ ಹಾಗೂ ನಿರ್ದೇಶಕ ಜೇಮ್ಸ್ ವಾನ್ ಯಶಸ್ವಿಯಾಗಿದ್ದಾರೆ. ಅಲ್ಲದೆ ಇದೀಗ ಬಿಡುಗಡೆಗೊಂಡಿರುವ ಟ್ರೇಲರ್‌ನಲ್ಲಿ ವಿಸ್ಮಯಕಾರಿ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.
ನಿಮಗೆಲ್ಲರಿಗೂ ತಿಳಿದಿರುವಂತೆಯೇ ಫಾಸ್ಟ್ ಆಂಡ್ ಫ್ಯೂರಿಯಸ್‌ನ ಪ್ರತಿ ಚಿತ್ರದ್ಲಲೂ ವಾಹನಗಳ ಪಾತ್ರ ಬಹು ಮುಖ್ಯವಾಗಿದೆ. ಹಾಗಿದ್ದರೆ ಬನ್ನಿ ರೋಚಕ ವೀಡಿಯೋ ವೀಕ್ಷಿಸೋಣವೇ...


Click it and Unblock the Notifications








