Glenn Maxwell: ವಿಶ್ವಕಪ್ ದ್ವಿಶತಕ ವೀರ ಗ್ಲೆನ್ ಮ್ಯಾಕ್ಸ್‌ವೆಲ್‌ ಬಳಿಯಿವೆ ಅದ್ಬುತ ಕಾರುಗಳು, ಯಾವುವು ಗೊತ್ತಾ?

ಆಸ್ಟ್ರೇಲಿಯಾ (Australia) ಕ್ರಿಕೆಟ್ ತಂಡದ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್‌ (Glenn Maxwell) ಏಕದಿನ ವಿಶ್ವಕಪ್‌ನ 39ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ (Afghanistan) ವಿರುದ್ಧ ದ್ವಿಶತಕ ಸಿಡಿಸುವ ಮೂಲಕ ತಂಡದ ಗೆಲುವಿಗೆ ನೆರವಾಗಿದ್ದರು. ಅವರ ಅತ್ಯಾಕರ್ಷಕ ಆಟವನ್ನು ಪ್ರಮುಖ ಕ್ರಿಕೆಟ್ ತಾರೆಯರು, ಫ್ಯಾನ್ಸ್ ಸೇರಿದಂತೆ ಅನೇಕರು ಶ್ಲಾಘಿಸಿದ್ದರು.

ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ ಅಫ್ಘಾನ್ ತಂಡ ಆಸ್ಟ್ರೇಲಿಯಾ ಗೆಲುವಿಗೆ 291 ರನ್‌ಗಳ ಗುರಿಯನ್ನು ನೀಡಿತ್ತು. ಉತ್ಸಾಹದೊಂದಿಗೆ ಮೈದಾನಕ್ಕೆ ಇಳಿದ ಆಸೀಸ್, 18.3 ಓವರ್‌ಗಳಲ್ಲಿ 91 ರನ್ ಗಳಿಸಿ, ಪ್ರಮುಖ 7 ವಿಕೆಟ್ ಕಳೆದುಕೊಂಡು ಸೋಲಿನ ಅಂಚಿಗೆ ಬಂದಿತ್ತು. ಆಗ ಬ್ಯಾಟಿಂಗ್ ನಲ್ಲಿ ಅಬ್ಬರಿಸಿದ ಮ್ಯಾಕ್ಸ್‌ವೆಲ್‌, ಬೌಂಡರಿ, ಸಿಕ್ಸ್ ಬಾರಿಸುವ ಮೂಲಕ 201 ರನ್ ಗಳಿಸಿ, ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು.

Glenn Maxwell: ವಿಶ್ವಕಪ್ ದ್ವಿಶತಕ ವೀರ ಗ್ಲೆನ್ ಮ್ಯಾಕ್ಸ್‌ವೆಲ್‌ ಬಳಿಯಿವೆ ಅದ್ಬುತ ಕಾರುಗಳು, ಯಾವುವು ಗೊತ್ತಾ?

ಆ ಜಯದೊಂದಿಗೆ ಆಸ್ಟ್ರೇಲಿಯಾ ಸೆಮಿಫೈನಲ್ ಗೆ ಪ್ರವೇಶ ಪಡೆಯಿತು. ಆ ಬಳಿಕ, ಗ್ಲೆನ್ ಮ್ಯಾಕ್ಸ್‌ವೆಲ್‌ ಅವರನ್ನು ಇಡೀ ಕ್ರಿಕೆಟ್ ಜಗತ್ತು ಕೊಂಡಾಡುವುದಕ್ಕೆ ಶುರು ಮಾಡಿತ್ತು. ನಿಮಗೆ ಗೊತ್ತಿರಲಿ.. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಡುವ ಮ್ಯಾಕ್ಸ್‌ವೆಲ್‌ ಕನ್ನಡಿಗರಿಗೂ ಚಿರಪರಿಚಿತರು. ಈಗ ಇಂಟರ್‌ನೆಟ್‌ನಲ್ಲಿ ಮ್ಯಾಕ್ಸ್‌ವೆಲ್‌ ಬಗ್ಗೆ ಹುಡುಕಾಟಗಳು ಹೆಚ್ಚಾಗಿದ್ದು, ಅವರ ಪತ್ನಿ, ಆಸ್ತಿ, ಆದಾಯದ ಮೂಲ ಮತ್ತು ಕಾರುಗಳ ಕುರಿತು ಹಲವಾರು ಸರ್ಚ್ ಮಾಡುತ್ತಿದ್ದಾರೆ.

ಉಳಿದ ಕ್ರಿಕೆಟಿಗರಂತೆ ಗ್ಲೆನ್ ಮ್ಯಾಕ್ಸ್‌ವೆಲ್‌ ಕೂಡ ದುಬಾರಿ ಬೆಲೆಯ ಐಷಾರಾಮಿ ಕಾರುಗಳ ಮಾಲೀಕರಾಗಿದ್ದಾರೆ. ಅವರ ಬಳಿ ಪ್ರಮುಖವಾಗಿ ನಿಸ್ಸಾನ್ ಮ್ಯಾಕ್ಸಿಮಾ (Nissan Maxima) ಮತ್ತು ಆಡಿ ಕ್ಯೂ7 (Audi Q7) ಕಾರುಗಳಿವೆ. ಮೊದಲಿಗೆ ನಿಸ್ಸಾನ್ ಮ್ಯಾಕ್ಸಿಮಾ ಬಗ್ಗೆ ಮಾತನಾಡೋಣ. ಸದ್ಯ, ಈ ಕಾರು ವಿದೇಶಿ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗಲಿದ್ದು, ರೂ.31.12 ಲಕ್ಷದಿಂದ ರೂ.36.11 ಲಕ್ಷ ಬೆಲೆಯಲ್ಲಿ ದೊರೆಯುತ್ತದೆ.

Glenn Maxwell: ವಿಶ್ವಕಪ್ ದ್ವಿಶತಕ ವೀರ ಗ್ಲೆನ್ ಮ್ಯಾಕ್ಸ್‌ವೆಲ್‌ ಬಳಿಯಿವೆ ಅದ್ಬುತ ಕಾರುಗಳು, ಯಾವುವು ಗೊತ್ತಾ?

ನಿಸ್ಸಾನ್ ಮ್ಯಾಕ್ಸಿಮಾ 3.5 ಲೀಟರ್ DOHC ವಿ6 ಪೆಟ್ರೋಲ್ ಎಂಜಿನ್ ಹೊಂದಿದ್ದು, 300 hp ಗರಿಷ್ಠ ಪವರ್ ಹಾಗೂ 353 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಸಿವಿಟಿ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ. 8.5 - 12.7 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಜೊತೆಗೆ 5 ಆಸನ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.

ಈ ಕಾರು, ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದ್ದು, ಸಿಗ್ನೇಚರ್ ಎಲ್ಇಡಿ, DRL, ಇಂಟೆಲಿಜೆಂಟ್ ಆಟೋ ಎಲ್ಇಡಿ ಹೆಡ್‌ಲೈಟ್‌, 19 ಇಂಚಿನ ಮೆಷಿನ್ಡ್ ಫಿನಿಶ್ ಅಲ್ಯೂಮಿನಿಯಂ ಅಲಾಯ್ ವೀಲ್ಸ್, ಕ್ರೂಸ್ ಕಂಟ್ರೋಲ್, ಇಂಟೆಲಿಜೆಂಟ್ ಅರೌಂಡ್ ವ್ಯೂ ಮಾನಿಟರ್, 7- ಇಂಚಿನ ಡ್ರೈವರ್ ಅಸಿಸ್ಟ್ ಡಿಸ್ಪ್ಲೇ, ನಿಸ್ಸಾನ್ ಡೋರ್-ಟು-ಡೋರ್ ನ್ಯಾವಿಗೇಷನ್, ಡ್ಯುಯಲ್ ಝೋನ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Glenn Maxwell: ವಿಶ್ವಕಪ್ ದ್ವಿಶತಕ ವೀರ ಗ್ಲೆನ್ ಮ್ಯಾಕ್ಸ್‌ವೆಲ್‌ ಬಳಿಯಿವೆ ಅದ್ಬುತ ಕಾರುಗಳು, ಯಾವುವು ಗೊತ್ತಾ?

ಮತ್ತೊಂದು ಕಾರು ಆಡಿ ಕ್ಯೂ7 (Audi Q7) ವಿದೇಶ ಸೇರಿದಂತೆ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುತ್ತದೆ. ಈ ಕಾರು, ರೂ.84.70 ಲಕ್ಷದಿಂದ ರೂ.92.30 ಲಕ್ಷ ದರದಲ್ಲಿ ದೊರೆಯುತ್ತದೆ. 3-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿದ್ದು, 340 PS ಪವರ್, 500 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 8-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆ ಪಡೆದಿದೆ.

ಆಡಿ ಕ್ಯೂ7 ಕಾರು, 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್‌ ಡಿಸ್ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ, ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸೇಫ್ಟಿ ಸಲುವಾಗಿ 8 ಏರ್‌ಬ್ಯಾಗ್‌, ಲೇನ್ ಡಿಪಾರ್ಚರ್ ವಾರ್ನಿಂಗ್, ಫ್ರಂಟ್ ಹಾಗೂ ರೇರ್ ಪಾರ್ಕಿಂಗ್ ಸೇನಾರ್ಸ್ ನೊಟ್ಟಿಗೆ ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, November 9, 2023, 15:58 [IST]
English summary
Glenn maxwell car collection nissan maxima to audi q7
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+