ತಂದೆಯ ಪ್ರೀತಿ: ಮಗಳಿಗೆ ರೂ.2.44 ಕೋಟಿ ಬೆಲೆಯ ಮರ್ಸಿಡಿಸ್ ಕಾರು ಗಿಫ್ಟ್ ನೀಡಿದ ಬಿಜೆಪಿ ಲೀಡರ್

ಗೋವಾದ ಬಿಜೆಪಿ ನಾಯಕ ಹಾಗೂ ಖ್ಯಾತ ಉದ್ಯಮಿ ಮೈಕಲ್ ಲೋಬೋ (Michael Lobo), ತಮ್ಮ ಮಗಳಿಗೆ ಮರ್ಸಿಡಿಸ್ ಬೆಂಜ್ ಎಸ್‌ಎಲ್ 55 ಎಎಂಜಿ (Mercedes-Benz SL55 AMG) ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಕುರಿತು ಗೋವಾದ ಮರ್ಸಿಡಿಸ್ ಕಂಪನಿಯ ಅಧಿಕೃತ ಡೀಲರ್‌ಶಿಪ್ ತನ್ನ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದೆ. 'ಗೋವಾದ ಮೊಟ್ಟ ಮೊದಲ ಮರ್ಸಿಡಿಸ್ ಬೆಂಜ್ ಎಸ್‌ಎಲ್ 55 ಎಎಂಜಿ ಕಾರನ್ನು ಖರೀದಿಸಿದ ಮೈಕೆಲ್ ವಿನ್ಸೆಂಟ್ ಲೋಬೋ ಮತ್ತು ಅವರ ಕುಟುಂಬಕ್ಕೆ ಶುಭಾಯಶಗಳು' ಎಂದು ಶೀರ್ಷಿಕೆಯನ್ನು ಬರೆದಿದೆ.

Goa BJP Leader Michael Lobo Gifts Daughter Mercedes Benz SL55 Car Worth Rs 2 44 Crore

ಬಿಜೆಪಿ ನಾಯಕರಾಗಿರುವ ಮೈಕಲ್ ಲೋಬೋ, ಕಲಾಂಗುಟ್ ಕ್ಷೇತ್ರದ ಶಾಸಕರಾಗಿದ್ದಾರೆ. ಈ ಹಿಂದೆ ಗೋವಾ ಸರ್ಕಾರದಲ್ಲಿ ವಿಜ್ಞಾನ, ತಂತ್ರಜ್ಞಾನ, ತ್ಯಾಜ್ಯ ನಿರ್ವಹಣೆ ಮತ್ತು ಬಂದರು ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದ ಅನುಭವ ಅವರಿಗಿದೆ. ಜೊತೆಗೆ ವಿವಿಧ ಉದ್ಯಮಗಳನ್ನು ನಡೆಸುತ್ತಿದ್ದಾರೆ. ಈಗ, ತಮ್ಮ ಪ್ರೀತಿಯ ಪುತ್ರಿಗೆ ದುಬಾರಿ ಬೆಲೆಯ ಐಷಾರಾಮಿ ಮರ್ಸಿಡಿಸ್ ಬೆಂಜ್ ಕಾರನ್ನು ಗಿಫ್ಟ್ ನೀಡಿ ಸುದ್ದಿಯಾಗಿದ್ದಾರೆ.

ದೇಶೀಯ ಮಾರುಕಟ್ಟೆಯಲ್ಲಿ ನೂತನ ಮರ್ಸಿಡಿಸ್ ಬೆಂಜ್ ಎಸ್‌ಎಲ್ 55 ಎಎಂಜಿ (Mercedes Benz SL55 AMG) ಕಾರು ರೂ.2.44 ಕೋಟಿ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಅತ್ಯುತ್ತಮ ವಿನ್ಯಾಸವನ್ನು ಪಡೆದಿರುವ ಈ ಕಾರು, ರಸ್ತೆಯಲ್ಲಿ ಚಲಿಸುವಾಗ ಪ್ರತಿಯೊಬ್ಬರು ತನ್ನತ್ತ ತಿರುಗಿ ನೋಡುವಂತೆ ಮಾಡುತ್ತದೆ. ಇದರಲ್ಲಿ 4 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು.

ಹೊಚ್ಚ ಹೊಸ ಮರ್ಸಿಡಿಸ್ ಬೆಂಜ್ ಎಸ್‌ಎಲ್ 55 ಎಎಂಜಿ ಕಾರು, ಶಕ್ತಿಯುತ 4.0-ಲೀಟರ್ ಟ್ವಿನ್ ಟರ್ಬೊ ವಿ8 ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 473 ಬಿಹೆಚ್‌ಪಿ ಗರಿಷ್ಠ ಪವರ್ (ಶಕ್ತಿ) ಹಾಗೂ 700 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ 9-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ಖರೀದಿಗೆ ಲಭ್ಯವಿದೆ.

ಈ ಕಾರು ಕೇವಲ 3.9 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂ/ಹೆಚ್ ವೇಗ ಪಡೆಯಲಿದೆ. ಹಾಗೆಯೇ ಗಂಟೆಗೆ 295 ಕಿ.ಮೀ ಗರಿಷ್ಠ ವೇಗ (ಟಾಪ್ ಸ್ವೀಡ್)ವನ್ನು ಹೊಂದಲಿದೆ. ಅಬ್ಸಿಡಿಯನ್ ಬ್ಲ್ಯಾಕ್, ಸೆಲೆನೈಟ್ ಗ್ರೇ, ಸ್ಪೆಕ್ಟ್ರಲ್ ಬ್ಲೂ ಮ್ಯಾಗ್ನೋ, ಪ್ಯಾಟಗೋನಿಯಾ ರೆಡ್ ಬ್ರೈಟ್, ಓಪಲೈಟ್ ವೈಟ್ ಬ್ರೈಟ್, ಆಲ್ಪೈನ್ ಗ್ರೇ ಸಾಲಿಡ್, ಹೈಪರ್ ಬ್ಲೂ ಹಾಗೂ ಮೊನ್ಜಾ ಗ್ರೇ ಮ್ಯಾಗ್ನೋ ಬಣ್ಣಗಳೊಂದಿಗೂ ಸಿಗುತ್ತದೆ.

ಮರ್ಸಿಡಿಸ್ ಬೆಂಜ್ ಎಸ್‌ಎಲ್ 55 ಎಎಂಜಿ ಬೆಲೆಗೆ ತಕ್ಕಂತೆ ಐಷಾರಾಮಿ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಆಕರ್ಷಕ ಇನ್ಫೋಟೈಮೆಂಟ್ ಸಿಸ್ಟಮ್, ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್/ ಸ್ಟಾಪ್ ಬಟನ್, ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್, ಫ್ರಂಟ್ (ಮುಂಭಾಗ) ಪವರ್ ವಿಂಡೋಸ್, ಏರ್‌ಬ್ಯಾಗ್, ಪವರ್ ಸ್ಟೀರಿಂಗ್, ಏರ್ ಕಂಡೀಷನರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, March 27, 2024, 17:04 [IST]
English summary
Goa bjp leader michael lobo gifts daughter mercedes benz sl55 car worth rs 2 44 crore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+