ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಗೋವಾ ಸಿ‍ಎಂ

ಭಾರತದ ರಸ್ತೆಗಳಲ್ಲಿ ಅಪಘಾತಗಳು ಸಾಮಾನ್ಯವಾಗಿ ಸಂಭವಿಸುತ್ತಲೇ ಇರುತ್ತವೆ. ಪ್ರತಿದಿನ, ಪ್ರತಿ ಕ್ಷಣ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ರಸ್ತೆ ಅಪಘಾತದಲ್ಲಿ ಗಾಯಗೊಳ್ಳುವ ಗಾಯಾಳುಗಳಿಗೆ ತಕ್ಷಣವೇ ಚಿಕಿತ್ಸೆ ನೀಡಿದರೆ, ಬದುಕುಳಿಯುವ ಸಾಧ್ಯತೆಗಳಿರುತ್ತವೆ.

ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಗೋವಾ ಸಿ‍ಎಂ

ಇತ್ತೀಚಿಗೆ ಗೋವಾದಲ್ಲಿ ಹೋಂಡಾ ಆಕ್ಟಿವಾ ಚಾಲನೆ ಮಾಡುತ್ತಿದ್ದ ಮಹಿಳೆಯೊಬ್ಬರು ಸ್ಕೂಟರ್‍‍‍ನಿಂದ ಕೆಳಗೆ ಬಿದ್ದು, ರಸ್ತೆ ಅಪಘಾತಕ್ಕೊಳಗಾಗಿದ್ದರು. ಈ ಅಪಘಾತವು ಗೋವಾದ ಬ್ಯುಸಿ ಮಾರ್ಗವೆಂದು ಪರಿಗಣಿತವಾಗಿರುವ ಜುವಾರಿ ಬ್ರಿಡ್ಜ್ ನಲ್ಲಿ ನಡೆಯಿತು.

ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಗೋವಾ ಸಿ‍ಎಂ

ಇದೇ ಸಮಯದಲ್ಲಿ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್‍‍‍ರವರು ಸಹ ಇದೇ ಮಾರ್ಗವಾಗಿ ಚಲಿಸುತ್ತಿದ್ದರು. ತಕ್ಷಣವೇ ರಸ್ತೆ ಅಪಘಾತದಲ್ಲಿ ಗಾಯಾಳುವಾಗಿದ್ದ ಮಹಿಳೆಯ ನೆರವಿಗೆ ಧಾವಿಸಿದರು. ಗೋವಾ 24x7 ಚಾನೆಲ್ ಈ ಘಟನೆಯ ವೀಡಿಯೊವನ್ನು ಅಪ್‍‍ಲೋಡ್ ಮಾಡಿದೆ. ಗೋವಾದ ಮುಖ್ಯಮಂತ್ರಿಗಳು ಗಾಯಾಳುವಿನ ಸ್ಥಿತಿಯನ್ನು ಪರೀಕ್ಷಿಸಿ, ಅವರಿಗೆ ಚಿಕಿತ್ಸೆ ನೀಡುವ ಖಾತ್ರಿ ನೀಡಿದರು.

ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಗೋವಾ ಸಿ‍ಎಂ

ಅಂದ ಹಾಗೆ ಗೋವಾದ ಮುಖ್ಯಮಂತ್ರಿಗಳಾದ ಪ್ರಮೋದ್ ಸಾವಂತ್‍‍ರವರು ಆಯುರ್ವೇದ ವೈದ್ಯರಾಗಿದ್ದಾರೆ. ವೀಡಿಯೊದಲ್ಲಿ ಕಾಣುವಂತೆ ಅವರು ನೆಲದ ಮೇಲೆ ಬಿದ್ದಿದ್ದ ಮಹಿಳೆಯನ್ನು ಬೇರೆಯವರ ಸಹಾಯದಿಂದ ಕೂರಿಸಿ, ಮಹಿಳೆಯ ಗಾಯಗಳನ್ನು ಪರೀಕ್ಷಿಸಿದರು.

ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಗೋವಾ ಸಿ‍ಎಂ

ನಂತರ ತಮ್ಮ ಬೆಂಗಾವಲು ವಾಹನದಲ್ಲಿ ಹತ್ತಿರದಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲು ಅನುಕೂಲ ಮಾಡಿಕೊಟ್ಟರು. ಈ ಮೂಲಕ ಕರಾವಳಿ ರಾಜ್ಯದ ಸಿಎಂ ಅವರು ಗಾಯಾಳುವಿನ ನೋವಿಗೆ ಸ್ಪಂದಿಸಿದ್ದಾರೆ. ಅವರು ಆಂಬ್ಯುಲೆನ್ಸ್ ಗಾಗಿ ಕಾಯದೇ ತಮ್ಮ ಸ್ವಂತ ಬೆಂಗಾವಲು ವಾಹನದಲ್ಲಿ ಗಾಯಾಳುವನ್ನು ಹತ್ತಿರದ ಆಸ್ಪತ್ರೆಗೆ ಕಳುಹಿಸಿದರು.

ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಗೋವಾ ಸಿ‍ಎಂ

ರಾಜಕೀಯ ವಿಚಾರಗಳೇನೇ ಇರಲಿ ಗೋವಾದ ಮುಖ್ಯಮಂತ್ರಿಗಳು ಮಾಡಿರುವ ಈ ಕಾರ್ಯವನ್ನು ಖಂಡಿತವಾಗಿಯೂ ಶ್ಲಾಘಿಸಬೇಕಾಗಿದೆ. ಪ್ರಮೋದ್ ಸಾವಂತ್‍‍ರವರು ರಾಜಕೀಯ ಸಭೆಯ ನಂತರ ದೆಹಲಿಯಿಂದ ಹಿಂದಿರುಗುತ್ತಿದ್ದರು.

ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಗೋವಾ ಸಿ‍ಎಂ

ದಾಬೋಲಿಮ್ ವಿಮಾನ ನಿಲ್ದಾಣದಿಂದ ಪಣಜಿಗೆ ಹೋಗುತ್ತಿದ್ದಾಗ, ಜುವಾರಿ ಸೇತುವೆಯಲ್ಲಿ ಅಪಘಾತ ಸಂಭವಿಸಿದೆ. ದಕ್ಷಿಣ ಗೋವಾವನ್ನು ಉತ್ತರ ಗೋವಾದೊಂದಿಗೆ ಸಂಪರ್ಕಿಸುವ ಈ ಸೇತುವೆ ಗೋವಾದ ಅತ್ಯಂತ ಜನನಿಬಿಡ ಸೇತುವೆಯಾಗಿದೆ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಗೋವಾ ಸಿ‍ಎಂ

ಘಟನೆಯನ್ನು ನೋಡಿದ ತಕ್ಷಣ ಮುಖ್ಯಮಂತ್ರಿಯವರು ಕಾರ್ ಅನ್ನು ನಿಲ್ಲಿಸುವಂತೆ ತಮ್ಮ ಡ್ರೈವರ್‌ಗೆ ಸೂಚನೆ ನೀಡಿದ್ದಾರೆ. ಕಾರಿನಿಂದ ಇಳಿದ ತಕ್ಷಣ ಮಹಿಳೆಯನ್ನು ಪರೀಕ್ಷಿಸಿದ್ದಾರೆ. ಆ ಮಹಿಳೆಯು ತಮ್ಮ ಹೋಂಡಾ ಆಕ್ಟಿವಾ ಸ್ಕೂಟರಿನಲ್ಲಿ ಹೋಗುತ್ತಿದ್ದಾಗ ಸ್ಕೂಟರ್‌ನಿಂದ ಕೆಳಗೆ ಬಿದ್ದಿದ್ದಾರೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಗೋವಾ ಸಿ‍ಎಂ

ತಕ್ಷಣವೇ ಆಕೆಗೆ ವೈದ್ಯಕೀಯ ನೆರವಿನ ಅಗತ್ಯವಿತ್ತು. ಸ್ಥಳದಲ್ಲಿ ಯಾವುದೇ ಆಂಬ್ಯುಲೆನ್ಸ್ ಇಲ್ಲದೇ ಇದ್ದ ಕಾರಣ ತಾವೇ ನೆರವಿಗೆ ಧಾವಿಸಿದ್ದಾರೆ. ತಮ್ಮ ಸಿಬ್ಬಂದಿಗೆ ನೀರು ತರಲು ತಿಳಿಸಿದ ಮುಖ್ಯಮಂತ್ರಿಗಳು ಮಹಿಳೆಯನ್ನು ಹತ್ತಿರದಲ್ಲಿದ್ದ ಆಸ್ಪತ್ರೆಗೆ ಸೇರಿಸಲು ನೆರವು ನೀಡಿದ್ದಾರೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಒಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್‍‍ರವರು ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾಗಿ ಸರ್ಕಾರಿ ಅಧಿಕಾರಿಗಳು ಹಾಗೂ ಇತರೆ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಅಪಘಾತದ ಸಂದರ್ಭಗಳಲ್ಲಿ, ಗಾಯಾಳುಗಳನ್ನು ತಕ್ಷಣಕ್ಕೆ ಆಸ್ಪತ್ರೆಗೆ ಸೇರಿಸುವ ಸಮಯವು ನಿರ್ಣಾಯಕವಾಗಿದೆ.

ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಗೋವಾ ಸಿ‍ಎಂ

ತಕ್ಷಣವೇ ಚಿಕಿತ್ಸೆ ದೊರೆತರೆ ಗಾಯಾಳುಗಳನ್ನು ಪ್ರಾಣಾಪಾಯದಿಂದ ಪಾರು ಮಾಡಬಹುದಾಗಿದೆ. ಅದೃಷ್ಟವಶಾತ್, ಈ ವೀಡಿಯೊದಲ್ಲಿರುವ ಅಪಘಾತವು ಮಾರಣಾಂತಿಕವೆಂದು ತೋರುತ್ತಿಲ್ಲ. ಆದರೂ ತಕ್ಷಣವೇ ಆ ಮಹಿಳೆಗೆ ಚಿಕಿತ್ಸೆ ದೊರೆಯದಿದ್ದಲ್ಲಿ ಆಕೆಯ ಸ್ಥಿತಿಯು ಹದಗೆಡುವ ಸಾಧ್ಯತೆಗಳಿದ್ದವು.

ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಗೋವಾ ಸಿ‍ಎಂ

ಹಲವು ರಸ್ತೆ ಅಪಘಾತಗಳಲ್ಲಿ, ದೈಹಿಕ ಗಾಯಗಳಿಗಿಂತ ಎದುರಾಗುವ ಮಾನಸಿಕ ಆಘಾತ ಆಘಾತವು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಇದರಿಂದಾಗಿ ಹೃದ್ರೋಗಿಗಳಲ್ಲಿ ಅಥವಾ ಇದೇ ರೀತಿಯ ಕಾಯಿಲೆಗಳನ್ನು ಹೊಂದಿರುವ ಜನರಲ್ಲಿ ಇತರ ತೊಂದರೆಗಳಿಗೆ ಕಾರಣವಾಗಬಹುದು.

ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಗೋವಾ ಸಿ‍ಎಂ

ಆದ್ದರಿಂದ ಅಪಘಾತ ನಡೆದ ತಕ್ಷಣ ಗಾಯಾಳುಗಳನ್ನು ಎತ್ತಿಕೊಂಡು ನೀರನ್ನು ಕುಡಿಸುವ ಮೂಲಕ ಪ್ರಜ್ಞೆ ತಪ್ಪದಂತೆ ನೋಡಿಕೊಳ್ಳಬೇಕು. ಇದರಿಂದಾಗಿ ಮತ್ತಷ್ಟು ಮಾನಸಿಕ ಆಘಾತವಾಗುವುದನ್ನು ತಪ್ಪಿಸಬಹುದು.

ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಗೋವಾ ಸಿ‍ಎಂ

ಜವಾಬ್ದಾರಿಯುತ ಪ್ರಜೆಯಾಗಿ, ಯಾವುದೇ ಅಪಘಾತಗಳು ಕಂಡು ಬಂದರೆ ತಮ್ಮ ವಾಹನವನ್ನು ನಿಲ್ಲಿಸಿ ಅಪಘಾತಕ್ಕೊಳಗಾದವರಿಗೆ ಸಹಾಯ ಮಾಡಲು ಪ್ರಯತ್ನಿಸಿ. ಇದರಿಂದ ಗಾಯಾಳುವಿನ ಜೀವ ಉಳಿಯುವ ಸಾಧ್ಯತೆಗಳಿರುತ್ತವೆ.

ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಗೋವಾ ಸಿ‍ಎಂ

ಪೊಲೀಸ್ ಹಾಗೂ ಆಂಬ್ಯುಲೆನ್ಸ್‌ನಂತಹ ತುರ್ತು ಸೇವೆಗಳಿಗೆ ಕರೆ ಮಾಡಿ. ಅಪಘಾತವನ್ನು ನೋಡಿದ ತಕ್ಷಣ, ಆ ಅಪಘಾತವು ಮಾರಕವಾಗದಿದ್ದರೆ, ಸಂತ್ರಸ್ತರಿಗೆ ಸಾಂತ್ವನ ಹೇಳಿ, ಅವರಿಗೆ ನೀರು ಕುಡಿಸಿ. ಈ ಸರಳ ವಿಧಾನಗಳಿಂದ ಅಪಘಾತಕ್ಕೊಳಗಾದವರ ಪ್ರಾಣ ಉಳಿಯುವ ಸಾಧ್ಯತೆಗಳಿರುತ್ತವೆ.

Most Read Articles

Kannada
English summary
Goa Chief Minister helps accident victim - Read in Kannada
Story first published: Saturday, October 5, 2019, 12:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more