'ಗೋಲ್ಡ್ ಮ್ಯಾನ್' ಸನ್ನಿ ವಾಗ್ಚೌರೆ ಚಿನ್ನದ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ.?
ಪ್ರಪಂಚದ ಇತರೆ ದೇಶಗಳಿಗಿಂತಲೂ ಭಾರತದಲ್ಲಿ ಮಾತ್ರ ಚಿನ್ನಕ್ಕೆ ಎಲ್ಲಿಲ್ಲದ ಒಲವಿದೆ. ಅಷ್ಟೆ ಅಲ್ಲದೇ ನಮ್ಮ ದೇಶದಲ್ಲಿ ಹಲವರು ಆಭರಣಗಳನ್ನು ಧರಿಸಿಕೊಳ್ಳಲು ಇಷ್ಟ ಪಡುತ್ತಾರೆ. ಇಂತವರುಗಳಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿರುವ ಸನ್ನಿ ವಾಗ್ಚೌರೆ ಎಂಬಾತ ಚಿನ್ನದ ಆಭರಣಗಳಿಂದಲೇ ಹೆಸರುವಾಸಿಯಾಗಿದ್ದು,'ಗೋಲ್ಡ್ ಮ್ಯಾನ್' ಎಂಬ ಬಿರುದು ಕೂಡಾ ಹೊಂದಿದ್ದಾರೆ.

ಇವರಿಗೆ ಚಿನ್ನದ ಮೇಲಿರುವ ಪೀತಿಯನ್ನು ತೋರಿಸಿಕೊಳ್ಳಲು ಚಿನ್ನದ ವಾಹನಗಳಲ್ಲಿಯೇ ಚಲಿಸುತ್ತಾರಂತೆ. ಸನ್ನಿ ಕೆಲವು ಐಷಾರಾಮಿ ಕಾರುಗಳನ್ನು ಹೊಂದಿದ್ದು, ಅವುಗಳಲ್ಲಿ ಮೂರು ಕಾರುಗಳಿಗೆ ಸಂಪೂರ್ಣವಾಗಿ ಚಿನ್ನದ ಹೊದಿಕೆಯನ್ನು ಅಳವಡಿಸಿರುವುದರಿಂದ ಅವುಗಳು ಉತ್ತಮವಾಗಿ ಮತ್ತು ವಿಭಿನ್ನವಾಗಿ ಕಾಣಿಸುತ್ತದೆ. ಆದರೆ ಆ ಮೂರು ವಾಹನಗಳಿಗೆ ಚಿನ್ನದ ಲೇಪನವನ್ನು ನೀಡಿಲ್ಲವಾದರೂ ಆ ಕಾರುಗಳ ನಿಜವಾದ ಬಣ್ಣದ ಮೇಳೆ ಚಿನ್ನದ ಸುತ್ತನ್ನು ನೀಡಿದ್ದಾರೆ ಅಷ್ಟೆ.

ಹಾಗಾದರೆ ಇಂದಿನ ಈ ಲೇಖನದಲ್ಲಿ ಉದ್ಯಮಿ ಮತ್ತು ನಿರ್ಮಾಪಕರಾಗಿರುವ ಸನ್ನಿ ವಾಗ್ಚೌರೆ ಅವರ ಗ್ಯಾರೇಜ್‌ನಲ್ಲಿರುವ ಆ ಚಿನ್ನದ ಹೊದಿಕೆಯನ್ನು ಹೊಂದಿರುವ ಮತ್ತು ಇನ್ನಿತರೆ ಐಷಾರಮಿ ಕಾರುಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.

ಆಡಿ ಕ್ಯೂ7
ಆಡಿ ಕ್ಯೂ7 ಸನ್ನಿ ವಾಗ್ಚೌರೆ ಅವರ ಕಾರ್ ಕಲೆಕ್ಷನ್‍ಗಳಲ್ಲಿ ಹೊಸದಾಗಿ ಸೇರ್ಪಡೆಯಾಗಿದ್ದು, ಈ ಕಾರಿಗೆ ಚಿನ್ನದ ಹೊದಿಕೆಯನ್ನು ನೀಡಲಾಗಿದೆ. 2013ರ ಆಡಿ ಕ್ಯೂ7 ಕಾರು ಇದಾಗಿದ್ದು, ಚಿನ್ನದ ಹೊದಿಕೆಯನ್ನು ನೀಡಿರುವ ಕಾರಣ ಈ ಕಾರಿನ ನಿಜವಾದ ಬಣ್ಣವು ಕಾಣಿಸುವುದಿಲ್ಲ. ಈ ವಾಹನವನು ಸನ್ನಿ ಆಗಾಗ ಬಳಸುತ್ತಿದ್ದು, ಇದಕ್ಕೆ ನೀಡಿರುವ ಚಿನ್ನದ ಹೊದಿಕೆಯನ್ನು ಖಾತ್ರಿಪಡಿಸಿಕೊಳ್ಳಲು ಕಾರಿನ ಹಿಂದೆ ಬೆಂಗಾವಲಾಗಿ ಚಲಿಸುತ್ತಾರೆ. ಈ ಕಾರು 3.0 ಲೀಟರ್ ಡೀಸೆಲ್ ಎಂಜಿನ್ ಅನು ಪಡೆದಿದ್ದು, ಎಂಜಿನ್ ಅನ್ನು 7 ಸ್ಪೀಡ್ ಆಟೊಮ್ಯಾಟಿಕ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಜಾಗ್ವಾರ್ ಎಕ್ಸ್ಎಫ್
ಸನ್ನಿ ಐಷಾರಾಮಿ ಕಾರ್ ಕಲೆಕ್ಷನ್‍ನಲ್ಲಿ ಜಾಗ್ವಾರ್ ಎಕ್ಸ್ಎಫ್ ಸೆಡಾನ್ ಕಾರು ಒಂದಾಗಿದ್ದು, ಇದಕ್ಕೆ ಕೂಡಾ ಚಿನ್ನದ ಹೊದಿಕೆಯನ್ನು ನೀಡಲಾಗಿದೆ. ಸುಮಾರು 50 ಲಕ್ಷ ಬೆಲೆಬಾಳುವ ಈ ಐಷಾರಾಮಿ ಕಾರಿಗೆ ಚಿನ್ನದ ಹೊದಿಕೆಯನ್ನು ನೀಡಿರುವುದು ಮತ್ತೊಂದು ವಿಶೇಷ. ಈ ಕಾರಿನ ವ್ಹೀಲ್‍ಗಳಿಗೆ ಕೂಡಾ ಚಿನ್ನದ ಹೊದಿಕೆಯನ್ನು ನೀಡಿದ್ದಾರೆ. ಈ ಕಾರನ್ನು ಸನ್ನಿ 2017ರಲ್ಲಿ ಖರೀದಿಸಿದ್ದು, ಸದ್ಯಕ್ಕೆ ಈ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ.
MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಮರ್ಸಿಡೀಸ್-ಬೆಂಝ್ ಇ-ಕ್ಲಾಸ್
ಮರ್ಸಿಡೀಸ್-ಬೆಂಝ್ ಇ-ಕ್ಲಾಸ್ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬೆಸ್ಟ್ ಸೆಲ್ಲಿಂಗ್ ಐಷಾರಮಿ ಕಾರುಗಳಲ್ಲಿ ಒಂದಾಗಿದೆ. ಈ ಕಾರು ಮಾರುಕಟ್ಟೆಯಲ್ಲಿ ಹಲವಾರು ವರ್ಷಗಳಿಂದ ಮಾರಾಟದಲ್ಲಿದ್ದರೂ ಸಹ 2012ರಲ್ಲಿ ಈ ಕಾರಿನ ಹೆಡ್‍ಲ್ಯಾಂಪ್ ಸೆಟಪ್ ಅನ್ನು ಬದಲಾಯಿಸಲಾಯಿತು. ಈ ಕಾರಿಗೂ ಸಹ ಸನ್ನಿ ಚಿನ್ನದ ಹೊದಿಕೆಯನ್ನು ನೀಡಿದ್ದು, ಯಾವುದಾದರು ಕಾರ್ಯಕ್ರಮಗಳಿಗೆ ಮತ್ತು ಮೀಟಿಂಗ್‍ಗಳಿಗೆ ಹೋಗುವಾಗ ಬಳಸುತ್ತಾರಂತೆ.

ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್
ರೆಂಜ್ ರೋವರ್ ವೋಗ್ ಕಾರು ಹೆಚ್ಚು ಕಡಿಮೆ ಹಲವಾರು ಸೆಲೆಬ್ರಿಟಿಗಳ ಕಾರ್ ಕಲೆಕ್ಷನ್‍ಗಳಲ್ಲಿ ಒಂದಾಗಿದೆ. ಸನ್ನಿ ಕೂಡಾ ಈ ರೆಂಜ್ ರೋವರ್ ವೋಗ್ ಕಾರನ್ನು ಇತ್ತೀಚೆಗೆ ಖರೀದಿಸಿದ್ದು, ಈ ಕರಿಗೂ ಸಹ ಸನ್ನಿ ಚಿನ್ನದ ಹೊದಿಕೆಯನ್ನು ನೀಡಬಹುದು.? ಕಾರಿನ ವೈವಿದ್ಯತೆಯ ಪೈಕಿ ಕಾರಿನ ಬೆಲೆ ನಿಗದಿಪಡಿಸಲಾಗಿದ್ದು, ಪ್ರಸ್ತುತ ಕಾರಿನ ಬೆಲೆಯು 1.8 ಕೋಟಿಯ ಪ್ರಾರಂಭಿಕ ಬೆಲೆ ಹೊಂದಿದೆ. ಇನ್ನು ಈ ಕಾರು 3.0-ಲೀಟರ್ ವಿ6 ಮತ್ತು 4.4 ಲೀಟರ್ ವಿ 8 ಟರ್ಬೊ ಡೀಸೆಲ್ ಎಂಜಿನ್ ಹಾಗೆಯೆ 5-ಲೀಟರ್ ವಿ 8 ಸೀಪರ್ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಪಡೆದಿದೆ.
MOST READ: ಬೆಂಗಳೂರಿನಲ್ಲಿ ಅಪಘಾತಕ್ಕೀಡಾದ 65 ಲಕ್ಷದ ಐಷಾರಾಮಿ ಡೆಮೊ ಕಾರು. ಚಾಲಕ ಸ್ಥಳದಲ್ಲೆ ಸಾವು

ಆಡಿ ಎ4
ಆಡಿ ಎ4 ಕಾರು ಜರ್ಮನ್ ವಾಹನ ತಯಾರಕ ಸಂಸ್ಥೆಯವರಿಂದ ನಿರ್ಮಾಣವಾದ ಎಂಟ್ರಿ ಲೆವೆಲ್ ಕಾರಾಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಈ ಕಾರು ಬಿಡುಗಡೆಗೊಂಡಾಗಲೇ ಈ ಕಾರನ್ನು ಸನ್ನಿ ಖರೀದಿಸಿದರು. ಈ ಕಾರು ಸಧ್ಯಕ್ಕೆ ರೂ. 41.46 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ. ಆಡಿ ಎ3 ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಲಭ್ಯವಿದ್ದು, ಪೆಟ್ರೋಲ್ ಎಂಜಿನ್ ಅನ್ನು 7 ಸ್ಪೀಡ್ ಮತ್ತು ಡೀಸೆಲ್ ಎಂಜಿನ್ ಅನ್ನು 6 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.


Click it and Unblock the Notifications








