ಮೊಮ್ಮಗನ ಮದುವೆಗಾಗಿ ಹೆಲಿಕಾಪ್ಟರ್‌ನಲ್ಲಿ ಬಂದ ವೃದ್ಧ ದಂಪತಿ

ಕೋವಿಡ್ -19 ಇಡೀ ಪ್ರಪಂಚದ ಜನ ಜೀವನವನ್ನು ಬದಲಿಸಿದೆ. ಜನರ ಪ್ರಯಾಣ ವಿಧಾನವನ್ನೂ ಬದಲಿಸಿದೆ. ಕರೋನಾ ವೈರಸ್ ಅಟ್ಟಹಾಸದ ನಡುವೆ ಪ್ರಯಾಣಿಸುವುದು ಅಪಾಯಕಾರಿ. ದೂರದ ಪ್ರಯಾಣಕ್ಕಾಗಿ ಕಾರಿನಲ್ಲಿ ಸಂಚರಿಸಬಹುದಾದರೂ ವಯಸ್ಸಾದವರಿಗೆ ಅದು ಸಹ ಸುರಕ್ಷಿತವಲ್ಲ.

ಮೊಮ್ಮಗನ ಮದುವೆಗಾಗಿ ಹೆಲಿಕಾಪ್ಟರ್‌ನಲ್ಲಿ ಬಂದ ವೃದ್ಧ ದಂಪತಿ

ಇತ್ತೀಚೆಗೆ ಕೇರಳದ ವೃದ್ಧ ದಂಪತಿಗಳು ತಮ್ಮ ಮೊಮ್ಮಗನ ಮದುವೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಹೆಲಿಕಾಪ್ಟರ್ ಮೂಲಕ ಬಂದಿಳಿದಿದ್ದಾರೆ. ಈ ಮೂಲಕ ಅವರು ಕರೋನಾ ಸಂಕಷ್ಟದ ನಡುವೆಯೂ ಸುರಕ್ಷಿತವಾಗಿ ಪ್ರಯಾಣಿಸಲು ಸಾಧ್ಯವಾಗಿದೆ. 90 ವರ್ಷದ ಕೆ.ಎನ್. ಲಕ್ಷ್ಮೀನಾರಾಯಣ್ ಹಾಗೂ 85 ವರ್ಷದ ಅವರ ಪತ್ನಿ ಕೇರಳದ ಪಲ್ಲಕಾಡ್ ಮೂಲದವರು.

ಮೊಮ್ಮಗನ ಮದುವೆಗಾಗಿ ಹೆಲಿಕಾಪ್ಟರ್‌ನಲ್ಲಿ ಬಂದ ವೃದ್ಧ ದಂಪತಿ

ಅವರ ಮೊಮ್ಮಗನ ಮದುವೆ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿತ್ತು. ಮೊಮ್ಮಗನ ಮದುವೆಯಲ್ಲಿ ಪಾಲ್ಗೊಳ್ಳಲು ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಪ್ರಯಾಣಿಸಲು ನಿರ್ಧರಿಸಿದರು. ನಂತರ ಅವರ ಮಗ ಒಂದು ಲಕ್ಷ ರೂಪಾಯಿಗಳನ್ನು ಪಾವತಿಸಿ ಹೆಲಿಕಾಪ್ಟರ್ ಬಾಡಿಗೆಗೆ ಪಡೆದು ಸುರಕ್ಷಿತ ಪ್ರಯಾಣಕ್ಕೆ ಅನುವು ಮಾಡಿಕೊಟ್ಟರು.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಮೊಮ್ಮಗನ ಮದುವೆಗಾಗಿ ಹೆಲಿಕಾಪ್ಟರ್‌ನಲ್ಲಿ ಬಂದ ವೃದ್ಧ ದಂಪತಿ

ನಾವು ನಮ್ಮ ಮೊಮ್ಮಗನ ಮದುವೆಯಲ್ಲಿ ಪಾಲ್ಗೊಳ್ಳಲು ಬಯಸಿದ್ದೆವು. ರಸ್ತೆಯ ಮೂಲಕ ಪ್ರಯಾಣಿಸುವುದು ಕಷ್ಟವಾದ ಕಾರಣ ನಮ್ಮ ಮಗ ನಮ್ಮ ಪ್ರಯಾಣಕ್ಕೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ. ಈ ವಯಸ್ಸಿನಲ್ಲಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿರುವುದು ನಮ್ಮ ಅದೃಷ್ಟ. ಇದು ನಮ್ಮ ಮೊದಲ ಹೆಲಿಕಾಪ್ಟರ್ ಪ್ರಯಾಣ ಎಂದು ಲಕ್ಷ್ಮೀನಾರಾಯಣ್ ಹೇಳಿದ್ದಾರೆ.

ಮೊಮ್ಮಗನ ಮದುವೆಗಾಗಿ ಹೆಲಿಕಾಪ್ಟರ್‌ನಲ್ಲಿ ಬಂದ ವೃದ್ಧ ದಂಪತಿ

ಈ ವೃದ್ಧ ದಂಪತಿ ಕೇರಳದಿಂದ ಬೆಂಗಳೂರಿಗೆ ಬರಲು ಬೆಂಗಳೂರು ಮೂಲದ ಚಿಪ್ಸನ್ ಏವಿಯೇಷನ್ ​​ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿತ್ತು. ಮೊಮ್ಮಗನ ಮದುವೆಯಲ್ಲಿ ಪಾಲ್ಗೊಂಡ ನಂತರ ದಂಪತಿಗಳು ಹೆಲಿಕಾಪ್ಟರ್ ಮೂಲಕವೇ ಕೇರಳಕ್ಕೆ ಮರಳಿದ್ದಾರೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಮೊಮ್ಮಗನ ಮದುವೆಗಾಗಿ ಹೆಲಿಕಾಪ್ಟರ್‌ನಲ್ಲಿ ಬಂದ ವೃದ್ಧ ದಂಪತಿ

ಕೆ.ಎನ್.ಲಕ್ಷ್ಮೀನಾರಾಯಣ್ ಅವರು ಲೇಖಕರಾಗಿದ್ದು, ಪುಸ್ತಕವನ್ನೂ ಬರೆದಿದ್ದಾರೆ. ಕರೋನಾ ವೈರಸ್ ವಯಸ್ಸಾದವರಿಗೆ ಬೇಗ ಹರಡುವುದರಿಂದ ವೃದ್ಧರ ಪ್ರಯಾಣವನ್ನು ನಿಷೇಧಿಸಲಾಗಿದೆ. ಲಕ್ಷ್ಮೀನಾರಾಯಣ್ ಹಾಗೂ ಅವರ ಪತ್ನಿ ಹೆಲಿಕಾಪ್ಟರ್‌ನಲ್ಲಿ ಆರಾಮವಾಗಿ ಪ್ರಯಾಣಿಸಿದ್ದಾರೆ.

ಮೊಮ್ಮಗನ ಮದುವೆಗಾಗಿ ಹೆಲಿಕಾಪ್ಟರ್‌ನಲ್ಲಿ ಬಂದ ವೃದ್ಧ ದಂಪತಿ

ಕರೋನಾದ ಕಾರಣದಿಂದಾಗಿ ಪ್ರಯಾಣದ ಮೇಲೆ ವಿವಿಧ ನಿರ್ಬಂಧಗಳನ್ನು ವಿಧಿಸಲಾಗಿದೆ. ಈ ನಿರ್ಬಂಧಗಳ ನಡುವೆ ಪ್ರಯಾಣಿಸುವಾಗ ಅನೇಕ ಸಮಸ್ಯೆಗಳು ಎದುರಾಗುತ್ತವೆ. ದೇಶಾದ್ಯಂತ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರಯಾಣಿಸಲು ಇ-ಪಾಸ್ ಗಳ ಅಗತ್ಯವಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಮೊಮ್ಮಗನ ಮದುವೆಗಾಗಿ ಹೆಲಿಕಾಪ್ಟರ್‌ನಲ್ಲಿ ಬಂದ ವೃದ್ಧ ದಂಪತಿ

ದೇಶ, ವಿದೇಶಗಳ ವಿಮಾನ ಪ್ರಯಾಣದ ವಿಧಾನವೂ ಬದಲಾಗಿದೆ. ಕೆಲವು ತಿಂಗಳ ಹಿಂದೆ ಭಾರತದಲ್ಲಿ ದೇಶಿಯ ವಿಮಾನಗಳ ಹಾರಾಟವನ್ನು ಆರಂಭಿಸಲಾಗಿದೆ. ಆದರೆ ಅಂತರರಾಷ್ಟ್ರೀಯ ವಿಮಾನಯಾನವನ್ನು ಇನ್ನೂ ಆರಂಭಿಸಿಲ್ಲ. ಮುಂಬರುವ ದಿನಗಳಲ್ಲಿ ಅಂತರರಾಷ್ಟ್ರೀಯ ವಿಮಾನಯಾನವನ್ನು ಸಹ ಪುನರಾರಂಭಿಸುವ ಸಾಧ್ಯತೆಗಳಿವೆ.

Most Read Articles

Kannada
English summary
Grandparents travel in helicopter to attend grandson wedding. Read in Kannada.
Story first published: Monday, August 24, 2020, 18:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X