ಇವಿ ವಾಹನಗಳ ಬೆಲೆ ಇಳಿಸಲು ಕೇಂದ್ರ ಸರ್ಕಾರ ಚಿಂತನೆ: ಬ್ಯಾಟರಿ ಮೇಲಿನ GST ಕಡಿಮೆಯಾಗುವ ಸಾಧ್ಯತೆ

ಭಾರತದಲ್ಲಿ ಇಂಧನ ಬೆಲೆಗಳ ನಿರಂತರ ಏರಿಕೆಯಿಂದಾಗಿ ಕಂಗೆಟ್ಟಿರುವ ಜನರು ಎಲೆಕ್ಟ್ರಿಕ್ ವಾಹನಗಳತ್ತ ಆಸಕ್ತಿ ತೋರುತ್ತಿದ್ದಾರೆ. ದಿನ ಕಳೆದಂತೆ ಎಲೆಕ್ಟ್ರಿಕ್ ವಾಹನಗಳ ಮಾರಾಟ ಕೂಡ ಹೆಚ್ಚುತ್ತಿದೆ. ಇಂದು ಚಾಲ್ತಿಯಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟಕ್ಕೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳು ಲಾಭದಾಯಕವೆಂದೇ ಹೇಳಬಹುದು.

 ಇವಿ ವಾಹನಗಳ ಬೆಲೆ ಇಳಿಸಲು ಕೇಂದ್ರ ಸರ್ಕಾರ ಚಿಂತನೆ: ಬ್ಯಾಟರಿ ಮೇಲಿನ GST ಕಡಿಮೆಯಾಗುವ ಸಾಧ್ಯತೆ

ಇನ್ನು ಜನರ ಆಸಕ್ತಿಯಂತೆ ವಾಹನ ತಯಾರಕರು ಕೂಡ ಹಲವು ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಅನೇಕ ದೊಡ್ಡ ಕಂಪನಿಗಳು ತಮ್ಮ ಉತ್ಪನ್ನಗಳ ಎಲೆಕ್ಟ್ರಿಕ್ ರೂಪಾಂತರಗಳನ್ನು ಸಹ ಪರಿಚಯಿಸುತ್ತಿವೆ. ಆದರೆ ಈ ಎಲೆಕ್ಟ್ರಿಕ್ ವಾಹನಗಳ ಮುಖ್ಯ ಸಮಸ್ಯೆ ಎಂದರೆ ಇಂಧನ ಚಾಲಿತ ವಾಹನಗಳಿಗೆ ಹೋಲಿಸಿದರೆ ಬೆಲೆ ತುಂಬಾ ಹೆಚ್ಚಾಗಿದೆ.

 ಇವಿ ವಾಹನಗಳ ಬೆಲೆ ಇಳಿಸಲು ಕೇಂದ್ರ ಸರ್ಕಾರ ಚಿಂತನೆ: ಬ್ಯಾಟರಿ ಮೇಲಿನ GST ಕಡಿಮೆಯಾಗುವ ಸಾಧ್ಯತೆ

ಹೀಗಾಗಿ ಎಲೆಕ್ಟ್ರಿಕ್ ವಾಹನಗಳ ಮಾರಾಟದ ಬೆಳವಣಿಗೆ ಮಂದಗತಿಯಲ್ಲಿ ಸಾಗುತ್ತಿದೆ. ಇದು ಒಟ್ಟು ಮಾರಾಟದ ಶೇಕಡಾ 10 ರಷ್ಟನ್ನೂ ತಲುಪಲು ಸಾಧ್ಯವಾಗುತ್ತಿಲ್ಲ. ಸದ್ಯ ಲಿಥಿಯಂ ಐಯಾನ್ ಬ್ಯಾಟರಿಗಳನ್ನು ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸಲಾಗುತ್ತಿದೆ. ಈ ಬ್ಯಾಟರಿಗಳಿಂದಲೇ ವಾಹನ ಬೆಲೆ ಹೆಚ್ಚಾಗಿದೆ. ಏಕೆಂದರೆ ವಾಹನದಲ್ಲಿ ಎಲ್ಲಾ ಭಾಗಗಳಿಗಿಂತ ಬ್ಯಾರಿಯ ಬೆಲೆ ದುಬಾರಿಯಾಗಿದೆ.

 ಇವಿ ವಾಹನಗಳ ಬೆಲೆ ಇಳಿಸಲು ಕೇಂದ್ರ ಸರ್ಕಾರ ಚಿಂತನೆ: ಬ್ಯಾಟರಿ ಮೇಲಿನ GST ಕಡಿಮೆಯಾಗುವ ಸಾಧ್ಯತೆ

ಈ ಬ್ಯಾಟರಿಗಳ ಬೆಲೆ ವಾಹನ ಒಟ್ಟು ಬೆಲೆಯ ಶೇ 25-35 ರಷ್ಟಿರುತ್ತದೆ. 10 ಲಕ್ಷ ರೂ.ನ ಎಲೆಕ್ಟ್ರಿಕ್ ಕಾರು ಖರೀದಿಸದರೆ, ಬ್ಯಾಟರಿಯೊಂದೇ ಸುಮಾರು 2.5-3.5 ಲಕ್ಷ ರೂಪಾಯಿ ಬೆಲೆಯಿರುತ್ತದೆ. ಎಲೆಕ್ಟ್ರಿಕ್ ವಾಹನದ ಬೆಲೆಯನ್ನು ಕಡಿಮೆ ಮಾಡಬೇಕಾದರೆ ಬ್ಯಾಟರಿಯ ಬೆಲೆಯನ್ನು ಕಡಿಮೆ ಮಾಡಬೇಕಾಗುತ್ತದೆ.

 ಇವಿ ವಾಹನಗಳ ಬೆಲೆ ಇಳಿಸಲು ಕೇಂದ್ರ ಸರ್ಕಾರ ಚಿಂತನೆ: ಬ್ಯಾಟರಿ ಮೇಲಿನ GST ಕಡಿಮೆಯಾಗುವ ಸಾಧ್ಯತೆ

ಕೇಂದ್ರ ಸರ್ಕಾರವು ಇದರ ಸಾಧ್ಯತೆಯನ್ನು ಅನ್ವೇಷಿಸುತ್ತಿದೆ. ಇದರ ಭಾಗವಾಗಿ, ಯೋಜನೆ ರೂಪಿಸಿರುವ ಹಣಕಾಸು ಆಯೋಗವು ಇದೀಗ ಲಿಥಿಯಂ-ಐಯಾನ್ ಬ್ಯಾಟರಿಗಳ ಮೇಲಿನ ಜಿಎಸ್‌ಟಿ ತೆರಿಗೆಯಲ್ಲಿ ಕಡಿತವನ್ನು ಘೋಷಿಸಿದೆ. ಅದರಂತೆ ಮುಂದಿನ ಜಿಎಸ್‌ಟಿ ಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆಯಿದೆ.

 ಇವಿ ವಾಹನಗಳ ಬೆಲೆ ಇಳಿಸಲು ಕೇಂದ್ರ ಸರ್ಕಾರ ಚಿಂತನೆ: ಬ್ಯಾಟರಿ ಮೇಲಿನ GST ಕಡಿಮೆಯಾಗುವ ಸಾಧ್ಯತೆ

ಎಲೆಕ್ಟ್ರಿಕ್ ವಾಹನಗಳು ಪ್ರಸ್ತುತ ಬ್ಯಾಟರಿಗಳ ಮೇಲೆ ಶೇಕಡಾ 18 ಮತ್ತು ಒಟ್ಟು ವಾಹನಗಳ ಮೇಲೆ 5 ಶೇಕಡಾ GST ಗೆ ಒಳಪಟ್ಟಿವೆ. 2018 ರ ಮೊದಲು, ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳ ಮೇಲಿನ GST ತೆರಿಗೆಯು ಶೇ28 ರಷ್ಟು ಇತ್ತು. ಆ ಬಳಿಕ ಅದನ್ನು ಶೇ.18ಕ್ಕೆ ಇಳಿಸಲಾಗಿದ್ದು, ಈಗ ಮತ್ತೆ ಬ್ಯಾಟರಿ ಮೇಲಿನ ತೆರಿಗೆಯನ್ನು ಇಳಿಸುವ ಪ್ರಯತ್ನಗಳು ನಡೆಯುತ್ತಿವೆ.

 ಇವಿ ವಾಹನಗಳ ಬೆಲೆ ಇಳಿಸಲು ಕೇಂದ್ರ ಸರ್ಕಾರ ಚಿಂತನೆ: ಬ್ಯಾಟರಿ ಮೇಲಿನ GST ಕಡಿಮೆಯಾಗುವ ಸಾಧ್ಯತೆ

ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳು ಶೇಕಡಾ 5 ರ ತೆರಿಗೆಯೊಳಗೆ ಬಂದರೆ ಎಲೆಕ್ಟ್ರಿಕ್ ವಾಹನಗಳ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ, ಇದು ಪ್ರಸ್ತುತ ಜಿಎಸ್‌ಟಿಯಲ್ಲಿ ಕಡಿಮೆ ಸ್ಲ್ಯಾಪ್ ಆಗಿದೆ. 10 ಲಕ್ಷ ಮೌಲ್ಯದ ಕಾರಿನ ಬೆಲೆ 30-40 ಸಾವಿರ ರೂ.ಗೆ ಇಳಿಕೆಯಾಗುವ ನಿರೀಕ್ಷೆ ಇದೆ. ಅದೇ ಸಮಯದಲ್ಲಿ ಈ ಬೆಲೆ ಕಡಿತವು ಕಾರುಗಳಿಗಿಂತ ಸ್ಕೂಟರ್‌ಗಳಿಗೆ ಉತ್ತಮ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

 ಇವಿ ವಾಹನಗಳ ಬೆಲೆ ಇಳಿಸಲು ಕೇಂದ್ರ ಸರ್ಕಾರ ಚಿಂತನೆ: ಬ್ಯಾಟರಿ ಮೇಲಿನ GST ಕಡಿಮೆಯಾಗುವ ಸಾಧ್ಯತೆ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಭವಿಷ್ಯವು ತುಂಬಾ ಹೆಚ್ಚಾಗಿರುತ್ತದೆ, ಅನೇಕ ಕಂಪನಿಗಳು ತಮ್ಮ ಎಲೆಕ್ಟ್ರಿಕ್ ವಾಹನ ಉತ್ಪನ್ನವನ್ನು ಭಾರತದಲ್ಲಿ ಉತ್ಪಾದಿಸಲು ಪ್ರಯತ್ನಿಸುತ್ತಿವೆ. ಟೆಸ್ಲಾ ಸಂಪೂರ್ಣವಾಗಿ ಜೋಡಿಸಲಾದ ಎಲೆಕ್ಟ್ರಿಕ್ ಕಾರುಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲು ತೆರಿಗೆ ವಿನಾಯಿತಿ ಕುರಿತು ಮಾತುಕತೆ ನಡೆಸಿದೆ. ಆದರೆ ಕೇಂದ್ರ ಸರ್ಕಾರ ರಾಜಿ ಮಾಡಿಕೊಳ್ಳಲಿಲ್ಲ. ಹೀಗಾಗಿ ಟೆಸ್ಲಾ ಈ ಯೋಜನೆಯನ್ನು ಕೈಬಿಟ್ಟಿದೆ.

 ಇವಿ ವಾಹನಗಳ ಬೆಲೆ ಇಳಿಸಲು ಕೇಂದ್ರ ಸರ್ಕಾರ ಚಿಂತನೆ: ಬ್ಯಾಟರಿ ಮೇಲಿನ GST ಕಡಿಮೆಯಾಗುವ ಸಾಧ್ಯತೆ

ಕಳಪೆ ಬ್ಯಾಟರಿಗಳಿಗೆ ಕಡಿವಾಣ

ಕಳಪೆ ಗುಣಮಟ್ಟದ ಬ್ಯಾಟರಿಗಳ ಬಳಕೆಯಿಂದಾಗಿ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ ಎಂಬುದು ಇದೀಗ ಬಹಿರಂಗವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳಿಗೆ ಬಿಐಎಸ್ ಪ್ರಮಾಣೀಕರಣವನ್ನು ಕಡ್ಡಾಯಗೊಳಿಸಲು ಯೋಜಿಸುತ್ತಿದೆ.

 ಇವಿ ವಾಹನಗಳ ಬೆಲೆ ಇಳಿಸಲು ಕೇಂದ್ರ ಸರ್ಕಾರ ಚಿಂತನೆ: ಬ್ಯಾಟರಿ ಮೇಲಿನ GST ಕಡಿಮೆಯಾಗುವ ಸಾಧ್ಯತೆ

ಕೇಂದ್ರ ಸರ್ಕಾರದ ಹಣಕಾಸು ಆಯೋಗವು ಬ್ಯಾಟರಿಗಳಿಗೆ ಬಿಐಎಸ್ ಪ್ರಮಾಣೀಕರಣವನ್ನು ನೀಡಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಲಾಗುತ್ತದೆ. ಅದರಂತೆ ಬ್ಯಾಟರಿಯ ಗಾತ್ರ, ಕನೆಕ್ಟರ್, ಕಾರ್ಯಕ್ಷಮತೆ, ಬ್ಯಾಟರಿಯಲ್ಲಿ ಬಳಸಲಾದ ಕೋಶಗಳ ಸಂಖ್ಯೆ ಮತ್ತು ಗಾತ್ರ ಮತ್ತು ಬ್ಯಾಟರಿಯ ಸಾಮರ್ಥ್ಯವನ್ನು ಈ ಮಾನದಂಡದ ಅಡಿಯಲ್ಲಿ ಮೇಲ್ವಿಚಾರಣೆ ಮತ್ತು ನಿಯಂತ್ರಿಸುವ ಸಾಧ್ಯತೆಯಿದೆ.

 ಇವಿ ವಾಹನಗಳ ಬೆಲೆ ಇಳಿಸಲು ಕೇಂದ್ರ ಸರ್ಕಾರ ಚಿಂತನೆ: ಬ್ಯಾಟರಿ ಮೇಲಿನ GST ಕಡಿಮೆಯಾಗುವ ಸಾಧ್ಯತೆ

ಭವಿಷ್ಯದಲ್ಲಿ ಇದು ಪ್ರಮುಖ ಸಮಸ್ಯೆಯಾಗುವುದರಿಂದ ಭಾರತದಲ್ಲಿ ಬ್ಯಾಟರಿ ವಿನಿಮಯಕ್ಕಾಗಿ ಬಿಐಎಸ್ ಪ್ರಮಾಣೀಕರಣ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

 ಇವಿ ವಾಹನಗಳ ಬೆಲೆ ಇಳಿಸಲು ಕೇಂದ್ರ ಸರ್ಕಾರ ಚಿಂತನೆ: ಬ್ಯಾಟರಿ ಮೇಲಿನ GST ಕಡಿಮೆಯಾಗುವ ಸಾಧ್ಯತೆ

ಪ್ರಸ್ತುತ ಬ್ಯಾಟರಿಗಳ ಮೇಲಿನ ನಿರ್ಬಂಧಗಳು ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಮಾತ್ರವಲ್ಲದೆ ಎಲೆಕ್ಟ್ರಿಕ್ ಕಾರುಗಳಿಗೂ ಅನ್ವಯಿಸುತ್ತವೆ. ಭವಿಷ್ಯದಲ್ಲಿ ಈ ಬ್ಯಾಟರಿಗಳ ಅಪಘಾತಗಳನ್ನು ತಪ್ಪಿಸಲು ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ.

 ಇವಿ ವಾಹನಗಳ ಬೆಲೆ ಇಳಿಸಲು ಕೇಂದ್ರ ಸರ್ಕಾರ ಚಿಂತನೆ: ಬ್ಯಾಟರಿ ಮೇಲಿನ GST ಕಡಿಮೆಯಾಗುವ ಸಾಧ್ಯತೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ತಯಾರಾದ ಎಲೆಕ್ಟ್ರಿಕ್ ಕಾರುಗಳು ಮುಂಬರುವ ವರ್ಷಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟವಾಗುವ ನಿರೀಕ್ಷೆಯಿದೆ. ಬೆಲೆಗಳು ಕುಸಿದರೆ, ಭವಿಷ್ಯದಲ್ಲಿ ಪೆಟ್ರೋಲ್ / ಡೀಸೆಲ್ ಕಾರುಗಳಿಗಿಂತ ಎಲೆಕ್ಟ್ರಿಕ್ ಕಾರುಗಳು ರಸ್ತೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹಾಗೆಯೇ ವಾಯು ಮಾಲಿನ್ಯ ಸಹ ನಿಧಾನವಾಗಿ ಹತೋಟಿಗೆ ಬರಲಿದೆ.

Article Published On: Thursday, June 9, 2022, 16:02 [IST]
English summary
GST on EV batteries could be reduced to bring down cost of electric vehicles
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+