ಎಥೆನಾಲ್ ಉತ್ಪಾದನೆ ಉತ್ತೇಜಿಸಲು ಜಾರಿಗೆ ಬರಲಿದೆ ಹೊಸ ನೀತಿ

ದೇಶದಲ್ಲಿ ಶುದ್ಧ ಇಂಧನವನ್ನು ಉತ್ತೇಜಿಸುವ ಸಲುವಾಗಿ, ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಗೆ ಒತ್ತು ನೀಡಲಾಗುತ್ತಿದೆ. ಎಥೆನಾಲ್ ಚಾಲಿತ ಫ್ಲೆಕ್ಸ್ ಎಂಜಿನ್ ವಾಹನಗಳಿಗಾಗಿ ಕೇಂದ್ರ ಸರ್ಕಾರವು ಶೀಘ್ರದಲ್ಲೇ ನೀತಿಯನ್ನು ಪ್ರಕಟಿಸಲಿದೆ. ಈಗ ಗುಜರಾತ್ ಸರ್ಕಾರವು ರಾಜ್ಯದಲ್ಲಿ ಎಥೆನಾಲ್ ಉತ್ಪಾದನೆಯನ್ನು ಉತ್ತೇಜಿಸಲು ಹೊಸ ನೀತಿಯನ್ನು ಜಾರಿಗೆ ತರಲು ಮುಂದಾಗುತ್ತಿದೆ.

ಎಥೆನಾಲ್ ಉತ್ಪಾದನೆ ಉತ್ತೇಜಿಸಲು ಜಾರಿಗೆ ಬರಲಿದೆ ಹೊಸ ನೀತಿ

ಕೇಂದ್ರ ಸರ್ಕಾರವು ಪೆಟ್ರೋಲ್‌ನಲ್ಲಿ ಎಥೆನಾಲ್ ಬಳಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಕೆಲವು ತಿಂಗಳ ಹಿಂದೆ ಕೇಂದ್ರ ಸರ್ಕಾರವು 2025-26 ರ ವೇಳೆಗೆ ಭಾರತದಾದ್ಯಂತ ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಣದೊಂದಿಗೆ ಪೆಟ್ರೋಲ್ ಅನ್ನು ಮಾರಾಟ ಮಾಡುವ ತನ್ನ ನೀತಿಯನ್ನು ಪ್ರಕಟಿಸಿತು. 2025 ರಿಂದ ಭಾರತದಲ್ಲಿ ಮಾರಾಟವಾಗುವ ಎಲ್ಲಾ ಹೊಸ ವಾಹನಗಳು E20 ಇಂಧನದೊಂದಿಗೆ ಚಲಿಸಬೇಕಾಗುತ್ತದೆ.

ಎಥೆನಾಲ್ ಉತ್ಪಾದನೆ ಉತ್ತೇಜಿಸಲು ಜಾರಿಗೆ ಬರಲಿದೆ ಹೊಸ ನೀತಿ

E20 ಪೆಟ್ರೋಲ್ 2023 ರಿಂದ ಭಾರತದಾದ್ಯಂತ ಲಭ್ಯವಾಗಲಿದೆ. ಈಗ ಭಾರತದಲ್ಲಿ E10 ಪೆಟ್ರೋಲ್ ಮಾರಾಟ ಮಾಡಲಾಗುತ್ತಿದೆ. ಗುಜರಾತ್‌ ಸರ್ಕಾರದ ಎಥೆನಾಲ್ ನೀತಿಯು ಕೇಂದ್ರ ಸರ್ಕಾರದ ಫ್ಲೆಕ್ಸ್ ಇಂಧನ ನೀತಿಗೆ ಅನುಗುಣವಾಗಿದೆ. ಗುಜರಾತ್ ರಾಜ್ಯದಲ್ಲಿ ಎಥೆನಾಲ್ ಉತ್ಪಾದನೆಯನ್ನು ಹೆಚ್ಚಿಸುವುದು ಈ ನೀತಿಯ ಪ್ರಮುಖ ಉದ್ದೇಶವಾಗಿದೆ. ಇದರಿಂದಾಗಿ 2025 ರಿಂದ E20 ಇಂಧನವು ಕಡ್ಡಾಯವಾದರೆ ಸಾಕಷ್ಟು ಎಥೆನಾಲ್ ಲಭ್ಯವಾಗಲಿದೆ.

ಎಥೆನಾಲ್ ಉತ್ಪಾದನೆ ಉತ್ತೇಜಿಸಲು ಜಾರಿಗೆ ಬರಲಿದೆ ಹೊಸ ನೀತಿ

ಈ ನೀತಿಯ ಅಡಿಯಲ್ಲಿ, ಗುಜರಾತ್ ಸರ್ಕಾರವು ಎಥೆನಾಲ್ ಘಟಕವನ್ನು ಸ್ಥಾಪಿಸಲು ರೂ. 10 ಕೋಟಿವರೆಗೆ 25% ನಷ್ಟು ಸಬ್ಸಿಡಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ರಾಜ್ಯ ಸರ್ಕಾರವು ಈ ಯೋಜನೆಗಳಿಗೆ ಸಾಲದ ಮೇಲೆ ಸಬ್ಸಿಡಿಯನ್ನು ನೀಡಲಿದೆ. ಅಲ್ಲದೆ ಇದರ ಅಡಿಯಲ್ಲಿ ರಾಜ್ಯ ಸರ್ಕಾರವು ಐದು ವರ್ಷಗಳವರೆಗೆ 100% ರಾಜ್ಯ ಜಿ‌ಎಸ್‌ಟಿ ಹಾಗೂ ವಿದ್ಯುತ್ ವೆಚ್ಚದಲ್ಲಿ ರಿಯಾಯಿತಿಯನ್ನು ನೀಡುತ್ತದೆ.

ಎಥೆನಾಲ್ ಉತ್ಪಾದನೆ ಉತ್ತೇಜಿಸಲು ಜಾರಿಗೆ ಬರಲಿದೆ ಹೊಸ ನೀತಿ

ಅಂದ ಹಾಗೆ ಎಥೆನಾಲ್ ಅನ್ನು ಜೋಳದಿಂದ ಉತ್ಪಾದಿಸಲಾಗುತ್ತದೆ. ಎಥೆನಾಲ್ ಉತ್ಪಾದನೆಗೆ ಮೆಕ್ಕೆಜೋಳ ಬೆಳೆಯುವ ರೈತರಿಗೆ ಪ್ರೋತ್ಸಾಹಧನ ನೀಡಲು ಗುಜರಾತ್ ರಾಜ್ಯ ಸರ್ಕಾರವು ನಿರ್ಧರಿಸಿದೆ. ಎಥೆನಾಲ್ ಶುದ್ಧ ಇಂಧನವಾಗಿದ್ದು, ಇದನ್ನು ಪೆಟ್ರೋಲ್‌ಗೆ ಪರ್ಯಾಯ ಇಂಧನವಾಗಿ ಬಳಸಬಹುದು. ಇದು ಮಾಲಿನ್ಯಕಾರಕಗಳ ಹೊರಸೂಸುವಿಕೆಯ ಮಟ್ಟವನ್ನು ಕಡಿಮೆ ಮಾಡುತ್ತದೆ.

ಎಥೆನಾಲ್ ಉತ್ಪಾದನೆ ಉತ್ತೇಜಿಸಲು ಜಾರಿಗೆ ಬರಲಿದೆ ಹೊಸ ನೀತಿ

ಎಥೆನಾಲ್ ಅನ್ನು ಪೆಟ್ರೋಲ್ ನೊಂದಿಗೆ ಬೆರೆಸುವ ಮೂಲಕವೂ ಬಳಸಬಹುದು. ಬ್ರೆಜಿಲ್ ಹಾಗೂ ಅಮೆರಿಕಾ, ವಾಹನಗಳಲ್ಲಿ ಎಥೆನಾಲ್ ಬಳಕೆಯನ್ನು ಉತ್ತೇಜಿಸುವ ಎರಡು ಪ್ರಮುಖ ದೇಶಗಳಾಗಿವೆ. ಈ ಎರಡು ದೇಶಗಳಲ್ಲಿ ಹಲವು ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳನ್ನು ಫ್ಲೆಕ್ಸ್ ಇಂಧನ ಎಂಜಿನ್‌ಗಳೊಂದಿಗೆ ಮಾರಾಟ ಮಾಡುತ್ತವೆ. ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ರವರು ಭಾರತದಲ್ಲಿರುವ ವಾಹನಗಳಲ್ಲಿ ಫ್ಲೆಕ್ಸ್ ಇಂಧನ ಎಂಜಿನ್ ಹಾಗೂ ಎಥೆನಾಲ್ ಬಳಕೆಯನ್ನು ಬಲವಾಗಿ ಬೆಂಬಲಿಸುತ್ತಾರೆ.

ಎಥೆನಾಲ್ ಉತ್ಪಾದನೆ ಉತ್ತೇಜಿಸಲು ಜಾರಿಗೆ ಬರಲಿದೆ ಹೊಸ ನೀತಿ

ಕೇಂದ್ರ ಸರ್ಕಾರವು ಶೀಘ್ರದಲ್ಲೇ ಫ್ಲೆಕ್ಸ್ ಫ್ಯೂಯಲ್ ಎಂಜಿನ್ ನೀತಿಯನ್ನು ಜಾರಿಗೊಳಿಸಲಿದೆ ಎಂದು ಅವರು ಕೆಲವು ದಿನಗಳ ಹಿಂದಷ್ಟೇ ಹೇಳಿದ್ದರು. ಈ ನೀತಿ ಜಾರಿಯಾದ ನಂತರ ದೇಶದಲ್ಲಿ ಫ್ಲೆಕ್ಸ್ ಇಂಧನ ಹೊಂದಿರುವ ವಾಹನಗಳ ತಯಾರಿಕೆ ಕಡ್ಡಾಯವಾಗಲಿದೆ. ಫ್ಲೆಕ್ಸ್ ಇಂಧನದ ಮೂಲಕ ಭಾರತದಲ್ಲಿ ಪ್ರತಿ ವರ್ಷ ರೂ. 1 ಲಕ್ಷ ಕೋಟಿಗೂ ಹೆಚ್ಚು ಎಥೆನಾಲ್ ವ್ಯವಹಾರ ಮಾಡಬಹುದು.

ಎಥೆನಾಲ್ ಉತ್ಪಾದನೆ ಉತ್ತೇಜಿಸಲು ಜಾರಿಗೆ ಬರಲಿದೆ ಹೊಸ ನೀತಿ

ಎಥೆನಾಲ್ ಬಳಕೆಯಿಂದ ಪೆಟ್ರೋಲ್ ಆಮದು ಕಡಿಮೆಯಾಗಲಿದ್ದು, ಕೋಟ್ಯಂತರ ರೂಪಾಯಿ ಆದಾಯ ಉಳಿತಾಯವಾಗಲಿದೆ. ಇದಲ್ಲದೇ ಎಥೆನಾಲ್ ಮಿಶ್ರಿತ ಫ್ಲೆಕ್ಸ್ ಇಂಧನ ಬಳಕೆಯಿಂದ ವಾಹನ ಮಾಲಿನ್ಯವೂ ಕಡಿಮೆಯಾಗಲಿದೆ. ಬ್ರೆಜಿಲ್, ಕೆನಡಾ ಹಾಗೂ ಅಮೆರಿಕಾದಂತಹ ದೇಶಗಳು ಫ್ಲೆಕ್ಸ್ ಇಂಧನದಲ್ಲಿ ಚಲಿಸುವ ವಾಹನಗಳನ್ನು ಉತ್ಪಾದಿಸುತ್ತಿವೆ. ಈ ದೇಶಗಳಲ್ಲಿ ಗ್ರಾಹಕರು 100% ಪೆಟ್ರೋಲ್ ಅಥವಾ 100% ಎಥೆನಾಲ್ ನಲ್ಲಿ ಚಲಿಸುವ ವಾಹನಗಳನ್ನು ಆಯ್ಕೆ ಮಾಡಬಹುದು.

ಎಥೆನಾಲ್ ಉತ್ಪಾದನೆ ಉತ್ತೇಜಿಸಲು ಜಾರಿಗೆ ಬರಲಿದೆ ಹೊಸ ನೀತಿ

ಜೈವಿಕ ಇಂಧನ ಅಂದರೆ ಎಥೆನಾಲ್ ಬೆಲೆ ಪೆಟ್ರೋಲ್ ಬೆಲೆಗಿಂತ ರೂ. 30ರಿಂದ ರೂ. 35 ರಷ್ಟು ಕಡಿಮೆಯಾಗಿರುತ್ತದೆ. ಎಥೆನಾಲ್ ಪೆಟ್ರೋಲಿಯಂ ಉತ್ಪನ್ನವಲ್ಲದ ಕಾರಣ, ಪೆಟ್ರೋಲ್ ಬೆಲೆಯಲ್ಲಿನ ಏರಿಳಿತಗಳು ಎಥೆನಾಲ್ ಬೆಲೆಯ ಮೇಲೆ ಪರಿಣಾಮ ಬೀರುವುದಿಲ್ಲ. ಎಥೆನಾಲ್ ತಯಾರಿಸಲು ನಮ್ಮ ದೇಶದಲ್ಲಿಯೇ ಸಾಕಷ್ಟು ಪ್ರಮಾಣದ ಜೋಳ, ಕಬ್ಬು ಹಾಗೂ ಗೋಧಿಯನ್ನು ಬೆಳೆಯಬಹುದು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

ಎಥೆನಾಲ್ ಉತ್ಪಾದನೆ ಉತ್ತೇಜಿಸಲು ಜಾರಿಗೆ ಬರಲಿದೆ ಹೊಸ ನೀತಿ

ಆಟೋ ಕಂಪನಿಗಳು ಫ್ಲೆಕ್ಸ್ ಇಂಜಿನ್ ವಾಹನಗಳನ್ನು ಪರಿಚಯಿಸಿದರೆ, ಅಗ್ಗದ ಇಂಧನದ ಪ್ರಯೋಜನವನ್ನು ಪಡೆಯಬಹುದು ಹಾಗೂ ಮಾಲಿನ್ಯದ ವಿರುದ್ಧ ಹೋರಾಡಲು ಸಹಾಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಎಥೆನಾಲ್ ಉತ್ಪಾದನೆ ಉತ್ತೇಜಿಸಲು ಜಾರಿಗೆ ಬರಲಿದೆ ಹೊಸ ನೀತಿ

ಇನ್ನು ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಏರಿಕೆಯಾಗುತ್ತಲೇ ಇವೆ. ಇಂಧನಗಳ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರು ಹೈರಣಾಗಿದ್ದಾರೆ. ಭಾರತದ ಬಹುತೇಕ ಎಲ್ಲಾ ನಗರಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ. 100 ಗಳ ಗಡಿ ದಾಟಿದೆ. ಇಂಧನಗಳ ಬೆಲೆ ಏರಿಕೆಗೆ - ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ, ಒಪೆಕ್ ದೇಶಗಳು ಕಡಿಮೆ ಪ್ರಮಾಣದಲ್ಲಿ ಇಂಧನ ಉತ್ಪಾದಿಸುತ್ತಿರುವುದು, ಭಾರತದಲ್ಲಿ ಇಂಧನಗಳ ಮೇಲೆ ವಿಧಿಸಲಾಗುವ ವಿವಿಧ ತೆರಿಗೆಗಳು ಸೇರಿದಂತೆ ಹಲವು ಕಾರಣಗಳಿವೆ.

ಎಥೆನಾಲ್ ಉತ್ಪಾದನೆ ಉತ್ತೇಜಿಸಲು ಜಾರಿಗೆ ಬರಲಿದೆ ಹೊಸ ನೀತಿ

ದೀಪಾವಳಿಗೂ ಮುನ್ನ ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿತ್ತು. ಇದಾದ ನಂತರ ಹಲವು ರಾಜ್ಯ ಸರ್ಕಾರಗಳು ಸಹ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಕಡಿಮೆ ಮಾಡಲು ತಮ್ಮ ವ್ಯಾಟ್‌ ಶುಲ್ಕವನ್ನು ಕಡಿಮೆ ಮಾಡಿವೆ. ತೆರಿಗೆ ಕಡಿತದ ನಂತರ ವ್ಯಾಟ್ ಹಾಗೂ ಸೇವಾ ಶುಲ್ಕವು ಪೆಟ್ರೋಲ್ ಮೇಲೆ 50% ನಷ್ಟು ಹಾಗೂ ಡೀಸೆಲ್ ಮೇಲೆ 40% ನಷ್ಟು ಕಡಿಮೆಯಾಗಿದೆ.

ಎಥೆನಾಲ್ ಉತ್ಪಾದನೆ ಉತ್ತೇಜಿಸಲು ಜಾರಿಗೆ ಬರಲಿದೆ ಹೊಸ ನೀತಿ

ಇಂಧನದ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಪೆಟ್ರೋಲ್, ಡೀಸೆಲ್ ಬೆಲೆಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ. ಆದರೆ ಆದಾಯದ ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಹಲವು ರಾಜ್ಯ ಸರ್ಕಾರಗಳು ಇಂಧನದ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದನ್ನು ವಿರೋಧಿಸುತ್ತಿವೆ. ಕೆಲವು ದಿಂಗಳ ಹಿಂದಷ್ಟೇ ಕೇಂದ್ರ ಸರ್ಕಾರವು ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವುದಿಲ್ಲವೆಂದು ತಿಳಿಸಿತ್ತು. ಆದರೆ ಈಗ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Gujarat government to bring policy to promote ethanol production details
Story first published: Tuesday, December 7, 2021, 14:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X