ಹಳೆ ಸೀಟ್ ಬೆಲ್ಟ್ ಬಳಸಿ ಆಕರ್ಷಕವಾದ ಪರಿಸರ ಸ್ನೇಹಿ ಬ್ಯಾಗ್'ಗಳನ್ನು ತಯಾರಿಸುತ್ತದೆ ಈ ಸ್ಟಾರ್ಟ್ ಅಪ್ ಕಂಪನಿ

ಆಟೋ ಮೊಬೈಲ್, ಎಲೆಕ್ಟ್ರಾನಿಕ್ಸ್ ಮುಂತಾದ ಉದ್ಯಮಗಳಿಂದ ಹೊರಬರುವ ತ್ಯಾಜ್ಯವನ್ನು ಕೈಗಾರಿಕಾ ತ್ಯಾಜ್ಯವೆಂದು ಕರೆಯಲಾಗುತ್ತದೆ. ಹಳೆಯ ಅನುಪಯುಕ್ತ ಕಾರುಗಳನ್ನು ಸಹ ಕೈಗಾರಿಕಾ ತ್ಯಾಜ್ಯಗಳೆಂದೇ ಪರಿಗಣಿಸಲಾಗುತ್ತದೆ.

ಹಳೆ ಸೀಟ್ ಬೆಲ್ಟ್ ಬಳಸಿ ಆಕರ್ಷಕವಾದ ಪರಿಸರ ಸ್ನೇಹಿ ಬ್ಯಾಗ್'ಗಳನ್ನು ತಯಾರಿಸುತ್ತದೆ ಈ ಸ್ಟಾರ್ಟ್ ಅಪ್ ಕಂಪನಿ

ಇತ್ತೀಚಿನ ದಿನಗಳಲ್ಲಿ ಬಹುತೇಕ ಕಂಪನಿಗಳು ತಮ್ಮ ವ್ಯವಹಾರವನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಪರಿಸರ ಸಂರಕ್ಷಣೆಗೂ ಆದ್ಯತೆ ನೀಡುತ್ತವೆ. ಕೈಗಾರಿಕಾ ತ್ಯಾಜ್ಯಗಳನ್ನು ಮರುಬಳಕೆ ಮಾಡಿ ವಸ್ತುಗಳನ್ನು ಉತ್ಪಾದಿಸುವ ಟ್ರೆಂಡ್ ಹೆಚ್ಚಾಗುತ್ತಿದೆ. ಇದೇ ರೀತಿಯ ಉದ್ಯಮವೊಂದು ಗುರುಗ್ರಾಮದಲ್ಲಿ ನೆಲೆಯೂರಿದೆ.

ಹಳೆ ಸೀಟ್ ಬೆಲ್ಟ್ ಬಳಸಿ ಆಕರ್ಷಕವಾದ ಪರಿಸರ ಸ್ನೇಹಿ ಬ್ಯಾಗ್'ಗಳನ್ನು ತಯಾರಿಸುತ್ತದೆ ಈ ಸ್ಟಾರ್ಟ್ ಅಪ್ ಕಂಪನಿ

ಈ ಉದ್ಯಮದಲ್ಲಿ ಹಳೆಯ ಕಾರುಗಳಲ್ಲಿರುವ ಸೀಟ್ ಬೆಲ್ಟ್‌ಗಳನ್ನು ಮರು ಬಳಕೆ ಮಾಡುವ ಮೂಲಕ ಆಕರ್ಷಕವಾದ ಪರಿಸರ ಸ್ನೇಹಿ ಬ್ಯಾಗ್'ಗಳನ್ನು ತಯಾರಿಸಲಾಗುತ್ತದೆ. ಹಳೆಯ, ಅನುಪಯುಕ್ತ ಕಾರುಗಳ ಬಹುತೇಕ ಎಲ್ಲಾ ಬಿಡಿ ಭಾಗಗಳನ್ನು ಮರುಬಳಕೆ ಮಾಡಲಾಗುತ್ತದೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಹಳೆ ಸೀಟ್ ಬೆಲ್ಟ್ ಬಳಸಿ ಆಕರ್ಷಕವಾದ ಪರಿಸರ ಸ್ನೇಹಿ ಬ್ಯಾಗ್'ಗಳನ್ನು ತಯಾರಿಸುತ್ತದೆ ಈ ಸ್ಟಾರ್ಟ್ ಅಪ್ ಕಂಪನಿ

ಆದರೆ ಇದೇ ಮೊದಲ ಬಾರಿಗೆ ಸೀಟ್ ಬೆಲ್ಟ್‌ಗಳನ್ನು ಮರು ಬಳಕೆ ಮಾಡಿ ಜ್ಯಾಗರಿ ಬ್ಯಾಗ್ಸ್ ಕಂಪನಿಯು ಪರಿಸರ ಸ್ನೇಹಿ ಬ್ಯಾಗ್'ಗಳನ್ನು ತಯಾರಿಸುತ್ತಿದೆ. ಈ ಕಂಪನಿಯನ್ನು ಗೌತಮ್ ಮಲಿಕ್ ಎಂಬುವವರು ನಡೆಸುತ್ತಿದ್ದಾರೆ. ಈ ಉದ್ಯಮದಲ್ಲಿ ಅವರಿಗೆ ತಾಯಿ ಡಾ.ಉಶಾ ಮಲಿಕ್ ಹಾಗೂ ಪತ್ನಿ ಭಾವನಾ ದಂಡೋನಾ ಸಾಥ್ ನೀಡಿದ್ದಾರೆ.

ಹಳೆ ಸೀಟ್ ಬೆಲ್ಟ್ ಬಳಸಿ ಆಕರ್ಷಕವಾದ ಪರಿಸರ ಸ್ನೇಹಿ ಬ್ಯಾಗ್'ಗಳನ್ನು ತಯಾರಿಸುತ್ತದೆ ಈ ಸ್ಟಾರ್ಟ್ ಅಪ್ ಕಂಪನಿ

ಈ ಬಗ್ಗೆ ದಿ ಬೆಟರ್ ಇಂಡಿಯಾ ಜೊತೆ ಮಾತನಾಡಿರುವ 44 ವರ್ಷದ ಗೌತಮ್ ಮಲಿಕ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ನಾನು ದೆಹಲಿಯಲ್ಲಿ ಶಾಲೆಯನ್ನು ಮುಗಿಸಿದ ನಂತರ ಪುಣೆ ವಿಶ್ವವಿದ್ಯಾಲಯದಲ್ಲಿ ಆರ್ಕಿಟೆಕ್ಚರ್ ಅಧ್ಯಯನ ನಡೆಸಿದೆ.

MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಹಳೆ ಸೀಟ್ ಬೆಲ್ಟ್ ಬಳಸಿ ಆಕರ್ಷಕವಾದ ಪರಿಸರ ಸ್ನೇಹಿ ಬ್ಯಾಗ್'ಗಳನ್ನು ತಯಾರಿಸುತ್ತದೆ ಈ ಸ್ಟಾರ್ಟ್ ಅಪ್ ಕಂಪನಿ

ಅಧ್ಯಯನ ನಡೆಸುವಾಗ ನನಗೆ ಆರೊವಿಲ್ಲೆಗೆ ಹೋಗುವ ಅವಕಾಶ ದೊರೆತಿತ್ತು. ಅರೋವಿಲ್ಲೆಯಲ್ಲಿ ಹೆಚ್ಚಾಗಿ ವಿನ್ಯಾಸದ ಬಗ್ಗೆ ಕಲಿಸಲಾಗುತ್ತಿತ್ತು. ನನಗೆ ಮನೆ ಹಾಗೂ ಕಟ್ಟಡಗಳ ನಿರ್ಮಾಣದಲ್ಲಿ ಬಳಸಲಾಗುವ ಪರಿಸರ ಸ್ನೇಹಿ ಕಚ್ಚಾ ವಸ್ತುಗಳ ಬಗ್ಗೆ ಹೆಚ್ಚಿನ ಆಸಕ್ತಿ ಇತ್ತು ಎಂದು ಹೇಳಿದ್ದಾರೆ.

ಹಳೆ ಸೀಟ್ ಬೆಲ್ಟ್ ಬಳಸಿ ಆಕರ್ಷಕವಾದ ಪರಿಸರ ಸ್ನೇಹಿ ಬ್ಯಾಗ್'ಗಳನ್ನು ತಯಾರಿಸುತ್ತದೆ ಈ ಸ್ಟಾರ್ಟ್ ಅಪ್ ಕಂಪನಿ

ಆರ್ಕಿಟೆಕ್ಚರ್'ನಲ್ಲಿ ಪದವಿ ಪಡೆದ ನಂತರ ಅವರು ಅಮೆರಿಕಾಗೆ ತೆರಳಿ, ಅಲ್ಲಿ ಫಿಲ್ಮ್ ಅಂಡ್ ಮೀಡಿಯಾ ಸ್ಟಡೀಸ್'ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಅವರು ಅಮೆರಿಕಾದಲ್ಲಿಯೇ ಡಿಸೈನಿಂಗ್ ಅಂಡ್ ಗ್ರಾಫಿಕ್ಸ್ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದರು.

MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಹಳೆ ಸೀಟ್ ಬೆಲ್ಟ್ ಬಳಸಿ ಆಕರ್ಷಕವಾದ ಪರಿಸರ ಸ್ನೇಹಿ ಬ್ಯಾಗ್'ಗಳನ್ನು ತಯಾರಿಸುತ್ತದೆ ಈ ಸ್ಟಾರ್ಟ್ ಅಪ್ ಕಂಪನಿ

ಅವರ ಗಮನವು ಯಾವಾಗಲೂ ಜನರು ಬಳಸುವ ಬ್ಯಾಗ್'ಗಳ ಮೇಲೆ ಇರುತ್ತಿತ್ತು. ಜನರು ತಮ್ಮ ವ್ಯಕ್ತಿತ್ವಕ್ಕೆ ಅನುಗುಣವಾಗಿ ಬ್ಯಾಗ್'ಗಳನ್ನು ಒಯ್ಯುವುದನ್ನು ಅವರು ಗಮನಿಸುತ್ತಿದ್ದರು. ಹೀಗೆ ಗಮನಿಸುವಾಗ ಬ್ಯಾಗ್'ಗಳ ವಿನ್ಯಾಸ ಬಹಳ ಮುಖ್ಯ ಎಂಬುದು ಅವರ ಅರಿವಿಗೆ ಬಂದಿದೆ.

ಹಳೆ ಸೀಟ್ ಬೆಲ್ಟ್ ಬಳಸಿ ಆಕರ್ಷಕವಾದ ಪರಿಸರ ಸ್ನೇಹಿ ಬ್ಯಾಗ್'ಗಳನ್ನು ತಯಾರಿಸುತ್ತದೆ ಈ ಸ್ಟಾರ್ಟ್ ಅಪ್ ಕಂಪನಿ

ಈ ವೇಳೆ ಅವರು ಬ್ಯಾಗ್'ಗಳನ್ನು ತಯಾರಿಸಲು ಟ್ರಕ್‌ಗಳಲ್ಲಿ ಬಳಸಲಾಗುವ ಟಾರ್ಪಾಲಿನ್ ಅನ್ನು ಮರುಬಳಕೆ ಮಾಡುತ್ತಿದ್ದ ಸ್ವಿಟ್ಜರ್ಲೆಂಡ್ ಕಂಪನಿಯ ಬಗ್ಗೆ ತಿಳಿದುಕೊಂಡರು. ಟ್ರಕ್‌ಗಳಲ್ಲಿ ಲಗೇಜ್'ಗಳನ್ನು ಕವರ್ ಮಾಡಲು ಟಾರ್ಪಾಲಿನ್ ಬಳಸಲಾಗುತ್ತದೆ.

MOST READ: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಹಳೆ ಸೀಟ್ ಬೆಲ್ಟ್ ಬಳಸಿ ಆಕರ್ಷಕವಾದ ಪರಿಸರ ಸ್ನೇಹಿ ಬ್ಯಾಗ್'ಗಳನ್ನು ತಯಾರಿಸುತ್ತದೆ ಈ ಸ್ಟಾರ್ಟ್ ಅಪ್ ಕಂಪನಿ

ಟಾರ್ಪಾಲಿನ್ ತಯಾರಿಸಲು ಗಟ್ಟಿಯಾದ ಪ್ಲಾಸ್ಟಿಕ್ ಸೇರಿದಂತೆ ಹಲವು ವಸ್ತುಗಳನ್ನು ಬಳಸಲಾಗುತ್ತದೆ. ಈ ಕಂಪನಿಯ ಬಗ್ಗೆ ತಿಳಿದ ನಂತರ ಗೌತಮ್‌ರವರಿಗೆ ತ್ಯಾಜ್ಯವನ್ನು ಮರುಬಳಕೆ ಮಾಡಿ ವಸ್ತುಗಳನ್ನು ತಯಾರಿಸುವ ಬಗ್ಗೆ ಆಲೋಚನೆ ಮೂಡಿದೆ. ಈ ಆಲೋಚನೆಯ ಮೇಲೆ ಅವರು 2010ರಲ್ಲಿ ಭಾರತಕ್ಕೆ ವಾಪಸ್ಸಾದರು.

ಹಳೆ ಸೀಟ್ ಬೆಲ್ಟ್ ಬಳಸಿ ಆಕರ್ಷಕವಾದ ಪರಿಸರ ಸ್ನೇಹಿ ಬ್ಯಾಗ್'ಗಳನ್ನು ತಯಾರಿಸುತ್ತದೆ ಈ ಸ್ಟಾರ್ಟ್ ಅಪ್ ಕಂಪನಿ

ಭಾರತಕ್ಕೆ ಮರಳಿದ ಗೌತಮ್ ತಮ್ಮದೇ ಆದ ವಿನ್ಯಾಸ ಕಂಪನಿಯನ್ನು ಪ್ರಾರಂಭಿಸಿದರು. ಸುಮಾರು ಎರಡು ವರ್ಷಗಳ ನಂತರ ಅವರು ಜಬಾಂಗ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರು. ಈ ವೇಳೆ ಅವರು ಭಾರತದಲ್ಲಿ ಲಭ್ಯವಿರುವ ಕೈಗಾರಿಕಾ ತ್ಯಾಜ್ಯಗಳ ಬಗ್ಗೆ ಸಂಶೋಧನೆ ನಡೆಸಿದರು.

MOST READ: ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಹಳೆ ಸೀಟ್ ಬೆಲ್ಟ್ ಬಳಸಿ ಆಕರ್ಷಕವಾದ ಪರಿಸರ ಸ್ನೇಹಿ ಬ್ಯಾಗ್'ಗಳನ್ನು ತಯಾರಿಸುತ್ತದೆ ಈ ಸ್ಟಾರ್ಟ್ ಅಪ್ ಕಂಪನಿ

ಅವರು ತಮ್ಮದೇ ಆದ ಸ್ಟಾರ್ಟ್ ಅಪ್ ಕಂಪನಿಯನ್ನು ಆರಂಭಿಸಲು ನಿರ್ಧರಿಸಿದ್ದರು. ಆರಂಭದಲ್ಲಿ, ಭಾರತದಲ್ಲಿ ಟಾರ್ಪಾಲಿನ್ ಮರುಬಳಕೆ ಮಾಡಿ ಬ್ಯಾಗ್ ಉತ್ಪಾದಿಸಲು ನಿರ್ಧರಿಸಿದ್ದರು.

ಹಳೆ ಸೀಟ್ ಬೆಲ್ಟ್ ಬಳಸಿ ಆಕರ್ಷಕವಾದ ಪರಿಸರ ಸ್ನೇಹಿ ಬ್ಯಾಗ್'ಗಳನ್ನು ತಯಾರಿಸುತ್ತದೆ ಈ ಸ್ಟಾರ್ಟ್ ಅಪ್ ಕಂಪನಿ

ಆದರೆ ಇಲ್ಲಿ ಬಳಸುವ ಟಾರ್ಪಾಲಿನ್‌ನ ಗುಣಮಟ್ಟ ಅಷ್ಟು ಉತ್ತಮವಾಗಿಲ್ಲದ ಕಾರಣ ಹಳೆಯ ಕಾರುಗಳ ಸೀಟ್ ಬೆಲ್ಟ್‌ಗಳ ಮೂಲಕ ಬ್ಯಾಗ್ ತಯಾರಿಸಲು ನಿರ್ಧರಿಸಿದರು. ಅವರು ಕೈಗಾರಿಕಾ ತ್ಯಾಜ್ಯ ವಸ್ತುಗಳಿಗೆ ಜನಪ್ರಿಯವಾಗಿರುವ ದೆಹಲಿಯ ಮಾಯಾಪುರಿಯಿಂದ ಹಳೆಯ ಸೀಟ್ ಬೆಲ್ಟ್‌ಗಳನ್ನು ಪಡೆಯಲು ಆರಂಭಿಸಿದರು.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಹಳೆ ಸೀಟ್ ಬೆಲ್ಟ್ ಬಳಸಿ ಆಕರ್ಷಕವಾದ ಪರಿಸರ ಸ್ನೇಹಿ ಬ್ಯಾಗ್'ಗಳನ್ನು ತಯಾರಿಸುತ್ತದೆ ಈ ಸ್ಟಾರ್ಟ್ ಅಪ್ ಕಂಪನಿ

ಈ ಸೀಟ್ ಬೆಲ್ಟ್‌ಗಳಿಂದ ಬ್ಯಾಗ್ ತಯಾರಿಸಿ, ಜನರ ನಡುವೆ ಸಮೀಕ್ಷೆ ನಡೆಸಿದರು. ಈ ಸಮೀಕ್ಷೆಯಲ್ಲಿ ಭಾರತೀಯರು ಮಾತ್ರವಲ್ಲದೇ ಇತರ ದೇಶಗಳ ಜನರು ಸಹ ಭಾಗಿಯಾಗಿದ್ದರು. ಸಮೀಕ್ಷೆಯಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಕಾರಣ 2015ರಲ್ಲಿ ಅವರು ತಮ್ಮ ಜ್ಯಾಗರಿ ಬ್ಯಾಗ್ಸ್ ಸ್ಟಾರ್ಟ್ ಅಪ್ ಕಂಪನಿಯನ್ನು ಆರಂಭಿಸಿದರು.

ಹಳೆ ಸೀಟ್ ಬೆಲ್ಟ್ ಬಳಸಿ ಆಕರ್ಷಕವಾದ ಪರಿಸರ ಸ್ನೇಹಿ ಬ್ಯಾಗ್'ಗಳನ್ನು ತಯಾರಿಸುತ್ತದೆ ಈ ಸ್ಟಾರ್ಟ್ ಅಪ್ ಕಂಪನಿ

ಈ ಕಂಪನಿಯ ಮೂಲಕ ಅವರು ಹಳೆಯ ಸೀಟ್ ಬೆಲ್ಟ್‌ಗಳ ಜೊತೆಗೆ ಕಾರ್ಗೋ ಬೆಲ್ಟ್‌ಗಳನ್ನು ಬಳಸಿ ಹ್ಯಾಂಡ್ ಬ್ಯಾಗ್, ಲ್ಯಾಪ್‌ಟಾಪ್ ಬ್ಯಾಗ್'ಗಳನ್ನು ಸಹ ತಯಾರಿಸುತ್ತಿದ್ದಾರೆ. ಗೌತಮ್ ಈ ಬ್ಯಾಗ್'ಗಳಿಗೆ ಕಚ್ಚಾ ವಸ್ತುಗಳನ್ನು ಹುಡುಕುವುದು, ವಿನ್ಯಾಸಗೊಳಿಸುವುದು, ಮಾರ್ಕೆಟಿಂಗ್ ಸೇರಿದಂತೆ ಎಲ್ಲಾ ಕಾರ್ಯಗಳನ್ನು ನಿಭಾಯಿಸಿದ್ದಾರೆ.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಹಳೆ ಸೀಟ್ ಬೆಲ್ಟ್ ಬಳಸಿ ಆಕರ್ಷಕವಾದ ಪರಿಸರ ಸ್ನೇಹಿ ಬ್ಯಾಗ್'ಗಳನ್ನು ತಯಾರಿಸುತ್ತದೆ ಈ ಸ್ಟಾರ್ಟ್ ಅಪ್ ಕಂಪನಿ

ಮೊದಲಿಗೆ ಕಚ್ಚಾ ವಸ್ತುವು ವಿವಿಧ ಘಟಕಗಳಿಂದ ಅವರ ಉತ್ಪಾದನಾ ಘಟಕಕ್ಕೆ ಆಗಮಿಸುತ್ತದೆ. ನಂತರ ಅದನ್ನು ಸ್ವಚ್ಛಗೊಳಿಸಲಾಗುತ್ತದೆ. ನಂತರ ಪ್ರತ್ಯೇಕ ಉತ್ಪನ್ನಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ವಿನ್ಯಾಸಕ್ಕೆ ವಿಶೇಷ ಗಮನ ನೀಡುವ ಅವರು ವಿನ್ಯಾಸಗಳಲ್ಲಿ ಕಾಂತಾ ಕಸೂತಿಯನ್ನು ಬಳಸುತ್ತಾರೆ.

ಹಳೆ ಸೀಟ್ ಬೆಲ್ಟ್ ಬಳಸಿ ಆಕರ್ಷಕವಾದ ಪರಿಸರ ಸ್ನೇಹಿ ಬ್ಯಾಗ್'ಗಳನ್ನು ತಯಾರಿಸುತ್ತದೆ ಈ ಸ್ಟಾರ್ಟ್ ಅಪ್ ಕಂಪನಿ

ತಮ್ಮ ಸ್ಟಾರ್ಟ್ ಅಪ್ ಕಂಪನಿಯ ಮೂಲಕ ಅವರು ಇದುವರೆಗೂ 3960 ಮೀಟರ್ ಅನುಪಯುಕ್ತ ಹಳೆಯ ಕಾರ್ ಸೀಟ್ ಬೆಲ್ಟ್‌ಗಳನ್ನು ಹಾಗೂ 900 ಮೀಟರ್‌ಗಿಂತ ಹೆಚ್ಚು ಕಾರ್ಗೋ ಸೀಟ್ ಬೆಲ್ಟ್‌ಗಳನ್ನು ಮರುಬಳಕೆ ಮಾಡಿದ್ದಾರೆ. ತಮ್ಮ ಸ್ಟಾರ್ಟ್ಅಪ್'ನಲ್ಲಿ ಅವರು 15 ಜನರಿಗೆ ಉದ್ಯೋಗ ನೀಡಿದ್ದಾರೆ. ಇದರಲ್ಲಿ ಬಹುಪಾಲು ಉದ್ಯೋಗಿಗಳು ಮಹಿಳೆಯರು ಎಂಬುದು ವಿಶೇಷ.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಹಳೆ ಸೀಟ್ ಬೆಲ್ಟ್ ಬಳಸಿ ಆಕರ್ಷಕವಾದ ಪರಿಸರ ಸ್ನೇಹಿ ಬ್ಯಾಗ್'ಗಳನ್ನು ತಯಾರಿಸುತ್ತದೆ ಈ ಸ್ಟಾರ್ಟ್ ಅಪ್ ಕಂಪನಿ

ಅವರು ತಯಾರಿಸಿರುವ ಬ್ಯಾಗ್'ಗಳು ಭಾರತದಲ್ಲಿ ಮಾತ್ರವಲ್ಲದೇ ಅಮೆರಿಕಾ, ಕೆನಡಾ, ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ ಹಾಗೂ ಜಪಾನ್ ದೇಶಗಳಲ್ಲಿಯೂ ಮಾರಾಟವಾಗುತ್ತವೆ. ಈ ಪರಿಸರ ಸ್ನೇಹಿ ಬ್ಯಾಗ್'ಗಳನ್ನು ನೀವು ಸಹ ಖರೀದಿಸಲು ಬಯಸಿದರೆ ಗೌತಮ್ ಮಲಿಕ್ ಅವರಿಗೆ gautamjaggery.co.inನಲ್ಲಿ ಇ-ಮೇಲ್ ಕಳುಹಿಸಿ ಖರೀದಿಸಬಹುದು. ಅಥವಾ ಅವರ ವೆಬ್‌ಸೈಟ್‌ಗೆ ಭೇಟಿ ನೀಡಿ ಖರೀದಿಸಬಹುದು.

ಚಿತ್ರ ಕೃಪೆ: ಜ್ಯಾಗರಿ ಬ್ಯಾಗ್ಸ್

Most Read Articles

Kannada
English summary
Gurugram based start up company makes eco friendly bags by using waste seat belts. Read in Kannada.
Story first published: Wednesday, May 26, 2021, 20:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X