ವಿಶ್ವಕಪ್‌ಗೆ ಧೋನಿ ಫಿಟ್ ಅಂತೆ; ಬೈಕ್ ರೈಡಿಂಗ್‌ ಮಜಾ!

By Nagaraja

ಸ್ನಾಯು ಸೆಳೆತದಿಂದಾಗಿ ತಂಡದಿಂದ ಹೊರಗುಳಿದಿರುವ ಭಾರತ ಕ್ರಿಕೆಟ್ ತಂಡದ ನಾಯಕ ಮಹೀಂದ್ರ ಸಿಂಗ್ ಧೋನಿ, ತಮ್ಮ ದೈಹಿಕ ಸಾಮರ್ಥ್ಯವನ್ನು ಮರಳಿ ಪಡೆದಿರುವುದಕ್ಕೆ ಪೂರಕವಾದ ಸುದ್ದಿಯೊಂದು ಹೊರಬಿದ್ದಿದೆ. ಹೌದು, ಬೆನ್ನು ಬೆನ್ನಿಗೆ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ಕಳಪೆ ಪ್ರವಾಸದ ಬಳಿಕ ವಿಮರ್ಶಕರ ಕಟು ಟೀಕೆಗೆ ಗುರಿಯಾಗುತ್ತಿರುವ ಧೋನಿ, ಗಾಯದ ಸಮಸ್ಯೆಯಿಂದಾಗಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ನಿಂದ ಹೊರಗುಳಿದಿದ್ದರು.

ಧೋನಿ ಮೊದಲ ಬೈಕ್ 'ರಾಜದೂತ'

ಸದ್ಯ ವಿಶ್ರಾಂತಿಯಲ್ಲಿರುವ ಧೋನಿ, ಟ್ವೆಂಟಿ-20 ವಿಶ್ವಕಪ್ ವೇಳೆಗೆ ಫಿಟ್ನೆಸ್ ಮರಳಿ ಪಡೆಯುವ ಭರವಸೆಯಲ್ಲಿದ್ದಾರೆ. ಈ ನಡುವೆ ಹರ್ಲಿ ಡೇವಿಡ್ಸನ್ ಬೈಕ್‌ನಲ್ಲಿ ಹುಟ್ಟೂರಾದ ರಾಂಚಿಯಲ್ಲಿ ರೈಡಿಂಗ್ ಮಜಾ ಅನುಭವಿಸುತ್ತಿರುವ ಧೋನಿ ಗಮನ ಸಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ವಿಶ್ವಕಪ್‌ಗೆ ಧೋನಿ ಫಿಟ್ ಅಂತೆ; ಬೈಕ್ ರೈಡಿಂಗ್‌ ಮಜಾ!

ಕ್ರಿಕೆಟ್ ಮೈದಾನದಿಂದ ಹೊರಗುಳಿದಿದ್ದರೂ ಮಾಧ್ಯಮಗಳ ಪ್ರಚಾರ ಗಿಟ್ಟಿಸಿಕೊಳ್ಳುವಲ್ಲಿ ಧೋನಿ ಸದಾ ಯಶಸ್ವಿಯಾಗುತ್ತಾರೆ. ಅಲ್ಲದೆ ಬಿಡುವಿನ ಸಂದರ್ಭದಲ್ಲಿ ನಗರದಲ್ಲಿ ರೈಡಿಂಗ್ ಮಜಾ ಅನುಭವಿಸಲು ಹೆಚ್ಚು ಇಷ್ಟಪಡುತ್ತಾರೆ.

ವಿಶ್ವಕಪ್‌ಗೆ ಧೋನಿ ಫಿಟ್ ಅಂತೆ; ಬೈಕ್ ರೈಡಿಂಗ್‌ ಮಜಾ!

ಇದೀಗ ಹರ್ಲಿ ಡೇವಿಡ್ಸನ್ ಬೈಕನ್ನು ರಿಪೇರಿ ಮಾಡಿಸಿರುವ ನಾಯಕ ಧೋನಿ, ಮರಳಿ ಮನೆಗೆ ಹೊತ್ತೊಯ್ದಿದ್ದಾರೆ. ಹಲವಾರು ತಿಂಗಳುಗಳ ಕಾಲ ಹರ್ಲಿ ಬೈಕ್ ಕೋಲ್ಕತ್ತಾದ ಗ್ಯಾರೇಜ್‌ನಲ್ಲಿತ್ತು.

ವಿಶ್ವಕಪ್‌ಗೆ ಧೋನಿ ಫಿಟ್ ಅಂತೆ; ಬೈಕ್ ರೈಡಿಂಗ್‌ ಮಜಾ!

ಧೋನಿಯ ಹರ್ಲಿ ಬೈಕ್ ಸ್ಟಾರ್ಟಿಂಗ್ ಸಮಸ್ಯೆಗೆ ಗುರಿಯಾಗಿತ್ತು ಎಂದು ಮೆಕ್ಯಾನಿಕ್ ಸ್ಪಷ್ಟಪಡಿಸಿದ್ದಾರೆ. ಆದರೆ ಬಿಡುವಿಲ್ಲದ ಕ್ರಿಕೆಟ್‌ನಿಂದಾಗಿ ಬೈಕ್ ಅನ್ನು ವಾಪಾಸ್ ಪಡೆಯಲು ಧೋನಿಗೆ ಸಾಧ್ಯವಾಗಿರಲಿಲ್ಲ. ಇದೀಗ ರಾಂಚಿಯ ಬೀದಿಗಳಲ್ಲಿ ಬೈಕ್‌ನಲ್ಲಿ ಸುತ್ತಾಡಿರುವ ಧೋನಿ ಅವರ ಫೋಟೋವನ್ನು ಕ್ಲಿಕ್ಕಿಸುವಲ್ಲಿ ಅಭಿಮಾನಿಗಳು ಯಶಸ್ವಿಯಾಗಿದ್ದಾರೆ.

ವಿಶ್ವಕಪ್‌ಗೆ ಧೋನಿ ಫಿಟ್ ಅಂತೆ; ಬೈಕ್ ರೈಡಿಂಗ್‌ ಮಜಾ!

ಸ್ವತ: ಮಹಿ ರೇಸಿಂಗ್ ವಿಶ್ವ ಸೂಪರ್ ಬೈಕ್ ತಂಡವನ್ನು ಹೊಂದಿರುವ ಧೋನಿ, ದುಬಾರಿ ಬೈಕ್‌ಗಳ ಒಡೆಯ ಕೂಡಾ ಆಗಿದ್ದಾರೆ. ಅವರು ಹೆಲ್ ಕ್ಯಾಟ್ ಎಕ್ಸ್132 ಬೈಕ್ ಹೊಂದಿದ್ದಾರೆ.

ವಿಶ್ವಕಪ್‌ಗೆ ಧೋನಿ ಫಿಟ್ ಅಂತೆ; ಬೈಕ್ ರೈಡಿಂಗ್‌ ಮಜಾ!

ಹೆಲ್‌ಕ್ಯಾಟ್ ಬೈಕನ್ನು ಕಾನ್ಫೆಡರೇಟ್ ಕಂಪನಿಯು ಬರ್ಮಿಂಗ್‌ಹ್ಯಾಮ್, ಅಲಬಾಮ ಹಾಗೂ ಅಮೆರಿಕದಲ್ಲಿ ಉತ್ಪಾದಿಸುತ್ತಿದ್ದು, ಎರಡನೇ ಮಹಾಯುದ್ಧದ ಲೆಜೆಂಡರಿ ಎಫ್5ಎಫ್ ಹೆಲ್‌ಕ್ಯಾಟ್ ಯುದ್ಧ ವಿಮಾನದ ಹೆಸರನ್ನು ಇದಕ್ಕೆ ಇಡಲಾಗಿದೆ.

ವಿಶ್ವಕಪ್‌ಗೆ ಧೋನಿ ಫಿಟ್ ಅಂತೆ; ಬೈಕ್ ರೈಡಿಂಗ್‌ ಮಜಾ!

ನಾಯಕ ಧೋನಿ ಪಾಲಿಗೆ ಹೆಲ್ ಕ್ಯಾಟ್ ನೆಚ್ಚಿನ ಸೂಪರ್ ಬೈಕಾಗಿದೆ. ಇದೇ ಕಾರಣಕ್ಕಾಗಿ ಫಾಸ್ಟ್ ಟ್ರ್ಯಾಕ್ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌‍ನಲ್ಲೂ (ಬಿಐಸಿ) ತಮ್ಮ ಬೈಕ್ ಪ್ರೇಮ ತೋರಿಸಿದ್ದರು.

ವಿಶ್ವಕಪ್‌ಗೆ ಧೋನಿ ಫಿಟ್ ಅಂತೆ; ಬೈಕ್ ರೈಡಿಂಗ್‌ ಮಜಾ!

ನೂತನ ಹೆಲ್ ಕ್ಯಾಟ್ ಬೈಕ್ 2,163 ಸಿಸಿಯ ವಿಟ್ವಿನ್ ಶಕ್ತಿಶಾಲಿ ಎಂಜಿನ್ ಹೊಂದಿದೆ. ಇದು 150 ಎನ್ಎಂ ಟಾರ್ಕ್ ಪವರ್ ಮತ್ತು 132 ಹಾರ್ಸ್ ಪವರ್ ನೀಡುತ್ತದೆ. ಹಾಗೆಯೇ ಫೈವ್ ಸ್ಪೀಡ್ ಮ್ಯಾನುಯಲ್ ಗೇರ್ ಹೊಂದಿದೆ.

ವಿಶ್ವಕಪ್‌ಗೆ ಧೋನಿ ಫಿಟ್ ಅಂತೆ; ಬೈಕ್ ರೈಡಿಂಗ್‌ ಮಜಾ!

ಇನ್ನು ಹೆಲ್‌ಕ್ಯಾಟ್ ದರದ ಬಗ್ಗೆ ಮಾತನಾಡುವುದಾದರೆ 30 ಲಕ್ಷ ರು.ಗಳ ಅಸುಪಾಸಿನಲ್ಲಿದೆ. ಹಾಗಾಗಿ ಜನ ಸಾಮಾನ್ಯರ ಕೈಗೆಟಕುವುದು ಅಷ್ಟು ಸುಲಭದ ಮಾತಲ್ಲ.

ವಿಶ್ವಕಪ್‌ಗೆ ಧೋನಿ ಫಿಟ್ ಅಂತೆ; ಬೈಕ್ ರೈಡಿಂಗ್‌ ಮಜಾ!

ಅಂದ ಹಾಗೆ ಧೋನಿ ಮೊದಲ ಬೈಕ್ ರಾಜದೂತ ಆಗಿದೆ. ಇತ್ತೀಚೆಗಷ್ಟೇ ತಮ್ಮ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಈ ಬಗ್ಗೆ ಚಿತ್ರವನ್ನು ಪ್ರಕಟಿಸಿದ್ದ ಧೋನಿ, ರಿಪೇರಿ ಮಾಡಲು ಬಯಸಿದ್ದರು.

ವಿಶ್ವಕಪ್‌ಗೆ ಧೋನಿ ಫಿಟ್ ಅಂತೆ; ಬೈಕ್ ರೈಡಿಂಗ್‌ ಮಜಾ!

ಇದರಿಂದಲೇ ಧೋನಿ ಬೈಕ್ ಪ್ರೇಮ ಎಷ್ಟರ ಮಟ್ಟಿಗಿದೆ ಎಂಬುದು ಬಯಲಾಗುತ್ತದೆ. ಒಟ್ಟಿನಲ್ಲಿ ಕ್ರಿಕೆಟ್ ಹೊರತಾಗಿಯೂ ಬೈಕ್ ರೈಡಿಂಗನ್ನು ಧೋನಿ ಹೆಚ್ಚು ಇಷ್ಟಪಡುತ್ತಾರೆ ಎಂಬುದು ಮಗದೊಮ್ಮೆ ಸಾಬೀತಾಗಿದೆ.

More from DriveSpark

Article Published On: Wednesday, March 5, 2014, 11:57 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+