ಮೊಬೈಲ್ ಕ್ಲಿನಿಕ್‌ಗಳಾಗಿ ಬದಲಾಗಲಿವೆ ಬಸ್‌ಗಳು
ದೇಶಾದ್ಯಂತ ಕರೋನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಚಿಕಿತ್ಸೆ ನೀಡುವ ಸ್ಥಳಗಳ ಕೊರತೆ ಎದುರಾಗುವ ಸಾಧ್ಯತೆಗಳಿವೆ. ದೇಶದ ಬಹುತೇಕ ರಾಜ್ಯಗಳಲ್ಲಿ ಈ ಸನ್ನಿವೇಶ ಉಂಟಾಗ ಬಹುದೆಂದು ಅಂದಾಜಿಸಲಾಗಿದೆ. ಈ ಕಾರಣಕ್ಕೆ ಹರಿಯಾಣ ಸರ್ಕಾರವು ಈ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿದೆ.

ಹರಿಯಾಣದಲ್ಲಿ, ಯಾವುದೇ ರೋಗಿಗೆ ಚಿಕಿತ್ಸೆ ನೀಡಲು ಸ್ಥಳದ ಕೊರತೆ ಉಂಟಾಗದಂತೆ ಮಾಡುವ ಉದ್ದೇಶದಿಂದ ಅಲ್ಲಿನ ಸರ್ಕಾರವು ಬಸ್‌ಗಳನ್ನು ಈಗ ಮೊಬೈಲ್ ಕ್ಲಿನಿಕ್‌ಗಳಾಗಿ ಬದಲಿಸಲು ಮುಂದಾಗಿದೆ. ಈ ಬಸ್‌ಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಸಹ ನೀಡಲು ಬಯಸಿದೆ.

ಬಸ್‌ಗಳನ್ನು ಮೊಬೈಲ್ ಕ್ಲಿನಿಕ್‌ಗಳಾಗಿ ಬಳಸುವ ರೀತಿಯಲ್ಲಿ ಸಿದ್ಧಪಡಿಸಲಾಗುವುದು ಎಂದು ಹರಿಯಾಣ ರಾಜ್ಯದ ಮುಖ್ಯ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಅನೇಕ ಸ್ಥಳಗಳಲ್ಲಿ ಜನರನ್ನು ಪರೀಕ್ಷಿಸಲು ಅನುಕೂಲವಾಗಲಿದೆ.
MOST READ:ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ನೋಡಲ್ ಅಧಿಕಾರಿಗಳಿಂದ ವೈದ್ಯಕೀಯ ಸೌಲಭ್ಯಗಳನ್ನು ಸಿದ್ಧಪಡಿಸುವ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇದರ ಜೊತೆಗೆ ಪಿಪಿಇ ಕಿಟ್ ಹಾಗೂ ವೆಂಟಿಲೇಟರ್‌ಗಳ ಲಭ್ಯತೆಯ ಬಗ್ಗೆಯೂ ಆದೇಶಿಸಿದ್ದಾರೆ.

ವಾಹನ ತಯಾರಕ ಕಂಪನಿಗಳಿಗೆ ಈ ವಸ್ತುಗಳನ್ನು ತಯಾರಿಸಲು ಪ್ರೋತ್ಸಾಹ ನೀಡಲಾಗುವುದು ಎಂದು ಸಹ ಮುಖ್ಯ ಕಾರ್ಯದರ್ಶಿಗಳು ಹೇಳಿದ್ದಾರೆ. ಅನೇಕ ಕಂಪನಿಗಳು ಈಗಾಗಲೇ ಈ ಕಾರ್ಯದಲ್ಲಿ ತೊಡಗಿವೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ರಾಜ್ಯದಲ್ಲಿರುವ ಅಂಗಡಿಗಳಲ್ಲಿ ದಾಸ್ತಾನುಗಳ ಸಂಗ್ರಹವನ್ನು ನಿಲ್ಲಿಸುವಂತೆ ಆದೇಶ ನೀಡಲಾಗಿದೆ. ಕೃಷಿಗೆ ಸಂಬಂಧಿಸಿದ ಕೆಲಸಗಳಿಗೆ ಅನುಮತಿ ನೀಡುವ ಸಾಧ್ಯತೆಗಳಿವೆ.

ಹರಿಯಾಣದಲ್ಲಿ ಮಾರುತಿ ಸುಜುಕಿ ಸೇರಿದಂತೆ ಹಲವು ವಾಹನ ತಯಾರಕ ಕಂಪನಿಗಳು ಉತ್ಪಾದನಾ ಘಟಕಗಳನ್ನು ಹೊಂದಿವೆ. ಈ ಉತ್ಪಾದನಾ ಘಟಕಗಳಲ್ಲಿ ಮಾಸ್ಕ್, ಸ್ಯಾನಿಟೈಜರ್, ವೆಂಟಿಲೇಟರ್ ಸೇರಿದಂತೆ ಇತರ ಅಗತ್ಯ ವೈದ್ಯಕೀಯ ವಸ್ತುಗಳನ್ನು ಉತ್ಪಾದಿಸಲಾಗುತ್ತಿದೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಮಾರುತಿ ಸುಜು ಕಂಪನಿಯು ತನ್ನ ಗುರುಗ್ರಾಮ್ ಹಾಗೂ ಮಾನೇಸರ್ ಘಟಕಗಳಲ್ಲಿರುವ ಒಂದು ಭಾಗವನ್ನು ಅಡುಗೆಮನೆಯನ್ನಾಗಿ ಬದಲಿಸಿದ್ದು, ಪ್ರತಿದಿನ ಸುಮಾರು 7,000 ಜನರಿಗೆ ಆಹಾರ ಪೂರೈಸಲಾಗುತ್ತಿದೆ.

ಈ ಎಲ್ಲಾ ಜನರಿಗೆ ಸರಿಯಾದ ಸಮಯದಲ್ಲಿ ಊಟವನ್ನು ತಲುಪಿಸಲು ಮಾರುತಿ ಸುಜುಕಿ ಕಂಪನಿಯಲ್ಲಿರುವ ತಂಡವು ಕಾಳಜಿ ವಹಿಸುತ್ತಿದೆ. ಇದರ ಹೊರತಾಗಿ, ಹತ್ತಿರದಲ್ಲಿರುವ ಹಳ್ಳಿಗಳಿಗೆ ಪಡಿತರ ಪ್ಯಾಕೆಟ್‌ಗಳನ್ನು ತಲುಪಿಸುತ್ತಿದೆ.


Click it and Unblock the Notifications