ಟ್ರಕ್ ದೋಚಿದ ಕೆಲವೇ ಗಂಟೆಗಳಲ್ಲಿ ಬಲೆಗೆ ಬಿದ್ದ ದರೋಡೆಕೋರರ ಗ್ಯಾಂಗ್

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಾದುಹೋಗುವ ವಾಹನ ಚಾಲಕರನ್ನು ಆಡ್ಡಗಟ್ಟಿ ದರೋಡೆ ಮಾಡುವ ಪ್ರಕರಣಗಳು ಹಿಂದಿನಿಂದಲೂ ವರದಿಯಾಗುತ್ತಲೇ ಇವೆ. ಅದರಲ್ಲೂ ಹೆಚ್ಚಿನ ದಟ್ಟಣೆ ಇಲ್ಲದ ಹೆದ್ದಾರಿಗಳಲ್ಲಿ ಹೆಚ್ಚಿನ ಸಂಖ್ಯೆಯ ದರೋಡೆ ಪ್ರಕರಣಗಳು ವರದಿಯಾಗುತ್ತವೆ.

ಟ್ರಕ್ ದೋಚಿದ ಕೆಲವೇ ಗಂಟೆಗಳಲ್ಲಿ ಬಲೆಗೆ ಬಿದ್ದ ದರೋಡೆಕೋರರ ಗ್ಯಾಂಗ್

ದರೋಡೆಕೋರರು ನಾನಾ ತಂತ್ರಗಳ ಮೂಲಕ ದರೋಡೆ ಮಾಡುತ್ತಿದ್ದಾರೆ. ಸಹಾಯ ಕೇಳುವ ನೆಪದಲ್ಲಿ ಕಾರುಗಳನ್ನು ನಿಲ್ಲಿಸಿ, ಸಹಾಯ ಮಾಡಲು ಬಂದವರನ್ನು ದೋಚಿ ಪರಾರಿಯಾಗುತ್ತಾರೆ. ಟ್ರಕ್ ಹಾಗೂ ಕಾರುಗಳ ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿ ದರೋಡೆಗೊಳಗಾಗುತ್ತಿದ್ದಾರೆ.

ಟ್ರಕ್ ದೋಚಿದ ಕೆಲವೇ ಗಂಟೆಗಳಲ್ಲಿ ಬಲೆಗೆ ಬಿದ್ದ ದರೋಡೆಕೋರರ ಗ್ಯಾಂಗ್

ದುಬಾರಿ ವಸ್ತುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಟ್ರಕ್‌ಗಳಲ್ಲಿ ಕಂಟೇನರ್ ಮೂಲಕ ಸಾಗಿಸಲಾಗುತ್ತದೆ. ಕೆಲವೊಮ್ಮೆ ಚಲಿಸುತ್ತಿರುವ ಕಂಟೇನರ್ ಟ್ರಕ್ ಗಳನ್ನೇ ದೋಚಲಾಗುತ್ತಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಟ್ರಕ್ ದೋಚಿದ ಕೆಲವೇ ಗಂಟೆಗಳಲ್ಲಿ ಬಲೆಗೆ ಬಿದ್ದ ದರೋಡೆಕೋರರ ಗ್ಯಾಂಗ್

ಇದೇ ರೀತಿಯ ಘಟನೆಯೊಂದು ಹರಿಯಾಣ ರಾಜ್ಯದ ನುಹ್ ಜಿಲ್ಲೆಯಲ್ಲಿ ನಡೆದಿದೆ. ಕಂಟೇನರ್ ಟ್ರಕ್ ನಲ್ಲಿ 5 ಮರ್ಸಿಡಿಸ್ ಬೆಂಝ್ ಕಾರುಗಳನ್ನು ಸಾಗಿಸಲಾಗುತ್ತಿತ್ತು. ಈ ಬೆಂಝ್ ಕಾರುಗಳ ಒಟ್ಟು ಮೌಲ್ಯ ರೂ.3.50 ಕೋಟಿಗಳಾಗಿದೆ.

ಟ್ರಕ್ ದೋಚಿದ ಕೆಲವೇ ಗಂಟೆಗಳಲ್ಲಿ ಬಲೆಗೆ ಬಿದ್ದ ದರೋಡೆಕೋರರ ಗ್ಯಾಂಗ್

ದರೋಡೆಕೋರರ ಗ್ಯಾಂಗ್ ಒಂದು ಟ್ರಕ್ ಚಾಲಕನನ್ನು ಬೆದರಿಸಿ ಟ್ರಕ್ ಅನ್ನು ಕದ್ದೊಯ್ದಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ದರೋಡೆಕೋರರನ್ನು ಬಂಧಿಸಿ ಮರ್ಸಿಡಿಸ್ ಬೆಂಝ್ ಕಾರುಗಳಿದ್ದ ಟ್ರಕ್ ಅನ್ನು ವಶಕ್ಕೆ ಪಡೆದಿದ್ದಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಟ್ರಕ್ ದೋಚಿದ ಕೆಲವೇ ಗಂಟೆಗಳಲ್ಲಿ ಬಲೆಗೆ ಬಿದ್ದ ದರೋಡೆಕೋರರ ಗ್ಯಾಂಗ್

ಈ ಘಟನೆ ಅಕ್ಟೋಬರ್ 4ರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ. ದರೋಡೆಕೋರರ ಗ್ಯಾಂಗ್ ಟ್ರಕ್ ಚಾಲಕನನ್ನು ಬೆದರಿಸಿ ಆತನನ್ನು ಹಗ್ಗದಿಂದ ಕಟ್ಟಿ ಹಾಕಿ ಟ್ರಕ್ ನೊಂದಿಗೆ ಪರಾರಿಯಾಗಿದೆ. ಸ್ಥಳದಲ್ಲಿದ್ದ ಕೆಲವರು ಈ ಘಟನೆಗೆ ಸಾಕ್ಷಿಯಾಗಿದ್ದಾರೆ.

ಟ್ರಕ್ ದೋಚಿದ ಕೆಲವೇ ಗಂಟೆಗಳಲ್ಲಿ ಬಲೆಗೆ ಬಿದ್ದ ದರೋಡೆಕೋರರ ಗ್ಯಾಂಗ್

ಅವರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ದರೋಡೆಕೋರರ ಬಂಧನಕ್ಕೆ ವಿಶೇಷ ತಂಡ ರಚಿಸಿ, ವಿವಿಧೆಡೆ ನಾಕಾ ಬಂಧಿ ಹಾಕಿ ವಾಹನಗಳ ತಪಾಸಣೆ ನಡೆಸಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಟ್ರಕ್ ದೋಚಿದ ಕೆಲವೇ ಗಂಟೆಗಳಲ್ಲಿ ಬಲೆಗೆ ಬಿದ್ದ ದರೋಡೆಕೋರರ ಗ್ಯಾಂಗ್

ಕೊನೆಗೂ ರಜಾಕ್‌ ಎಂಬಾತನನ್ನು ಗ್ಯಾಸ್ ಸ್ಟೇಷನ್ ಬಳಿ ಬಂಧಿಸಿದ್ದಾರೆ. ಆತ ನುಹ್ ಜಿಲ್ಲೆಯ ನಾಯ್ ಪಟ್ಟಣಕ್ಕೆ ಸೇರಿದವನು. ಆತನನ್ನು ಬಂಧಿಸಿದ ಪೊಲೀಸರು ಮರ್ಸಿಡಿಸ್ ಬೆಂಝ್ ಕಾರುಗಳಿದ್ದ ಟ್ರಕ್ ಅನ್ನು ವಶಕ್ಕೆ ಪಡೆದಿದ್ದಾರೆ.

ಟ್ರಕ್ ದೋಚಿದ ಕೆಲವೇ ಗಂಟೆಗಳಲ್ಲಿ ಬಲೆಗೆ ಬಿದ್ದ ದರೋಡೆಕೋರರ ಗ್ಯಾಂಗ್

ಘಟನೆಯಲ್ಲಿ ಭಾಗಿಯಾಗಿರುವ ಇತರ ಜನರ ಪತ್ತೆಗಾಗಿ ರಜಾಕ್ ನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯು ಟ್ರಕ್ ಚಾಲಕರಲ್ಲಿ ಆತಂಕವನ್ನುಂಟು ಮಾಡಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಟ್ರಕ್ ದೋಚಿದ ಕೆಲವೇ ಗಂಟೆಗಳಲ್ಲಿ ಬಲೆಗೆ ಬಿದ್ದ ದರೋಡೆಕೋರರ ಗ್ಯಾಂಗ್

ಈ ಘಟನೆ ವಾಹನ ಚಾಲಕರು, ಅದರಲ್ಲೂ ವಿಶೇಷವಾಗಿ ಟ್ರಕ್ ಚಾಲಕರು ದುಬಾರಿ ವಸ್ತುಗಳೊಂದಿಗೆ ದೂರ ಪ್ರಯಾಣಿಸುವ ವೇಳೆ ಎದುರಾಗುವ ಸುರಕ್ಷತೆಯ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ.

ಟ್ರಕ್ ದೋಚಿದ ಕೆಲವೇ ಗಂಟೆಗಳಲ್ಲಿ ಬಲೆಗೆ ಬಿದ್ದ ದರೋಡೆಕೋರರ ಗ್ಯಾಂಗ್

ವಾಹನಗಳು ಕಳುವಾದರೆ ಅವುಗಳನ್ನು ಟ್ರ್ಯಾಕಿಂಗ್ ಸಾಧನಗಳ ಮೂಲಕ ಸುಲಭವಾಗಿ ಪತ್ತೆ ಹಚ್ಚಬಹುದು. ಅಂತಹ ಟ್ರ್ಯಾಕಿಂಗ್ ಸಾಧನಗಳು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಲಭ್ಯವಿರುವುದರಿಂದ, ವಾಹನ ಮಾಲೀಕರು ಅವುಗಳನ್ನು ಅಳವಡಿಸ ಕೊಳ್ಳಬಹುದು.

ಗಮನಿಸಿ: ಕೆಲವು ಫೋಟೋಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Haryana police arrests robbery gang within few hours of robbery. Read in Kannada.
Story first published: Tuesday, October 6, 2020, 16:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X