ಪೋಷಕರಿಗೆ ಐಷಾರಾಮಿ ಟೊಯೊಟಾ ಫಾರ್ಚೂನರ್ ಎಸ್‍ಯುವಿಯನ್ನು ಗಿಫ್ಟ್ ಕೊಟ್ಟ ಮಕ್ಕಳು

ಸಾಮಾನ್ಯವಾಗಿ ಮಕ್ಕಳಿಗೆ ಗಿಫ್ಟ್‌ ಸ್ವೀಕರಿಸುವುದು ಎಂದರೆ ಖುಷಿಯ ಕ್ಷಣ. ಇದಕ್ಕಾಗಿ ಪೋಷಕರು ತಮ್ಮ ಮಕ್ಕಳಿಗೆ ಸರ್ಪ್ರೈಸ್ ಗಿಫ್ಟ್ ನೀಡಿ ಮಕ್ಕಳನ್ನು ಸಂತೋಷಪಡಿಸುತ್ತಾರೆ. ಅದೇ ರೀತಿ ಮಕ್ಕಳು ಕೂಡ ಪೋಷಕರಿಗೆ ಗಿಫ್ಟ್ ಕೊಡುವುದು ಭಾರತದಲ್ಲಿ ಸಾಮಾನ್ಯವಾಗಿದೆ.

ಪೋಷಕರಿಗೆ ಐಷಾರಾಮಿ ಟೊಯೊಟಾ ಫಾರ್ಚೂನರ್ ಎಸ್‍ಯುವಿಯನ್ನು ಗಿಫ್ಟ್ ಕೊಟ್ಟ ಮಕ್ಕಳು

ಇದರಲ್ಲಿ ಅನೇಕರು ತಮ್ಮ ಅಪ್ಪನಿಗೆ ಅಥವಾ ಅಮ್ಮನಿಗೆ ಕಾರುಗಳನ್ನು ಅಥವಾ ದ್ವಿಚಕ್ರ ವಾಹನಗಳನ್ನು ಗಿಫ್ಟ್ ಕೊಡುತ್ತಾರೆ. ಇದೇ ರೀತಿ ಮಕ್ಕಳು ಪೋಷಕರಿಗೆ ಹೊಚ್ಚ ಹೊಸ ಟೊಯೊಟಾ ಫಾರ್ಚೂನರ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಗಿಫ್ಟ್ ನೀಡುತ್ತಿರುವ ವಿಡಿಯೋವನ್ನು ಯುಟ್ಯೂಬ್ ಚಾನೆಲ್ ಗ್ರಾಸ್ ಎ4 ನಲ್ಲಿ ಅಪ್ಲೋಡ್ ಮಾಡಲಾಗಿದೆ. ಟೊಯೊಟಾ ಫಾರ್ಚೂನರ್ ಭಾರತದಲ್ಲಿ ಬಹುಬೇಡಿಕೆಯ ಪೂರ್ಣ ಗಾತ್ರದ ಎಸ್‍ಯುವಿಗಳ ಪಟ್ಟಿಯಲ್ಲಿ ಅಗ್ರಾ ಸ್ಥಾನದಲ್ಲಿದೆ.

ಪೋಷಕರಿಗೆ ಐಷಾರಾಮಿ ಟೊಯೊಟಾ ಫಾರ್ಚೂನರ್ ಎಸ್‍ಯುವಿಯನ್ನು ಗಿಫ್ಟ್ ಕೊಟ್ಟ ಮಕ್ಕಳು

ವೀಡಿಯೊದಲ್ಲಿ ಇಬ್ಬರು ಮಕ್ಕಳು ಹೇಗೆ ಹೆತ್ತವರ ಕಣ್ಣುಮುಚ್ಚಿ ಮನೆಯ ಪಾರ್ಕಿಂಗ್ ಕಡೆ ಕರೆದೊಯ್ಯುತ್ತಾರೆ. ನಂತರ ಕಣ್ಣಿಂದ ಕೈ ತೆಗೆದು ಟೊಯೊಟಾ ಫಾರ್ಚೂನರ್ ಎಸ್‍ಯುವಿಯನ್ನು ತೋರಿಸುತ್ತಾರೆ. ಫಾರ್ಚೂನರ್ ಎಸ್‍ಯುವಿಯನ್ನು ಕಂಡು ಖುಷಿಯಿಂದ ಹೆತ್ತವರ ಕಣ್ಣುಗಳು ಒದ್ದೆಯಾಗುತ್ತದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಪೋಷಕರಿಗೆ ಐಷಾರಾಮಿ ಟೊಯೊಟಾ ಫಾರ್ಚೂನರ್ ಎಸ್‍ಯುವಿಯನ್ನು ಗಿಫ್ಟ್ ಕೊಟ್ಟ ಮಕ್ಕಳು

ಈ ಹೊಚ್ಚ ಹೊಸ ಟೊಯೊಟಾ ಫಾರ್ಚೂನರ್ ಎಸ್‍ಯುವಿಗೆ ತಾಯಿ ಪೂಜೆಯನ್ನು ಮಾಡುತ್ತಾರೆ. ನಂತರ ತಂದೆ ಚಾಲಕ ಸೀಟಿನಲ್ಲಿ ಕುಳಿತುಕೊಳ್ಳುತ್ತಾರೆ. ಈ ಹೊಸ ಕಾರಿನ ಒಳಗೊಂಡೆ ತುಂಬಾ ಬಲೂನ್ ಗಳನ್ನು ಇರುತ್ತದೆ ಅದನ್ನು ಹೊರಗೆ ಹಾಕುತ್ತಾರೆ.

ಪೋಷಕರಿಗೆ ಐಷಾರಾಮಿ ಟೊಯೊಟಾ ಫಾರ್ಚೂನರ್ ಎಸ್‍ಯುವಿಯನ್ನು ಗಿಫ್ಟ್ ಕೊಟ್ಟ ಮಕ್ಕಳು

ಬಳಿಕ ತಂದೆ ಫಾರ್ಚೂನರ್ ಎಸ್‍ಯುವಿಯನ್ನು ಡ್ರೈವ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಿದ್ದಾರೆ. ಈ ಫಾರ್ಚೂನರ್‌ನ ನಿಖರವಾದ ರೂಪಾಂತರವು ತಿಳಿದಿಲ್ಲ ಆದರೆ ಇದು ಸಿಗ್ಮಾ ರೂಪಾಂತರದಂತೆ ತೋರುತ್ತದೆ. ಅದೇನೇ ಇದ್ದರೂ, ಟೊಯೋಟಾ ಫಾರ್ಚೂನರ್ ಜನಪ್ರಿಯ ಎಸ್‍ಯುವಿಯಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಪೋಷಕರಿಗೆ ಐಷಾರಾಮಿ ಟೊಯೊಟಾ ಫಾರ್ಚೂನರ್ ಎಸ್‍ಯುವಿಯನ್ನು ಗಿಫ್ಟ್ ಕೊಟ್ಟ ಮಕ್ಕಳು

ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ಸುಮಾರು ರೂ.30 ಲಕ್ಷಗಳಾಗಿದೆ. ಟೊಯೋಟಾ ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, 2021ರ ಫಾರ್ಚೂನರ್ ಫೇಸ್‌ಲಿಫ್ಟ್ ಸಂಯೋಜಿತ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ನವೀಕರಿಸಿದ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಹೊಂದಿವೆ.

ಪೋಷಕರಿಗೆ ಐಷಾರಾಮಿ ಟೊಯೊಟಾ ಫಾರ್ಚೂನರ್ ಎಸ್‍ಯುವಿಯನ್ನು ಗಿಫ್ಟ್ ಕೊಟ್ಟ ಮಕ್ಕಳು

ಇದರೊಂದಿಗೆ ಕ್ರೋಮ್ ಸರೌಂಡ್‌ನೊಂದಿಗೆ ದೊಡ್ಡ ಫ್ರಂಟ್ ಗ್ರಿಲ್, ಫಾಗ್ ಲ್ಯಾಂಪ್‌ಗಳಿಗಾಗಿ ಹೊಸ ಹೌಸಿಂಗ್‌ಗಳೊಂದಿಗೆ ನವೀಕರಿಸಿದ ಫ್ರಂಟ್ ಬಂಪರ್ ಹೊಂದಿದೆ. ಹೊಸ 18 ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು ಹಿಂಭಾಗದಲ್ಲಿ ಎಲ್ಇಡಿ ಟೈಲ್ ಲ್ಯಾಂಪ್ ಗಳನ್ನು ಹೂಂದಿವೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಪೋಷಕರಿಗೆ ಐಷಾರಾಮಿ ಟೊಯೊಟಾ ಫಾರ್ಚೂನರ್ ಎಸ್‍ಯುವಿಯನ್ನು ಗಿಫ್ಟ್ ಕೊಟ್ಟ ಮಕ್ಕಳು

ಇನ್ನು ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯ ಒಳಭಾಗದಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗಳೊಂದಿಗಿನ ಹೊಸ 8.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಕನೆಕ್ಟಿವಿಟಿ ಕಾರು ತಂತ್ರಜ್ಞಾನವನ್ನು ಹೊಂದಿದೆ. ಇದರೊಂದಿಗೆ ವೆಂಟಿಲೇಟಡ್ ಮುಂಭಾಗದ ಸೀಟುಗಳು, ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 11-ಸ್ಪೀಕರ್ ಜೆಬಿಎಲ್ ಆಡಿಯೊ ಸಿಸ್ಟಂ, ಆಂಬಿಯೆಂಟ್ ಲೈಟಿಂಗ್ ಮತ್ತು ಇತರ ಫೀಚರ್ ಗಳನ್ನು ಒಳಗೊಂಡಿದೆ.

ಫಾರ್ಚೂನರ್ ಫೇಸ್‌ಲಿಫ್ಟ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಈ ಎಸ್‍ಯುವಿ 2.7-ಲೀಟರ್ ಪೆಟ್ರೋಲ್ ಮತ್ತು 2.8-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ. 2.7-ಲೀಟರ್ ಪೆಟ್ರೋಲ್ ಎಂಜಿನ್ 166 ಬಿಹೆಚ್‍ಪಿ ಪವರ್ ಮತ್ತು 245 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು ಐದು-ಸ್ಪೀಡ್ ಮ್ಯಾನುವಲ್ ಅಥವಾ ಆರು-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಪೋಷಕರಿಗೆ ಐಷಾರಾಮಿ ಟೊಯೊಟಾ ಫಾರ್ಚೂನರ್ ಎಸ್‍ಯುವಿಯನ್ನು ಗಿಫ್ಟ್ ಕೊಟ್ಟ ಮಕ್ಕಳು

ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಹೊಂದಿಕೆಯಾದಾಗ ಡೀಸೆಲ್ ಎಂಜಿನ್ 177 ಬಿಹೆಚ್‍ಪಿ ಪವರ್ ಮತ್ತು 420 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಆರು-ಸ್ಪೀಡ್ ಟಾರ್ಕ್ ಕರ್ನವಾಟರ್ ಗೇರ್ ಬಾಕ್ಸ್ ಜೋಡಿಸಲಾದ ಯುನಿಟ್ 201 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಪೋಷಕರಿಗೆ ಐಷಾರಾಮಿ ಟೊಯೊಟಾ ಫಾರ್ಚೂನರ್ ಎಸ್‍ಯುವಿಯನ್ನು ಗಿಫ್ಟ್ ಕೊಟ್ಟ ಮಕ್ಕಳು

ಹೊಸ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್ ಎಂಜಿನ್‌ನಿಂದ ಚಾಲಿತವಾಗಿದ್ದು ಟೂ ವ್ಹೀಲ್ ಮತ್ತು ಫ್ಹೋರ್ ವ್ಹೀಲ್ ಡ್ರೈವ್ ಕಾನ್ಫಿಗರೇಶನ್‌ಗಳಲ್ಲಿ ಹೊಂದಿರುತ್ತದೆ. ಹಿಂದಿನ ಫಾರ್ಚೂನರ್ ಮಾದರಿಗೆ ಹೋಲಿಸಿದರೆ ಫಾರ್ಚೂನರ್ ಫೇಸ್‌ಲಿಫ್ಟ್ ಹಲವಾರು ಅಪ್ಡೇಟ್ ಗಳನ್ನು ಪಡೆದುಕೊಂಡಿದೆ.

Most Read Articles

Kannada
English summary
Sons Gift Parents A Brand-new Toyota Fortuner Luxury Suv. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X