ಕರೋನಾ ವೈರಸ್‌ನಿಂದಾಗಿ ಹೀರೋ ಬೈಕ್ ಉತ್ಪಾದನೆಯಲ್ಲೂ ಕುಂಠಿತ

ಚೀನಾದಲ್ಲಿ ಸಾವಿರಾರು ಜನರ ಬಲಿಪಡೆದಿರುವ ಕರೋನಾ ವೈರಸ್‌ ಅಟ್ಟಹಾಸದಿಂದಾಗಿ ಇಡೀ ವಿಶ್ವ ಸಮುದಾಯವನ್ನೇ ಆತಂಕಕ್ಕೆ ಈಡಾಗುವಂತೆ ಮಾಡಿದ್ದು, ವೈರಸ್ ತಡೆಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದರು ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರ ನಡುವೆ ಕರೊನಾ ವೈರಸ್ ಚೀನಿ ಆರ್ಥಿಕತೆ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು, ಜೊತೆಗೆ ಆಟೋ ಉದ್ಯಮದಲ್ಲೂ ಭಾರೀ ಪ್ರಮಾಣದ ಕುಸಿತಕ್ಕೆ ಕಾರಣವಾಗಿದೆ.

ಕರೋನಾ ವೈರಸ್‌ನಿಂದಾಗಿ ಹೀರೋ ಬೈಕ್ ಉತ್ಪಾದನೆಯಲ್ಲೂ ಕುಂಠಿತ

ಕರೋನಾ ವೈರಸ್‌ನಿಂದಾಗಿ ಚೀನಾದಲ್ಲಿ ಪ್ರಮುಖ ಕಾರು ಉತ್ಪಾದನಾ ಘಟಕಗಳು ಹೊಸ ವಾಹನ ಉತ್ಪಾದನೆಯನ್ನೇ ಬಂದ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೊಸ ವಾಹನಗಳ ಮಾರಾಟವು ಕೇವಲ ಒಂದೇ ತಿಂಗಳಿನಲ್ಲಿ ಶೇ.18ರಿಂದ ಶೇ.20 ರಷ್ಟು ಇಳಿಕೆ ಕಂಡಿದೆ. ಇದು ಕೇವಲ ಚೀನಾದಲ್ಲಿನ ಪರಿಸ್ಥಿತಿಯಲ್ಲ, ಚೀನಾದಿಂದ ಆಮದುಗೊಳ್ಳುವ ಆಟೋ ಬೀಡಿಭಾಗಗಳನ್ನು ನೆಚ್ಚಿಕೊಂಡಿರುವ ಭಾರತೀಯ ಆಟೋ ಉತ್ಪಾದನಾ ಸಂಸ್ಥೆಗಳ ಪರಿಸ್ಥಿತಿ ಕೂಡಾ ಶೋಚನಿಯವಾಗುತ್ತಿದೆ.

ಕರೋನಾ ವೈರಸ್‌ನಿಂದಾಗಿ ಹೀರೋ ಬೈಕ್ ಉತ್ಪಾದನೆಯಲ್ಲೂ ಕುಂಠಿತ

ವಿಶ್ವದ ಪ್ರಮುಖ ವಾಹನ ಉತ್ಪಾದನಾ ಸಂಸ್ಥೆಗಳು ಚೀನಿ ಮಾರುಕಟ್ಟೆಯಿಂದಲೇ ಬಿಡಿಭಾಗಗಳನ್ನೇ ನೆಚ್ಚಿಕೊಂಡಿದ್ದು, ಅದು ಇದೀಗ ಕುಂಠಿತವಾಗಿರುವುದು ಚೀನಾದಲ್ಲಿ ಮಾತ್ರವಲ್ಲದೇ ಭಾರತೀಯ ಆಟೋ ಉದ್ಯಮದ ಮೇಲೂ ದುಷ್ಪರಿಣಾಮ ಬೀರುತ್ತಿದೆ.

ಕರೋನಾ ವೈರಸ್‌ನಿಂದಾಗಿ ಹೀರೋ ಬೈಕ್ ಉತ್ಪಾದನೆಯಲ್ಲೂ ಕುಂಠಿತ

ನಿಗದಿತ ಅವಧಿಯೊಳಗೆ ಬಿಡಿಭಾಗಗಳ ಪೂರೈಕೆಯಿಲ್ಲದೆ ವಾಹನ ಉತ್ಪಾದನೆಯು ತಗ್ಗುತ್ತಿದ್ದು, ಗ್ರಾಹಕರಿಂದ ಬೇಡಿಕೆಯಿದ್ದರೂ ವಾಹನಗಳನ್ನು ಪೂರೈಕೆ ಮಾಡಲು ಸಾಧ್ಯವಾಗದೆ ಪರದಾಟುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಕರೋನಾ ವೈರಸ್‌ನಿಂದಾಗಿ ಹೀರೋ ಬೈಕ್ ಉತ್ಪಾದನೆಯಲ್ಲೂ ಕುಂಠಿತ

ತಗ್ಗಿದ ಹೀರೋ ಬೈಕ್ ಉತ್ಪಾದನಾ ಪ್ರಮಾಣ..!

ಹೌದು, ಚೀನಾದಲ್ಲಿ ಕರೋನಾ ವೈರಸ್ ಪರಿಣಾಮ ಹಲವು ಆಟೋ ಬಿಡಿಭಾಗಗಳ ಉತ್ಪಾದನಾ ಸಂಸ್ಥೆಗಳು ಸ್ಥಗಿತಗೊಂಡಿರುವುದು ಭಾರತದಲ್ಲಿನ ಆಟೋ ಉತ್ಪಾದನಾ ಸಂಸ್ಥೆಗಳಿಗೂ ಸಮಸ್ಯೆ ಉಂಟಾಗಿದ್ದು, ವಿಶ್ವದ ಅತಿ ದೊಡ್ಡ ಬೈಕ್ ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿರುವ ಹೀರೋ ಬೈಕ್ ಉತ್ಪಾದನೆಯಲ್ಲೂ ಶೇ. 10ರಷ್ಟು ಕಡಿತಗೊಂಡಿದೆ. ಈ ಕುರಿತಂತೆ ಸ್ಪಷ್ಟನೆ ನೀಡಿರುವ ಹೀರೋ ಮೋಟೊಕಾರ್ಪ್ ಸಂಸ್ಥೆಗಳು ಪ್ರಮುಖ ಬೀಡಿಭಾಗಗಳ ಆಮದು ಇಲ್ಲದಿರುವುದೇ ಉತ್ಪಾದನೆ ಪ್ರಮಾಣ ಇಳಿಕೆ ಪ್ರಮುಖ ಕಾರಣವಾಗಿದೆ ಎಂದಿದೆ.

ಕರೋನಾ ವೈರಸ್‌ನಿಂದಾಗಿ ಹೀರೋ ಬೈಕ್ ಉತ್ಪಾದನೆಯಲ್ಲೂ ಕುಂಠಿತ

ಜೊತೆಗೆ ಕರೋನಾ ವೈರಸ್‌ನಿಂದಾಗಿ ಎಂಜಿ ಮೋಟಾರ್ ಕಾರುಗಳ ಉತ್ಪಾದನೆಯಲ್ಲೂ ಕುಂಠಿತವಾಗಿದ್ದು, ಶೇ.70 ರಷ್ಟು ಚೀನಿ ಬಿಡಿಭಾಗಗಳನ್ನೇ ಹೊಂದಿರುವ ಹೆಕ್ಟರ್ ಉತ್ಪಾದನೆಗೆ ಹಿನ್ನಡೆಯಾಗುತ್ತಿರುವುದಲ್ಲದೇ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲೂ ಸಾಕಷ್ಟು ತೊಂದರೆಯಾಗುವ ಸಾಧ್ಯತೆಗಳಿವೆ.

ಕರೋನಾ ವೈರಸ್‌ನಿಂದಾಗಿ ಹೀರೋ ಬೈಕ್ ಉತ್ಪಾದನೆಯಲ್ಲೂ ಕುಂಠಿತ

ಇದಕ್ಕೆ ಕಾರಣ, ಎಲೆಕ್ಟ್ರಿಕ್ ವಾಹನಗಳ ಮುಖ್ಯ ತಾಂತ್ರಿಕ ಅಂಶವಾಗಿರುವ ಲೀಥಿಯಂ ಅಯಾನ್ ಬ್ಯಾಟರಿ ಸಂಪನ್ಮೂಲವು ಶೇ.100ರಷ್ಟು ಚೀನಿ ಮತ್ತು ತೈವಾನ್ ಮಾರುಕಟ್ಟೆಗಳನ್ನು ಅಲಂಭಿಸಿದ್ದು, ಈಗಾಗಲೇ ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿರುವ ಆಟೋ ಉತ್ಪಾದನಾ ಸಂಸ್ಥೆಗಳು ಇದೀಗ ಕರೋನಾ ವೈರಸ್‌ನಿಂದ ಮತ್ತೊಮ್ಮೆ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುವ ಭೀತಿಯಲ್ಲಿವೆ.

ಕರೋನಾ ವೈರಸ್‌ನಿಂದಾಗಿ ಹೀರೋ ಬೈಕ್ ಉತ್ಪಾದನೆಯಲ್ಲೂ ಕುಂಠಿತ

ಕಾರು ಉತ್ಪಾದನೆ ಬಂದ್ ಮಾಡಿದ ಹ್ಯುಂಡೈ

ಕೊರೊನಾ ವೈರಸ್‌ನಿಂದಾಗಿ ದಕ್ಷಿಣ ಕೊರಿಯಾದ ಅತಿ ದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಹ್ಯುಂಡೈ ಕೂಡಾ ಚೀನಾದಲ್ಲಿರುವ ತನ್ನ ಕಾರು ಉತ್ಪಾದನಾ ಘಟಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ವಾಹನ ರಫ್ತು ಪ್ರಮಾಣವನ್ನು ಗಣನೀಯವಾಗಿ ಇಳಿಕೆ ಮಾಡಿದೆ.

ಕರೋನಾ ವೈರಸ್‌ನಿಂದಾಗಿ ಹೀರೋ ಬೈಕ್ ಉತ್ಪಾದನೆಯಲ್ಲೂ ಕುಂಠಿತ

ಇದರ ಜೊತೆಗೆ ಚೀನಿ ಅತಿ ದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾದ ಸೈಕ್(ಎಂಜಿ ಮೋಟಾರ್ ಮಾತೃಸಂಸ್ಥೆ), ಟೊಯೊಟಾ, ಫಾವ್, ಹೈಮಾ, ಗ್ರೇಟ್ ವಾಲ್ ಮೋಟಾರ್ಸ್, ಫೋಕ್ಸ್‌ವ್ಯಾಗನ್, ಜೀಪ್ ಮತ್ತು ಹವಾಲ್ ಕಾರುಗಳ ಉತ್ಪಾದನೆಯಲ್ಲಿ ಕುಂಠಿತವಾಗಿರುವುದಲ್ಲದೇ ಮಾರಾಟ ಪ್ರಕ್ರಿಯೆಯು ಸಹ ತೀವ್ರಗತಿಯಲ್ಲಿ ಕುಸಿತ ಕಾಣುತ್ತಿದೆ.

ಕರೋನಾ ವೈರಸ್‌ನಿಂದಾಗಿ ಹೀರೋ ಬೈಕ್ ಉತ್ಪಾದನೆಯಲ್ಲೂ ಕುಂಠಿತ

ಇದರೊಂದಿಗೆ ಬಿಡಿಭಾಗಗಳ ಆಮದು ಕೂಡಾ ಕುಸಿದಿರುವುದು ಆಟೋ ಉದ್ಯಮಗಳಿಗೆ ತಲೆನೋವಾಗಿ ಪರಿಣಮಿಸಿದ್ದು, ಕೊರೊನಾ ವೈರಸ್‌ನಿಂದಾಗಿ ಚೀನಾ ಮಾತ್ರವಲ್ಲದೇ ಭಾರತದ ಆರ್ಥಿಕತೆ ಕೂಡಾ ಪರೋಕ್ಷವಾಗಿ ಪರಿಣಾಮ ಎದುರಿಸಬೇಕಾದ ಸಂಧಿಗ್ನ ಸ್ಥಿತಿ ಎದುರಾಗಿದೆ.

Article Published On: Monday, February 17, 2020, 11:34 [IST]
English summary
Hero MotoCorp's bike production decline due to a supply constraint of certain components from China. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+