ದೇಶದಲ್ಲೇ ಅತಿ ಹೆಚ್ಚು ದಂಡ ಪಾವತಿಸಿದ ಟ್ರಕ್ ಚಾಲಕ..!

ಹೊಸ ಮೋಟಾರು ವಾಹನ ಕಾಯ್ದೆಯನ್ನು ಸೆಪ್ಟೆಂಬರ್ 1ರಿಂದ ಜಾರಿಗೆ ತರಲಾಗಿದೆ. ಈ ನೂತನ ಕಾಯ್ದೆಯನ್ವಯ ಈಗಾಗಲೇ ಹಲವಾರು ಜನರಿಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿದೆ. ಆದರೆ ಭಾರತದಲ್ಲಿಯೇ ಅತಿ ಹೆಚ್ಚಿನ ಪ್ರಮಾಣದ ದಂಡವನ್ನು ಒಡಿಶಾದ ಟ್ರಕ್ ಡ್ರೈವರ್ ಒಬ್ಬನಿಗೆ ವಿಧಿಸಲಾಗಿದೆ.

ದೇಶದಲ್ಲೇ ಅತಿ ಹೆಚ್ಚು ದಂಡ ಪಾವತಿಸಿದ ಟ್ರಕ್ ಚಾಲಕ..!

ಒಡಿಶಾದ ಸಂಬಾಲ್ಪುರ ಜಿಲ್ಲೆಯ ಅಶೋಕ್ ಜಾಧವ್ ಎಂಬ ಟ್ರಕ್ ಚಾಲಕನಿಗೆ ರೂ.86,500 ದಂಡ ವಿಧಿಸಲಾಗಿದೆ. ಹೊಸ ಮೋಟಾರ್ ವಾಹನ ಕಾಯ್ದೆಯನ್ವಯ ಹಲವು ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಈತನಿಗೆ ಈ ಪ್ರಮಾಣದ ದಂಡ ವಿಧಿಸಲಾಗಿದೆ. ಈ ಘಟನೆ ಕಳೆದ ಮಂಗಳವಾರ ಸೆಪ್ಟೆಂಬರ್ 3ರಂದು ನಡೆದಿದೆ. ಸಂಚಾರಿ ಪೊಲೀಸರೊಂದಿಗೆ ಸುಮಾರು 5 ಗಂಟೆಗಳ ಮಾತುಕತೆ ನಡೆಸಿದ ನಂತರ, ರೂ.86,500 ದಂಡವನ್ನು ರೂ.70,000ಗಳಿಗೆ ಇಳಿಸಲಾಗಿದೆ. ರೂ.70,000 ಪಾವತಿಸಿದ ನಂತರ ಟ್ರಕ್ ಚಾಲಕನು ಅಲ್ಲಿಂದ ತೆರಳಿದ್ದಾನೆ.

ಈ ಭಾರೀ ಪ್ರಮಾಣದ ದಂಡಕ್ಕೆ ಮುಖ್ಯ ಕಾರಣ ಒವರ್‍‍ಲೋಡ್. ಈ ಟ್ರಕ್‍‍ನಲ್ಲಿ ಒಡಿಶಾದ ತಲ್‍‍ಚೇರ್‍‍ನಿಂದ ಛತ್ತೀಸ್‍‍ಗಢಕ್ಕೆ ಭಾರೀ ತೂಕದ ಜೆ‍‍ಸಿ‍‍ಬಿಯನ್ನು ಸಾಗಿಸಲಾಗುತ್ತಿತ್ತು. ಈ ಜೆ‍‍ಸಿಬಿ ನಾಗಾಲ್ಯಾಂಡ್ ಮೂಲದ ಬಿ‍ಎಲ್‍ಎ ಇನ್ಪಾ‍‍ಸ್ಟ್ರಕ್ಚರ್ ಪ್ರೈ ಲಿ. ಕಂಪನಿಗೆ ಸೇರಿದ್ದೆಂದು ತಿಳಿದುಬಂದಿದೆ.

ದೇಶದಲ್ಲೇ ಅತಿ ಹೆಚ್ಚು ದಂಡ ಪಾವತಿಸಿದ ಟ್ರಕ್ ಚಾಲಕ..!

ಗಮನಿಸಬೇಕಾದ ಸಂಗತಿಯೆಂದರೆ ಈ ಟ್ರಕ್ ಸಹ ನಾಗಾಲ್ಯಾಂಡ್ ನಂಬರ್‍‍ಪ್ಲೇಟ್ ಅನ್ನು ಹೊಂದಿದೆ. ರಿಜಿಸ್ಟ್ರೇಷನ್ ಶುಲ್ಕವನ್ನು ಉಳಿಸುವ ಸಲುವಾಗಿ ಈ ಭಾಗದಲ್ಲಿ ಟ್ರಕ್ ಸೇರಿದಂತೆ ಬಹುತೇಕ ಸಾರಿಗೆ ವಾಹನಗಳು ಈಶಾನ್ಯ ರಾಜ್ಯಗಳ ನಂಬರ್‍‍ಪ್ಲೇಟ್‍‍ಗಳನ್ನು ಹೊಂದುತ್ತವೆ.

ದೇಶದಲ್ಲೇ ಅತಿ ಹೆಚ್ಚು ದಂಡ ಪಾವತಿಸಿದ ಟ್ರಕ್ ಚಾಲಕ..!

ಟ್ರಕ್ ಚಾಲಕ ಅಶೋಕ್ ಜಾಧವ್‍‍ಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸಿರುವ ಬಗ್ಗೆ ಮಾತನಾಡಿರುವ ಸಂಬಾಲ್ಪುರ ವಿಭಾಗದ ಆರ್‍‍‍ಟಿ‍ಒ ಅಧಿಕಾರಿ ಲಲಿತ್ ಮೋಹನ್ ಬೆಹೆರಾರವರು ಯಾವ ಯಾವ ನಿಯಮಗಳ ಉಲ್ಲಂಘನೆಗಾಗಿ ಯಾವ ಪ್ರಮಾಣದ ದಂಡವನ್ನು ವಿಧಿಸಲಾಯಿತು ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.

ದೇಶದಲ್ಲೇ ಅತಿ ಹೆಚ್ಚು ದಂಡ ಪಾವತಿಸಿದ ಟ್ರಕ್ ಚಾಲಕ..!

ಅನಧಿಕೃತ ವ್ಯಕ್ತಿ ಟ್ರಕ್ ಚಾಲನೆ ಮಾಡಿದ್ದಕ್ಕಾಗಿ ರೂ.5,000

ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ವಾಹನ ಚಾಲನೆ ಮಾಡಿದ್ದಕ್ಕಾಗಿ ರೂ.5,000

18 ಟನ್‍‍‍ಗೂ ಹೆಚ್ಚಿನ ಪ್ರಮಾಣದ ತೂಕ ಹೊಂದಿದ್ದ ಕಾರಣಕ್ಕೆ ರೂ.56,000

ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಎತ್ತರವನ್ನು ಹೊಂದಿದ್ದ ವಸ್ತುವಿನ ಸಾಗಾಟಕ್ಕೆ ರೂ.20,000

ಸಾಮಾನ್ಯ ನಿಯಮ ಉಲ್ಲಂಘನೆಗಾಗಿ ರೂ.500 ಸೇರಿದಂತೆ ಒಟ್ಟು ರೂ.86,500 ದಂಡ ವಿಧಿಸಲಾಗಿದೆ.

ದೇಶದಲ್ಲೇ ಅತಿ ಹೆಚ್ಚು ದಂಡ ಪಾವತಿಸಿದ ಟ್ರಕ್ ಚಾಲಕ..!

ಒಡಿಶಾದ ಸಂಚಾರಿ ಪೊಲೀಸರು ಹೊಸ ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಅಳವಡಿಸಿದ್ದು, ಸಂಚಾರ ನಿಯಮಗಳನ್ನು ಉಲ್ಲಂಘಿಸುವವರನ್ನು ತಡೆದು ದಂಡ ವಿಧಿಸುತ್ತಿದ್ದಾರೆ. ನಿನ್ನೆ ಭುವನೇಶ್ವರದಲ್ಲಿ ಸಾರ್ವಜನಿಕರು ಭಾರೀ ಪ್ರಮಾಣದ ಪ್ರತಿಭಟನೆ ನಡೆಸಿದ್ದಾರೆ.

MOST READ: ಹೊಸ ನಿಯಮದಿಂದ ಟ್ರಾಕ್ಟರ್ ಡ್ರೈವರ್‍‍‍ಗೂ ಬಿತ್ತು ಭಾರೀ ದಂಡ..!

ದೇಶದಲ್ಲೇ ಅತಿ ಹೆಚ್ಚು ದಂಡ ಪಾವತಿಸಿದ ಟ್ರಕ್ ಚಾಲಕ..!

ಸಂಚಾರಿ ಪೊಲೀಸರು ಸರ್ಕಾರಿ ವಾಹನಗಳಿಗೆ ಹಾಗೂ ಪೊಲೀಸ್ ವಾಹನಗಳಿಗೆ ದಂಡವನ್ನು ವಿಧಿಸದೇ ಕೇವಲ ಸಾರ್ವಜನಿಕರ ವಾಹನಗಳಿಗೆ ದಂಡ ವಿಧಿಸಿ ದ್ವಂದ್ವ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.

MOST READ: ಹೊಸ ಟ್ರಾಫಿಕ್ ರೂಲ್ಸ್ ಎಫೆಕ್ಟ್: ಪೊಲೀಸಪ್ಪನಿಗೆ ಬಿತ್ತು ಭಾರೀ ದಂಡ..!

ದೇಶದಲ್ಲೇ ಅತಿ ಹೆಚ್ಚು ದಂಡ ಪಾವತಿಸಿದ ಟ್ರಕ್ ಚಾಲಕ..!

ದಂಡ ವಿಧಿಸುವ ವೇಳೆಯಲ್ಲಿ ಪೊಲೀಸರು ಹಾಗೂ ವಾಹನ ಸವಾರರ ನಡುವೆ ಭಾರಿ ಪ್ರಮಾಣದ ಮಾತಿನ ಚಕಮಕಿ ನಡೆದಿರುವ ಘಟನೆಗಳೂ ಸಹ ವರದಿಯಾಗಿವೆ. ಹೊಸ ಕಾಯ್ದೆಯನ್ವಯ ಕೆಲವು ಉಲ್ಲಂಘನೆಗಳಿಗಾಗಿ 20% ನಷ್ಟು ಏರಿಕೆ ಮಾಡಲಾಗಿದೆ.

MOST READ: ಸ್ಕೂಟರ್ ಬೆಲೆ 15,000, ದಂಡ ಬಿದ್ದಿದ್ದು 23,000..!

ದೇಶದಲ್ಲೇ ಅತಿ ಹೆಚ್ಚು ದಂಡ ಪಾವತಿಸಿದ ಟ್ರಕ್ ಚಾಲಕ..!

ಹೊಸ ಕಾಯ್ದೆಯನ್ವಯ ಪೊಲೀಸರೊಂದಿಗೆ ವಾಗ್ವಾದ ನಡೆಸಿದರೂ ಸಹ ದಂಡ ವಿಧಿಸಲಾಗುವುದು. ದೇಶಾದ್ಯಂತ ಸಂಚಾರಿ ಪೊಲೀಸರು ಹಾಗೂ ಆರ್‍‍ಟಿ‍ಒ ಅಧಿಕಾರಿಗಳು, ವಾಹನಗಳನ್ನು ತಡೆದು ಭಾರೀ ಪ್ರಮಾಣದ ದಂಡ ವಿಧಿಸುತ್ತಿದ್ದಾರೆ. ಕೆಲವು ಕಡೆ ನಿಯಮಗಳನ್ನು ಉಲ್ಲಂಘಿಸಿದ ಪೊಲೀಸರಿಗೂ ದಂಡ ವಿಧಿಸಲಾಗಿದೆ.

ದೇಶದಲ್ಲೇ ಅತಿ ಹೆಚ್ಚು ದಂಡ ಪಾವತಿಸಿದ ಟ್ರಕ್ ಚಾಲಕ..!

ತಮ್ಮ ಹೋಂಡಾ ಆಕ್ಟಿವಾ ಸ್ಕೂಟರ್‍‍‍ನಲ್ಲಿ ಮೊಬೈಲ್‍‍ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದ ಪೊಲೀಸ್ ಅಧಿಕಾರಿಗೆ ಪಂಜಾಬ್‍‍ನಲ್ಲಿ ರೂ.10,000 ದಂಡ ವಿಧಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಹಲವು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಪೊಲೀಸ್ ಅಧಿಕಾರಿಗೆ ಜಾರ್ಖಂಡ್‍‍ನಲ್ಲಿ ರೂ.36,500 ದಂಡ ವಿಧಿಸಲಾಗಿದೆ.

ದೇಶದಲ್ಲೇ ಅತಿ ಹೆಚ್ಚು ದಂಡ ಪಾವತಿಸಿದ ಟ್ರಕ್ ಚಾಲಕ..!

ಈ ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತಂದಲ್ಲಿ ಮುಂಬರುವ ದಿನಗಳಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಲಿವೆ. ಆದರೆ ಈ ಹೊಸ ಕಾಯ್ದೆಯನ್ನು ಪೊಲೀಸರು ಸಹ ತಮಗೆ ಬೇಕಾದ ರೀತಿಯಲ್ಲಿ ಜಾರಿಗೊಳಿಸುವ ಸಾಧ್ಯತೆಗಳಿವೆ.

ದೇಶದಲ್ಲೇ ಅತಿ ಹೆಚ್ಚು ದಂಡ ಪಾವತಿಸಿದ ಟ್ರಕ್ ಚಾಲಕ..!

ಹೆಚ್ಚಿನ ಪ್ರಮಾಣದ ದಂಡವನ್ನು ವಿಧಿಸುವ ಬದಲು, ಒಂದಷ್ಟು ಹಣವನ್ನು ತಮಗೆ ನೀಡುವಂತೆ ಒತ್ತಾಯಿಸುವ ಸಾಧ್ಯತೆಗಳೂ ಸಹ ಇವೆ. ಇದು ಮತ್ತಷ್ಟು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡಲಿದೆ. ಭಾರತದ ಬಹುತೇಕ ರಾಜ್ಯಗಳಲ್ಲಿ ಈ ಹೊಸ ಕಾಯ್ದೆ ಜಾರಿಗೆ ಬಂದಿದ್ದರೂ ಸಹ ರಾಜಸ್ತಾನ, ಪಶ್ಚಿಮ ಬಂಗಾಳ, ಪಂಜಾಬ್ ಹಾಗೂ ಮಧ್ಯ ಪ್ರದೇಶದಂತಹ ರಾಜ್ಯಗಳು ಈ ಕಾಯ್ದೆಯನ್ನು ಜಾರಿಗೊಳಿಸಲು ನಿರಾಕರಿಸಿವೆ.

ದೇಶದಲ್ಲೇ ಅತಿ ಹೆಚ್ಚು ದಂಡ ಪಾವತಿಸಿದ ಟ್ರಕ್ ಚಾಲಕ..!

ದಂಡ ಪ್ರಮಾಣವು ಅಧಿಕವಾಗಿರುವ ಕಾರಣ ಈ ಕಾಯ್ದೆಯನ್ನು ಜಾರಿಗೊಳಿಸುವುದಿಲ್ಲವೆಂದು ತಿಳಿಸಿವೆ. ಗುಜರಾತ್ ರಾಜ್ಯವೂ ಸಹ ಹೊಸ ಕಾಯ್ದೆಯನ್ನು ಜಾರಿಗೊಳಿಸುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ವರದಿ ನೀಡುವಂತೆ ಸಾರಿಗೆ ಇಲಾಖೆಗೆ ಸೂಚಿಸಿದೆ.

Image Source: Cartoq

Video Sourve:Kalinga TV

Most Read Articles

Kannada
English summary
Truck driver slapped with India’s BIGGEST traffic fine of Rs. 86,500 under the new Motor Vehicles Act - Read in kannada
Story first published: Monday, September 9, 2019, 11:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X