ದುಬಾರಿ ಬೆಲೆಯ Ducati ಬೈಕ್ ಖರೀದಿಸಿದ ಬಾಲಿವುಡ್ ನಟ

ಹೀರೋ ಮತ್ತು ಸ್ಯಾಟಲೈಟ್ ಶಂಕರ್ ಚಿತ್ರಗಳ ಖ್ಯಾತಿಯ ನಟ ಸೂರಜ್ ಪಾಂಚೋಲಿ ಅವರು ಇತ್ತೀಚೆಗೆ ಕ್ರಿಸ್‌ಮಸ್ ಹಬ್ಬದಂದು ಐಷಾರಾಮಿ ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಎಸ್ ಬೈಕ್ ಅನ್ನು ಖರೀದಿಸಿದ್ದಾರೆ. ಇತರ ಸಿನಿ ಸೆಲಬ್ರಿಟಿಗಳಂತೆ ಇವರು ಕೂಡ ಐಷಾರಾಮಿ ಬೈಕ್ ಕ್ರೇಜ್ ಅನ್ನು ಹೆಚ್ಚು ಹೊಂದಿದ್ದಾರೆ.

ದುಬಾರಿ ಬೆಲೆಯ Ducati ಬೈಕ್ ಖರೀದಿಸಿದ ಬಾಲಿವುಡ್ ನಟ

ಬಾಲಿವುಡ್ ನಟ ಸೂರಜ್ ಪಾಂಚೋಲಿ ಸೋಷಿಯಲ್ ಮೀಡಿಯಾದಲ್ಲಿ, "ಅತ್ಯುತ್ತಮ ಕ್ರಿಸ್‌ಮಸ್! ಸ್ಟ್ರೀಟ್‌ಫೈಟರ್ ವಿ4 ಎಸ್ ಸಂಪೂರ್ಣ ಬಿಸ್ಟ್, ತುಂಬಾ ಧನ್ಯವಾದಗಳು ಡುಕಾಟಿ ಇಂಡಿಯಾ ಎಂಬ ಶೀರ್ಷಿಕೆಯೊಂದಿಗೆ ಹೊಸ ಬೈಕಿನೊಂದಿಗೆ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ನಟ ಸೂರಜ್ ಪಾಂಚೋಲಿ ಖರೀದಿಸಿದ ಮಾದರಿಯು ಟಾಪ್-ಎಂಡ್ ಸ್ಟ್ರೀಟ್‌ಫೈಟರ್ ವಿ4 ಎಸ್ ಆಗಿದೆ. ಈ ಮಾದರಿಯು ಡಾರ್ಕ್ ಸ್ಟೆಲ್ತ್ ಎಂಬ ವಿಶೇಷ ಮ್ಯಾಟ್ ಬ್ಲ್ಯಾಕ್ ಬಣ್ಣವನ್ನು ಹೊಂದಿದೆ. ಈ ಬೈಕಿಗೆ ಮುಂಬೈ ಆನ್-ರೋಡ್ ಪ್ರಕಾರ ರೂ.26 ಲಕ್ಷವಾಗಿದೆ.

ದುಬಾರಿ ಬೆಲೆಯ Ducati ಬೈಕ್ ಖರೀದಿಸಿದ ಬಾಲಿವುಡ್ ನಟ

ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಎಸ್ ಮೂಲಭೂತವಾಗಿ ಇಟಾಲಿಯನ್ ಮಾರ್ಕ್‌ಶಿಪ್ ಸೂಪರ್‌ಸ್ಪೋರ್ಟ್‌ನ ನೇಕೆಡ್ ಆವೃತ್ತಿಯಾಗಿದೆ. 2021ರ ಸ್ಟ್ರೀಟ್‌ಫೈಟರ್ ವಿ4 ಎಸ್ ಬೈಕಿನಲ್ಲಿ ಹಲವಾರು ಅಪ್ ಡೇಟ್'ಗಳನ್ನು ಮಾಡಲಾಗಿದೆ. ಇವುಗಳಲ್ಲಿ ಹೊಸ ಎಲೆಕ್ಟ್ರಾನಿಕ್ಸ್ ಹಾಗೂ ಅಪ್ ಡೇಟ್ ಮಾಡಲಾದ ಮೋಟೋ ಜಿಪಿ ಪಡೆದ ಎಲೆಕ್ಟ್ರಿಕ್ ಯುನಿಟ್'ಗಳು ಸೇರಿವೆ.

ದುಬಾರಿ ಬೆಲೆಯ Ducati ಬೈಕ್ ಖರೀದಿಸಿದ ಬಾಲಿವುಡ್ ನಟ

ಸ್ಟ್ರೀಟ್‌ಫೈಟರ್ ವಿ4 ಎಸ್ ಬೈಕ್ ಕಂಪನಿಯ ಪ್ರಮುಖ ನೇಕೆಡ್ ಬೈಕ್ ಆಗಿದೆ. ಸ್ಟ್ರೀಟ್‌ಫೈಟರ್ ವಿ4 ಎಸ್ ಬೈಕ್ ಅನ್ನು ಡುಕಾಟಿ ರೆಡ್ ಹಾಗೂ ಡಾರ್ಕ್ ಸ್ಟೆಲ್ತ್ ಎಂಬ ಎರಡು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

ದುಬಾರಿ ಬೆಲೆಯ Ducati ಬೈಕ್ ಖರೀದಿಸಿದ ಬಾಲಿವುಡ್ ನಟ

2021ರ ಹೊಸ ಸ್ಟ್ರೀಟ್‌ಫೈಟರ್ ವಿ4 ಎಸ್ ಬೈಕಿನಲ್ಲಿ 1,103 ಸಿಸಿ ಡೆಸ್ಮೋಸೆಡಿಸಿ ಸ್ಟ್ರಾಡೇಲ್ 90 ವಿ 4 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 13,000 ಆರ್‌ಪಿಎಂನಲ್ಲಿ 206 ಬಿಹೆಚ್‌ಪಿ ಪವರ್ ಹಾಗೂ 9.500 ಆರ್‌ಪಿಎಂನಲ್ಲಿ 123 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್'ನೊಂದಿಗೆಆರು ಸ್ಪೀಡಿನ ಗೇರ್‌ಬಾಕ್ಸ್‌ (ಡಿಕ್ಯೂಎಸ್) ಡುಕಾಟಿ ಕ್ವಿಕ್ ಶಿಫ್ಟ್ ಇವಿಒ 2 ಬೈ ಡೈರೆಕ್ಷನಲ್ ಹಾಗೂ ಸ್ಲಿಪ್-ಅಸಿಸ್ಟೆಡ್ ಕ್ಲಚ್‌ ಜೋಡಿಸಲಾಗಿದೆ.

ದುಬಾರಿ ಬೆಲೆಯ Ducati ಬೈಕ್ ಖರೀದಿಸಿದ ಬಾಲಿವುಡ್ ನಟ

ಸ್ಟ್ರೀಟ್‌ಫೈಟರ್ ವಿ4 ಎಸ್‌ 199 ಕೆ.ಜಿ ತೂಕವನ್ನು ಹೊಂದಿದೆ. ಅಕ್ರಾಪೊವಿಕ್ ಫುಲಿ ರೇಸಿಂಗ್ ಡುಕಾಟಿ ಪರ್ಫಾರ್ಮೆನ್ಸ್ ಎಕ್ಸಾಸ್ಟ್ ಅಳವಡಿಸುವ ಮೂಲಕ ಈ ಬೈಕಿನ ಪವರ್ ಹಾಗೂ ಟಾರ್ಕ್ ಅಂಕಿಅಂಶಗಳನ್ನು 217 ಬಿಹೆಚ್‌ಪಿ ಪವರ್ ಹಾಗೂ 130 ಎನ್ಎಂಗಳಿಗೆ ಹೆಚ್ಚಿಸಬಹುದು.

ದುಬಾರಿ ಬೆಲೆಯ Ducati ಬೈಕ್ ಖರೀದಿಸಿದ ಬಾಲಿವುಡ್ ನಟ

ಇದು ಬೈಕ್ ತೂಕವನ್ನು 6 ಕೆ.ಜಿಗಳಷ್ಟು ಕಡಿಮೆ ಮಾಡುತ್ತದೆ. ಈ ಬೈಕ್ 3 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಬೈಕಿನ ಟಾಪ್ ಸ್ಪೀಡ್ ಅನ್ನು ಎಲೆಕ್ಟ್ರಾನಿಕ್ ಆಗಿ 270 ಕಿ.ಮೀಗಳಿಗೆ ಸೀಮಿತಗೊಳಿಸಲಾಗಿದೆ.

ದುಬಾರಿ ಬೆಲೆಯ Ducati ಬೈಕ್ ಖರೀದಿಸಿದ ಬಾಲಿವುಡ್ ನಟ

ಸ್ಟ್ರೀಟ್‌ಫೈಟರ್ ವಿ4 ಬೈಕಿನಲ್ಲಿ ಇನ್ಸ್'ಟ್ರೂಮೆಂಟ್ ಕನ್ಸೋಲ್‌ಗಾಗಿ 5 ಇಂಚಿನ ಟಿಎಫ್‌ಟಿ ಕಲರ್ ಡಿಸ್ ಪ್ಲೇ ನೀಡಲಾಗಿದೆ. ಈ ಬೈಕಿನಲ್ಲಿ ಮಲ್ಟಿ ರೈಡಿಂಗ್ ಮೋಡ್, ವಿವಿಧ ಪವರ್ ಮೋಡ್‌, ಕಾರ್ನರಿಂಗ್ ಎಬಿಎಸ್ ಇವಿಒ, (ಡಿಟಿಸಿ) ಡುಕಾಟಿ ಟ್ರಾಕ್ಷನ್ ಕಂಟ್ರೋಲ್ ಇವಿಒ 2, (ಡಿಡಬ್ಲ್ಯೂಸಿ) ಡುಕಾಟಿ ವ್ಹೀಲೀ ಕಂಟ್ರೋಲ್ ಇವಿಒ, (ಡಿಎಸ್‌ಸಿ) ಡುಕಾಟಿ ಸ್ಲೈಡ್ ಕಂಟ್ರೋಲ್, (ಇಬಿಸಿ) ಎಂಜಿನ್ ಬ್ರೇಕ್ ಕಂಟ್ರೋಲ್ ಇವಿಒ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗಿದೆ.

ದುಬಾರಿ ಬೆಲೆಯ Ducati ಬೈಕ್ ಖರೀದಿಸಿದ ಬಾಲಿವುಡ್ ನಟ

ಸ್ಟ್ರೀಟ್‌ಫೈಟರ್ ವಿ4 ಎಸ್ ಬೈಕಿನಲ್ಲಿ ಆಕರ್ಷವಾದ ಎಲ್‌ಇಡಿ ಹೆಡ್‌ಲ್ಯಾಂಪ್‌, ಟೇಲ್‌ಲ್ಯಾಂಪ್‌, ಮಸ್ಕ್ಯುಲರ್ ಫ್ಯೂಯಲ್ ಟ್ಯಾಂಕ್, ಬೃಹತ್ ರೇಡಿಯೇಟರ್ ಗ್ರಿಲ್, ಲೋಡ್-ಫಿನಿಶ್ಡ್ ಫೋರ್ಕ್‌ ಹಾಗೂ ಸಿಂಗಲ್ ಸೈಡ್ ಸ್ವಿಂಗಾರ್ಮ್ ನೀಡಲಾಗಿದೆ.

ದುಬಾರಿ ಬೆಲೆಯ Ducati ಬೈಕ್ ಖರೀದಿಸಿದ ಬಾಲಿವುಡ್ ನಟ

ಈ ಬೈಕಿನ ಮುಂಭಾಗದಲ್ಲಿ ಎಲೆಕ್ಟ್ರಾನಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಓಹ್ಲಿನ್ಸ್ ಎನ್ಐಎಕ್ಸ್ 30 ಯುಎಸ್‌ಡಿ ಫೋರ್ಕ್ ಹಾಗೂ ಹಿಂಭಾಗದಲ್ಲಿ ಓಹ್ಲಿನ್ಸ್ ಟಿಟಿಎಕ್ಸ್ 36 ಮೊನೊ ಶಾಕ್ ಯುನಿಟ್'ಗಳನ್ನು ನೀಡಲಾಗಿದೆ. 2021ರ ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಬೈಕ್ ಐದು-ಸ್ಪೋಲ್ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಈ ಹೊಸ ಡುಕಾಟಿ ಬೈಕಿನಲ್ಲಿ ಪಿರೆಲ್ಲಿ ಡಯಾಬ್ಲೊ ರೊಸ್ಸೊ ಕೊರ್ಸಾ ಪರ್ಫಾರ್ಮೆನ್ಸ್ ಟಯರುಗಳನ್ನು ನೀಡಲಾಗಿದೆ.

ದುಬಾರಿ ಬೆಲೆಯ Ducati ಬೈಕ್ ಖರೀದಿಸಿದ ಬಾಲಿವುಡ್ ನಟ

ಪ್ರಮುಖವಾಗಿ ಈ ಬೈಕಿನಲ್ಲಿ ಬ್ರೇಕಿಂಗ್'ಗಾಗಿ ಮುಂಭಾಗದಲ್ಲಿ ಡ್ಯುಯಲ್ 330 ಎಂಎಂ ಸೆಮಿ-ಫ್ಲೋಟಿಂಗ್ ಡಿಸ್ಕ್ ಮೂಲಕ ರೇಡಿಯಲ್-ಮೌಂಟೆಡ್ ಬ್ರೆಂಬೊ ಮೊನೊಬ್ಲೋಕ್ ಸ್ಟೈಲ್ಮಾ ಎಂ 4.30 4 ಪಿಸ್ಟನ್ ಕ್ಯಾಲಿಪರ್‌ ಹಾಗೂ ಹಿಂಭಾಗದಲ್ಲಿ ಎರಡು ಪಿಸ್ಟನ್ ಕ್ಯಾಲಿಪರ್‌ಗಳನ್ನು ನೀಡಲಾಗಿದೆ. ಡುಕಾಟಿ ವಿ 4 ಎಸ್ ಬೈಕ್ ಹಗುರವಾದ ಮಾರ್ಚೆಸಿನಿ 3-ಸ್ಪೋಕ್ ಖೋಟಾ ಅಲ್ಯೂಮಿನಿಯಂ ಅಲಾಯ್ ವ್ಹೀಲ್‌ಗಳನ್ನು ಹೊಂದಿದೆ. ಈ ಬೈಕ್ ಎರಡೂ ಬದಿಗಳಲ್ಲಿ ಪಿರೆಲ್ಲಿ ಡಯಾಬ್ಲೊ ರೊಸ್ಸೊ ಕೊರ್ಸಾ 2 ಪರ್ಫಾರ್ಮೆನ್ಸ್ ಟಯರ್‌ಗಳನ್ನು ಹೊಂದಿವೆ.

ದುಬಾರಿ ಬೆಲೆಯ Ducati ಬೈಕ್ ಖರೀದಿಸಿದ ಬಾಲಿವುಡ್ ನಟ

ಡುಕಾಟಿ ಸ್ಟ್ರೀಟ್‌ಫೈಟರ್ ವಿ4 ಎಸ್ ಬೈಕ್' ದೇಶಿಯ ಮಾರುಕಟ್ಟೆಯಲ್ಲಿ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‌ಎಸ್ ಹಾಗೂ ಕವಾಸಕಿ ನಿಂಜಾ ಝಡ್ ಹೆಚ್2 ಬೈಕುಗಳಿಗೆ ಪೈಪೋಟಿ ನೀಡುತ್ತವೆ. ಇನ್ನು ಡುಕಾಟಿ ಕಂಪನಿಯು ಹೊಸ ಸ್ಟ್ರೀಟ್‌ಫೈಟರ್ ವಿ2 ನೇಕೆಡ್ ಸ್ಟ್ರೀಟ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

More from DriveSpark

Article Published On: Wednesday, December 29, 2021, 17:15 [IST]
English summary
Hindi actor sooraj pancholi buys new ducati streetfighter v4 s details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+