ಸೇತುವೆ ಅಡಿಯಿಂದ ಅತ್ಯಾದ್ಭುತವಾಗಿ ಯುದ್ಧ ವಿಮಾನ ಹಾರಿಸಿದ ಪೈಲಟ್
ಇದೊಂದು ಹಳೆಯ ಕಥೆ. ಅಂದು ಅಮೆರಿಕ ಮತ್ತು ಸೋವಿಯತ್ ಒಕ್ಕೂಟದ ನಡುವೆ ಶೀತಲ ಸಮರ ತಾರಕ್ಕೇರಿದ ಕಾಲಘಟ್ಟ. ಇತ್ತ ದೇಶಗಳ ನಡುವೆಯೂ ಮಿಲಿಟರಿ ಬಲಾಬಲದ ಪ್ರದರ್ಶನ ಬಹಳ ಜೋರಾಗಿಯೇ ನಡೆಯುತ್ತಿತ್ತು. ಹಾಗಿರಬೇಕೆಂದರೆ 1965 ಜೂನ್ 04ರಂದು ನೋವೊಸಿಬಿರ್ಸ್ಕ್ ನ ರಿವರ್ ಓಬ್ ಕೋಮು ಸೇತುವೆಯ ಅಡಿಯಿಂದಾಗಿ ಸೋಮಿಯತ್ ಒಕ್ಕೂಟದ ಪೈಲಟ್ ವ್ಯಾಲೆಂಟಿನ್ ಪ್ರಿವಲೊವ್ ಅತ್ಯಂತ ಶಕ್ತಿಶಾಲಿ ಮಿಗ್ 17 ಯುದ್ಧ ವಿಮಾನವನ್ನು ಹಾರಿಸಿಯೇ ಬಿಟ್ಟಿದ್ದರು.

ವಿಷಯದ ಬಗ್ಗೆ ಗಾಢವಾಗಿ ಪರಿಶೀಲಿಸಿದಾಗ ತಿಳಿದು ಬಂದ ವಿಚಾರವೆಂದರೆ ಸ್ಟಂಟ್ ಪ್ರಿಯರಾಗಿರುವ ಪೈಲಟ್ ಪ್ರಿವಲೊವ್ ತಮ್ಮ ಸ್ವೇಚ್ಚೆಯಿಂದಲೇ ಇಂತಹದೊಂದು ಸಾಹಸಕ್ಕೆ ಮುಂದಾಗಿದ್ದರು.

ಸೇತುವೆಯ ಕೆಳಗಡೆ ಹಾದು ಹೋಗುವ ನದಿಯು ತುಂಬಿ ತುಳುಕುತ್ತಿತ್ತು. ಕೆಲವೇ ಕ್ಷಣಗಳಲ್ಲಿ ಆಕಾಶದಿಂದ ಹಕ್ಕಿಯಂತೆ ಹಾರಾಡುತ್ತಾ ಬರುತ್ತಿದ್ದ ಯಂತ್ರವೊಂದು ರಭಸದಿಂದ ಸೇತುವೆಯೊಳಕ್ಕೆ ನುಗ್ಗಿತ್ತು.

ಸೇತುವೆ ಪಕ್ಕದಲ್ಲೆಲ್ಲ ರಜಾ ಮಜಾ ಸವಿಯಲು ಬಂದಿರುವ ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ಈ ಅತ್ಯಾಧ್ಬುತ ರೋಚಕ ಕ್ಷಣವನ್ನು ಆಸ್ವಾದಿಸಿದ ಅವರು ಕೈಚಪ್ಪಾಳೆ ತಟ್ಟಲು ಆರಂಭಿಸಿದ್ದರು.

ಆದರೆ ಇದರ ಭವಿಷ್ಯತ್ ಪರಿಣಾಮ ಮಾತ್ರ ಚೆನ್ನಾಗಿರಲಿಲ್ಲ. ಪೈಲಟ್ ಮಾಡಿದ ತಪ್ಪಿಗಾಗಿ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿತು.

ಪೈಲಟ್ ವಿರುದ್ಧ ಮೇಲಾಧಿಕಾರಿಗಳು ಶಿಸ್ತಿನ ಕ್ರಮ ಕೈಗೊಂಡರು. ಆದರೆ ಡಿಫೆನ್ಸ್ ಮಾರ್ಷಲ್ ಮಲಿನೊವಿಸ್ಕಿ ಕಾರ್ಯದರ್ಶಿ ತೋರಿರುವ ಕರುಣೆಯಿಂದಾಗಿ ಬಳಿಕ ಸೇವೆಗೆ ಮರಳಲು ಸಾಧ್ಯವಾಗಿತ್ತು.

ಪ್ರಸ್ತುತ ಘಟನೆ ನಡೆದು 45 ವರ್ಷಕ್ಕೂ ಹೆಚ್ಚು ಕಾಲ ಸಂದರೂ ಚಿತ್ರವೀಗ ಇಂಟರ್ ನೆಟ್ ನಲ್ಲಿ ಜಾಲಾಡಲು ಆರಂಭಿಸಿದೆ. ರಷ್ಯಾದ ವಿವಿಧ ವೆಬ್ ಸೈಟ್ ಗಳಲ್ಲಿ ಈ ಬಗ್ಗೆ ವರದಿಯನ್ನು ಮಾಡಲಾಗಿದೆ.

ಆದರೆ ಇಂಟರ್ ನೆಟ್ ನಲ್ಲಿ ಹರಿದಾಡುವ ಚಿತ್ರಗಳು ನಕಲಿ ಎಂಬ ಬಗ್ಗೆಯೂ ಸಂಶಯ ಮೂಡಿದೆ. ಯಾಕೆಂದರೆ ಆ ಕ್ಷಣದಲ್ಲಿ ಕ್ಲಿಕ್ಕಿಸಲು ಅಲ್ಲಿ ಛಾಯಾಗ್ರಾಹಕ ರೆಡಿಯಾಗಿ ನಿಂತಿದ್ದಾನೆಯೇ ಎಂಬುದು ಗೊಂದಲಕ್ಕೀಡು ಮಾಡಿದೆ.

ಚಿತ್ರದಲ್ಲಿ ನೀವೇ ನೋಡುತ್ತಿರುವಂತೆಯೇ ವಿಮಾನ ನೀರಿಗಿಳಿದ ರಭಸಕ್ಕೆ ನೀರು ಮೇಲಕ್ಕಪ್ಪಳಿಸುತ್ತಿದೆ. ಇದು ನಿಜಕ್ಕೂ ರೋಚಕತೆಗೆ ಸಾಕ್ಷಿಯಾಗಿದೆ.

ಮಗದೊಂದು ಮೂಲಗಳ ಪ್ರಕಾರ ಘಟನೆ ನಡೆದಿದ್ದು ನಿಜವಾಗಿದ್ದು, ಈಗ ಪ್ರತಿಭಾವಂತ ಛಾಯಾಗ್ರಾಹಕನೊಬ್ಬ ಇದರ ನಕಲಿ ಚಿತ್ರವನ್ನು ರಚಿಸಿರಲೂಬಹುದು ಎನ್ನಲಾಗಿದೆ.

30 ಮೀಟರ್ ಎತ್ತರದ ಸೇತುವೆ ಬೆಂಬಲ ಕಂಬಗಳ ನಡುವಣ ಅಂತರ 120 ಮೀಟರ್ ಆಗಿದೆ. ಈ ನಡುವೆ 700 ಕೀ.ಮೀ. ವೇಗದಲ್ಲಿ ಪೈಲಟ್ ವಿಮಾನದಲ್ಲಿ ಸ್ಟಂಟ್ ಪ್ರದರ್ಶನ ನಡೆಸಿದ್ದರು.

ವೈಮಾನಿಕ ತಜ್ಞ ಹಾಗೂ ಸಂಶೋಧಕರ ಪ್ರಕಾರ ಇನ್ನು ಮುಂದೆಯೂ ಯಾವ ಪೈಲಟ್ ನಿಂದಲೂ ಇಂತಹದೊಂದು ಉಗುರು ಚುಚ್ಚುವಂತಹ ಸಾಧನೆ ಬರೆಯಲು ಸಾಧ್ಯವೇ ಇಲ್ಲ ಎಂಬುದನ್ನು ತಿಳಿಸುತ್ತಾರೆ.


Click it and Unblock the Notifications








