ಹಿರೋಶಿಮಾ ಮತ್ತು ನಾಗಸಾಕಿ ಧ್ವಂಸಗೊಳಿಸಿದ ಬಾಂಬರ್ ವಿಮಾನ
1939 ರಿಂದ 1945 ರವರೆಗೆ ನಡೆದ ಎರಡನೇ ಮಹಾಯುದ್ಧದಲ್ಲಿ ಆರು ಕೋಟಿಗೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿರುವುದಾಗಿ ಅಂದಾಜಿಸಲಾಗಿದೆ. 70ಕ್ಕೂ ಹೆಚ್ಚು ರಾಷ್ಟ್ರಗಳ ಸೈನ್ಯಗಳು ಭಾಗವಹಿಸಿದ ಈ ಯುದ್ಧದಲ್ಲಿ ಪ್ರಮುಖವಾಗಿ ಎರಡು ಬಣಗಳ ಮಧ್ಯೆ ಘೋರ ಯುದ್ಧ ಏರ್ಪಟ್ಟಿತ್ತು. ಮಿತ್ರ ರಾಷ್ಟ್ರಗಳಾದ ಅಮೆರಿಕಾ, ಬ್ರಿಟನ್, ರಷ್ಯಾ ಮತ್ತು ಫ್ರಾನ್ಸ್ ಮತ್ತು ಅಕ್ಷ ರಾಷ್ಟ್ರಗಳಾದ ಜರ್ಮನಿ, ಜಪಾನ್ ಮತ್ತು ಇಟಲಿಯ ನಡುವಣ ಯುದ್ಧ ವಿಶ್ವವ್ಯಾಪ್ತಿಯಾಗಿ ಪರಿಣಮಿಸಿದ್ದರಿಂದ ಅಗಾಧ ಸಾವು ನೋವು ಮತ್ತು ಕಷ್ಟ ನಷ್ಟಗಳು ಸಂಭವಿಸಿದ್ದವು.
ಭಾರತದ ವಾಯು ಪ್ರದೇಶದ ಸುರಕ್ಷತೆ ಕಾಯುವ ಯುದ್ಧ ವಿಮಾನಗಳು
ಎರಡನೇ ಮಹಾಯುದ್ಧ ಸಮರದ ಅಂತಿಮ ಹಂತದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನವು ಜಪಾನ್ ನಲ್ಲಿರುವ ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ವಿರುದ್ಧ ಪರಮಾಣ ಬಾಂಬ್ ದಾಳಿಯನ್ನು ಪ್ರಯೋಗಿಸಿತ್ತು. ಕದನ ವಿರಾಮ ಷರತ್ತನ್ನು ಉಪೇಕ್ಷಿಸಿದ ಜಪಾನ್ ವಿರುದ್ದ 1945 ಆಗಸ್ಟ್ 6 ಸೋಮವಾರದಂದು 'ಲಿಟ್ಲ್ ಬಾಯ್' ಎಂಬ ಹೆಸರಿನ ಪರಮಾಣು ಶಸ್ತ್ರಾಸ್ತ್ರವನ್ನು ಹಿರೋಶಿಮಾ ಮೇಲೆ ಅಮೆರಿಕ ಬೀಳಿಸಿತು. ಇದಾದ ನಂತರ ಆಗಸ್ಟ್ 9ರಂದು ನಾಗಸಾಕಿಯ ಮೇಲೆ 'ಫ್ಯಾಟ್ ಮ್ಯಾನ್' ಸ್ಪೋಟವನ್ನು ನಡೆಸಿತ್ತು.

ಪರಮಾಣು ದಾಳಿಯನ್ನು ವಿಶ್ವದ ಕರಾಳ ದಿನವಾಗಿ ಪರಿಗಣಿಸಲ್ಪಟ್ಟಿದೆ. ಪ್ರತಿ ನಗರದಲ್ಲೂ ಲಕ್ಷಗಟ್ಟಲೆ ಸಾವುನೋವುಗಳು ಸಂಭವಿಸಿದ್ದವು. ಇಂದಿಗೂ ಇಲ್ಲಿನ ಜನತೆಯು ವಿಕಿರಣ ಕಾಯಲೆ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವುದು ಸ್ಪೋಟದ ತೀವ್ರತೆಗೆ ಸಾಕ್ಷಿಯಾಗಿದೆ. ಇದಾದ ಬೆನ್ನಲ್ಲೇ ಜಪಾನ್ ತನ್ನ ಶರಣಾಗತಿಯನ್ನು ಘೋಷಿಸಿತ್ತು.

ಮ್ಯಾನ್ ಹಾಟ್ಟನ್ ಎಂಬ ಯೋಜನೆಯ ಅಡಿಯಲ್ಲಿ ಅಮೆರಿಕ ಮೊದಲ ಪರಮಾಣು ಬಾಂಬುಗಳನ್ನು ವಿನ್ಯಾಸ ಮತ್ತು ನಿರ್ಮಾಣಗೊಳಿಸಿತ್ತು. ಬಳಿಕ ಪಾಟ್ಸ್ ಡ್ಯಾಂ ಅಂತಿಮ ಷರತ್ತು ಮುಖಾಂತರ ಜಪಾನ್ ಶರಣಾಗತಿಯಾಗುವಂತೆ ಎಚ್ಚರಿಸಿತ್ತು.

ಇವೆಲ್ಲವನ್ನು ಮಗದೊಮ್ಮೆ ನೆನಪಿಸಿಕೊಳ್ಳಲು ಕಾರಣವೊಂದಿದೆ. ಆಗಸ್ಟ್ 6ರಂದು ನಡೆದ ಮೊದಲ ಪರಮಾಣು ಬಾಂಬ್ ಕಾರ್ಯಾಚರಣೆಯಲ್ಲಿ ಅಮೆರಿಕ ಅತ್ಯಂತ ಶಕ್ತಿಶಾಲಿ ಬಾಂಬರ್ ಬಿ-29 ಯುದ್ಧ ವಿಮಾನವನ್ನು ಆಯ್ಕೆ ಮಾಡಿತ್ತು.

ಪಶ್ಚಿಮ ಫೆಸಿಫಿಕ್ ನಲ್ಲಿರುವ ಟಿನಿಯಾನ್ ನಲ್ಲಿ ನೆಲೆಗೊಂಡಿರುವ ಉತ್ತರ ಮೈದಾನದ ವಾಯುನೆಲೆಯಿಂದ ಬಿ-29 ಎನೊಲಾ ಗಾಯ್ ವಿಮಾನವನ್ನು ಚಾಲಕ ಕರ್ನಲ್ ಪಾಲ್ ಉಡಾವಣೆ ಮಾಡಿದ್ದರು.

ಬಳಿಕ 1945ರ ಆಗಸ್ಟ್ 9ರಂದು B-29 ಸೂಪರ್‌ಫೋರ್ಟ್ರೆಸ್ ಬಾಕ್‌ಸ್ಕಾರ್ ವಿಮಾನವು, 'ಫ್ಯಾಟ್ ಮ್ಯಾನ್' ಎಂಬ ಸಂಕೇತ-ನಾಮವನ್ನು ಹೊಂದಿದ್ದ ಪರಮಾಣು ಬಾಂಬನ್ನು ಹೊತ್ತೊಯ್ದಿತು. ಈ ಎರಡು ಪರಮಾಣು ದಾಳಿಗಳು ಇತಿಹಾಸದ ಭಾಗವಾಗಿದೆ.

ಸರಿ ಸುಮಾರು ಒಂದು ಶತಮಾನದ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಅಮೆರಿಕದ ಬಹುರಾಷ್ಟ್ರೀಯ ಬೋಯಿಂಗ್ ಸಂಸ್ಥೆಯು ವಿಮಾನ, ರಾಕೆಟ್ ಮತ್ತು ಸ್ಯಾಟಲೈಟ್ ಗಳ ವಿನ್ಯಾಸ, ನಿರ್ಮಾಣ ಮತ್ತು ಮಾರಾಟ ಮಾಡುವುದರಲ್ಲಿ ನಿಸ್ಸೀಮವೆನಿಸಿದೆ. ಇದೇ ಸಂಸ್ಥೆಯು ಬಿ-29 ಬಾಂಬರ್ ವಿಮಾನವನ್ನು ತಯಾರಿಸಿತ್ತು.

ಪ್ರಮುಖವಾಗಿಯೂ ಅಮೆರಿಕ ರಕ್ಷಣಾ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ಕೊಡುತ್ತಿರುವ ಬೋಯಿಂಗ್ ಸಂಸ್ಥೆಯು ವಿಶ್ವದ ಅತಿ ದೊಡ್ಡ ವಿಮಾನ ನಿರ್ಮಾಣ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಇದರ ಪ್ರದಾನ ಕಚೇರಿ ಚಿಕಾಗೊದಲ್ಲಿದೆ.

ಎರಡನೇ ಮಹಾಯುದ್ಧ ಕಾಲಘಟ್ಟದಲ್ಲಿ ಅಮೆರಿಕ ಸೈನ್ಯಕ್ಕಾಗಿ ಬೋಯಿಂಗ್ ಸಂಸ್ಥೆಯು ಅತ್ಯಂತ ಶಕ್ತಿಶಾಲಿ ಬಾಂಬರ್ ವಿಮಾನವನ್ನು ನಿರ್ಮಿಸಿತ್ತು. ಅದುವೇ ಬೋಯಿಂಗ್ ಬಿ-29 ಸೂಪರ್ ಫೋರ್ಟ್ರೆಸ್.

ನಾಲ್ಕು ಎಂಜಿನ್ ಗಳ ಪ್ರೊಪ್ಪೆಲ್ಲರ್ ಚಾಲಿದ ಬೋಯಿಂಗ್ ಬಿ-29 ಸೂಪರ್ ಫೋರ್ಟ್ರೆಸ್ ಎರಡನೇ ಯುದ್ಧ ಬಳಿಕ ಕೊರಿಯಾ ಯುದ್ಧದಲ್ಲೂ ತನ್ನ ಪಾತ್ರವನ್ನು ವಹಿಸಿತ್ತು.

ಎರಡನೇ ಮಹಾಯುದ್ಧ ಸಂದರ್ಭದಲ್ಲಿ ಬೃಹತ್ ವಿಮಾನ ಕಾರ್ಯಾಚರಣೆಗಳಲ್ಲಿ ಒಂದೆನಿಸಿಕೊಂಡಿರುವ ಬೋಯಿಂಗ್ ಬಿ-19 ಶತ್ರು ರಾಷ್ಟ್ರಗಳಿಗೆ ಅತ್ಯಂತ ಮಾರಕವಾಗಿ ಪ್ರಭಾವ ಬೀರಿತ್ತು.

ಒತ್ತಡಕ್ಕೇರಿಸಲಾದ ಕ್ಯಾಬಿನ್, ಡ್ಯುಯಲ್ ವೀಲ್, ಟ್ರೈಸೈಕಲ್ ಲ್ಯಾಂಡಿಂಗ್ ಗೇರ್, ರಿಮೋಟ್ ಮತ್ತು ಎಲೆಕ್ಟ್ರಾನಿಕ್ ಫೈರ್ ಕಂಟ್ರೋಲ್ ವ್ಯವಸ್ಥೆಯನ್ನು ಇದು ಹೊಂದಿದೆ.

ರಾತ್ರಿ ಸಮಯದಲ್ಲೂ ಬಾಂಬ್ ದಾಳಿ ನಡೆಸಲು ಬೋಯಿಂಗ್ ಬಿ-29 ಬಳಕೆ ಮಾಡಲಾಗುತ್ತಿತ್ತು. ಬಳಿಕ ಇದರ ಸ್ಥಾನವನ್ನು ಹೆಚ್ಚು ಶಕ್ತಿಶಾಲಿ ಬಿ-17 ಫ್ಲೈಯಿಂಗ್ ಫೋರ್ಟ್ರೆಸ್ ತುಂಬಿಕೊಂಡಿತ್ತು.

ಅತಿ ಎತ್ತರದ ವಾಯು ವಲಯದ ಜೊತೆಗೆ ಕಡಿಮೆ ಎತ್ತರದ ಪ್ರದೇಶ ವಾಯು ವಲಯದಿಂದಲೂ ಬಾಂಬ್ ದಾಳಿ ನಡೆಸುವಲ್ಲಿ ಬೋಯಿಂಗ್ ಯಶಸ್ಸನ್ನು ಸಾಧಿಸಿದ್ದವು.

ಜಪಾನ್ ನ ಹೀರೋಶಿಮಾ ಮತ್ತು ನಾಗಸಾಕಿಗಳಿಗೆ ನಡೆದ ವಿಶ್ವದ ಅತ್ಯಂತ ಭೀಕರ ಅಣು ದಾಳಿಯ ಹಿಂದೆ ಬೋಯಿಂಗ್ ಬಿ-29 ಪಾತ್ರ ಮಹತ್ತರವಾಗಿತ್ತು. ಏಕಂದರೆ ಇದೇ ವಿಮಾನದಲ್ಲಿ ಅಣು ಬಾಂಬ್ ಹೊತ್ತೊಯ್ಯಲಾಗಿತ್ತು.

ಅಂದಿನ ಕಾಲಘಟ್ಟದಲ್ಲಿ ಅತ್ಯಂತ ಮುಂದುವರಿದ ತಂತ್ರಗಾರಿಕೆಯನ್ನು ಹೊಂದಿರುವ ಈ ಯುದ್ಧ ವಿಮಾನದ ಸಾಮರ್ಥ್ಯವನ್ನು ಅರಿತುಕೊಂಡ ಅಮೆರಿಕ ಎರಡನೇ ಮಹಾಯುದ್ಧದ ಬಳಿಕವೂ ತನ್ನ ಸೇವೆಯಲ್ಲಿ ಮುಂದುವರಿಸಿಕೊಂಡಿತ್ತು.

1950ರ ದಶಕದಲ್ಲೂ ನಿರಂತರ ಸೇವೆ ಸಲ್ಲಿಸಿರುವ ಬೋಯಿಂಗ್ ಬಿ-29 ಶ್ರೇಣಿಯ ಮುಂದಿನ ಹಂತವಾಗಿ ನಾನ್ ಸ್ಟಾಪ್ ಆಗಿ ವಿಶ್ವ ಸುತ್ತುವ ಬಿ-50 ಸೂಪರ್ ಫೋರ್ಟ್ರೆಸ್ ಯುದ್ಧ ವಿಮಾನವನ್ನು ನಿರ್ಮಿಸಲಾಗಿತ್ತು.

ಅಂತಿಮವಾಗಿ 1960ರಲ್ಲಿ ಬೋಯಿಂಗ್ ಬಿ-29 ಸೇವೆಯಿಂದ ನಿವೃತ್ತಿ ಪಡೆದಿತ್ತು. ಒಟ್ಟಾರೆ ಇಂತಹ 3970ರಷ್ಟು ವಿಮಾನಗಳನ್ನು ನಿರ್ಮಿಸಲಾಗಿತ್ತು.

ಚರಿತ್ರೆಯ ಭಾಗವಾಗಿರುವ ಬೋಯಿಂಗ್ ಬಿ-29 ವಿಮಾನವನ್ನು ಈಗಲೂ ಸಂರಕ್ಷಣೆ ಮಾಡಲಾಗಿದೆ. ಆದರೆ ಬಹುತೇಕ ವಿಮಾನಗಳು ಹಾರಾಡುವ ಸಾಮರ್ಥ್ಯವನ್ನು ಕಳೆದುಕೊಂಡಿದೆ.

ನಾಝಿ ಅಧಿಪತ್ಯವನ್ನು ತಡೆಯುವ ನಿಟ್ಟಿನಲ್ಲಿ ಅಮೆರಿಕ ಸೇನೆಯ ವಿಶೇಷ ಬೇಡಿಕೆಯ ಹಿನ್ನೆಲೆಯಲ್ಲಿ ಬೋಯಿಂಗ್ ಬಾಂಬರ್ ವಿಮಾನವನ್ನು ಅಭಿವೃದ್ಧಿಪಡಿಸಲಾಗಿತ್ತು.

ಎರಡನೇ ಮಹಾಯುದ್ಧದಲ್ಲಿ 9170 ಮೀಟರ್ ಎತ್ತರದಲ್ಲಿ ಹಾರಾಟ ನಡೆಸಿದ ಬೋಯಿಂಗ್ ಬಿ-29 ಯುದ್ಧ ವಿಮಾನವು ಗಂಟೆಗೆ 560 ಕೀ.ಮೀ. ವೇಗದಲ್ಲಿ ಸಂಚರಿಸುತ್ತಾ ಬಾಂಬ್ ಸಿಡಿಸುವ ಮೂಲಕ ಶತ್ರು ಪಾಳೇಯವನ್ನು ನೂಚ್ಚುನೂರುಗೊಳಿಸಿತ್ತು.

ಈಗಲೂ ಅಸ್ತಿತ್ವದಲ್ಲಿರುವ 28 ಐತಿಹಾಸಿಕ ವಿಮಾನಗಳು
ಅತಿ ಹೆಚ್ಚು ನಿರ್ಮಿಸಿದ 10 ಯುದ್ಧ ವಿಮಾನಗಳು


Click it and Unblock the Notifications








