ಹೋಳಿ ಹಬ್ಬದಂದು ವೇಗದಲ್ಲಿದ್ದ ಆಟೋ ಮೇಲೆ ಬಣ್ಣ ಎರಚಿ ಪಲ್ಟಿ ಹೊಡೆಸಿದ ಪುಂಡರು!
ಹೋಳಿ ಹಬ್ಬದಂದು ಸ್ಥಳೀಯರು ಆಟೋ ಮೇಲೆ ನೀರು ತುಂಬಿದ ಬಲೂನ್‌ಗಳನ್ನು ಎಸೆದಿದ್ದು, ವೇಗವಾಗಿ ಚಲಿಸುತ್ತಿದ್ದ ಆಟೋ ಪಲ್ಟಿಯಾದ ಘಟನೆ ನಡೆದಿದೆ. ಇದು ಹಳೆಯ ವೀಡಿಯೊ, ಇದನ್ನು ಇತ್ತೀಚೆಗೆ ಕ್ರೈಮ್ ರಿಪೋರ್ಟ್ಸ್ ಇಂಡಿಯಾ ತನ್ನ ಎಕ್ಸ್ (ಟ್ವಿಟರ್) ಪ್ರೊಫೈಲ್‌ನಲ್ಲಿ ಹಂಚಿಕೊಂಡಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡೋಣ.
ಈ ಘಟನೆಯು 2022 ರಲ್ಲಿ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ವರದಿಯಾಗಿದೆ. ಆಟೋ ಚಾಲಕ ಹೋಳಿ ಹಬ್ಬದಂದು ಪ್ರಯಾಣಿಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯುತ್ತಿದ್ದನೆಯೇ ಅಥವಾ ತನ್ನ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದನೋ ಎಂಬುದು ಸ್ಪಷ್ಟವಾಗಿಲ್ಲ. ಕಾರಣ ಏನೇ ಇರಲಿ, ಅವರು ಆಟೋವನ್ನು ಬಹಳ ವೇಗವಾಗಿ ಓಡಿಸುತ್ತಿದ್ದರು.

ಈ ವೇಳೆ ಒಂದಿಬ್ಬರು ಸ್ಥಳೀಯರು ಬಲೂನ್‌ಗಳಲ್ಲಿ ಬಣ್ಣದ ನೀರನ್ನು ತುಂಬಿ ರಸ್ತೆಯ ಪಕ್ಕದಲ್ಲಿ ನಿಂತಿರುವುದನ್ನು ನೋಡಬಹುದು. ಅವರು ಆಟೋವನ್ನು ಗುರಿಯಾಗಿಸಿಕೊಂಡು ಹಾದುಹೋಗುತ್ತಿದ್ದಂತೆ, ನೀರಿನ ಬಲೂನ್ ಎಸೆದಿದ್ದು, ಅದು ಬಹುಶಃ ಚಾಲಕನಿಗೆ ಸರಿಯಾಗಿ ಹೊಡೆದಿದೆ. ನಮಗೆ ಖಚಿತವಿಲ್ಲವಾದರೂ ಚಾಲಕನ ಮುಖಕ್ಕೆ ಹೊಡೆದಂತೆ ಭಾಸವಾಗುತ್ತದೆ. ಕೊನೆಗೆ ವಾಹನ ನಿಯಂತ್ರಣ ಕಳೆದುಕೊಳ್ಳುವಂತೆ ಮಾಡಿದೆ.
ಬಲೂನ್ ಎಸೆದ ಸ್ಥಳೀಯರು ಆಟೋ ಪೊಲ್ಟಿಯಾಗುತ್ತಿದ್ದಂತೆ ಸ್ಥಳದಿಂದ ಪರಾರಿಯಾಗುವುದನ್ನು ಕಾಣಬಹುದು. ಆಗಿನ ವರದಿಗಳ ಪ್ರಕಾರ, ಈ ಅಪಘಾತದಲ್ಲಿ ಆಟೋದಲ್ಲಿದ್ದ ಇಬ್ಬರು ಮತ್ತು ಚಾಲಕ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಸ್ಥಳೀಯ ಪೊಲೀಸರು ಈ ಘಟನೆಯ ಬಗ್ಗೆ ವಿಚಾರಣೆ ನಡೆಸಿ, ಸ್ಥಳೀಯರನ್ನು ಗುರುತಿಸಲಾಗಿದೆಯೇ ಅಥವಾ ಕ್ರಮ ಕೈಗೊಳ್ಳಲಾಗಿದೆಯೇ ಎಂಬುದರ ಬಗ್ಗೆ ಸ್ಪಷ್ಟವಾಗಿಲ್ಲ.

ಹಬ್ಬಗಳನ್ನು ಆಚರಿಸುವಾಗ ಏಕೆ ಅತ್ಯಂತ ಜಾಗರೂಕರಾಗಿರಬೇಕು ಎಂಬುದನ್ನು ಈ ವೀಡಿಯೊ ತೋರಿಸುತ್ತದೆ. ಸಾರ್ವಜನಿಕ ರಸ್ತೆಗಳು ಇಂತಹ ಸಾಹಸಗಳಿಗೆ ಸೂಕ್ತವಲ್ಲ. ರಸ್ತೆಯಲ್ಲಿ ಹೋಳಿ ಆಡುತ್ತಿದ್ದ ಸ್ಥಳೀಯರು ರಸ್ತೆ ಬಳಕೆದಾರರಿಗೆ ಅನಾನುಕೂಲತೆಯನ್ನು ಸೃಷ್ಟಿಸುತ್ತಿದ್ದರು. ಅವರ ಸಂಭ್ರಮಾಚರಣೆಯೇ ಈ ಅಪಘಾತಕ್ಕೆ ಕಾರಣವಾಗಿದೆ. ರಸ್ತೆಯಲ್ಲಿ ಬೇರೆ ಯಾವುದೇ ವಾಹನ ಇರಲಿಲ್ಲ, ಒಂದು ವೇಳೆ ಇದ್ದಿದ್ದರೇ ಭೀಕರ ಅನಾಹುತವಾಗುತ್ತಿತ್ತು.
ಇದು ಹೆದ್ದಾರಿಯಾಗಿರುವುದರಿಂದ, ಹಿಂದಿನಿಂದ ಬರುವ ವಾಹನಗಳಿಗೆ ನಿಲ್ಲಿಸಲು ಅಥವಾ ನಿಧಾನಗೊಳಿಸಲು ಸಾಕಷ್ಟು ಸಮಯವಿಲ್ಲದ ಕಾರಣ ಅದು ಪಲ್ಟಿಯಾದ ನಂತರ ಇತರ ವಾಹನಗಳು ಆಟೋಗೆ ಡಿಕ್ಕಿ ಹೊಡೆಯುವ ಸಾಧ್ಯತೆಗಳು ಹೆಚ್ಚು. ಇದಾದ ನಂತರ ಜನರು ಇನ್ನೂ ಬದಲಾಗಿಲ್ಲ. ಈ ವರ್ಷವೂ ಸಹ, ಉತ್ತರ ಪ್ರದೇಶ ಮತ್ತು ದೇಶದ ಇತರ ಭಾಗಗಳಿಂದ ಹಲವಾರು ಘಟನೆಗಳು ವರದಿಯಾಗಿವೆ.

ಈ ವರ್ಷವೂ ಹಲವು ಪ್ರಕರಣಗಳನ್ನು ದಾಖಲಿಸಿಕೊಂಡು ಹೋಳಿ ದಿನದಂದು ಅಜಾಗರೂಕತೆಯಿಂದ ಮತ್ತು ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ದ್ವಿಚಕ್ರ ವಾಹನಗಳನ್ನು ಓಡಿಸುವ ಸವಾರರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇತ್ತೀಚೆಗೆ ಚಲಿಸುತ್ತಿರುವ ಸ್ಕೂಟರ್‌ನಲ್ಲಿ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಇಬ್ಬರು ಹುಡುಗಿಯರು ಹಂಚಿಕೊಂಡ ನಂತರ ನೋಯ್ಡಾ ಸಂಚಾರ ಪೊಲೀಸರು ಇತ್ತೀಚೆಗೆ 33,000 ರೂ.ಗಳ ದಂಡ ವಿಧಿಸಿದ್ದಾರೆ.
ಅಲ್ಲದೇ ಹೋಳಿ ಹೆಸರಿನಲ್ಲಿ ಇತರ ಸಾರ್ವಜನಿಕರಿಗೆ ತೊಂದರೆ ಕೊಡೆವುದು, ವಾಹನಗಳಲ್ಲಿ ಸಂಚರಿಸುವವರ ಮೇಲೆ ಬಣ್ಣಗಳನ್ನು ಎರಚುವಂತಹವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಪೊಲೀಸರ ಎಚ್ಚರಿಕೆಯ ನಡುವೆಯೂ ಹಲವೆಡೆ ಕೆಲವು ಪ್ರಕರಣಗಳು ದಾಖಲಾಗಿರುವುದು ವಿಪರ್ಯಾಸ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications