ಸೈಕಲ್ ಸವಾರಿಯನ್ನು ಸುಲಭವಾಗಿಸಿಕೊಂಡ ಫ್ಯಾಕ್ಟರಿ ಕಾರ್ಮಿಕ

ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಸತತವಾಗಿ ಏರಿಕೆಯಾಗುತ್ತಿರುವುದೇ ಇದಕ್ಕೆ ಮುಖ್ಯ ಕಾರಣ. ಆರೋಗ್ಯದ ಬಗ್ಗೆ ಹಾಗೂ ಪರಿಸರದ ಬಗ್ಗೆ ಕಾಳಜಿ ಹೊಂದಿರುವವರು ಸಹ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

ಸೈಕಲ್ ಸವಾರಿಯನ್ನು ಸುಲಭವಾಗಿಸಿಕೊಂಡ ಫ್ಯಾಕ್ಟರಿ ಕಾರ್ಮಿಕ

ಈ ಕಾರಣಕ್ಕೆ ಬಹುತೇಕ ಎಲ್ಲಾ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನ್ನು ಆರಂಭಿಸಿವೆ. ಆದರೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಿಲ್ಲ. ಹ್ಯುಂಡೈ, ಎಂಜಿ, ಟಾಟಾ, ಎಥೆರ್ ಹಾಗೂ ಬಜಾಜ್‌ನಂತಹ ಕೆಲವು ಕಂಪನಿಗಳು ಮಾತ್ರ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುತ್ತಿವೆ.

ಸೈಕಲ್ ಸವಾರಿಯನ್ನು ಸುಲಭವಾಗಿಸಿಕೊಂಡ ಫ್ಯಾಕ್ಟರಿ ಕಾರ್ಮಿಕ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚು ಉತ್ತೇಜನ ನೀಡುತ್ತಿವೆ. ಈ ಕಾರಣಕ್ಕೆ ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯು ಹೆಚ್ಚಾಗುವ ಸಾಧ್ಯತೆಗಳಿವೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಸೈಕಲ್ ಸವಾರಿಯನ್ನು ಸುಲಭವಾಗಿಸಿಕೊಂಡ ಫ್ಯಾಕ್ಟರಿ ಕಾರ್ಮಿಕ

ಇದರ ನಡುವೆ ಕೆಲವರು ತಮ್ಮ ಬಳಿಯಿರುವ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳನ್ನೇ ಎಲೆಕ್ಟ್ರಿಕ್ ವಾಹನಗಳಾಗಿ ಬದಲಿಸುತ್ತಿದ್ದಾರೆ. ಈಗ ಕೃಷ್ಣಗಿರಿ ಜಿಲ್ಲೆಯ ಹೊಸೂರಿನ ಕಾರ್ಮಿಕರೊಬ್ಬರು ತಮ್ಮ ಸೈಕಲ್ ಅನ್ನು ಎಲೆಕ್ಟ್ರಿಕ್ ಸೈಕಲ್ ಆಗಿ ಬದಲಿಸಿದ್ದಾರೆ

ಸೈಕಲ್ ಸವಾರಿಯನ್ನು ಸುಲಭವಾಗಿಸಿಕೊಂಡ ಫ್ಯಾಕ್ಟರಿ ಕಾರ್ಮಿಕ

ಈ ಎಲೆಕ್ಟ್ರಿಕ್ ಸೈಕಲ್ ಎಲ್ಲರ ಗಮನ ಸೆಳೆಯುತ್ತಿದೆ. ಪಾಂಡಿರಾಜನ್ ಕೈಗಾರಿಕೆಗಳು ಭಾರೀ ಸಂಖ್ಯೆಯಲ್ಲಿರುವ ಹೊಸೂರು ಅವಲಪಳ್ಳಿ ಆಡ್ಕೊ ಪ್ರದೇಶಕ್ಕೆ ಸೇರಿದವರು. ಐಟಿಐ ಅಧ್ಯಯನ ಮಾಡಿದ ಪಾಂಡಿರಾಜನ್ ಅಲ್ಲಿನ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಸೈಕಲ್ ಸವಾರಿಯನ್ನು ಸುಲಭವಾಗಿಸಿಕೊಂಡ ಫ್ಯಾಕ್ಟರಿ ಕಾರ್ಮಿಕ

ಲಾಕ್ ಡೌನ್ ಅವಧಿಯಲ್ಲಿ ಅವರು ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯನ್ನು ಮುಚ್ಚಲಾಗಿತ್ತು. ಲಾಕ್ ಡೌನ್ ಸಡಿಲಿಸಿದ ನಂತರ ಅವರ ಫ್ಯಾಕ್ಟರಿಯನ್ನು ಪುನರಾರಂಭಿಸಲಾಯಿತು. ಕರೋನಾ ವೈರಸ್ ಕಾರಣಕ್ಕೆ ಹಲವು ಬದಲಾವಣೆಗಳಾದ ಕಾರಣ ಪಾಂಡಿರಾಜನ್ ರವರು ತಮ್ಮ ಫ್ಯಾಕ್ಟರಿಗೆ ಸೈಕಲ್ ನಲ್ಲಿ ಹೋಗಲು ಮುಂದಾದರು.

ಸೈಕಲ್ ಸವಾರಿಯನ್ನು ಸುಲಭವಾಗಿಸಿಕೊಂಡ ಫ್ಯಾಕ್ಟರಿ ಕಾರ್ಮಿಕ

ಆದರೆ ಅವರು ಸಂಚರಿಸುವ ಹಾದಿ ಸಮತಟ್ಟಾಗಿಲ್ಲ. ಹಲವಾರು ಏರಿಳಿತಗಳಿವೆ. ಪ್ರತಿ ದಿನದ ಸೈಕಲ್ ಸವಾರಿ ನಂತರ ಕೀಲು ನೋವು ಎದುರಾಗುತ್ತಿತ್ತು. ಪಾಂಡಿರಾಜನ್ ಅವರ ಮಗ ಎತ್ತರದ ಪ್ರದೇಶದಲ್ಲಿ ಸಂಚರಿಸುವಾಗ ಪೆಡಲ್ ಬದಲು ಆಕ್ಸಲರೇಟರ್ ಬಳಸುವುದು ಉಚಿತ ಎಂಬ ಸಲಹೆ ನೀಡಿದ್ದಾನೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಸೈಕಲ್ ಸವಾರಿಯನ್ನು ಸುಲಭವಾಗಿಸಿಕೊಂಡ ಫ್ಯಾಕ್ಟರಿ ಕಾರ್ಮಿಕ

ಆತನ ಸಲಹೆ ಸರಿ ಎಂದೆನಿಸಿದ ನಂತರ ತಮ್ಮ ಸೈಕಲ್ ಅನ್ನು ಎಲೆಕ್ಟ್ರಿಕ್ ಗೆ ಬದಲಿಸಲು ಮುಂದಾಗಿದ್ದಾರೆ. ಈ ಸೈಕಲ್ ನಲ್ಲಿ 250 ಡಬ್ಲ್ಯೂ ಮೋಟರ್ ಅಳವಡಿಸಿದ್ದಾರೆ. ಗರಿಷ್ಠ 25 ಕಿ.ಮೀ ವೇಗದಲ್ಲಿ ಸಾಗಬಲ್ಲ ಈ ಎಲೆಕ್ಟ್ರಿಕ್ ಸೈಕಲ್ ನಿರ್ಮಾಣಕ್ಕೆ ಪಾಂಡಿರಾಜನ್ ರೂ.12,000 ಖರ್ಚು ಮಾಡಿದ್ದಾರೆ.

ಎಲೆಕ್ಟ್ರಿಕ್ ಬೈಸಿಕಲ್ ಅನ್ನು ಅಭಿವೃದ್ಧಿಪಡಿಸಿರುವ ಪಾಂಡಿರಾಜನ್ ರವರ ಕಾರ್ಯಕ್ಕೆ ಹಲವೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಸನ್ ನ್ಯೂಸ್ ತಮಿಳ್ ವರದಿ ಮಾಡಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಸೈಕಲ್ ಸವಾರಿಯನ್ನು ಸುಲಭವಾಗಿಸಿಕೊಂಡ ಫ್ಯಾಕ್ಟರಿ ಕಾರ್ಮಿಕ

ಹೆಚ್ಚುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ಹಾಗೂ ಕರೋನಾ ವೈರಸ್ ಹರಡಬಹುದೆಂಬ ಭೀತಿಯಿಂದ ಸೈಕಲ್ ಗಳಿಗೆ ದಿಢೀರನೆ ಬೇಡಿಕೆ ಹೆಚ್ಚಾಗಿದೆ. ಆದರೆ ಎತ್ತರದ ಪ್ರದೇಶಗಳಲ್ಲಿ ಸೈಕಲ್ ಸವಾರಿ ಸುಲಭವಲ್ಲ. ಈ ಕಾರಣಕ್ಕೆ ಪಾಂಡಿರಾಜನ್ ಎಲೆಕ್ಟ್ರಿಕ್ ಸೈಕಲ್ ಅಭಿವೃದ್ಧಿಪಡಿಸಿದ್ದಾರೆ.

ಚಿತ್ರ ಕೃಪೆ: ಸನ್ ನ್ಯೂಸ್ ತಮಿಳ್

Article Published On: Saturday, August 1, 2020, 10:51 [IST]
English summary
Hosur factory labour invents electric bicycle for easy riding. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+