19ರ ಕನ್ಯೆ ಆಲಿಯಾ ಭಟ್ ಲವ್ ಅಫೇರ್?
ಆಲಿಯಾ ಭಟ್ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಆದರೆ ಭಾರತೀಯ ಚಿತ್ರರಂಗದ ಹೆಸರಾಂತ ನಿರ್ದೇಶಕ, ನಿರ್ಮಾಪಕ ಹಾಗೂ ಚಿತ್ರ ಕಥೆಗಾರನಾಗಿರುವ ಮಹೇಶ್ ಭಟ್ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ.
ಮಹೇಶ್ ಭಟ್ ಹಾಗೂ ಸೋನಿ ರಜ್ದಾನ್ ದಂಪತಿಯ ಮಗಳಾಗಿರುವ ಆಲಿಯಾ ಭಟ್ ಕಳೆದ ವರ್ಷವಷ್ಟೇ ಬಾಲಿವುಡ್ ರಂಗಕ್ಕೆಎಂಟ್ರಿ ಕೊಟ್ಟಿದ್ದರು.
ಕಳೆದ ವರ್ಷ ಬಿಡುಗಡೆಗೊಂಡ 'ಸ್ಟುಂಡೆಟ್ ಆಫ್ ದಿ ಇಯರ್' ಚಿತ್ರದ ಮೂಲಕ ಭಾರಿ ಜನಪ್ರಿಯತೆ ಗಿಟ್ಟಿಸಿಕೊಂಡಿರುವ 19ರ ಹರೆಯದ ಈ ಕ್ಯೂಟ್ ಹುಡುಗಿ ಉತ್ತಮ ನಟನಾ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಅಂದ ಹಾಗೆ 1999ರಲ್ಲಿ 'ಸಂಘರ್ಷ್' ಚಿತ್ರದಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದ ಆಲಿಯಾ ಬಳಿಯೀಗ '2 ಸ್ಟೇಟ್ಸ್' ಹಾಗೂ 'ಹೈವೇ'ಗಳೆಂಬ ಎರಡು ಚಿತ್ರಗಳಿವೆ.
ಇನ್ನು ವಿಷಯಕ್ಕೆ ಬರೋಣ, ಬಾಲಿವುಡ್‌ನ ಇತರ ನಟಿಯರಂತೆ ಆಲಿಯಾ ಕೂಡಾ ಕಾರು ಪ್ರೇಮಿಯಾಗಿದ್ದಾರೆ. ಜರ್ಮನಿಯ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಆಡಿ ಕ್ಯೂ7 ಕಾರಿನಲ್ಲಿ ಐಷಾರಾಮಿ ಪಯಣವನ್ನು ಈಕೆ ಹೆಚ್ಚು ಇಷ್ಟಪಡುತ್ತಾರೆ.

ಬಾಲಿವುಡ್ ನಟ-ನಟಿಯರು ಐಷಾರಾಮಿ ಕಾರುಗಳನ್ನು ಹೊಂದಿರುವುದು ಸಾಮಾನ್ಯವಾಗಿದೆ. ಸಹಜವಾಗಿ ದೇಶದಲ್ಲಿ ಬೆರಳಣಿಕೆಯ ಸಂಖ್ಯೆಯಲ್ಲಿ ಮಾತ್ರ ಕಾಣ ಸಿಗುವ ಇಂತಹ ಕಾರುಗಳು ಅತಿ ಹೆಚ್ಚು ಬೇಡಿಕೆ ಗಿಟ್ಟಿಸುತ್ತವೆ.

ಇತ್ತೀಚೆಗಷ್ಟೇ ತಮ್ಮ ಸೆಕ್ಸಿ ಡ್ರೆಸ್ಸಿಂಗ್‌ಗಾಗಿ ಆಲಿಯಾ ಭಾರಿ ಚರ್ಚಾ ಗ್ರಾಸವಾಗಿದ್ದರು. ಇದು ಬಾಲಿವುಡ್‌ನಲ್ಲಿ ಹೆಚ್ಚು ಪ್ರಚಾರ ಗಿಟ್ಟಿಸಿಕೊಂಡಿತ್ತು.

ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾದ ಆಡಿ ಕಾರನ್ನು ಬಾಲಿವುಡ್‌ನ ಬಹುತೇಕ ನಟ ನಟಿಯರು ಇಷ್ಟಪಡುತ್ತಾರೆ. ಇದು ಕೂಡಾ ದೇಶದಲ್ಲಿ ಆಡಿ ಜನಪ್ರಿಯತೆಗೆ ಕಾರಣವಾಗಿದೆ.

ಆಡಿ ಪ್ರೇಮಿ ಆಲಿಯಾ ಭಟ್

ಆಡಿ ಪ್ರೇಮಿ ಆಲಿಯಾ ಭಟ್

ಆಡಿ ಪ್ರೇಮಿ ಆಲಿಯಾ ಭಟ್

ಆಡಿ ಪ್ರೇಮಿ ಆಲಿಯಾ ಭಟ್



Click it and Unblock the Notifications








