ನೂತನ ಆಡಿ ಕ್ಯೂ7 ಕಾರು ಖರೀದಿಸಿದ ಬಿಪಾಶಾ ಬಸು

ಬಾಲಿವುಡ್ ನಟ-ನಟಿಯರ ಬಗ್ಗೆ ಗಾಸಿಪ್‌ಗಳು ಉಂಟಾಗುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಇದರಿಂದ ಸೆಕ್ಸಿ ನಟಿ ಬಿಪಾಶಾ ಬಸು ಕೂಡಾ ಹೊರತಾಗಿಲ್ಲ.

ಆದರೆ ನಾವಿಲ್ಲಿ ಮಾತನಾಡತ್ತಿರುವುದು ಬಾಲಿವುಡ್ ಸೆಲೆಬ್ರಿಟಿಗಳ ಕಾರು ಪ್ರೇಮದ ಬಗ್ಗೆ. ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾದ ಆಡಿ ಬಗ್ಗೆ ಅತೀವ ಕ್ರೇಜ್ ಹೊಂದಿರುವುದು ಇದಕ್ಕೆ ಕಾರಣವಾಗಿದೆ.

ಇದೀಗ ಈ ಪಟ್ಟಿಗೆ ಬಿಪಾಶಾ ಕೂಡಾ ಸೇರಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ಫೋಕ್ಸ್‌ವ್ಯಾಗನ್ ಬೀಟ್ಲ್ ತಮ್ಮದಾಗಿಸಿಕೊಂಡಿದ್ದ ಬಿಪಾಶಾ ಇದೀಗ ತಮ್ಮ ಬಾಯ್‌ಫ್ರೆಂಡ್ ಬದಲಾಯಿಸಿದ್ದಾರೆ. ಅಂದರೆ ನೂತನ ಆಡಿ ಕ್ಯೂ7 ಕಾರು ಖರೀದಿಸಿರುವುದರ ಬಗ್ಗೆ ಹೆಮ್ಮೆಯಿಂದಲೇ ಸಾಮಾಜಿಕ ಜಾಲತಾಣ ಟ್ವಿಟರ್‌‍ನಲ್ಲಿ ಹೇಳಿಕೊಂಡಿದ್ದಾರೆ.

ಅಂದ ಹಾಗೆ ಇದು ಎರಡನೇ ಬಾರಿ ಆಡಿ ಕಾರನ್ನು ಬಿಪಾಶಾ ಖರೀದಿಸುತ್ತಿದ್ದಾರೆ. ಹಾಗಾಗಿ ಬಾಲಿವುಡ್ ಸೆಲೆಬ್ರಿಟಿಗಳಿಗೆ ಐಷಾರಾಮಿ ಕಾರುಗಳನ್ನು ಬದಲಾಯಿಸುವುದು ಆಟವೋ ಅಥವಾ ಮರುಳಾಟವಾಗಿಬಿಟ್ಟಿದೆ.

Hot Bipasha Basu Buys New Audi Q7

ಆಡಿ ಕಂಪನಿಯ ಅತ್ಯಾಕರ್ಷಕ ಎಸ್‌ಯುವಿ ಕಾರು ಆಗಿರುವ ಕ್ಯೂ7 ಆರಾಮದಾಯಕ ಚಾಲನೆಯನ್ನು ಖಾತ್ರಿಪಡಿಸುತ್ತಿದೆ. ಇದೇ ಕಾರಣಕ್ಕಾಗಿ ಆಡಿ ಕಾರನ್ನು ಬಿಪಾಶಾ ಅತಿ ಹೆಚ್ಚು ಇಷ್ಟಪಡುತ್ತಾಳೆ.

Hot Bipasha Basu Buys New Audi Q7

ಕೆಲವು ದಿನಗಳ ಹಿಂದೆಯಷ್ಟೇ ತಾನು ಗೋವಾದಲ್ಲಿ ಶಾಶ್ವತವಾಗಿ ಉಳಿದುಕೊಂಡರೆ ಪ್ರಯಾಣದ ಖರ್ಚನ್ನು ಉಳಿತಾಯ ಮಾಡಿಕೊಳ್ಳಬಲ್ಲೆ ಎಂದು ಹೇಳಿಕೊಂಡಿದ್ದ ಬಿಪಾಶಾ, ಇದೀಗ ನೂತನ ಆಡಿ ಕ್ಯೂ7 ಖರೀದಿಯ ಬಳಿಕ ಮುಂಬೈನಿಂದ ಗೋವಾಕ್ಕೆ ಇದೇ ಕಾರಲ್ಲಿ ತೆರಳುವರೇ ಎಂಬುದನ್ನು ಕಾದು ನೋಡಬೇಕಾಗಿದೆ.

Bipasha Basu new car Audi Q7

ಕೇವಲ ಬಿಪಾಶಾ ಮಾತ್ರವಲ್ಲ ಆಡಿಗೆ ಮರುಳಾಗಿರುವುದು. ಬಾಲಿವುಡ್‌ನ ಜನಪ್ರಿಯರಾದ ಸಲ್ಮಾನ್ ಖಾನ್, ಜಾನ್ ಅಬ್ರಹಾಂ ಹಾಗೂ ಕತ್ರಿನಾ ಕೈಫ್ ಕೂಡಾ ಆಡಿ ಸವಾರಿಯನ್ನು ಇಷ್ಟಪಡುತ್ತಾರೆ.

Bipasha Basu new car Audi Q7

ನಿಮ್ಮ ಮಾಹಿತಿಗಾಗಿ, ಆಡಿ ಕ್ಯೂ7 ಕಾರಿನ ದರ ಬರೋಬ್ಬರಿ 60 ಲಕ್ಷ ರುಪಾಯಿಗಳಾಗಿವೆ. ಭಾರತೀಯ ಮಾರುಕಟ್ಟೆಯಲ್ಲಿ ಒಟ್ಟು ಮೂರು ಮಾದರಿಗಳಲ್ಲಿ ಲಭ್ಯವಿದೆ. ಆಡಿ ಕ್ಯೂ7 ಪೆಟ್ರೋಲ್ ವೆರಿಯಂಟ್‌ನಲ್ಲಿ 3 ಲೀಟರ್ ಹಾಗೂ ಡೀಸೆಲ್ ಆವೃತ್ತಿಯಲ್ಲಿ 4.2 ಲೀಟರ್ ಎಂಜಿನ್ ಪ್ರಯೋಗಿಸಲಾಗಿದೆ.

Bipasha Basu driving Audi Q7

2001ನೇ ಇಸವಿಯಲ್ಲಿ ಸಿನೆಮಾ ರಂಗಕ್ಕೆ ಕಾಲಿರಿಸಿದ್ದ ಬಿಪಾಶಾ, ರಾಜ್, ಜಿಸ್ಮ್, ಧೂಮ್ 2, ರೇಸ್, ರಾಜ್ 3 ಹಾಗೂ ರೇಸ್ 2 ಚಿತ್ರಗಳಲ್ಲಿ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದರು.

ಆಡಿ ಕ್ಯೂ7 ಖರೀದಿಸಿದ ಬಿಪಾಶಾ ಬಸು

ಆಡಿ ಕ್ಯೂ7 ಖರೀದಿಸಿದ ಬಿಪಾಶಾ ಬಸು

ಆಡಿ ಕ್ಯೂ7 ಖರೀದಿಸಿದ ಬಿಪಾಶಾ ಬಸು

ಆಡಿ ಕ್ಯೂ7 ಖರೀದಿಸಿದ ಬಿಪಾಶಾ ಬಸು

ಆಡಿ ಕ್ಯೂ7 ಖರೀದಿಸಿದ ಬಿಪಾಶಾ ಬಸು

ಆಡಿ ಕ್ಯೂ7 ಖರೀದಿಸಿದ ಬಿಪಾಶಾ ಬಸು

More from DriveSpark

Article Published On: Saturday, March 9, 2013, 15:36 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+