ಹೈಬ್ರಿಡ್‌ ಕಾರುಗಳಲ್ಲಿ ಮೈಲೇಜ್‌ ಯಾಕೆ ಹೆಚ್ಚು ಗೊತ್ತಾ: ದೊಡ್ಡ ಸೀಕ್ರೆಟ್‌ನ ಸಿಂಪಲ್ಲಾಗಿ ಹೇಳ್ತೀವಿ ಕೇಳಿ!

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕಾರಿನ ಪರ್ಫಾಮೆನ್ಸ್‌ ಜೊತೆಗೆ ಅದರ ಮೈಲೇಜ್‌ ಸಹ ಮುಖ್ಯವಾಗಿರುವಂತಹ ವಿಷಯವಾಗಿದೆ.ಅದಕ್ಕಾಗಿಯೇ ಕಾರು ನಿರ್ಮಾಣ ಕಂಪನಿಗಳು ತಮ್ಮ ಕಾರಿನ ಎಂಜಿನ್ ಪರ್ಫಾಮೆನ್ಸ್‌ ಮತ್ತು ಅದರ ಕ್ಷಮತೆಯನ್ನು ಹೆಚ್ಚಿಸುವುದಕ್ಕಾಗು ಹಲವಾರು ತಂತ್ರಜ್ಞಾನಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲಿ ಈ ಹೈಬ್ರಿಡ್‌ ಸಹ ಒಂದು.

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಮಾರತಿ ಸುಜುಕಿ ಸೇರಿದಂತೆ ಇತರ ಕಂಪನಿಗಳು ತಮ್ಮ ಹಲವು ಕಾರು ಮಾದರಿಗಳಲ್ಲಿ ಹೈಬ್ರಿಡ್‌ ಟೆಕ್ನಾಲಜಿಯನ್ನು ಬಳಸುತ್ತಿದೆ. ನಾವು ಇಂದಿನ ಈ ಲೇಖನದಲ್ಲಿ ಕಾರುಗಳಲ್ಲಿನ ಹೈಬ್ರಿಡ್‌ ಎಂಜಿನ್‌ ಅಂದರೇನು ಎಂದು ನೋಡಲಿದ್ದು, ಸಂಪೂರ್ಣ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೆ ನೊಡಿ.

How Hybrid Cars work, Secret Revealed in Simple format, Reign Braking Explained

ಕಾರುಗಳಲ್ಲಿ ಹೈಬ್ರಿಡ್‌ (Hybrid Cars) ಎಂದರೆ ಗ್ಯಾಸೋಲಿನ್‌ ಅಂದರೆ ಪೆಟ್ರೋಲ್‌ ಅಥವಾ ಡೀಸೆಲ್‌ ಜೊತೆಗೆ ಎಲೆಕ್ಟ್ರಿಕ್‌ ಮೋಟಾರ್‌ನ ಪವರನ್ನು ಒಂದಾಗಿಸುವುದು. ಹೈಬ್ರಿಡ್‌ ಕಾರುಗಳು ಗ್ಯಾಸೋಲಿನ್‌ ಮತ್ತು ಎಲೆಕ್ಟ್ರಿಕ್‌ ಮೋಟಾರ್‌ನ ಪವರ್‌ ಅನ್ನು ಸಮ ಪ್ರಮಾಣದಲ್ಲಿ ಬ್ಲೆಂಡ್‌ ಮಾಡುತ್ತದೆ. ಇದಕ್ಕಾಗಿ ನೀವು ಯಾವುದೇ ಶ್ರಮವನ್ನು ಪಡಬೇಕೆಂಬ ಅಗತ್ಯವಿಲ್ಲ. ಹೈಬ್ರಿಡ್‌ ಟೆಕ್ನಾಲಜಿ ಇರುವ ಕಾರಿಗೆ ನಿಮ್ಮ ಪಾಡಿಗೆ ನೀವು ಇಂಧನ ತುಂಬಿಸಿ ಚಲಾಯಿಸಿದರೆ ಸಾಕು.

ಈ ಸಂಧರ್ಭದಲ್ಲಿ ಹಲವರಿಗೆ ಕಾಡುತ್ತಿರುವ ಪ್ರಶ್ನೆ ಕಾರಿನಲ್ಲಿನ ಎಲೆಕ್ಟ್ರಿಕ್ ಮೋಟಾರ್‌ ಚಾರ್ಜ್‌ ಮಾಡದೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದು. ಇದಕ್ಕಿರುವ ಉತ್ತರ ಏನೆಂದರೆ, ಈ ಕಾರುಗಳಲ್ಲಿ ಸಣ್ಣ ಬ್ಯಾಟರಿಗಳಿರುತ್ತವೆ. ಇವು ಕಾರು ಚಲಿಸುವಾಗ ನಾನಾ ಸಂಧರ್ಭಗಳಲ್ಲಿ ಎನರ್ಜಿಯನ್ನು ಪಡೆದುಕೊಂಡು ಚಾರ್ಜ್‌‌ ಆಗುತ್ತವೆ. ಉದಾಹರಣೆಗೆ ವಾಹನ ಬ್ರೇಕ್‌ ಹಾಕುವಾಗ ರೀಜೆನ್‌ ಬ್ರೇಕಿಂಗ್‌ನಿಂದ, ತಮಗೆ ಬೇಕಾದ ಚಾರ್ಜ್‌ ಅನ್ನು ಪಡೆದುಕೊಳ್ಳುತ್ತವೆ.

How Hybrid Cars work, Secret Revealed in Simple format, Reign Braking Explained

ರೀಜೆನ್‌ ಬ್ರೇಕಿಂಗ್‌ನಿಂದ ಇಂಧನದ ಪೋಲಾಗುವುದನ್ನು ತಪ್ಪಿಸಬಹುದಾಗಿದೆ. ಹೀಗಾಗಿ ವಾಹನಕ್ಕೆ ಹೆಚ್ಚಿನ ಮೈಲೇಜ್‌ ಸಿಗುತ್ತದೆ. ರೀಜೆನ್‌ ಪ್ರಕ್ರಿಯೆ ಇರುವಾಗ ಆಗಾಗ ಬ್ರೇಕ್‌ ಹಾಕುವುದರಿಂದ ಹೆಚ್ಚಿನ ಶಕ್ತಿಯ ಉತ್ಪಾದನೆಯಾಗಿ ಮೋಟಾರ್‌ಗೆ ವರ್ಗಾವಣೆ ಆಗುತ್ತದೆ. ಸಾಮಾನ್ಯವಾಗಿ ನಗರಗಳಲ್ಲಿ ವಾಹನವನ್ನು ಓಡಿಸುವಾಗ ಈ ರೀಜೆನ್‌ ಬ್ರೇಕಿಂಗ್‌ ತುಂಬಾ ಉಪಯೋಗಕ್ಕೆ ಬರುತ್ತದೆ.

ಸದ್ಯಕ್ಕೆ ಭಾರತದಲ್ಲಿ ಹೆಚ್ಚು ಪ್ರಸಿದ್ದವಾಗಿರುವ ಹೈಬ್ರಿಡ್‌ ವಾಹನಗಳಲ್ಲಿ ಮಾರುತಿ ಸುಜುಕಿ ಎರ್ಟಿಗಾ ಸಹ ಒಂದು. ಎರ್ಟಿಗಾ ಕ್ರೂಸ್‌ ಹೈಬ್ರಿಡ್‌ ಈ ಬಾರಿ K15B ಸ್ಮಾರ್ಟ್‌ ಹೈಬ್ರಿಡ್‌ ಎಂಜಿನ್‌ ಜೊತೆಗೆ 10ah ದೊಡ್ಡ ಬ್ಯಾಟರಿಯನ್ನು ಸಹ ಹೊಂದಿದೆ. ಇದರಿಂದಾಗಿ ಈ ಕಾರಿನಿಂದ ಉತ್ತಮ ಮೈಲೇಜ್‌ ಅನ್ನು ಸಹ ನಿರೀಕ್ಷಿಸಬಹುದಾಗಿದೆ ಎಂದು ಹೇಳಲಾಗುತ್ತಿದೆ. 1.5 ಲೀಟರ್‌ ಪೆಟ್ರೋಲ್‌ ಎಂಜಿನ್‌ ಬರುತ್ತಿದ್ದು, 104 ಪಿಎಸ್‌, 138 ಎನ್‌ಎಮ್‌ ಟಾರ್ಕ್‌ ಅನ್ನು ಈ ಕಾರು ಉತ್ಪಾದಿಸಲಿದೆ.

ಮತ್ತೊಂದು ಪ್ರಸಿದ್ದ ಕಾರ್‌ ಆದ ಇನ್ನೋವಾ ಹೈಕ್ರಾಸ್‌ ಸಹ ಹೈಬ್ರಿಡ್‌ ರೂಪಾಂತರದಲ್ಲಿ ಲಭ್ಯವಿದೆ. ಹೈಬ್ರಿಡ್ ಪವರ್‌ಟ್ರೇನ್ 2.0 ಲೀಟರ್, 4 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ Atkinson ಸೈಕಲ್ ಪೆಟ್ರೋಲ್ ಎಂಜಿನ್ ಹಾಗೂ ಎಲೆಕ್ಟ್ರಿಕ್ ಮೋಟಾರ್ ಹೊಂದಿದ್ದು, 184.8 bhp ಗರಿಷ್ಠ ಪವರ್ ಮತ್ತು 206 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ 21 kmpl ಮೈಲೇಜ್ ಇಂಧನ ದಕ್ಷತೆ ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, February 19, 2024, 16:10 [IST]
English summary
How hybrid cars work secret revealed in simple format reign braking explained
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+