ಹೊಸ ರೋಲ್ಸ್ ರಾಯ್ಸ್ ಖರೀದಿಸಿದ ಹೃತಿಕ್; ಬೆಲೆ 7 ಕೋಟಿ

Written By:

ಬಾಲಿವುಡ್‌ನ ಜನಪ್ರಿಯ ನಟ ಹೃತಿಕ್ ರೋಶನ್ ಜನವರಿ 10ರಂದು ಜನ್ಮದಿನವನ್ನು ಆಚರಿಸಿಕೊಂಡಿದ್ದರು. ಹಿಂದಿ ಚಿತ್ರರಂಗದ ಈ ಹೆಸರಾಂತ ನಟ ತಮ್ಮ 42ನೇ ಹುಟ್ಟುಹಬ್ಬದಂದು ಏಳು ಕೋಟಿ ದುಬಾರಿಯ ರೋಲ್ಸ್ ರಾಯ್ಸ್ ಕಾರೊಂದನ್ನು ಖರೀದಿಸುವ ಮೂಲಕ ಸುದ್ದಿ ಗಿಟ್ಟಿಸಿಕೊಂಡಿದ್ದಾರೆ.

Also Read: ಶಿವಣ್ಣ ಬಿಎಂಡಬ್ಲ್ಯು ಕಾರನ್ನು ಆಯ್ಕೆ ಮಾಡಲು ಕಾರಣಗಳೇನು? ಮುಂದಕ್ಕೆ ಓದಿ

ಸೆಲೆಬ್ರಿಟಿಗಳು ದುಬಾರಿ ಕಾರುಗಳನ್ನು ಖರೀದಿಸುವುದು ಹೊಸ ವಿಷಯವೇನಲ್ಲ. ಈಗ ಹೃತಿಕ್ ರೋಶನ್ ಅವರು ಇತಿಹಾಸ ಪ್ರಸಿದ್ಧ ರೋಲ್ಸ್ ರಾಯ್ಸ್ ಘೋಸ್ಟ್ ಸಿರೀಸ್ II ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.

To Follow DriveSpark On Facebook, Click The Like Button
ಹೊಸ ರೋಲ್ಸ್ ರಾಯ್ಸ್ ಖರೀದಿಸಿದ ಹೃತಿಕ್; ಬೆಲೆ 7 ಕೋಟಿ

ತಮ್ಮ ಜನ್ಮದಿನ ಸಂಭ್ರಮದ ಅಂಗವಾಗಿ ಹೃತಿಕ್ ರೋಶನ್ ಅವರು ಮುಂಬೈನಲ್ಲಿ ಅದ್ದೂರಿ ಪಾರ್ಟಿ ಏರ್ಪಡಿಸಿದ್ದರು. ಅಲ್ಲದೆ ಹಲವು ಸೆಲೆಬ್ರಿಟಿ ಹಾಗೂ ಗಣ್ಯ ವ್ಯಕ್ತಿಗಳು ಆತಿಥಿಯಾಗಿ ಆಗಮಿಸಿದ್ದರು.

ಹೊಸ ರೋಲ್ಸ್ ರಾಯ್ಸ್ ಖರೀದಿಸಿದ ಹೃತಿಕ್; ಬೆಲೆ 7 ಕೋಟಿ

ಬಣ್ಣದ ಲೋಕದಿಂದ ಬಂದಿರುವ ಮಾಹಿತಿಗಳ ಪ್ರಕಾರ ಸಾಮಾನ್ಯವಾಗಿ ಹೃತಿಕ್ ತಮ್ಮ ಹುಟ್ಟುಹಬ್ಬವನ್ನು ಬಹಳ ಸರಳವಾಗಿ ಆಚರಿಸುತ್ತಾರೆ. ಆದರೆ ಈ ಬಾರಿ ಪರಿಸ್ಥಿತಿ ಬಿನ್ನವಾಗಿತ್ತು. ಅಲ್ಲದೆ ತಮ್ಮ ಜನ್ಮದಿನ ಆಚರಣೆಗಾಗಿ 200ರಷ್ಟು ಗೆಳೆಯ ಬಳಗವನ್ನು ಆಹ್ವಾನಿಸಿದ್ದರು.

ಹೊಸ ರೋಲ್ಸ್ ರಾಯ್ಸ್ ಖರೀದಿಸಿದ ಹೃತಿಕ್; ಬೆಲೆ 7 ಕೋಟಿ

ರೋಲ್ಸ್ ರಾಯ್ಸ್ ಘೋಸ್ಟ್ ಸಿರೀಸ್ II ಕಾರನ್ನು ಹೃತಿಕ್ ತಮ್ಮ ಬಯಕೆಗಳಿಗೆ ಅನುಸಾರವಾಗಿ ಕೆಲವೊಂದು ಮಾರ್ಪಾಡುಗೊಳಿಸಿದ್ದಾರೆ. ಇದರೊಂದಿಗೆ ಕಾರಿನ ಬೆಲೆಯಲ್ಲೂ ಗಣನೀಯವಾಗಿ ವರ್ಧನೆಯುಂಟಾಗಿದೆ. ಅಂದ ಹಾಗ ರೋಲ್ಸ್ ರಾಯ್ಸ್ ಘೋಸ್ಟ್ ಸಿರೀಸ್ II ಕಾರಿನ ಎಕ್ಸ್ ಶೋ ರೂಂ ಪ್ರಾರಂಭಿಕ ಬೆಲೆ 4.5 ಕೋಟಿ ರು.ಗಳಿಂದ ಆರಂಭವಾಗುತ್ತದೆ.

ಹೊಸ ರೋಲ್ಸ್ ರಾಯ್ಸ್ ಖರೀದಿಸಿದ ಹೃತಿಕ್; ಬೆಲೆ 7 ಕೋಟಿ

ಹೃತಿಕ್ ಅವರ ರೋಲ್ಸ್ ರಾಯ್ಸ್ ಘೋಸ್ಟ್ ಸಿರೀಸ್ II ಕಾರಿಗೆ ಅತಿ ವಿಶಿಷ್ಟವಾದ ನೀಲಿ ಬಣ್ಣವನ್ನು ಬಳಿಯಲಾಗಿದೆ. ಇದರ ಜೊತೆಗೆ ಅಲ್ಯೂಮಿನಿಯಂ ಸ್ಪರ್ಶದ ಬೊನೆಟ್ ಹಾಗೂ ಎಲ್ಲ ಹೈ ಎಂಡ್ ಕಾರಿನಲ್ಲಿರಬೇಕಾದ ವೈಶಿಷ್ಟ್ಯಗಳನ್ನು ಕಾಣಬಹುದಾಗಿದೆ.

ಹೊಸ ರೋಲ್ಸ್ ರಾಯ್ಸ್ ಖರೀದಿಸಿದ ಹೃತಿಕ್; ಬೆಲೆ 7 ಕೋಟಿ

ತಮ್ಮ ಕುಟುಂಬದ ಪಯಣದ ಅಗತ್ಯಗಳಿಗಾಗಿ ಹೃತಿಕ್ ರೋಲ್ಸ್ ರಾಯ್ಸ್ ಕಾರನ್ನು ಖರೀದಿಸಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಈಗ ಮುಂಬರುವ ಮೊಹೆಂಜೊ ದಾರೊ ಸಿನೆಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ಹೊಸ ರೋಲ್ಸ್ ರಾಯ್ಸ್ ಖರೀದಿಸಿದ ಹೃತಿಕ್; ಬೆಲೆ 7 ಕೋಟಿ

ಅಂದ ಹಾಗೆ 6.6 ಲೀಟರ್ ಟ್ವಿನ್ ಸಿಲಿಂಡರ್ ಟರ್ಬೊ ಚಾರ್ಜ್ಡ್ ಎಂಜಿನ್ ನಿಂದ ನಿಯಂತ್ರಿಸ್ಪಡುವ ರೋಲ್ಸ್ ರಾಯ್ಸ್ ಘೋಸ್ಟ್ II 780 ಎನ್‌ಎಂ ತಿರುಗುಬಲದಲ್ಲಿ 563 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ 8ಸ್ಪೀಡ್ ಝಡ್‌ಎಫ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿದೆ.

ಹೊಸ ರೋಲ್ಸ್ ರಾಯ್ಸ್ ಖರೀದಿಸಿದ ಹೃತಿಕ್; ಬೆಲೆ 7 ಕೋಟಿ

ಕೇವಲ 4.9 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯವನ್ನು ಹೊಂದಿರುವ ರೋಲ್ಸ್ ರಾಯ್ಸ್ ಘೋಸ್ಟ್ ಸಿರೀಸ್ II ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಚರ್ಚಾ ವೇದಿಕೆ

ಚರ್ಚಾ ವೇದಿಕೆ

ತಾರೆಯರು ದುಬಾರಿ ಕಾರುಗಳನ್ನು ಖರೀದಿಸುವುದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕೆಳಗಡೆ ಕೊಟ್ಟಿರುವ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ನಮೂದಿಸಿರಿ.

English summary
Hrithik Roshan buys new Rolls-Royce Ghost Series II
Story first published: Thursday, January 14, 2016, 11:18 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark