ವಾಹನ ಸವಾರರೇ ಗಮನಿಸಿ.. ಫೆ.17ರಿಂದ HSRP ನಂಬರ್ ಪ್ಲೇಟ್ ಇಲ್ಲವಾದರೆ ಬೀಳುತ್ತೆ ದಂಡ: ನೋಂದಣಿ ಹೇಗೆ?
ಹೆಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಹಾಕಿಸಲು ಸಾರಿಗೆ ಇಲಾಖೆ 2024ರ ಫೆ.17ರವರೆಗೆ ವಾಹನ ಸವಾರರಿಗೆ ಡೆಡ್ ಲೈನ್ ನೀಡಿದೆ. ಆದರೆ, ವಾಹನ ಮಾಲೀಕರು ನಿರಾಸಕ್ತಿ ತೋರಿದ ಹಿನ್ನೆಲೆಯಲ್ಲಿ ದಂಡ ಪ್ರಯೋಗಕ್ಕೆ ಇಲಾಖೆ ಮುಂದಾಗಿದೆ. ಫೆ.17ರ ನಂತರ ಯಾರು ಯಾರು ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸಿಲ್ಲವೋ ಅವರ ಮೇಲೆ ದಂಡ ಬೀಳುತ್ತದೆ.
ವಾಹನ ಮಾಲೀಕರು ಹೈ ಸೆಕ್ಯುರಿಟಿ ರಿಜಿಸ್ಟೇಷನ್ ಪ್ಲೇಟ್‌ಗಳನ್ನು (HSRP) ಹಾಕಿಸಲು ನಿರಾಸಕ್ತಿ ತೋರಿಸಿರುವುದರಿಂದ ಸಾರಿಗೆ ಇಲಾಖೆಯು ದಂಡ ವಿಧಿಸಲು ನಿರ್ಧರಿಸಿದೆ. ಫೆ.17 ರಿಂದ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸದ ವಾಹನ ಸವಾರರಿಗೆ ದಂಡ ಬೀಳಲಿದೆ. ಮೊದಲ ಬಾರಿಗೆ 1000 ರೂ ದಂಡ. ಎರಡನೇ ಬಾರಿ ಸಿಕ್ಕಿಬಿದ್ದರೆ 2000 ರೂ ವಿಧಿಸಲು ಸಾರಿಗೆ ಇಲಾಖೆ ಮುಂದಾಗಿದೆ.

2019ರ ಏಪ್ರಿಲ್ ತಿಂಗಳ ಮುಂಚೆ ನೋಂದಣಿಯಾಗಿರುವ ಎಲ್ಲಾ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ (Number Plate) ಹಾಕಿಸಿಕೊಳ್ಳುವುದನ್ನು ಕಡ್ಡಾಯವಾಗಿದೆ. ಈ ಮೊದಲು ಹೆಚ್‌ಎಸ್‌ಆರ್‌ಪಿ ಹಾಕಿಸಲು ಸಾರಿಗೆ ಇಲಾಖೆ 2023ರ ನ.17ರ ಗಡುವು ವಿಧಿಸಿತ್ತು. ಆದರೆ, ವಾಹನ ಮಾಲೀಕರು ಹೆಚ್‌ಎಸ್‌ಆರ್‌ಪಿ ನಂಬರ್ ಪೇಟ್ ಹಾಕಿಸಲಿಲ್ಲ. ಇದರಿಂದ ಸಾರಿಗೆ ಇಲಾಖೆಯು 2024ರ ಫೆಬ್ರವರಿ 17ರವರೆಗೆ ವಿಸ್ತರಣೆ ಮಾಡಲಾಗಿತ್ತು.
ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಎಂದರೇನು? ಹೆಚ್‌ಎಸ್‌ಆರ್‌ಪಿ ಎಂಬುದು ವಾಹನಗಳ ನೋಂದಣಿ ನಂಬರ್ ಪ್ಲೇಟ್ ಆಗಿದೆ. ಹೈ ಸೆಕ್ಯುರಿಟಿ ರಿಜಿಸ್ಟೇಷನ್ ಪ್ಲೇಟ್ ಶಾಶ್ವತ ಗುರುತಿನ ನಂಬರ್ ಒದಗಿಸುತ್ತದೆ. ಅಲ್ಯೂಮಿನಿಯಂ ಲೋಹದಲ್ಲಿ ತಯಾರಿಸಿದ ನಂಬರ್ ಪ್ಲೇಟ್. ಬಳಕೆಯಿಲ್ಲದ ಎರಡು ಲಾಕ್‌ಗಳನ್ನು ಹೊಂದಿದೆ. ಮುಂಭಾಗದ ಮತ್ತು ಹಿಂಭಾಗದ ನಂಬರ್ ಪ್ಲೇಟ್‌ನ ಎಡಬದಿಯ ಮೇಲ್ತುದಿಯಲ್ಲಿ ಕ್ರೋಮಿಯಂ ಹಾಲೋಗ್ರಾಂ ಹೊಂದಿದ್ದು, ಅದರಲ್ಲಿ ಆಶೋಕಚಕ್ರದ ಚಿತ್ರವಿದೆ.

ಅದನ್ನು 20 ಎಂಎಂX 20 ಎಂಎಂ ಗಾತ್ರದಲ್ಲಿ ಹಾಟ್ ಸ್ಟಾಂಪಿಂಗ್ ಮೂಲಕ ಲಗತ್ತಿಸಲಾಗುತ್ತದೆ. ನಕಲಿ ನಂಬರ್ ಪ್ಲೇಟ್ ಅಳವಡಿಸುವುದನ್ನು ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಇನ್ನು ಈ ನಂಬರ್ ಪ್ಲೇಟ್ ರಸ್ತೆಯಲ್ಲಿ ವಾಹನ ಸಂಚರಿಸುವಾಗಲೇ ವಾಹನವನ್ನು ಗುರುತಿಸಲು ಸಹಕರಿಸುತ್ತದೆ. ಇದರಿಂದ ವಾಹನಗಳ ಮಾಲೀಕರು ತಲೆಬಿಸಿ ಬಿಟ್ಟು ಹೊಸ ನಂಬರ್ ಪ್ಲೇಟ್ ಮಾಡಿಸಿಕೊಳ್ಳಬಹುದಾಗಿದೆ.
ನಂಬರ್ ಪ್ಲೇಟ್ ಪಡೆಯುವುದು ಹೇಗೆ? ಇದಕ್ಕಾಗಿ ನೀವು ಕರ್ನಾಟಕ ಸಾರಿಗೆ ಇಲಾಖೆಯ ವೆಬ್‌ಸೈಟ್ https://transport.karnataka.gov.in ಅಥವಾ www.siam.in ಗೆ ಭೇಟಿ ನೀಡಬೇಕು. ಇಲ್ಲಿ ಹೆಚ್‌ಎಸ್‌ಆರ್‌ಪಿ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ವಾಹನದ ಉತ್ಪಾದಕ ಕಂಪನಿಯನ್ನು ಆಯ್ಕೆ ಮಾಡಿ. ಬಳಿಕ ಅಲ್ಲಿ ಬೇಸಿಕ್ ವೆಹಿಕಲ್ ಡಿಟೇಲ್ಸ್ ಕೇಳಿರುವುದನ್ನು ಭರ್ತಿ ಮಾಡಿ.
ಇದರ ಬಳಿಕ ಡೀಲರ್ ಲೊಕೇಶನ್ ಅನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಿ. ಹೆಚ್‌ಎಸ್‌ಆರ್‌ಪಿಯನ್ನು ಫಿಕ್ಸ್ ಮಾಡುವುದಕ್ಕಾಗಿ ಡೀಲರ್ ಲೊಕೇಶನ್ ಸೆಲೆಕ್ಟ್ ಮಾಡಬೇಕಾಗಿರುವಂಥದ್ದು. ಹೆಚ್‌ಎಸ್‌ಆರ್‌ಪಿಗೆ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು. ನಗದು ಪಾವತಿ ಮಾಡಬೇಕಾದ್ದಿಲ್ಲ. ಬಳಿಕ ವಾಹನದ ಮಾಲೀಕರ ಮೊಬೈಲ್ ನಂಬರ್‌ಗೆ ಒಟಿಪಿ ಬರುತ್ತದೆ. ಮಾಲೀಕರು ತಮ್ಮ ಸಮಯಾವಕಾಶ ನೋಡಿಕೊಂಡು ನಂಬರ್ ಪ್ಲೇಟ್ ಅನ್ನು ವಾಹನಕ್ಕೆ ಜೋಡಿಸಲು ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿಕೊಳ್ಳಬಹುದು.
ಬಳಿಕ ವಾಹನ ಮಾಲೀಕರು ಅಂಗೀಕೃತ ದಿನಾಂಕ ಮತ್ತು ಸಮಯಕ್ಕೆ ಅವರ ವಾಹನ ಉತ್ಪಾದಕರು/ ಡೀಲರ್ ಬಳಿ ಹೋಗಿ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳನ್ನು ವಾಹನಕ್ಕೆ ಅಳವಡಿಸಬಹುದು. ಕೆಲವು ಡೀಲರ್‌ಗಳು ವಾಹನ ಮಾಲೀಕರ ಮನೆಬಾಗಿಲಿಗೆ ಈ ಸೇವೆಯನ್ನು ಒದಗಿಸಬಹುದು. ಒಟ್ಟಿನಲ್ಲಿ ರಾಜ್ಯ ಸಾರಿಗೆ ಇಲಾಖೆ ಏನೋ ಈಗಾಗಲೇ ಎರಡ್ ಎರಡು ಬಾರಿ ಕಾಲಾವಕಾಶ ನೀಡಿದೆ. ಫೆಬ್ರವರಿ 17 ರೊಳಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸಿಕೊಂಡಿಲ್ಲ ಅಂದರೆ ದಂಡ ಬೀಳುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








