ಗಂಡ ಹೆಂಡತಿ ಜಗಳದಲ್ಲಿ ಪರದಾಡಿದ ವಾಹನ ಸವಾರರು

ಭಾರತದ ರಸ್ತೆಗಳಲ್ಲಿ ವಾಹನ ಸವಾರರ ನಡುವೆ ಆಗಾಗ ಜಗಳ ನಡೆಯುವುದನ್ನು ನೋಡಿಯೇ ಇರುತ್ತೇವೆ. ವಿನಾಕಾರಣ ಹಾರ್ನ್ ಮಾಡುವುದು, ಇಂಡಿಕೇಟರ್ ಅನ್ನು ಒಂದು ಕಡೆಗೆ ಆನ್ ಮಾಡಿ ವಾಹನವನ್ನು ಮತ್ತೊಂದು ಕಡೆಗೆ ತಿರುಗಿಸುವುದು ಸೇರಿದಂತೆ ಇನ್ನೂ ಹಲವಾರು ಕಾರಣಗಳಿಗೆ ಜಗಳಗಳಾಗುತ್ತವೆ.

ಗಂಡ ಹೆಂಡತಿ ಜಗಳದಲ್ಲಿ ಪರದಾಡಿದ ವಾಹನ ಸವಾರರು

ಆದರೆ ತೀರಾ ವಿಭಿನ್ನವಾದ ಗಲಾಟೆಯೊಂದು ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ನಡೆದಿದೆ. ಈ ಗಲಾಟೆಯಲ್ಲಿ ಭಾಗಿಯಾಗಿದ್ದವರು ವಾಹನ ಸವಾರರಲ್ಲ. ಬದಲಿಗೆ ಗಂಡ ಹೆಂಡತಿ ಎಂಬುದು ವಿಶೇಷ. ಪೆಡ್ಡಾರ್ ರಸ್ತೆ ಮುಂಬೈನ ಪ್ರಮುಖ ರಸ್ತೆಗಳಲ್ಲಿ ಒಂದಾಗಿದೆ. ಕರೋನಾ ವೈರಸ್ ಲಾಕ್ ಡೌನ್ ನಡುವೆಯೂ ಈ ರಸ್ತೆ ಬಿಜಿಯಾಗಿದೆ.

ಗಂಡ ಹೆಂಡತಿ ಜಗಳದಲ್ಲಿ ಪರದಾಡಿದ ವಾಹನ ಸವಾರರು

ಇಲ್ಲಿ ಕಳೆದ ಶನಿವಾರ ಸಂಜೆ ಗಂಡ ಹೆಂಡತಿ ನಡುವೆ ಗಲಾಟೆ ನಡೆದಿತ್ತು. ಹೆಂಡತಿ ತನ್ನ ಗಂಡನನ್ನು ಹ್ಯುಂಡೈ ಕ್ರೆಟಾ ಕಾರಿನಲ್ಲಿ ಹಿಂಬಾಲಿಸುತ್ತಿದ್ದಳು. ಆಕೆಯ ಗಂಡ ಲ್ಯಾಂಡ್ ರೋವರ್ ರೇಂಜ್ ರೋವರ್ ಕಾರು ಚಾಲನೆ ಮಾಡುತ್ತಿದ್ದ.

MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಗಂಡ ಹೆಂಡತಿ ಜಗಳದಲ್ಲಿ ಪರದಾಡಿದ ವಾಹನ ಸವಾರರು

ಮಹಿಳೆ ತನ್ನ ಗಂಡನ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾಳೆ. ಅಪ್ ಲೋಡ್ ಮಾಡಲಾದ ವೀಡಿಯೊದಲ್ಲಿ ಎರಡು ಕಾರುಗಳು ರಸ್ತೆ ಮಧ್ಯೆ ಅಕ್ಕಪಕ್ಕದಲ್ಲಿ ನಿಂತಿರುವುದನ್ನು ಕಾಣಬಹುದು. ಮಹಿಳೆ ತನ್ನ ಕಾರಿನಿಂದ ಇಳಿದು ಬಂದರೂ ಆಕೆಯ ಪತಿ ಕಾರಿನೊಳಗೆ ಕುಳಿತಿದ್ದ.

ಗಂಡ ಹೆಂಡತಿ ಜಗಳದಲ್ಲಿ ಪರದಾಡಿದ ವಾಹನ ಸವಾರರು

ಕಾರಿನಿಂದ ಗಂಡ ಹೊರಬಾರದ ಕಾರಣಕ್ಕೆ ಕೋಪವನ್ನು ನಿಯಂತ್ರಿಸಲಾಗದೇ ಗಂಡನ ಕಾರಿಗೆ ತನ್ನ ಚಪ್ಪಲಿಯಿಂದ ಹೊಡೆದಿದ್ದಾಳೆ. ನಂತರ ಕಾರಿನ ಬಾನೆಟ್ ಮೇಲೆ ಹತ್ತಿ ತನ್ನ ರಂಪಾಟವನ್ನು ಮುಂದುವರೆಸಿದ್ದಾಳೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಗಂಡ ಹೆಂಡತಿ ಜಗಳದಲ್ಲಿ ಪರದಾಡಿದ ವಾಹನ ಸವಾರರು

ಈ ಘಟನೆಯಿಂದ ಪೊಡಾರ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಸ್ಥಳದಲ್ಲಿದ್ದ ಸಂಚಾರ ಪೊಲೀಸರು ಪ್ರಯತ್ನ ಪಡುತ್ತಿದ್ದಾರೆ. ಸಂಚಾರಿ ಪೊಲೀಸರು ಸಂಚಾರ ದಟ್ಟಣೆಯನ್ನು ನಿಯಂತ್ರಿಸುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ಗಂಡ ಹೆಂಡತಿ ಜಗಳದಲ್ಲಿ ಪರದಾಡಿದ ವಾಹನ ಸವಾರರು

ಹಾದಿಬೀದಿ ರಂಪಾಟ ನಡೆಸಿದ ಮಹಿಳೆಗೆ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ. ಸಂಚಾರ ದಟ್ಟಣೆ ಉಂಟು ಮಾಡಿದ ಕಾರಣಕ್ಕೆ ದಂಡ ವಿಧಿಸಲಾಗಿದೆ. ಮುಂಬೈನಲ್ಲಿ ನಡೆದ ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಗಂಡ ಹೆಂಡತಿ ಜಗಳದಲ್ಲಿ ಪರದಾಡಿದ ವಾಹನ ಸವಾರರು

ಈ ಘಟನೆಯನ್ನು ಹತ್ತಿರದ ಕಟ್ಟಡದಲ್ಲಿದ್ದ ವ್ಯಕ್ತಿಯೊಬ್ಬರು ರೆಕಾರ್ಡ್ ಮಾಡಿದ್ದಾರೆ. ಈ ವೀಡಿಯೊವನ್ನು ಶಾಂತೋನಿಲ್ ನಾಗ್ ಎಂಬುವವರು ಯುಟ್ಯೂಬ್‌ನಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಪತಿ ಇನ್ನೊಬ್ಬ ಮಹಿಳೆಯೊಂದಿಗೆ ಕಾರಿನಲ್ಲಿ ಪ್ರಯಾಣಿಸಿದ್ದೇ ಈ ಘಟನೆಗೆ ಕಾರಣ ಎಂದು ಮುಂಬೈ ಪೊಲೀಸ್ ಮೂಲಗಳು ತಿಳಿಸಿವೆ. ಘಟನೆ ನಡೆದಾಗ ಮಹಿಳೆಯ ಪತಿ ಇನ್ನೊಬ್ಬ ಮಹಿಳೆಯೊಂದಿಗೆ ಕಾರಿನಲ್ಲಿದ್ದರು ಎಂದು ವರದಿಯಾಗಿದೆ. ಇದನ್ನು ಕಂಡ ಪತ್ನಿ ಪತಿಯ ಕಾರನ್ನು ಹಿಂಬಾಲಿಸಿದ್ದಾಳೆ.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಗಂಡ ಹೆಂಡತಿ ಜಗಳದಲ್ಲಿ ಪರದಾಡಿದ ವಾಹನ ಸವಾರರು

ಘಟನೆಯ ಕುರಿತು ಎರಡೂ ಕಡೆಯಿಂದ ಯಾವುದೇ ದೂರುಗಳು ದಾಖಲಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಗಂಡ ಹೆಂಡತಿಯ ನಡುವಿನ ಬೀದಿ ಜಗಳದಿಂದ ರಸ್ತೆಯಲ್ಲಿದ್ದ ವಾಹನ ಸವಾರರು ಪರದಾಡಿದ್ದು ಸುಳ್ಳಲ್ಲ.

More from DriveSpark

Article Published On: Monday, July 13, 2020, 18:37 [IST]
English summary
Husband wife fight causes traffic jam in Mumbai. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+