ವಿಮಾನ ನಿಲ್ದಾಣದಲ್ಲಿ ಬಾಡಿಗೆಗೆ ಸಿಗಲಿವೆ ವಿಶ್ವದ ದುಬಾರಿ ಸೂಪರ್ ಕಾರುಗಳು

ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಇಲ್ಲಿಯವರೆಗೆ ಜನರು ತಮ್ಮ ವಿಮಾನದಿಂದ ಇಳಿದು ಕ್ಯಾಬ್ ಬಳಸಿ ಹೋಗಬೇಕಾದ ಸ್ಥಳಕ್ಕೆ ತೆರಳುತ್ತಿದ್ದರು. ಆದರೆ ಇನ್ನು ಮುಂದೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಐಷಾರಾಮಿ ಸೂಪರ್ ಕಾರುಗಳನ್ನು ಬಾಡಿಗೆಗೆ ಪಡದು ತೆರಳಬಹುದು.

ವಿಮಾನ ನಿಲ್ದಾಣದಲ್ಲಿ ಬಾಡಿಗೆಗೆ ಸಿಗಲಿವೆ ವಿಶ್ವದ ದುಬಾರಿ ಸೂಪರ್ ಕಾರುಗಳು

ಹೈದರಾಬಾದ್ ವಿಮಾನ ನಿಲ್ದಾಣವು ಇದೀಗ ಸೂಪರ್ ಐಷಾರಾಮಿ ಕಾರುಗಳನ್ನು ತಮ್ಮ ಗ್ರಾಹಕರಿಗೆ ಬಾಡಿಗೆಗೆ ನೀಡಲು ಪ್ರಾರಂಭಿಸಿದೆ. ರಾಜೀವ್ ಗಾಂಧಿ ವಿಮಾನ ನಿಲ್ದಾಣವು ಈ ಸೇವೆಯನ್ನು ನೀಡುವ ಮೊದಲ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ನೀವು ಸಾಮಾನ್ಯ ಟ್ಯಾಕ್ಸಿ ಪ್ರಯಾಣದಿಂದ ಬೇಸರಗೊಂಡಿದ್ದರೆ, ನೀವು ಇನ್ನು ಮುಂದೆ ವಿಮಾನದಿಂದ ಇಳಿದು ಗತ್ತಿನಿಂದ ಸೂಪರ್ ಕಾರಿನಲ್ಲಿ ಮನೆಗೆ ತೆರಳಬಹುದು. ಅಷ್ಟೇ ಅಲ್ಲ ನಿಮಗೆ ಯಾವ ಸೂಪರ್‌ಕಾರ್‌ಗಳು ಬೇಕು ಎಂದು ಆಯ್ಕೆ ಮಾಡಬಹುದು.

ವಿಮಾನ ನಿಲ್ದಾಣದಲ್ಲಿ ಬಾಡಿಗೆಗೆ ಸಿಗಲಿವೆ ವಿಶ್ವದ ದುಬಾರಿ ಸೂಪರ್ ಕಾರುಗಳು

ಸೂಪರ್‌ಕಾರ್‌ಗಳನ್ನು ಬಾಡಿಗೆ ಆಧಾರದ ಮೇಲೆ ನೀಡಲಾಗುವುದು, ಅದು ಚಾಲಕನನ್ನು ಒಳಗೊಂಡಿರಬಹುದು ಅಥವಾ ನೀವು ವಾಹನವನ್ನು ಸ್ವಯಂ ಚಾಲನೆ ಮಾಡಬಹುದು. ನಿಮ್ಮ ಫ್ಲೈಟ್ ಲ್ಯಾಂಡ್ ಆಗುವ ಮೊದಲೇ ನೀವು ಸೂಪರ್‌ಕಾರ್‌ಗಳನ್ನು ಕಾಯ್ದಿರಿಸಬಹುದು.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ವಿಮಾನ ನಿಲ್ದಾಣದಲ್ಲಿ ಬಾಡಿಗೆಗೆ ಸಿಗಲಿವೆ ವಿಶ್ವದ ದುಬಾರಿ ಸೂಪರ್ ಕಾರುಗಳು

ಫೋನ್ ಕರೆ ಮಾಡಿ ಅಥವಾ ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಬಹುದು. ಕೊರೋನಾ ಮಹಾಮಾರಿ ಸಮಯದಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಈ ಸೂಪರ್ ಕಾರುಗಳನ್ನು ಸ್ವಚ್ಚಗೊಳಿಸುತ್ತಾರೆ.

ವಿಮಾನ ನಿಲ್ದಾಣದಲ್ಲಿ ಬಾಡಿಗೆಗೆ ಸಿಗಲಿವೆ ವಿಶ್ವದ ದುಬಾರಿ ಸೂಪರ್ ಕಾರುಗಳು

ರಾಜೀವ್ ಗಾಂಧಿ ವಿಮಾನ ನಿಲ್ದಾಣದಲ್ಲಿ ‘4 ವ್ಹೀಲ್ ಕೌಂಟರ್ ಐಷಾರಾಮಿ ಟ್ಯಾಕ್ಸಿಗಳನ್ನು ನೀಡಲು ಪ್ರಾರಂಭಿಸಿದೆ. ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಚಾಫಿಯರ್ ಡ್ರೈವ್ ಮತ್ತು ಸೆಲ್ಫ್ ಡ್ರೈವ್ ಎರಡೂ ಆಯ್ಕೆಗಳನ್ನು ನೀಡಲಾಗಿದೆ.

MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ವಿಮಾನ ನಿಲ್ದಾಣದಲ್ಲಿ ಬಾಡಿಗೆಗೆ ಸಿಗಲಿವೆ ವಿಶ್ವದ ದುಬಾರಿ ಸೂಪರ್ ಕಾರುಗಳು

ಪ್ರಯಾಣಿಕರಿಗೆ ಆಯ್ಕೆ ಮಾಡಲು ಸಾಕಷ್ಟು ಸೂಪರ್‌ಕಾರ್‌ಗಳಿವೆ. ಪೋರ್ಷೆ 911 ಕ್ಯಾರೆರಾ 4 ಎಸ್, ಜಾಗ್ವಾರ್ ಎಫ್ ಟೈಪ್, ಲ್ಯಾಂಬೂರ್ಗಿನಿ ಗಲ್ಲಾರ್ಡೊ, ಲೆಕ್ಸಸ್ ಇಎಸ್ 300ಹೆಚ್, ಆಡಿ ಎ3 ಕ್ಯಾಬ್ರಿಯೊಲೆಟ್ ಮತ್ತು ಮರ್ಸಿಡಿಸ್ ಬೆಂಝ್ ಇ 250 ಸೇರಿವೆ.

ವಿಮಾನ ನಿಲ್ದಾಣದಲ್ಲಿ ಬಾಡಿಗೆಗೆ ಸಿಗಲಿವೆ ವಿಶ್ವದ ದುಬಾರಿ ಸೂಪರ್ ಕಾರುಗಳು

ಇದರೊಂದಿಗೆ ಬಿಎಂಡಬ್ಲ್ಯು 3 ಜಿಟಿ, ಬಿಎಂಡಬ್ಲ್ಯು 7 ಸೀರಿಸ್, ಫೋರ್ಡ್ ಮಸ್ಟಾಂಗ್, ವೊಲ್ವೊ ಎಸ್60 ಮತ್ತು ಮಾಸೆರೋಟಿ ಘಿಬ್ಲಿ ನಂತಹ ಐಷಾರಾಮಿ ಸೂಪರ್‌ಕಾರ್‌ಗಳಿವೆ. ಇನ್ನು ಟೊಯೊಟಾ ಫಾರ್ಚೂನರ್, ಫಾರ್ಚೂನರ್ ಅಥವಾ ಮಾರುತಿ ಸುಜುಕಿ ಸಿಯಾಜ್ ಅನ್ನು ಸಹ ಆರಿಸಿಕೊಳ್ಳಬಹುದು.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ವಿಮಾನ ನಿಲ್ದಾಣದಲ್ಲಿ ಬಾಡಿಗೆಗೆ ಸಿಗಲಿವೆ ವಿಶ್ವದ ದುಬಾರಿ ಸೂಪರ್ ಕಾರುಗಳು

ಕಾರು ಬಾಡಿಗೆ ಮತ್ತು ಕಾರು ಚಂದಾದಾರಿಕೆ ಭಾರತದಲ್ಲಿ ನಿಧಾನವಾಗಿ ಜನಪ್ರಿಯವಾಗುತ್ತಿದೆ. ಇದು ಜನರಿಗೆ ಐಷಾರಾಮಿ ಕಾರುಗಳು ಸೇರಿದಂತೆ ತಮ್ಮ ಮೆಚ್ಚಿನ ಕಾರುಗಳನ್ನು ಓಡಿಸಲು ಅಥವಾ ಪ್ರಯಾಣ ಮಾಡಲು ಅವಕಾಶ ಲಭಿಸುತ್ತದೆ. ಸೆಲ್ಫ್ ಡ್ರೈವಿಂಗ್ ಆಯ್ಕೆ ಮಾಡಿ ವಾಹನ ಪಡೆದು ನಂತರ ಅದನ್ನು ಹಿಂತಿರುಗಿಸಬಹುದು.

ವಿಮಾನ ನಿಲ್ದಾಣದಲ್ಲಿ ಬಾಡಿಗೆಗೆ ಸಿಗಲಿವೆ ವಿಶ್ವದ ದುಬಾರಿ ಸೂಪರ್ ಕಾರುಗಳು

ಹಿಮಾಚಲ ಪ್ರದೇಶ ಮತ್ತು ಗೋವಾದಂತಹ ಹೆಚ್ಚು ಪ್ರವಾಸಿ ತಾಣಗಳನ್ನು ಕೂಡಿರುವ ಪ್ರದೇಶಗಳಲ್ಲಿ ವಾಹನ ಬಾಡಿಗೆಗೆ ನೀಡುವ ಸಂಸ್ಥೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ನೀವು ಸ್ಕೂಟರ್ ಅಥವಾ ಬೈಕ್ ಕೂಡ ಕೈಗೆಡುಕುವ ದರದಲ್ಲಿ ಬಾಡಿಗೆಗೆ ಲಭಿಸುತ್ತದೆ. ಸಿಟಿಗಳಲ್ಲಿ ಮಾತ್ರವಲ್ಲದೇ ಚಿಕ್ಕ ಪಟ್ಟಣಗಳಲ್ಲಿಯು ಇಂತಹ ಸೇವೆಗಳು ಲಭ್ಯವಿದೆ.

ವಿಮಾನ ನಿಲ್ದಾಣದಲ್ಲಿ ಬಾಡಿಗೆಗೆ ಸಿಗಲಿವೆ ವಿಶ್ವದ ದುಬಾರಿ ಸೂಪರ್ ಕಾರುಗಳು

ನೀವು ಇತರ ಪ್ರದೇಶಗಳಿಗೆ ತೆರಳಿದಾಗ ಸಾರ್ವಜನಿಕ ವಾಹನಗಳಿಗೆ ಅವಲಂಬಿಸದೆ ಬಾಡಿಗೆಗೆ ವಾಹನ ಪಡೆದು ಸ್ವಾತಂತ್ಯವಾಗಿ ನಿಮಗೆ ಬೇಕಾದ ಜಾಗಗಳಿಗೆ ತೆರಳಬಹುದು. ನೀವು ಕ್ಯಾಬ್ ಬಳಿಸಿದರೆ ನಿಮಗೆ ಅಷ್ಟು ಸ್ವಾತಂತ್ರ್ಯವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ.

Most Read Articles

Kannada
English summary
Hyderabad Airport Now Offers Supercars As Rental cars. Read In Kannada.
Story first published: Tuesday, April 20, 2021, 14:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X