ಶಬ್ದಕ್ಕಿಂತ ಆರು ಪಟ್ಟು ವೇಗದಲ್ಲಿ ಸಂಚರಿಸುವ ಹೈಪರ್ ಸಾನಿಕ್ ವಿಮಾನ

By Nagaraja

ಇಡೀ ವಿಜ್ಞಾನ ಲೋಕವನ್ನೇ ಬೆಚ್ಚಿ ಬೀಳಿಸುವ ರೀತಿಯಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಶಬ್ದ ವೇಗಕ್ಕಿಂತ ಆರು ಪಟ್ಟು ವೇಗದಲ್ಲಿ ಸಂಚರಿಸಬಲ್ಲ ಹೈಪರ್ ಸಾನಿಕ್ ವಿಮಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಲಾಕ್ ಹೀಡ್ ಮಾರ್ಟಿನ್ ಎಂಬವರೇ ಇದರ ಮುಖ್ಯ ಸೂತ್ರಧಾರಿಯಾಗಿದ್ದು, ಮುಂದಿನ ವರ್ಷ 'ಮ್ಯಾಕ್ 6' ವೇಗದಲ್ಲಿ ಸಂಚರಿಸುವ ಹೈಪರ್ ಸಾನಿಕ್ ವಿಮಾನದ ಕನಸು ನನಸಾಗಲಿದೆ.

ಶಬ್ದಕ್ಕಿಂತ ಆರು ಪಟ್ಟು ವೇಗದಲ್ಲಿ ಸಂಚರಿಸುವ ಹೈಪರ್ ಸಾನಿಕ್ ವಿಮಾನ

ಶಬ್ದ ಪ್ರತಿ ಸೆಕೆಂಡುಗೆ 343.2 ಮೀಟರ್ ಗಳಷ್ಟು ಅಂದರೆ ಗಂಟೆಗೆ 1236 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಶಬ್ದಕ್ಕಿಂತ ಆರು ಪಟ್ಟು ವೇಗದಲ್ಲಿ ಸಂಚರಿಸುವ ಹೈಪರ್ ಸಾನಿಕ್ ವಿಮಾನ

ಮೇರಿಲ್ಯಾಂಡ್ ತಳಹದಿಯ ಸಂಸ್ಥೆಯನ್ನು ನಡೆಸುತ್ತಿರುವ ಮಾರ್ಟಿನ್, ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ವಿವರಿಸಿದ್ದು, ಲೇಸರ್ ಆಯುಧ ಹೊಂದಿರುವ ಸೈನ್ಯ ವಿಮಾನವನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ತಿಳಿಸಿದ್ದಾರೆ.

ಶಬ್ದಕ್ಕಿಂತ ಆರು ಪಟ್ಟು ವೇಗದಲ್ಲಿ ಸಂಚರಿಸುವ ಹೈಪರ್ ಸಾನಿಕ್ ವಿಮಾನ

ಇದರೊಂದಿಗೆ ವಿಜ್ಞಾನಿಗಳು ಕಾತರದಿಂದ ಕಾಯುತ್ತಿದ್ದ ಸಮಯವು ಮತ್ತಷ್ಟು ಹತ್ತಿರಕ್ಕೆ ಸಮೀಪಿಸಿದ್ದು, ಶಬ್ದ ವೇಗಕ್ಕಿಂತಲೂ ವೇಗದಲ್ಲಿ ಸಂಚರಿಸುವ ವಿಮಾನ ಅಂತರಿಕ್ಷದಲ್ಲಿ ಹಾರಾಟ ನಡೆಸಲಿದೆ.

ಶಬ್ದಕ್ಕಿಂತ ಆರು ಪಟ್ಟು ವೇಗದಲ್ಲಿ ಸಂಚರಿಸುವ ಹೈಪರ್ ಸಾನಿಕ್ ವಿಮಾನ

ಇಂತಹದೊಂದು ಮಹತ್ವದ ಯೋಜನೆಯನ್ನು ಮೂರು ವರ್ಷಗಳ ಹಿಂದೆ 2013ರಲ್ಲಿ ಆರಂಭಿಸಲಾಗಿತ್ತು. ಅಂದು ಎಸ್‌ಆರ್-72 ರಹಸ್ಯ ವಿಮಾನದಲ್ಲಿ ಮ್ಯಾಕ್ 6 ಗತಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಘೋಷಿಸಲಾಗಿತ್ತು.

ಶಬ್ದಕ್ಕಿಂತ ಆರು ಪಟ್ಟು ವೇಗದಲ್ಲಿ ಸಂಚರಿಸುವ ಹೈಪರ್ ಸಾನಿಕ್ ವಿಮಾನ

ಇದರಲ್ಲಿ ಸ್ಕ್ರಾಮ್ ಜೆಟ್ ಎಂಜಿನ್ ಬಳಕೆ ಮಾಡಲಾಗಿದ್ದು, ವಿಮಾನ ಮುಂದಕ್ಕೆ ಚಲಿಸುವ ವೇಗದಲ್ಲೇ ಸಂಕುಚಿತ ಗಾಳಿಯಲ್ಲಿ ಇಂಧನ ದಹನ ಮಾಡಲಾಗುವುದು.

ಶಬ್ದಕ್ಕಿಂತ ಆರು ಪಟ್ಟು ವೇಗದಲ್ಲಿ ಸಂಚರಿಸುವ ಹೈಪರ್ ಸಾನಿಕ್ ವಿಮಾನ

ಅಷ್ಟಕ್ಕೂ ಈ ಎಲ್ಲ ಯೋಜನೆಗಳು ಯಶಸ್ವಿಯಾಗಲು ಭಾರಿ ಮೊತ್ತದ ಹೂಡಿಕೆಯ ಅವಶ್ಯಕತೆಯಿದ್ದು, 2030ರ ಬಳಿಕವಷ್ಟೇ ಸೇವೆಗೆ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಶಬ್ದಕ್ಕಿಂತ ಆರು ಪಟ್ಟು ವೇಗದಲ್ಲಿ ಸಂಚರಿಸುವ ಹೈಪರ್ ಸಾನಿಕ್ ವಿಮಾನ

ಹೈಪರ್ ಸಾನಿಕ್ ವಿಮಾನಗಳನ್ನು ಸಹ ಕೈಗೆಟುಕುವ ಬೆಲೆಗಳಲ್ಲಿ ನಿರ್ಮಾಣ ಮಾಡಬಹುದು ಎಂಬುದನ್ನು ನಾವು ಸಾಧಿಸಿ ತೋರಿಸಿಲಿದ್ದೇವೆ ಎಂದು ವಿಜ್ಞಾನಿಯೊಬ್ಬರು ಅಭಿಪ್ರಾಡುತ್ತಾರೆ.

ಶಬ್ದಕ್ಕಿಂತ ಆರು ಪಟ್ಟು ವೇಗದಲ್ಲಿ ಸಂಚರಿಸುವ ಹೈಪರ್ ಸಾನಿಕ್ ವಿಮಾನ

ಸ್ಕ್ರ್ಯಾಮ್ ಜೆಟ್ ವಿಮಾನಗಳ ಅಭಿವೃದ್ಧಿ ಕಳೆದೊಂದು ದಶಕದಿಂದಲೂ ನಡೆಯುತ್ತಿದ್ದು, ಆದರೆ 2013ರಲ್ಲಿ ಮಹತ್ವದ ತಿರುವು ದೊರಕಿತ್ತು. ಈಗ 2013ರಲ್ಲಿ ಮೊದಲ ಮಾದರಿಯು ಅಂತರಿಕ್ಷದಲ್ಲಿ ಹಾರಾಟಲಿದೆ ಎಂದು ಲಾಕ್ ಲೀಡ್ ಆತ್ಮವಿಶ್ವಾಸದ ಮಾತುಗಳನ್ನಾಡುತ್ತಾರೆ.

ಶಬ್ದಕ್ಕಿಂತ ಆರು ಪಟ್ಟು ವೇಗದಲ್ಲಿ ಸಂಚರಿಸುವ ಹೈಪರ್ ಸಾನಿಕ್ ವಿಮಾನ

ಮಗದೊಂದು ಮೂಲದ ವರದಿಯ ಪ್ರಕಾರ ಹೈಪರ್ ಸಾನಿಕ್ ವಿಮಾನಗಳನ್ನು ಅಮೆರಿಕ ಸೇನೆಗಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಇದು ಮುಂದಿನ ದಿನಗಳಲ್ಲಿ ಅಮೆರಿಕವನ್ನು ಮತ್ತಷ್ಟು ಬಲಶಾಲಿಯಾಗಿಸಲಿದೆ.

ಶಬ್ದಕ್ಕಿಂತ ಆರು ಪಟ್ಟು ವೇಗದಲ್ಲಿ ಸಂಚರಿಸುವ ಹೈಪರ್ ಸಾನಿಕ್ ವಿಮಾನ

ಹೈಪರ್ ಸಾನಿಕ್ ವಿಮಾನಗಳನ್ನು ಪ್ರಯೋಗಿಸಿದ್ದಲ್ಲಿ ಶತ್ರು ರಾಷ್ಟ್ರ ತಿರುಗಿ ಹೋರಾಟ ನಡೆಸುವ ಮೊದಲೇ ಧ್ವಂಸ ಮಾಡುವ ಸಾಮರ್ಥ್ಯ ಹೊಂದಿರುತ್ತದೆ.

ಶಬ್ದಕ್ಕಿಂತ ಆರು ಪಟ್ಟು ವೇಗದಲ್ಲಿ ಸಂಚರಿಸುವ ಹೈಪರ್ ಸಾನಿಕ್ ವಿಮಾನ

ನೂತನ ಎಸ್‌ಆರ್-72 ಹೈಪರ್ ಸಾನಿಕ್ ಮಿಲಿಟರಿ ವಿಮಾನವು ಲಾಕ್ ಹೀಡ್ ಮಾರ್ಟಿನ್ ನಿರ್ಮಿಸಿರುವ ಮ್ಯಾಕ್ 3.35 ವೇಗದಲ್ಲಿ ಸಂಚರಿಬಲ್ಲ ಎಸ್‌ಆರ್-71 ವಿಮಾನದ ಉತ್ತರಾಧಿಕಾರಿಯಾಗಲಿದೆ.

Article Published On: Thursday, March 31, 2016, 10:11 [IST]
English summary
Hypersonic aircraft that travels six times the speed of sound
Read more on ವಿಮಾನ plane
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+