ಹೈಪರ್ ಸೋನಿಕ್ ಜೆಟ್: ಅರ್ಧ ತಾಸಿನಲ್ಲಿ ನ್ಯೂಯಾರ್ಕ್ ನಿಂದ ಲಂಡನ್‌ಗೆ

By Nagaraja

ಅರ್ಧ ತಾಸಿನ ಅವಧಿಯಲ್ಲಿ ನ್ಯೂಯಾರ್ಕ್ ನಿಂದ ಲಂಡನ್ ತಲುಪುವ ಬಗ್ಗೆ ನೀವು ಕನಸಿನಲ್ಲೂ ಯೋಚಿಸಲು ಸಾಧ್ಯವೇ? ಸದ್ಯ 5,585 ಕೀ.ಮೀ. ದೂರದ ಹಾದಿಯನ್ನು ಕ್ರಮಿಸಲು ಸರಿ ಸುಮಾರು ಎಳೆಂಟು ತಾಸುಗಳೇ ಬೇಕು. ಈಗ ಹೊಸತೊಂದು ಭವಿಷ್ಯತ್ತಿನ ವಿನ್ಯಾಸ ಕಲ್ಪನೆಯೊಂದಿಗೆ ಎಂಜಿನಿಯರ್ ಮುಂದೆ ಬಂದಿದ್ದಾರೆ.

ಚಾರ್ಲ್ಸ್ ಬಾಂಬರ್ಡಿಯರ್ ಕನಸಿನ ಕೂಸು ಆಗಿರುವ ಸ್ಕ್ರೀಮರ್ (Skreemr) ಸೂಪರ್ ಸೋನಿಕ್ ಜೆಟ್ ಅಂಟ್ಲಾಟಿಕ್ ಸಾಗರದ ಮೇಲಿಂದ ಕೇವಲ ಅರ್ಧ ತಾಸಿನಲ್ಲಿ ತನ್ನ ಗಮ್ಯಸ್ಥಾನವನ್ನು ತಲುಪಲಿದೆ.

ಹೈಪರ್ ಸೋನಿಕ್ ಜೆಟ್: ಅರ್ಧ ತಾಸಿನಲ್ಲಿ ನ್ಯೂಯಾರ್ಕ್ ನಿಂದ ಲಂಡನ್‌ಗೆ

ಶಬ್ದ ವೇಗಕ್ಕಿಂತಲೂ ಹತ್ತು ಪಟ್ಟು ಹೆಚ್ಚು ವೇಗದಲ್ಲಿ ಸಂಚರಿಸಲು ಸಾಮರ್ಥ್ಯವುಳ್ಳ ಸೂಪರ್ ಸೋನಿಕ್ ಜೆಟ್ ವಿಮಾನವು ಗಂಟೆಗೆ 12,348 ಕೀ.ಮೀ. ವೇಗವನ್ನು ಕಾಪಾಡಿಕೊಳ್ಳಲಿದೆ.

ಹೈಪರ್ ಸೋನಿಕ್ ಜೆಟ್: ಅರ್ಧ ತಾಸಿನಲ್ಲಿ ನ್ಯೂಯಾರ್ಕ್ ನಿಂದ ಲಂಡನ್‌ಗೆ

ಇದು ಸೇವೆಯಿಂದ ನಿವೃತ್ತಿ ಪಡೆದಿರುವ ಗಂಟೆಗೆ 2,519 ಕೀ.ಮೀ. ವೇಗದಲ್ಲಿ ಸಂಚರಿಸಬಲ್ಲ ಕಾಂಕಾರ್ಡ್ ಸೂಪರ್ ಸೋನಿಕ್ ಜೆಟ್ ಗಿಂತಲೂ ಐದು ಪಟ್ಟು ಹೆಚ್ಚು ಆವೇಗವನ್ನು ಕಾಪಾಡಿಕೊಂಡಿದೆ.

ಹೈಪರ್ ಸೋನಿಕ್ ಜೆಟ್: ಅರ್ಧ ತಾಸಿನಲ್ಲಿ ನ್ಯೂಯಾರ್ಕ್ ನಿಂದ ಲಂಡನ್‌ಗೆ

ನೂತನ ಸೂಪರ್ ಸೋನಿಕ್ ಜೆಟ್ ನಲ್ಲಿ ಮ್ಯಾಗ್ನೆಟಿಕ್ ರೈಲ್ ಗನ್ ಲಾಚಿಂಗ್ ವ್ಯವಸ್ಥೆಯನ್ನು ಆಳವಡಿಸಲಾಗಿದೆ. ಇದು ಆಯಸ್ಕಾಂತೀಯ ಸಿದ್ಧಾಂತದಂತೆ ವೇಗದಲ್ಲಿ ಟೇಫ್ ಆಫ್ ಆಗಲು ಸಹಕರಿಸಲಿದೆ.

ಹೈಪರ್ ಸೋನಿಕ್ ಜೆಟ್: ಅರ್ಧ ತಾಸಿನಲ್ಲಿ ನ್ಯೂಯಾರ್ಕ್ ನಿಂದ ಲಂಡನ್‌ಗೆ

ಸೂಪರ್ ಸೋನಿಕ್ ಜೆಟ್ ಆಕಾಶಕ್ಕೆ ತಲುಪಿದ ಬಳಿಕ ಲಿಕ್ವಿಡ್ ಓಕ್ಸಿಜನ್ ಮತ್ತು ಕೆರೊಸಿನ್ ರಾಕೆಟ್ ಗಳು ಚಾಲನೆಯಾಗಲಿದೆ. ಇದು ಮ್ಯಾಕ್ 4 ಶಬ್ದ ವೇಗದಲ್ಲಿ ಅಂದರೆ 5000 ಕೀ.ಮೀ.ಗಳ ವೇಗ ಕಾಪಾಡಿಕೊಳ್ಳಲು ನೆರವಾಗಲಿದೆ.

ಹೈಪರ್ ಸೋನಿಕ್ ಜೆಟ್: ಅರ್ಧ ತಾಸಿನಲ್ಲಿ ನ್ಯೂಯಾರ್ಕ್ ನಿಂದ ಲಂಡನ್‌ಗೆ

ಅಲ್ಲಿಂದ ಬಳಿಕ ಸೂಪರ್ ಸೋನಿಕ್ ವಿಮಾನದ ಸ್ಕ್ರಾಮ್ ಜೆಟ್ ಎಂಜಿನ್ ಗಳು ಮ್ಯಾಕ್ 10 ಶಬ್ದ ವೇಗವನ್ನು ತಲುಪಲು ನೆರವಾಗಲಿದೆ. ಸೂಪರ್ ಸೋನಿಕ್ ಕಂಬ್ಯೂಸ್ಟಿಂಗ್ ರಾಮ್ ಜೆಟ್ ಸಂಕ್ಷಿಪ್ತ ರೂಪ ಸ್ಕ್ರಾಮ್ ಜೆಟ್ ಆಗಿದೆ.

ಹೈಪರ್ ಸೋನಿಕ್ ಜೆಟ್: ಅರ್ಧ ತಾಸಿನಲ್ಲಿ ನ್ಯೂಯಾರ್ಕ್ ನಿಂದ ಲಂಡನ್‌ಗೆ

ನೂತನ ಭವಿಷ್ಯತ್ತಿನ ವಿಮಾನವು ಒಂದೇ ಹಾರಾಟದಲ್ಲಿ 75 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. .

ಹೈಪರ್ ಸೋನಿಕ್ ಜೆಟ್: ಅರ್ಧ ತಾಸಿನಲ್ಲಿ ನ್ಯೂಯಾರ್ಕ್ ನಿಂದ ಲಂಡನ್‌ಗೆ

ನಿಜಕ್ಕೂ ನೂತನ ತಂತ್ರಜ್ಞಾನವು ಜಾಗತಿಕ ವ್ಯೋಮಯಾನ ಸಂಚಾರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನುಂಟು ಮಾಡಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.

More from DriveSpark

Article Published On: Wednesday, June 1, 2016, 15:25 [IST]
English summary
Hypersonic jet that could cross the atlantic 30 minutes
Read more on ವಿಮಾನ plane
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+