ಹೊಸ ಕ್ರಾಂತಿ ತರಲು ಸಜ್ಜಾದ ಹ್ಯುಂಡೈ-ಕಿಯಾ: ವಿಶ್ವಕ್ಕೆ ಭರವಸೆಯಾಗಲಿದೆಯೇ ಭಾರತ!
ಹ್ಯುಂಡೈ ಮೋಟಾರ್ (Hyundai Motor) ಕಂಪನಿ ಮತ್ತು ಕಿಯಾ ಕಾರ್ಪೊರೇಷನ್ (Kia Corporation) ತಮ್ಮ ಎಲೆಕ್ಟ್ರಿಕ್ ವಾಹನಗಳ ಉತ್ತೇಜನದ ಭಾಗವಾಗಿ ಭಾರತದ ಪ್ರಮುಖ ಬ್ಯಾಟರಿ ಕಂಪನಿಯಾದ ಎಕ್ಸೈಡ್ ಎನರ್ಜಿ (Exide Energy) ಸೊಲ್ಯೂಷನ್ಸ್ ಲಿಮಿಟೆಡ್ ಸಹಕಾರಕ್ಕಾಗಿ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿವೆ.
ಭಾರತೀಯ ಮಾರುಕಟ್ಟೆಗೆ ತಮ್ಮ ಎಲೆಕ್ಟ್ರಿಕ್ ವಾಹನ ಯೋಜನೆಗಳ ವಿಸ್ತರಣೆಯೊಂದಿಗೆ, ಹುಂಡೈ ಮೋಟಾರ್ ಮತ್ತು ಕಿಯಾ ತಮ್ಮ EV ಬ್ಯಾಟರಿ ಉತ್ಪಾದನೆಯನ್ನು ಸ್ಥಳೀಕರಿಸುವ ಗುರಿಯನ್ನು ಹೊಂದಿವೆ. ನಿರ್ದಿಷ್ಟವಾಗಿ ಲಿಥಿಯಂ-ಐರನ್-ಫಾಸ್ಫೇಟ್ (LFP) ಸೆಲ್‌ಗಳ ಮೇಲೆ ಕೇಂದ್ರೀಕರಿಸಿವೆ. ಈ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಅವರ ಮುಂಬರುವ EV ಕಾರು ಮಾದರಿಗಳಲ್ಲಿ ದೇಶೀಯವಾಗಿ ಉತ್ಪಾದಿಸಲಾದ ಬ್ಯಾಟರಿಗಳನ್ನು ಬಳಸುವ ಕಂಪನಿಗಳಾಗಿ ಗುರ್ತಿಸಿಕೊಳ್ಳಲು ನೋಡುತ್ತಿವೆ. ಒಟ್ಟಾರೆ ಎಕ್ಸೈಡ್ ಎನರ್ಜಿಯೊಂದಿಗಿನ ಈ ಒಪ್ಪಂದವು ಹುಂಡೈ-ಕಿಯಾ ತಮ್ಮ ವಿಶೇಷ ಬ್ಯಾಟರಿ ಅಭಿವೃದ್ಧಿ, ಉತ್ಪಾದನೆ, ಪೂರೈಕೆ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಪಾಲುದಾರಿಕೆಯನ್ನು ವಿಸ್ತರಿಸುವ ಪ್ರಯತ್ನಗಳ ಆರಂಭವನ್ನು ಸೂಚಿಸುತ್ತಿದೆ.

''ಭಾರತ ಸರ್ಕಾರದ ಕಾರ್ಬನ್ ನಿರ್ಮೂಲನೆ ಗುರಿಗಳೊಂದಿಗೆ ದೇಶವು ವಾಹನ ವಿದ್ಯುದೀಕರಣಕ್ಕೆ ಪ್ರಮುಖ ಮಾರುಕಟ್ಟೆಯಾಗಲಿದೆ, ಇದು ಸ್ಥಳೀಯ ಬ್ಯಾಟರಿ ಉತ್ಪಾದನೆಯ ಮೂಲಕ ವೆಚ್ಚದ ಸ್ಪರ್ಧಾತ್ಮಕತೆಯನ್ನು ಭದ್ರಪಡಿಸುವುದು ನಿರ್ಣಾಯಕವಾಗಿದೆ" ಎಂದು ಹ್ಯುಂಡೈ ಮೋಟಾರ್ ಮತ್ತು ಕಿಯಾದ ಆರ್ & ಡಿ ವಿಭಾಗದ ಅಧ್ಯಕ್ಷ ಮತ್ತು ಮುಖ್ಯಸ್ಥ ಹೆಯು ವಾನ್ ಯಾಂಗ್ ಹೇಳಿದರು.
"ಎಕ್ಸೈಡ್ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್ (Exide Energy Solutions Ltd.) ಜೊತೆಗಿನ ಈ ಜಾಗತಿಕ ಪಾಲುದಾರಿಕೆಯ ಮೂಲಕ, ಹ್ಯುಂಡೈ ಮೋಟಾರ್ ಮತ್ತು Kia ಭವಿಷ್ಯದ EV ಮಾದರಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಸ್ಥಳೀಯವಾಗಿ ಉತ್ಪಾದಿಸುವ ಬ್ಯಾಟರಿಗಳೊಂದಿಗೆ ಸಜ್ಜುಗೊಳಿಸುವ ಮೂಲಕ ನಾವು ಸ್ಪರ್ಧಾತ್ಮಕ ಪ್ರಯೋಜನವನ್ನು ಪಡೆಯುತ್ತೇವೆ ಎಂದರು."

ಏನಿದು ಎಕ್ಸೈಡ್ ಇಂಡಸ್ಟ್ರೀಸ್: ಕೋಲ್ಕತ್ತಾ ಮೂಲದ ಈ ಎಕ್ಸೈಡ್ ಇಂಡಸ್ಟ್ರೀಸ್ ಲಿಮಿಟೆಡ್, ಭಾರತದಲ್ಲಿ ಪ್ರಮುಖ ಲೀಡ್ - ಆಸಿಡ್ ಬ್ಯಾಟರಿ ಪೂರೈಕೆದಾರರಾಗಿದ್ದು, 75 ವರ್ಷಗಳ ಅನುಭವ ಮತ್ತು ಲೀಡ್ - ಆಸಿಡ್ ಬ್ಯಾಟರಿಗಳಲ್ಲಿ ಮಾರುಕಟ್ಟೆ ನಾಯಕತ್ವವನ್ನು ಹೊಂದಿದೆ. ಎಕ್ಸೈಡ್ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್ ಎಕ್ಸೈಡ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಇದು ಲಿಥಿಯಂ-ಐಯಾನ್ ಸೆಲ್‌ಗಳು, ಮಾಡ್ಯೂಲ್‌ಗಳು ಮತ್ತು ಬಹು ರಸಾಯನಶಾಸ್ತ್ರ ಮತ್ತು ರೂಪ ಅಂಶಗಳ ಪೋರ್ಟ್‌ಫೋಲಿಯೊವನ್ನು ಒಳಗೊಂಡಿರುವ ಪ್ಯಾಕ್‌ಗಳ ತಯಾರಿಕೆಯ ವ್ಯವಹಾರದಲ್ಲಿ ತೊಡಗಿಸಿಕೊಳ್ಳಲು 2022 ರಲ್ಲಿ ಸ್ಥಾಪಿಸಲಾಯಿತು.
ಭಾರತವು ವಿಶ್ವಾದ್ಯಂತ ಹೆಚ್ಚು ಭರವಸೆಯ ವಾಹನ ಮಾರುಕಟ್ಟೆಯಾಗಿ ಗುರುತಿಸಲ್ಪಟ್ಟಿದೆ. ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ದೇಶವು ನಿರ್ಣಾಯಕ ಆಟಗಾರನಾಗಿ ವೇಗವಾಗಿ ಹೊರಹೊಮ್ಮುತ್ತಿದೆ. ಭಾರತೀಯ ಮಾರುಕಟ್ಟೆಯ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಅರಿತುಕೊಂಡು, ಹ್ಯುಂಡೈ ಮೋಟಾರ್ ಮತ್ತು ಕಿಯಾ ಭಾರತೀಯ ವಾಹನ ಉದ್ಯಮದಲ್ಲಿ ತಮ್ಮ EV ಕಾರುಗಳನ್ನು ಪರಿಚಯಿಸುವ ಮೂಲಕ ಮುನ್ನಡೆ ಸಾಧಿಸಲು ಸಜ್ಜಾಗಿರುವುದಾಗಿ ಹೇಳಿಕೊಂಡಿವೆ.

ದಕ್ಷಿಣ ಕೊರಿಯಾದ ಹ್ಯುಂಡೈ ಮೋಟಾರ್ ಗ್ರೂಪ್‌ನ ನಮ್ಯಾಂಗ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದಲ್ಲಿ ಈ ಒಪ್ಪಂದ ನಡೆಯಿತು. ಹ್ಯುಂಡೈ ಮೋಟಾರ್ ಮತ್ತು ಕಿಯಾದ ಆರ್ & ಡಿ ವಿಭಾಗದ ಅಧ್ಯಕ್ಷ ಮತ್ತು ಮುಖ್ಯಸ್ಥ ಹೆಯು ವಾನ್ ಯಾಂಗ್, ಎಲೆಕ್ಟ್ರಿಫಿಕೇಶನ್ ಎನರ್ಜಿ ಸೊಲ್ಯೂಷನ್ಸ್ ಟೆಕ್ ಯುನಿಟ್ ಮುಖ್ಯಸ್ಥ ಚಾಂಗ್ ಹ್ವಾನ್ ಕಿಮ್, ಡುಕ್ ಗ್ಯೋ ಜಿಯೋಂಗ್ ಉಪಸ್ಥಿತರಿದ್ದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








