ವಾಹನ ಮಾಲೀಕರೇ ಜೋಕೆ, ಸರ್ವೀಸ್ ಸೆಂಟರ್ ಸಿಬ್ಬಂದಿಗೆ ಮಾಹಿತಿ ನೀಡುವ ಮುನ್ನ ಎಚ್ಚರ

ಭಾರತದಲ್ಲಿ ವಾಹನ ಕಳ್ಳತನ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಪೊಲೀಸರಿಗೆ ತಲೆನೋವು ತಂದಿಟ್ಟಿವೆ. ಜೊತೆಗೆ ನೆಚ್ಚಿನ ಕಾರು ಕಳೆದುಕೊಂಡು ವಾಹನ ಮಾಲೀಕರು ಸಹ ಪರಿತಪಿಸುವಂತಾಗಿದೆ.

ವಾಹನ ಮಾಲೀಕರೇ ಜೋಕೆ, ಸರ್ವೀಸ್ ಸೆಂಟರ್ ಸಿಬ್ಬಂದಿಗೆ ಮಾಹಿತಿ ನೀಡುವ ಮುನ್ನ ಎಚ್ಚರ

ವಾಹನಗಳ್ಳರ ಗ್ಯಾಂಗ್ ಗಳ ತಂತ್ರಗಳೇ ವಿಭಿನ್ನವಾಗಿವೆ. ಈ ಗ್ಯಾಂಗ್ ಗಳು ಮೊದಲಿಗೆ ಅಪಘಾತಕ್ಕೀಡಾಗಿ ಸಂಪೂರ್ಣವಾಗಿ ನಿಷ್ಪ್ರಯೋಜಕವಾಗಿರುವ ವಾಹನಗಳನ್ನು ಹುಡುಕುತ್ತವೆ. ನಂತರ ಆ ವಾಹನಗಳ ದಾಖಲೆಗಳನ್ನು ವಾಹನದ ಮಾಲೀಕರಿಂದ ಬಹಳ ಕಡಿಮೆ ಬೆಲೆಗೆ ಪಡೆಯುತ್ತವೆ. ಆ ದಾಖಲೆಗಳಿಗೆ ಸರಿಹೊಂದುವ ಕಾರುಗಳನ್ನು ಕದಿಯುವ ಮೂಲಕ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತವೆ.

ವಾಹನ ಮಾಲೀಕರೇ ಜೋಕೆ, ಸರ್ವೀಸ್ ಸೆಂಟರ್ ಸಿಬ್ಬಂದಿಗೆ ಮಾಹಿತಿ ನೀಡುವ ಮುನ್ನ ಎಚ್ಚರ

ಕಾರುಗಳನ್ನು ಕದಿಯುವ ಖದೀಮರು ಈ ಕಾರುಗಳನ್ನು ಯಾವ ರೀತಿಯಲ್ಲಿ ಬದಲಿಸುತ್ತಾರೆಂದರೆ ಖುದ್ದು ಆ ಕಾರಿನ ನಿಜವಾದ ಮಾಲೀಕರು ಬಂದರೂ ಸಹ ಅವುಗಳನ್ನು ಗುರುತು ಹಿಡಿಯಲು ಸಾಧ್ಯವಾಗದ ರೀತಿಯಲ್ಲಿ ಬದಲಿಸುತ್ತಾರೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ವಾಹನ ಮಾಲೀಕರೇ ಜೋಕೆ, ಸರ್ವೀಸ್ ಸೆಂಟರ್ ಸಿಬ್ಬಂದಿಗೆ ಮಾಹಿತಿ ನೀಡುವ ಮುನ್ನ ಎಚ್ಚರ

ಇನ್ನು ಕೆಲವು ವಿಮಾ ಕಂಪನಿಗಳ ಅಧಿಕಾರಿಗಳು ಕಾರುಗಳ್ಳರಿಗೆ ನೆರವಾಗುತ್ತಿದ್ದಾರೆ ಎಂಬ ಆರೋಪಗಳಿವೆ. ಅವರ ಮೂಲಕವೇ ಅಪಘಾತಕ್ಕೀಡಾದ ಕಾರುಗಳ ದಾಖಲೆಗಳನ್ನು ಅವುಗಳ ಮಾಲೀಕರಿಂದ ಬಹಳ ಕಡಿಮೆ ಬೆಲೆಗೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.

ವಾಹನ ಮಾಲೀಕರೇ ಜೋಕೆ, ಸರ್ವೀಸ್ ಸೆಂಟರ್ ಸಿಬ್ಬಂದಿಗೆ ಮಾಹಿತಿ ನೀಡುವ ಮುನ್ನ ಎಚ್ಚರ

ಈಗ ಇವುಗಳಿಗಿಂತ ವಿಭಿನ್ನವಾದ ಘಟನೆಯೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಹ್ಯುಂಡೈನ ಅಧಿಕೃತ ಸರ್ವೀಸ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಕಾರ್ ಅನ್ನು ಕದ್ದಿದ್ದಾನೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ವಾಹನ ಮಾಲೀಕರೇ ಜೋಕೆ, ಸರ್ವೀಸ್ ಸೆಂಟರ್ ಸಿಬ್ಬಂದಿಗೆ ಮಾಹಿತಿ ನೀಡುವ ಮುನ್ನ ಎಚ್ಚರ

ಈ ಕಾರುಗಳವು ಪ್ರಕರಣದಲ್ಲಿ ಹ್ಯುಂಡೈ ಕಂಪನಿಯ ಮಾಜಿ ಉದ್ಯೋಗಿಯೇ ಪ್ರಮುಖ ಆರೋಪಿ. ಆತ ಹೊಸ ಹ್ಯುಂಡೈ ಕ್ರೆಟಾ ಕಾರನ್ನು ಹೇಗೆ ಕದ್ದ ಎಂಬ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ವಾಹನ ಮಾಲೀಕರೇ ಜೋಕೆ, ಸರ್ವೀಸ್ ಸೆಂಟರ್ ಸಿಬ್ಬಂದಿಗೆ ಮಾಹಿತಿ ನೀಡುವ ಮುನ್ನ ಎಚ್ಚರ

ದೆಹಲಿಯ ಜಹಾಂಗೀರ್‌ಪುರಿಯಲ್ಲಿರುವ ಹ್ಯುಂಡೈ ಸರ್ವೀಸ್ ಸೆಂಟರ್ ನಲ್ಲಿ ಕೆಲಸಕ್ಕಿದ್ದ ಈತ ಇತ್ತೀಚಿಗಷ್ಟೇ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದ. ಕೆಲಸಕ್ಕಿದ್ದ ಸಮಯದಲ್ಲಿ ಈ ವ್ಯಕ್ತಿಯು ಮ್ಯಾನೇಜ್ ಮೆಂಟ್ ನವರಿಗೆ ತಿಳಿಯದ ರೀತಿಯಲ್ಲಿ ಕೆಲವು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಸರ್ವೀಸ್ ನೀಡುತ್ತಿದ್ದ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ವಾಹನ ಮಾಲೀಕರೇ ಜೋಕೆ, ಸರ್ವೀಸ್ ಸೆಂಟರ್ ಸಿಬ್ಬಂದಿಗೆ ಮಾಹಿತಿ ನೀಡುವ ಮುನ್ನ ಎಚ್ಚರ

ಈ ವೇಳೆ ತನಗೆ ಅನುಕೂಲವಾದ ರೀತಿಯಲ್ಲಿ ನಡೆದುಕೊಂಡಿದ್ದಾನೆ. ಕಾರ್ ಅನ್ನು ಕದಿಯುವ ಉದ್ದೇಶ ಹೊಂದಿದ್ದ ಆತ ಕಾರಿನಲ್ಲಿದ್ದ ಸೆಕ್ಯೂರಿಟಿ ಫೀಚರ್ ಗಳನ್ನು ನಿಷ್ಕ್ರಿಯಗೊಳಿಸಿದ್ದಾನೆ.

ವಾಹನ ಮಾಲೀಕರೇ ಜೋಕೆ, ಸರ್ವೀಸ್ ಸೆಂಟರ್ ಸಿಬ್ಬಂದಿಗೆ ಮಾಹಿತಿ ನೀಡುವ ಮುನ್ನ ಎಚ್ಚರ

ಕಾರು ಮಾಲೀಕರ ಬಳಿ ಈ ಕಾರುಗಳನ್ನು ಎಲ್ಲಿಗೆ ಕೊಂಡೊಯ್ಯಲಾಗುತ್ತದೆ. ಎಲ್ಲಿ ಪಾರ್ಕಿಂಗ್ ಮಾಡಲಾಗುತ್ತದೆ ಎಂಬ ಮಾಹಿತಿಗಳನ್ನು ಸಂಗ್ರಹಿಸಿದ್ದಾನೆ. ಇದರ ಅನುಸಾರ ಜಹಾಂಗೀರ್‌ಪುರಿ ಮೆಟ್ರೋ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕ್ರೆಟಾ ಎಸ್ ಯುವಿಯನ್ನು ಕದ್ದಿದ್ದಾನೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ವಾಹನ ಮಾಲೀಕರೇ ಜೋಕೆ, ಸರ್ವೀಸ್ ಸೆಂಟರ್ ಸಿಬ್ಬಂದಿಗೆ ಮಾಹಿತಿ ನೀಡುವ ಮುನ್ನ ಎಚ್ಚರ

ಆದರೆ ಆತನ ದುರದೃಷ್ಟಕ್ಕೆ ಅಲ್ಲಿದ್ದ ಕಾವಲುಗಾರರು ಹಾಗೂ ಸಿಸಿಟಿವಿಯ ನೆರವಿನಿಂದ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಕಾರು ಮಾಲೀಕರಿಗೆ ದಿಗ್ಭ್ರಮೆಯನ್ನುಂಟು ಮಾಡಿದೆ. ರಸ್ತೆ ಬದಿಯ ಸರ್ವೀಸ್ ಸೆಂಟರ್ ಗಳಲ್ಲಿ ಸರ್ವೀಸ್ ಮಾಡಿಸಿದರೆ ಬಿಡಿಭಾಗಗಳನ್ನು ಕದಿಯಬಹುದು ಎಂಬ ಕಾರಣಕ್ಕೆ ಬಹುತೇಕ ಕಾರು ಮಾಲೀಕರು ತಮ್ಮ ಕಾರುಗಳನ್ನು ಅಧಿಕೃತ ಸರ್ವೀಸ್ ಸೆಂಟರ್ ಗಳಲ್ಲಿ ಸರ್ವೀಸ್ ಗೆ ನೀಡುತ್ತಾರೆ.

ವಾಹನ ಮಾಲೀಕರೇ ಜೋಕೆ, ಸರ್ವೀಸ್ ಸೆಂಟರ್ ಸಿಬ್ಬಂದಿಗೆ ಮಾಹಿತಿ ನೀಡುವ ಮುನ್ನ ಎಚ್ಚರ

ಆದರೆ ಈ ಘಟನೆಯು ವಾಹನ ಮಾಲೀಕರು ತಮ್ಮ ವಾಹನಗಳನ್ನು ಸರ್ವೀಸ್ ಗೆ ನೀಡುವಾಗ ಯಾವುದೇ ಮಾಹಿತಿಯನ್ನು ಅಲ್ಲಿನ ಸಿಬ್ಬಂದಿಗೆ ನೀಡಬಾರದು ಎಂಬ ಎಚ್ಚರಿಕೆ ಗಂಟೆಯಾಗಿದೆ.

Article Published On: Saturday, August 1, 2020, 12:42 [IST]
English summary
Hyundai service center ex employee steals Hyundai Creta car. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+