ಮತ್ತೆ ಗುಡುಗಿದ ಪೋಖ್ರಾನ್; ಮೋದಿ ಸಾರಥ್ಯದಲ್ಲಿ ಭಾರತದ ಶಕ್ತಿ ಪ್ರದರ್ಶನ
ಭಾರತದ ಮೊದಲ ಭೂಗತ ಅಣ್ವಸ್ತ್ರ ಸ್ಪೋಟ ನಡೆಸಿರುವ ಪೋಖ್ರಾನ್ ಮಗದೊಮ್ಮೆ ಅಬ್ಬರಿಸಿದೆ. ಈ ಬಾರಿ ವಿಶ್ವದ ಅತ್ಯಂತ ಪ್ರಭಾವಿಶಾಲಿ ನಾಯಕರಲ್ಲಿ ಓರ್ವರಾಗಿರುವ ದೇಶದ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾರಥ್ಯದಲ್ಲಿ ಈ ಮರುಭೂಮಿ ಪ್ರದೇಶ ಗುಡುಗಿದೆ.
Also Read: ಭಾರತೀಯ ವಾಯುಸೇನೆಯ ಸಕ್ರಿಯ ಯುದ್ಧ ವಿಮಾನಗಳು
ರಾಜಸ್ಥಾನದ ಥಾರ್ ಮರೂಭೂಮಿ ಅಂಚಿನಲ್ಲಿರುವ ಪೋಖ್ರಾನ್‌ನಲ್ಲಿ ಭಾರತೀಯ ವಾಯುಸೇನೆಯು ಯುದ್ಧ ವಿಮಾನಗಳ ಶಕ್ತಿ ಪ್ರದರ್ಶನವನ್ನು ನಡೆಸಿರುವುದು ಗಮನಾರ್ಹವೆನಿಸಿದೆ.

ಭಾರತೀಯ ವಾಯುಸೇನೆಯ ಐರಾನ್ ಫಿಸ್ಟ್ (Iron Fist 2016) ಸಮರ ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಜೊತೆ ಗೌರವಾನ್ವಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕಣ್ಣಾರೆ ಸಾಕ್ಷಿ ವಹಿಸಿದ್ದರು.

ಎರಡು ವರ್ಷಗಳಿಗೊಮ್ಮೆ ನಡೆಯುವ ಐರಾನ್ ಫಿಸ್ಟ್ ಫೈರ್ ಪವರ್ ಪ್ರದರ್ಶನ ಮೇಳದಲ್ಲಿ ವಾಯು ಸೇನೆಯ 180ರಷ್ಟು ಯುದ್ಧ ವಿಮಾನಗಳು ವಿವಿಧ ಸಮರ ಕೌಶಲ್ಯಗಳನ್ನು ಪ್ರದರ್ಶಿಸಿದ್ದವು.

ಈ ವೇಳೆಯಲ್ಲಿ ಭಾರತೀಯ ವಾಯುಸೇನೆಯ ಕಳೆದ ಎಂಟು ದಶಕಗಳ ಹಾದಿಯನ್ನು ಮೆಲುಕು ಹಾಕಲಾಯಿತು.

ಭಾರತೀಯ ವಾಯುಸೇನೆಯ ಇತಿಹಾಸದಲ್ಲಿ ನಿರ್ಣಾಯ ಪಾತ್ರ ವಹಿಸಿರುವ ಮಿಗ್ 27, ಸುಖೋಯ್ 30, ಸೂರ್ಯ ಕಿರಣ್, ಮಿರಾಜ್ 200, ಜಾಗ್ವಾರ್, ತೇಜಸ್ ಮುಂತಾದ ಯುದ್ಧ ವಿಮಾನಗಳು ತಮ್ಮ ಶಕ್ತಿ ಪ್ರದರ್ಶನವನ್ನು ನಡೆಸಿತ್ತು.

ಪೋಖ್ರಾನ್ ನಲ್ಲಿ ನಡೆದ ಭಾರತೀಯ ವಾಯುಸೇನೆಯ ಫೈರ್ ಪವರ್ ಛಾಯಾ ಪ್ರದರ್ಶನದಲ್ಲಿ ಸಹಿ ಹಾಕುತ್ತಿರುವ ಪ್ರಧಾನಿ ನರೇಂದ್ರ ಮೋದಿ.

ಐರಾನ್ ಫಿಸ್ಟ್ 2016 ಶಕ್ತಿ ಪ್ರದರ್ಶನವನ್ನು ಕಣ್ಣಾರೆ ವೀಕ್ಷಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ರಾಜಸ್ತಾನದ ಥಾರ್ ಮರುಭೂಮಿಯ ಅಂಚಿನಲ್ಲಿರುವ ಪೋಖ್ರಾನ್ ನಲ್ಲಿ ವ್ಯೋಮಸೇನೆಯ ಮಿಸೈಲ್ ಕರಾಮತ್ತು.

ಎದೆ ತಟ್ಟಿ ನಿಂತ ಭಾರತೀಯ ವಾಯುಸೇನೆಯ ಆಕಾಶ್ ಮಿಸೈಲ್

ಬೆಂಕಿ ಉಂಡೆಗಳನ್ನು ಉಗುಳುತ್ತಿರುವ ಭಾರತೀಯ ವಾಯುಸೇನೆಯ ಯುದ್ಧ ಹಲಿಕಾಪ್ಟರ್

ಒಟ್ಟಿನಲ್ಲಿ ಭಾರತೀಯ ವಾಯುಸೇನೆಯ ಬಲ ಮಗದೊಮ್ಮೆ ಪ್ರದರ್ಶನವಾಗಿದೆ.

ಭಾರತೀಯ ವಾಯುಸೇನೆ; ನಿಮಗೆ ಗೊತ್ತಿರದ 15 ಸತ್ಯಗಳು!
ಭಾರತದ ವಾಯು ವಲಯದ ಭದ್ರತೆ ಕಾಯುವ ಯುದ್ಧ ವಿಮಾನಗಳು


Click it and Unblock the Notifications








